Breaking News

ಕಾಮದ ತೀಟೆಗೆ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ: ಎರಡು ಮಕ್ಕಳು ಅನಾಥ

Spread the love

ಬೆಂಗಳೂರು, (ಫೆಬ್ರವರಿ 26): ಇಂದು ಮಹಾಶಿವರಾತ್ರಿ. ಎಲ್ಲರ ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದ್ರೆ, ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರ ಪಾಳ್ಯ ಕಾಳಿಕಾ ನಗರದ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು.

ಈ ಫೋಟೊದಲ್ಲಿರುವ ದಂಪತಿ ಮಧ್ಯೆ ಮಾತ್ರ ಹಬ್ಬದ ದಿನ ಬೆಳಗ್ಗೆಯೇ ಜಗಳ ಶುರು ಆಗಿತ್ತು .ಆದ್ರೆ ಜಗಳ ಕೊನೆಯಾಗಿದ್ದು ಮಾತ್ರ ದಂಪತಿಯ ಸಾವಿನಲ್ಲಿ. ತನ್ನ ಪತ್ನಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ತಾನೂ ಸಹ ಆಕೆಯ ಸೀರೆಯಿಂದ ನೇಣಿಗೆ ಶರಣಾಗಿದ್ದಾನೆ.

ಹೌದು.. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿಎಸ್ ಪುರ ಮೂಲದ ಸುರೇಶ್, ತನ್ನ ಸೋದರ ಸಂಬಂಧಿ ಮಮತಾಳನ್ನ ಮದುವೆಯಾಗಿದ್ದ. ಹದಿಮೂರ ವರ್ಷಗಳ ಹಿಂದಷ್ಟೇ ಮದ್ವೆಯಾಗಿದ್ದ. ಆದ್ರೆ, ಸುರೇಶನ ಕಾಮ ಮಿತಿ ಮೀರಿದ್ದು, ರಾತ್ರಿ ಬೆಳಗ್ಗೆ ಎನ್ನದೇ ಸಹಕರಿಸುವಂತೆ ಪೀಡಿಸುತ್ತಿದ್ದ.

ಇದಕ್ಕೆ ವಿಚಾರಕ್ಕೆ ನಡೆದ ಜಗಳ ದಂಪತಿ ಸಾವಿನಲ್ಲಿ ಅಂತ್ಯವಾಗಿದೆ.ಹದಿಮೂರು ವರ್ಷಗಳ ಹಿಂದೆ ಮದ್ವೆಯಾಗಿದ್ದ ಸುರೇಶ್ ಹಾಗೂ ಮಮತಾಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮುತ್ತಿನಂತ ಎರಡು ಗಂಡು ಮಕ್ಕಳು ಕೂಡ ಆಗಿದ್ವು.. ಒಬ್ಬನಿಗೆ ಎಂಟು ವರ್ಷ ಮತ್ತೋರ್ವನಿಗೆ ಆರು ವರ್ಷ. ಬೆಂಗಳೂರಿನ ಪೀಣ್ಯಾ ಎರಡನೇ ಹಂತದ ಸಮೀಪದ ತಿಗಳರ ಪಾಳ್ಯದ ಕಾಳಿಕಾ ನಗರದ ಮನೆಯೊಂದರಲ್ಲಿ ಬಾಡಿಗೆ ವಾಸವಾಗಿದ್ದರು. ಸುರೇಶ್ ಆಟೋ ಓಡಿಸುತ್ತಿದ್ದರೆ, ಪತ್ನಿ ಮಮತಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.

ಆದ್ರೆ ಗಂಡ ಮಧ್ಯವೆಸನಿಯಾಗಿ ಕಳೆದ ಕೆಲ ವರ್ಷಗಳಿಂದ ಪತ್ನಿಗೆ ಕಾಮದ ವಿಷಯಕ್ಕೆ ಕಿರುಕುಳ ನೀಡುತ್ತಿದ್ದನಂತೆ. ಸಾಲದಕ್ಕೆ ಮೊಬೈಲ್ ನಲ್ಲಿ ನಗ್ನ ವಿಡಿಯೋಗಳನ್ನ ತೋರಿಸಿ ಅದರಂತೆ ಸಹಕರಿಸು ಎಂದು ಒತ್ತಾಯ ಮಾಡುತ್ತಿದ್ದನಂತೆ. ಅಲ್ಲದೇ ಆಟೋ ಸರಿಯಾಗಿ ದುಡಿಯದೆ ಮನೆಗೆ ಆರ್ಥಿಕ ಸಹಾಯ ಮಾಡದೇ ಕುಡಿಯುತ್ತಿದ್ದ, ಈ ಸಂಬಂಧ ದಂಪತಿಗಳ ನಡುವೆ ಜಗಳವಾಗಿದ್ದು, ಹಲವು ಬಾರಿ ಇಬ್ಬರ ಕುಟುಂಬಸ್ಥರು ರಾಜಿ ಸಂಧಾನ ಮಾಡಿದ್ದರು. ಆದರೂ ಇಬ್ಬರ ಮಧ್ಯೆ ಜಗಳ ನಿಂತಿಲ್ಲ,


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ