Breaking News

ಕಸ್ತೂರಿ ಮಹಲ್‍ನಿಂದ ಡಿಂಪಲ್ ಕ್ವೀನ್ ಔಟ್, ಶಾನ್ವಿ ಇನ್

Spread the love

ಬೆಂಗಳೂರು: ಚಿತ್ರದ ಟೈಟಲ್ ಕುರಿತು ಸದ್ದು ಮಾಡಿದ್ದ ಸಿನಿಮಾದಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಹೊರ ನಡೆದಿದ್ದು, ಅವರ ಜಾಗಕ್ಕೆ ಶಾನ್ವಿಯವರನ್ನು ನಿರ್ದೇಶಕ ದಿನೇಶ್ ಬಾಬು ಆಯ್ಕೆ ಮಾಡಿದ್ದಾರೆ.

ಆರಂಭದಲ್ಲಿ ದಿನೇಶ್ ಬಾಬು ಅವರು ಈ ಚಿತ್ರದ ಹೆಸರನ್ನು ಕಸ್ತೂರಿ ನಿವಾಸ ಎಂದು ಘೋಷಿಸಿದ್ದರು. ಆದರೆ ಡಾ.ರಾಜ್‍ಕುಮಾರ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಸ್ತೂರಿ ಮಹಲ್ ಎಂದು ಬದಲಾಯಿಸಿದ್ದಾರೆ. ಅಲ್ಲದೆ ಚಿತ್ರಕ್ಕೆ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸಿನಿಮಾದಿಂದ ಅವರು ಹೊರ ನಡೆದಿದ್ದು, ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಶಾನ್ವಿ ಶ್ರೀವಾಸ್ತವ ನಟಿಸುತ್ತಿದ್ದಾರೆ. ಸ್ಕಂದ ಅಶೋಕ್ ಅವರು ಮುಖ್ಯಭೂಮಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಚಿತಾ ರಾಮ್ ಅವರು ಚಿತ್ರದಿಂದ ಹೊರ ನಡೆದ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ದಿನೇಶ್ ಬಾಬು, ರಚಿತಾ ರಾಮ್ ಅವರು ಚಿತ್ರದಿಂದ ಹೊರ ನಡೆದಿರುವ ಕುರಿತು ನಿರ್ದಿಷ್ಟ ಕಾರಣ ತಿಳಿದಿಲ್ಲ. ಆದರೆ ಶಾನ್ವಿ ಅವರು ತಂಡ ಸೇರಿರುವುದಕ್ಕೆ ಸಂತೋಷವಾಗಿದೆ. ಅಕ್ಟೋಬರ್ ವೇಳೆಗೆ ಕೊಟ್ಟಿಗೆಹಾರದಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂದು ಮಾಹಿತಿ ನಿಡಿದರು. ಇನ್ನೂ ವಿಶೇಷವೆಂಬಂತೆ ಕಸ್ತೂರಿ ಮಹಲ್ ದಿನೇಶ್ ಬಾಬು ಅವರ 50ನೇ ಸಿನಿಮಾ ಆಗಿದೆ. ಹೀಗಾಗಿ ನಿರೀಕ್ಷೆ ಹೆಚ್ಚಿಸಿದೆ.


Spread the love

About Laxminews 24x7

Check Also

ಶಾಸಕಿ ರೂಪಕಲಾ ಶಶಿಧರ್ ಅವರೇ ಬಂದು ಟೇಬಲ್ ಕುಟ್ಟಿ ನೋಡ್ಕೊತೀನಿ ಅಂದ್ರು: ನಾರಾಯಣಸ್ವಾಮಿ

Spread the loveಕೋಲಾರ: ಅವತ್ತು ಸದನದಲ್ಲಿ ಸುಬ್ಬಾರೆಡ್ಡಿ ನಾವು ತಮಾಷೆಯಾಗಿ ಮಾತನಾಡುತ್ತಿದ್ದೆವು. ರೂಪಕಲಾ ಶಶಿಧರ್‌  ಬಗ್ಗೆ ನಾವು ಮಾತಾಡಿಲ್ಲ. ಏಕಾಏಕಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ