Breaking News

ಸಿಲಿಂಡರ್ ಬ್ಲಾಸ್ಟ್​​ನಲ್ಲಿ 8 ಅಯ್ಯಪ್ಪ ಮಾಲಾಧಾರಿಗಳ ಸಾವು: ತಿಂಗಳುಗಳೇ ಕಳೆದ್ರೂ ಸಿಗದ ಪರಿಹಾರ

Spread the love

ಹುಬ್ಬಳಿ, ಮಾರ್ಚ್​ 09: ಕಾಂಗ್ರೆಸ್ (congress) ಸರ್ಕಾರಕ್ಕೆ ಗ್ಯಾರಂಟಿಗಳದ್ದೆ ಚಿಂತೆ. ಗ್ಯಾರಂಟಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗ್ತಿದೆ. ಗ್ಯಾರಂಟಿಗಳನ್ನ ನಿಲ್ಲಸಿದರೂ ಕಷ್ಟವಾಗಿದೆ. ಹೀಗಾಗಿ ಸರ್ಕಾರದಿಂದ ಬರುವ ಅನುದಾನ ಸಮರ್ಪಕವಾಗಿ ಸಿಗ್ತಾ ಇಲ್ಲ, ಹಾಲಿನ ಪ್ರೋತ್ಸಾಹ ಧನ (amount) ಇರಬಹುದು, ಗೃಹಲಕ್ಷಿ ಹಣ ಇರಬಹುದು ಯಾವದೂ ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಮಧ್ಯೆ ಸರ್ಕಾರ ಘೋಷಣೆ ಮಾಡಿದ್ದ ಅದೊಂದು ಪರಿಹಾರದ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದೆ. ಎಂಟು ಜನ ಮೃತ ಕುಟುಂಬಕ್ಕೆ ಸಿಗಬೇಕಾದ ಪರಿಹಾರ ಧನ ಇನ್ನು ಸಿಕ್ಕಿಲ್ಲ. ಹೀಗಾಗಿ ಸರ್ಕಾರದ ಬಳಿ ದುಡ್ಡೆ ಇಲ್ವಾ ಅನ್ನೋ ಅನುಮಾನ ವ್ಯಕ್ತವಾಗಿದೆ.

8 ಜನರು ಸಾವು: ಹುಸಿಯಾಯ್ತಾ ಸರ್ಕಾರದ ಮಾತು?

ಹುಬ್ಬಳ್ಳಿಯ ಉಣಕಲ್ ಸಮೀಪ ಇರುವ ಅಚ್ಚವ್ವನ ಕಾಲೋನಿಯ ಅಯ್ಯಪ್ಪನ‌ ಸನ್ನಿಧಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ಆದ ಪ್ರಕರಣ ಇನ್ನು ಹಚ್ಚ ಹಸಿರಾಗಿದೆ. ಡಿಸೆಂಬರ್ 22 ರಂದು ನಡೆದ ಘೋರ ದುರಂತದಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಜನರ ಪೈಕಿ ಎಂಟು ಜನ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ. ಎಂಟು ಜನ ಅಯ್ಯಪ್ಪ ಮಾಲಾಧಾರಿಗಳು ಮೃತರಾಗಿ ತಿಂಗಳುಗಳೇ ಕಳಿದಿವೆ. ಆದರೆ ಈ ಪ್ರಕರಣದಲ್ಲಿ ಸರ್ಕಾರ ಕೊಟ್ಟ ಮಾತು ಹುಸಿಯಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ