Breaking News

ತಲೆಯಲ್ಲಿ ಕೂದಲಿಲ್ಲವೆಂದು ಪತ್ನಿ ಅಪಹಾಸ್ಯ: ಆತ್ಮಹತ್ಯೆಗೆ ಶರಣಾದ ಪತಿ ಪರಶಿವಮೂರ್ತಿ

Spread the love

ಚಾಮರಾಜನಗರ, ಮಾರ್ಚ್​ 16: ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿಯ (Wife) ಕಿರುಕುಳಕ್ಕೆ ಬೇಸತ್ತು ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆಗೆ (death) ಶರಣಾಗಿರುವಂತಹ ಘಟನೆ  ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ. ಪರಶಿವಮೂರ್ತಿ(32) ಮೃತ ಪತಿ. ತಲೆಯಲ್ಲಿ ಕೂದಲಿಲ್ಲ ಎಂದು ಪರಶಿವಮೂರ್ತಿಗೆ ಪತ್ನಿ ಮಮತಾ ಅಪಹಾಸ್ಯ ಮಾಡುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಚಾಮರಾಜನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದ ಹಿಂದೆ ಪರಶಿವಮೂರ್ತಿ ಮತ್ತು ಮಮತಾ ಮದುವೆಯಾಗಿದ್ದರು. ವೃತ್ತಿಯಲ್ಲಿ ಪರಶಿವಮೂರ್ತಿ ಲಾರಿ ಚಾಲಕನಾಗಿದ್ದರು. ಮದುವೆ ಬಳಿಕ ಪರಶಿವಮೂರ್ತಿ ಕೂದಲು ಸಂಪೂರ್ಣ ಉದುರಿತ್ತು. ಹೊರಗಡೆ ಹೋದರೆ ನನೆಗೆ ನಾಚಿಕೆಯಾಗುತ್ತೆಂದು ಮಮತಾ ಅಪಹಾಸ್ಯ ಮಾಡುತ್ತಿದ್ದರು ಎನ್ನಲಾಗಿದೆ.ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ಸಹ ಮಮತಾ ದಾಖಲಿಸಿದ್ದು, ಪರಶಿವಮೂರ್ತಿಯನ್ನ ಜೈಲಿಗೂ ಕಳುಹಿಸಿದ್ದರು. ಇಷ್ಟೇ ಅಲ್ಲದೆ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದ ಮಮತ, ಮದುವೆಯಾಗಿದ್ದರೂ ತಾಳಿ ಇಲ್ಲದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೇ ವಿಚಾರಕ್ಕೆ ಮನೆಯಲ್ಲಿ ಪದೇಪದೆ ಜಗಳ ಆಗುತ್ತಿತ್ತು. ಹೀಗಾಗಿ ಹೆಂಡತಿಯ ನವರಂಗಿ ಆಟಕ್ಕೆ ರೋಸಿ ಹೋಗಿದ್ದ ಪರಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ