ಮೈಸೂರು, ಮಾರ್ಚ್ 09: ಮೈಸೂರು ರೈಲು ನಿಲ್ದಾಣಕ್ಕೆ (Mysore Railway Station) ಹುಸಿ ಬಾಂಬ್ ಬೆದರಿಕೆ ಕರೆ (Hoax Bomb Call) ಬಂದಿದೆ. ಅನಾಮಿಕ ವ್ಯಕ್ತಿಯೋರ್ವ ಆಂಧ್ರ ಪ್ರದೇಶದಿಂದ ಕರೆ ಮಾಡಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಬಾಂಬ್ ಇಡುವಂತೆ ತಿಳಿಸಿದ್ದಾರೆ ಎಂದು ಕರೆ ಮಾಡಿದ್ದಾನೆ. ಬೆದರಿಕೆ ಕರೆ ಬರುತ್ತಿದ್ದಂತೆ ಮೈಸೂರು ರೈಲ್ವೆ ನಿಲ್ದಾಣದ ಪೋಲೀಸರು, ರೈಲ್ವೆ ಅಧಿಕಾರಿಗಳು ಮತ್ತು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ರೈಲ್ವೆ ಫ್ಲಾಟ್ಫಾರಂ ಹಾಗೂ ರೈಲುಗಳನ್ನು ಪರಿಶೀಲನೆ ನಡೆಸಿದರು.
10 ಪ್ರಕರಣಗಳು ದಾಖಲು
ಬಾಂಬ್ ಬೆದರಿಕೆ ಕರೆ ಸಂಬಂಧ 2024ರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ 10 ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದಕ್ಕೆ ದಾಖಲಾಗಿವೆ. 2024ರ ಅಕ್ಟೋಬರ್ 22 ರಿಂದ 26ರವರೆಗೆ ನಿರಂತರವಾಗಿ ಬಾಂಬ್ ಬೆದರಿಕೆ ಸಂದೇಶ ಕಳಿಸಿದ್ದರು.
ವೆಬ್ಸೈಟ್ ಮತ್ತು ಎಕ್ಸ್ ಖಾತೆ ಮುಖಾಂತರ ವಿಮಾನ ನಿಲ್ದಾಣ ಮತ್ತು ಇಂಡಿಗೋ ಏರ್ಲೈನ್ಸ್ ಸೇರಿದಂತೆ ಹಲವು ಏರ್ಲೈನ್ಸ್ಗಳಿಗೆ ಬೆದರಿಕೆ ಸಂದೇಶ ಕಳುಹಿಸಿದ್ದರು. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
Laxmi News 24×7