Breaking News

400 ಕೋಟಿ ಕ್ಲಬ್‌ ಸೇರಿದ ರಿಷಬ್‌ ಶೆಟ್ಟಿ ʼಕಾಂತಾರʼ : ಹಲವು ದಾಖಲೆಗಳ ಹೆಗ್ಗಳಿಕೆ.

Spread the love

ಮುಂಬಯಿ: ರಿಷಬ್‌ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿರುವ ʼಕಾಂತಾರʼ ಸಿನಿಮಾ ಈಗಾಗಲೇ ಹಲವು ದಾಖಲೆಗಳನ್ನು ಉಡೀಸ್‌ ಮಾಡಿದೆ. ಸ್ಯಾಂಡಲ್‌ ವುಡ್‌ ಮಾತ್ರವಲ್ಲದೆ ದಕ್ಷಿಣದ ಪ್ರಮುಖ ಭಾಷೆಗಳಲ್ಲಿ ಹಾಗೂ ಹಿಂದಿಯಲ್ಲೂ ಡಬ್‌ ಆಗಿ ಬಂದ ಸಿನಿಮಾ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

 

ಸೆ.30 ರಂದು ರಾಜ್ಯಾದಂತ್ಯ ತೆರೆ ಕಂಡ ʼಕಾಂತಾರʼ ಸಿನಿಮಾಕ್ಕೆ ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್‌ ಸಿಕ್ಕಿತ್ತು. ರಜಿನಿಕಾಂತ್‌, ಕಮಲ್‌ ಹಾಸನ್ , ವಿವೇಕ್‌ ಅಗ್ನಿಹೋತ್ರಿ ಸೇರಿದಂತೆ ಬಿಟೌನ್‌ ಹಾಗೂ ಸೌತ್‌ ಸಿನಿರಂಗದ ಖ್ಯಾತನಾಮರು ಪ್ರಶಂಶಿಸಿದ್ದರು.

ಈಗಲೂ ಹಲವೆಡೆ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ʼಕಾಂತಾರʼ ಜಗತ್ತಿನಾದ್ಯಂತ 400 ಕೋಟಿ ಕಲೆಕ್ಷನ್‌ ಮಾಡಿದೆ.

ಸಿನಿಮಾದ ಮೊದಲ ಮಾರ್ಕೆಟ್‌ ಕರ್ನಾಟದಲ್ಲೇ 168.5 ಕೋಟಿ.ರೂ ಗಳಿಕೆ ಮಾಡಿದೆ. ಕೇರಳದಲ್ಲಿ 19.2 ಕೋಟಿ ರೂ., ಉತ್ತರ ಭಾರತದಲ್ಲಿ 96 ಕೋಟಿ ರೂ., ತೆಲುಗು ರಾಜ್ಯಗಳಲ್ಲಿ 60 ಕೋಟಿ ರೂ., ತಮಿಳುನಾಡಿನಲ್ಲಿ 12.70 ಕೋಟಿ.ರೂ ಕಲೆಕ್ಷನ್‌ ಮಾಡಿದೆ. ವಿದೇಶದ ಮಾರುಕಟ್ಟೆಯ ಅಂದಾಜು 44 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ವರದಿ ತಿಳಿಸಿದೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿರುವ ʼಕಾಂತಾರʼ ನ.24 ರಂದು ಓಟಿಟಿಯಲ್ಲಿ ತೆರೆ ಕಾಣಲಿದೆ ಎಂದು ಇತ್ತೀಚೆಗಿನ ವರದಿ ತಿಳಿಸಿದೆ.


Spread the love

About Laxminews 24x7

Check Also

ಕರ್ತವ್ಯದ ವೇಳೆ ನೌಕಾಪಡೆಯ ಯೋಧ ಹುತಾತ್ಮ

Spread the loveಹಾವೇರಿ: ನೌಕಾಪಡೆಯ ಯೋಧ  ಕರ್ತವ್ಯದ ವೇಳೆ ಹುತಾತ್ಮರಾದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಹಾವೇರಿ  ಜಿಲ್ಲೆಯ ಹಾನಗಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ