Breaking News

ಬೆಳಗಾವಿಯಲ್ಲಿ 4ನೇ ಚುಟುಕು ಸಾಹಿತ್ಯ ಸಮ್ಮೇಳನ

Spread the love

ಬೆಳಗಾವಿಯಲ್ಲಿ 4ನೇ ಚುಟುಕು ಸಾಹಿತ್ಯ ಸಮ್ಮೇಳನ
ಸಾಹಿತ್ಯಲೋಕಕ್ಕೆ ಬೆಳಗಾವಿ ಸಾಹಿತಿಗಳ ಕೊಡುಗೆ ಅಪಾರ; ಚುಟುಕು ಕವಿ ಅಪ್ಪಾಸಾಹೇಬ್ ಅಲಿಬಾದಿ
ಬೆಳಗಾವಿಯಲ್ಲಿ 4ನೇ ಚುಟುಕು ಸಾಹಿತ್ಯ ಸಮ್ಮೇಳನ
ಸಾಹಿತ್ಯಲೋಕಕ್ಕೆ ಬೆಳಗಾವಿ ಸಾಹಿತಿಗಳ ಕೊಡುಗೆ ಅಪಾರ
ಹಲವು ಶತಮಾನಗಳಿಂದ ಬೆಳಗಾವಿಯಲ್ಲಿದೆ ಕನ್ನಡ-ಮರಾಠಿಗರ ಬಾಂಧವ್ಯ
ಚುಟುಕು ಕವಿ ಅಪ್ಪಾಸಾಹೇಬ್ ಅಲಿಬಾದಿ ಅಭಿಪ್ರಾಯ
ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ಬಾಂಧವ್ಯತೆ ಹಲವು ಶತಮಾನಗಳ ಹಿಂದಿನದ್ದಾಗಿದ್ದು, ಕುಂದಾನಗರಿಯೂ ಸಾಹಿತ್ಯ ಲೋಕಕ್ಕೆ ಹಲವಾರು ಸಾಹಿತಿ, ಚುಟುಕು ಸಾಹಿತಿಗಳನ್ನು ನೀಡಿದೆ ಎಂದು ಹಿರಿಯ ಚುಟುಕು ಕವಿಗಳಾದ ಅಪ್ಪಾಸಾಹೇಬ್ ಅಲಿಬಾದಿ ಅಭಿಪ್ರಾಯಪಟ್ಟರು.
ಭಾನುವಾರದಂದು ಬೆಳಗಾವಿಯ ಮಹಾಂತೇಶನಗರದಲ್ಲಿರುವ ಮಹಾಂತ ಭವನದಲ್ಲಿ ಬೆಳಗಾವಿಯ ಚುಟುಕು ಸಾಹಿತ್ಯ ಪರಿಷತ್ತಿನ ರಜತ ಮಹೋತ್ಸವ, ಡಾ. ಎಂ ಅಕಬರ ಅಲಿ ಅವರ ಜನ್ಮ ಶತಮಾನೋತ್ಸವ ಮತ್ತು ಜಿಲ್ಲಾ ನಾಲ್ಕನೇ ಚುಟುಕು ಸಾಹಿತ್ಯ ಸಮ್ಮೆಳನವನ್ನು ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಚುಟುಕು ಕವಿಗಳಾದ ಅಪ್ಪಾಸಾಹೇಬ್ ಅಲಿಬಾದಿ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾಕ್ಟರ್ ರತ್ನಾ ಹಾಲಪ್ಪಗೌಡರ ಉಪಸ್ಥಿತರಿದ್ಧರು. ಗೌರವ ಅತಿಥಿಗಳಾಗಿ ಡಾ.ಎಂ.ಜಿ.ಆರ್. ಅರಸ್ ಉಪಸ್ಥಿತರಿದ್ಧರು. ನೀಲಗಂಗಾ ಚರಂತಿಮಠ, ನಿರ್ಮಲ ಪ್ರಕಾಶ ಅವರು ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿದ್ದರು.
ಸಮಾರಂಭವನ್ನು ಉದ್ಘಾಟಿಸಿ ಹಿರಿಯ ಚುಟುಕು ಕವಿಗಳಾದ ಅಪ್ಪಾಸಾಹೇಬ್ ಅಲಿಬಾದಿ ಅವರು ಸಕ್ಕರೆಯ ನಾಡು ಕುಂದಾನಗರಿ, ವಿಶಿಷ್ಟ ಸಂಸ್ಕತಿಯ ನಾಡಾಗಿದೆ. ಆರ್ಥಿಕವಾಗಿ, ಔದ್ಯಮಿಕವಾಗಿ ಜಿಲ್ಲೆಯೂ ವಿಸ್ತಾರಗೊಳ್ಳುತ್ತಿದೆ. ಗಡಿಭಾಗದಲ್ಲಿರುವ ಬೆಳಗಾವಿಯಲ್ಲಿ ಭಾಷಾ ಸಂಸ್ಕೃತಿ ಮತ್ತು ಸಾಮರಸ್ಯ ಕಾಣಬಹುದಾಗಿದೆ. ಶತಮಾನಗಳಿಂದ ಕನ್ನಡ ಮರಾಠಿ ಭಾಷಿಕರ ಸೌಹಾರ್ದತೆ ಬೆಳಗಾವಿಯಲ್ಲಿದೆ. ಹಲವಾರು ಸಾಹಿತಿಗಳು, ಚುಟುಕು ಸಾಹಿತಿಗಳು, ಲೇಖಕರು ಬೆಳಗಾವಿಯಲ್ಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಲವಾರು ಗಣ್ಯರು ಮತ್ತು ಸಾಹಿತಿಗಳು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ