Breaking News

“ನನ್ನ ಸಿನಿಮಾ ನೋಡಿ ಪ್ಲೀಸ್..”

Spread the love

ನವದೆಹಲಿ : ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಆಗಸ್ಟ್ 11ರಂದು ಬಿಡುಗಡೆಯಾಗಲಿದೆ. ಪ್ರೇಕ್ಷಕರಿಂದ ಚಲನಚಿತ್ರಕ್ಕೆ ವೈವಿಧ್ಯಮಯ ಪ್ರತಿಕ್ರಿಯೆಗಳಿದ್ದು, ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಬಹಿಷ್ಕಾರವು ಸಾಮಾಜಿಕ ಮಾಧ್ಯಮದಲ್ಲಿಯೂ ಟ್ರೆಂಡ್ ಆಗಿದೆ.

ಚಿತ್ರದ ವಿರುದ್ಧ ಪ್ರೇಕ್ಷಕರ ಈ ಪ್ರತಿಕ್ರಿಯೆಯಿಂದ ಅಮೀರ್ ಖಾನ್ ಬೇಸರಗೊಂಡಿದ್ದು, ಅಮೀರ್ ಖಾನ್ ತಮ್ಮ ಚಿತ್ರವನ್ನ ಬಹಿಷ್ಕರಿಸದಂತೆ ಜನರನ್ನ ವಿನಂತಿಸಿದ್ದಾರೆ. ಅಂದ್ಹಾಗೆ, ಜನರು ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಕೆಲವು ಹೇಳಿಕೆಗಳನ್ನ ಗಮನಿಸಿ ಅವರ ಚಿತ್ರವನ್ನ ಬಹಿಷ್ಕರಿಸುತ್ತಿದ್ದಾರೆ.

ವರದಿಯ ಪ್ರಕಾರ ಅಮೀರ್ ಖಾನ್, ‘ಹೌದು, ನನಗೆ ದುಃಖವಾಗಿದೆ. ಕೆಲವರು ನಾನು ಭಾರತವನ್ನ ಇಷ್ಟಪಡದ ವ್ಯಕ್ತಿ ಎಂದು ಭಾವಿಸಿದ್ದಾರೆ. ಇದ್ರಿಂದ ನನಗೆ ದುಃಖವಾಗಿದೆ. ಆದ್ರೆ, ಅವ್ರು ಊಹಿಸಿರೋದು ಸುಳ್ಳು. ನನ್ನ ಬಗ್ಗೆ ಕೆಲವು ಜನರು ಆ ರೀತಿ ಭಾವಿಸುವುದು ದುರದೃಷ್ಟಕರ. ಅಂತಹದ್ದೇನೂ ಇಲ್ಲ, ದಯವಿಟ್ಟು ನನ್ನ ಚಿತ್ರವನ್ನು ಬಹಿಷ್ಕರಿಸಬೇಡಿ, ದಯವಿಟ್ಟು ನನ್ನ ಚಿತ್ರವನ್ನು ವೀಕ್ಷಿಸಿ’ ಎಂದಿದ್ದಾರೆ.

 


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ