Breaking News

ಪ್ರಕಾಶ ಹುಕ್ಕೇರಿ A.C.P. ಗೆ ನಿನ್ನ ಬಾಯಲ್ಲಿ ಇರೋ ಹಲ್ಲು ಮುರಿಯುತ್ತೇವೆ ಎಂದು ಅವಾಜ್

Spread the love

ಗೆದ್ದ ಹುಮ್ಮಸ್ಸಿನಲ್ಲಿ ಪೆÇಲೀಸರಿಗೆ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವಾಜ್ ಹಾಕಿರುವ ಘಟನೆ ನಡೆದಿದೆ. ಕಾನೂನು ಪಾಲಿಸಲು ಮುಂದಾದ ಎಸಿಪಿಗೆ ಏ ನಿನ್ನ ಬಾಯಲ್ಲಿ ಇರೋ ಹಲ್ಲು ಮುರಿಯುತ್ತೇವೆ ಎಂದು ಅವಾಜ್ ಹಾಕುವ ಮೂಲಕ ಪ್ರಕಾಶ ಹುಕ್ಕೇರಿ ಉದ್ಧಟತನ ಮೆರೆದಿದ್ದಾರೆ.

ವಾಯುವ್ಯ ಶಿಕ್ಷಕರ ಕ್ಷೇತ್ರದ ವಿಜೇತ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿಗೆ ಅವಾಜ್ ಹಾಕಿದ್ದಾರೆ. ಪ್ರಮಾಣ ಪತ್ರ ಸ್ವೀಕಾರ ಮಾಡಲು ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಎಬಿ ಪಾಟೀಲ್ ಜತೆಗೆ ಪ್ರಕಾಶ ಹುಕ್ಕೇರಿ ಆಗಮಿಸಿದ್ದರು. ಎಲ್ಲರನ್ನೂ ಒಳಗೆ ಬಿಡಲ್ಲ ಎಂದು ಪೆÇಲೀಸರು ತಡೆದರು. ಈ ವೇಳೆ ಪೆÇಲೀಸರಿಗೆ ಅವಾಜ್ ಹಾಕಿ ಮತ ಎಣಿಕೆ ಕೇಂದ್ರ ಪ್ರವೇಶ ಮಾಡಿದ ಕಾಂಗ್ರೆಸ್ ನಾಯಕರು. ಮೊದಲು ಲಕ್ಷ್ಮೀ ಹೆಬ್ಬಾಳ್ಕರ್ ಜತಗೆ ಪೆÇಲೀಸರ ವಾಗ್ವಾದ ಆರಂಭವಾಗಿತ್ತು. ಬಳಿಕ ಮಧ್ಯಪ್ರವೇಶ ಮಾಡಿದ ಪ್ರಕಾಶ ಹುಕ್ಕೇರಿ ಬಾಯಲ್ಲಿ ಇರೋ ಹಲ್ಲು ಮುರಿಯುತ್ತೇವೆ ಎಂದು ಅವಾಜ್ ಹಾಕುವ ಮೂಲಕ ತಮ್ಮ ದರ್ಪ ಮೆರೆದಿದ್ದಾರೆ.

 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ