Breaking News

ದೂರದೃಷ್ಠಿಯಿಲ್ಲದ ಸಾಲದ ಬಜೆಟ್ ಎಂದು ಅರೋಪಿಸಿದ ಆರ್. ಅಶೋಕ… ಕೇಂದ್ರದ ಸಾಲವನ್ನು ಉಲ್ಲೇಖಿಸಿ ಭಂಡತನ ಬಿಡಿ ಎಂದ ಸಿಎಂ

Spread the love

ದೂರದೃಷ್ಠಿಯಿಲ್ಲದ ಸಾಲದ ಬಜೆಟ್ ಎಂದು ಅರೋಪಿಸಿದ ಆರ್. ಅಶೋಕ…
ಕೇಂದ್ರದ ಸಾಲವನ್ನು ಉಲ್ಲೇಖಿಸಿ ಭಂಡತನ ಬಿಡಿ ಎಂದ ಸಿಎಂ ಸಿದ್ಧರಾಮಯ್ಯ
ವಿಧಾನಸಭೆಯಲ್ಲಿ ಇಂದು ವಿಪಕ್ಷ ನಾಯಕ ಆರ್. ಅಶೋಕ ಅವರು ಸಿಎಂ ಸಿದ್ಧರಾಮಯ್ಯನವರು 1 ಲಕ್ಷ 16 ಸಾವಿರ ಕೋಟಿ ಸಾಲವನ್ನು ಮಾಡಿ ರಾಜ್ಯದ ಜನರ ಮೇಲೆ ಹೊರೆ ಮಾಡಿದ್ದಾರೆಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯನವರು ಕೇಂದ್ರ ಸರ್ಕಾರ ಮಾಡಿರುವ ಸಾಲವನ್ನು ಉಲ್ಲೇಖಿಸುತ್ತಿದ್ದಂತೆ ಸದನದಲ್ಲಿ ಸದ್ದು ಗದ್ದಲ ಉಂಟಾಯಿತು.
ಇಂದು ವಿಧಾನಸಭೆಯ ಅಧಿವೇಶನದಲ್ಲಿ ವಿಪಕ್ಷ ನಾಯಕ ಆರ್. ಅಶೋಕ ಅವರು, ಸಿಎಂ ಸಿದ್ಧರಾಮಯ್ಯನವರು 1 ಲಕ್ಷ 16 ಸಾವಿರ ಕೋಟಿ ಸಾಲವನ್ನು ಮಾಡಿ ದಾಖಲೆಯನ್ನು ನೀಡಿದ್ದು, ದಾಖಲೆಯ ವೀರವೆಂದು ಬಿರುದು ಕೊಡಬಹುದು. ಬಜೆಟ್’ನಲ್ಲಿ ಯಾವುದೇ ದೂರದೃಷ್ಟಿಯಿಲ್ಲ ಎಲ್ಲವು ತಾತ್ಕಾಲಿಕವಾಗಿದೆ. ಇದು ಅಭಿವೃದ್ಧಿಪೂರಕವಾದ ಬಜೆಟ್’ ಅಲ್ಲ ಎಂದರು. ಓಟು ಗಿಟ್ಟಿಸುವ ದೃಷ್ಠಿಯಿಂದ ನೀಡಿದ ಬಜೆಟ್’ ಎಂದರು. ಈ ವೇಳೆ ಸಿಎಂ ಸಿದ್ಧರಾಮಯ್ಯ ಸೇರಿದಂತೆ ಸಚಿವರೂ ಇಲ್ಲದ ಹಿನ್ನೆಲೆ ವಿರೋಧ ಪಕ್ಷದವರು ಆಕ್ರೋಶವನ್ನು ವ್ಯಕ್ತಪಡಿಸಿ ಸದನದವನ್ನು ಮುಂದೂಡಬೇಕೆಂದು ಒತ್ತಾಯಿಸಿದರು.
ನಂತರ ಮಾತು ಮುಂದುವರಿಸಿದ ವಿಪಕ್ಷ ನಾಯಕ ಆರ್. ಅಶೋಕ ಸಾಲ ಪಡೆದು ಅಭಿವೃದ್ಧಿಯಾಗದ ಯೋಜನೆಗಳನ್ನು ಜಾರಿಮಾಡಬಾರದೆಂದು ಸಿಎಂ ಸಿದ್ಧರಾಮಯ್ಯ 2017 ರಲ್ಲಿ ಹೇಳಿದ್ದಾರೆ. ಆದರೇ ಈಗ ಸಾಲದ ಹೊರೆ ಜನರ ಮೇಲೆ ಹೊರಸಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿಎಂ ಸಿದ್ಧರಾಮಯ್ಯನವರು 2017 ರಲ್ಲಿ ನೀಡಿದ ಹೇಳಿಕೆಗೆ ಇಂದಿಗೂ ಬದ್ದನಾಗಿದ್ದೇನೆ. ಆರ್ಥಿಕ ಪರಿಸ್ಥಿತಿ ಆರೋಗ್ಯವಾಗಿರಲೂ ಫಿಜಿಕಲ್ ರಿಸ್ಪಾನ್ಸಿಬಿಡಿ ಆಕ್ಟ್’ನಲ್ಲಿ ಮೂರು ಮಾನದಂಡಗಳಿವೆ.
ಅವಶ್ಯಕತೆಯಿದ್ದಲ್ಲಿ ಶೇ. 25 ರಷ್ಟು ಸಾಲ ಮಾಡಬಹುದು. ದೇಶದ ಮೇಲೆ ಒಟ್ಟು 200 ಲಕ್ಷದ 1 ಸಾವಿರ ಕೋಟಿ ಸಾಲವಾಗಿದೆ. ಈಗ ರಾಜ್ಯ ಸರ್ಕಾರದಿಂದ ಶೇ.24 ಮತ್ತು ಕೇಂದ್ರ ಸರ್ಕಾರ ಶೇ. 56 ರಷ್ಟು ಸಾಲವನ್ನು ಮಾಡಿದೆ. 15 ಲಕ್ಷ 56 ಸಾವಿರ ಕೋಟಿ ಸಾಲವನ್ನು ಕೇಂದ್ರ ಸರ್ಕಾರ ಮಾಡಿದೆ.ನಿಮ್ಮ ಭಂಡತನವನ್ನು ಬಿಡಿ ಎಂದು ಹೇಳುತ್ತಿದ್ದಂತೆ ಪಕ್ಷ ವಿಪಕ್ಷಿಯರಲ್ಲಿ ವಾಗ್ವಾದ ನಡೆಯಿತು.

Spread the love

About Laxminews 24x7

Check Also

ನರೇಗಾ ಯೋಜನೆಯಡಿ ಕೆಲಸ ಮಾಡಲು ಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.:zp ceo

Spread the loveಮೈಸೂರು : ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಲು ಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಆದರೂ, ಕೂಲಿ ಕಾರ್ಮಿಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ