Breaking News
Home / ರಾಜ್ಯ / ಪರಿಷತ್ ಚುನಾವಣೆ ಮತಚಲಾವಣೆಗೆ ಸಹಾಯಕರ (Companion) ನೇಮಿಸಿಕೊಳ್ಳಲು ಅವಕಾಶ ಡಿಸೆಂಬರ್ 6 ರೊಳಗಾಗಿ ಅರ್ಜಿ ಸಲ್ಲಿಸಬೇಕು

ಪರಿಷತ್ ಚುನಾವಣೆ ಮತಚಲಾವಣೆಗೆ ಸಹಾಯಕರ (Companion) ನೇಮಿಸಿಕೊಳ್ಳಲು ಅವಕಾಶ ಡಿಸೆಂಬರ್ 6 ರೊಳಗಾಗಿ ಅರ್ಜಿ ಸಲ್ಲಿಸಬೇಕು

Spread the love

ಬೆಳಗಾವಿ : ವಿಧಾನಪರಿಷತ್ ಚುನಾವಣೆಯಲ್ಲಿ ಮತಚಲಾಯಿಸಲಿರುವ ಅಂದರು/ದುರ್ಬಲ/ಅನಕ್ಷರಸ್ಥ ಮತದಾರರು ತಮ್ಮ ಮತಚಲಾವಣೆಗೆ ನೆರವಾಗಲು ಸಹಾಯಕರನ್ನು (Companion) ನೇಮಿಸಿಕೊಳ್ಳಬಹುದಾಗಿದ್ದು, ಈ ರೀತಿಯ ಸಹಾಯಕರು ಅವಶ್ಯವಿದ್ದಲ್ಲಿ ಡಿಸೆಂಬರ್ 6 ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಆರ್. ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

ಕುರುಡು /ದುರ್ಬಲ/ಅನಕ್ಷರಸ್ಥ ಮತದಾರರು ಮತದಾನ ಸಮಯದಲ್ಲಿ ಅವರ ಸಹಾಯಕ್ಕಾಗಿ ಯಾರಾದರೂ ಜೊತೆಗಾರ (Companion) ಅವಶ್ಯಕತೆ ಇದ್ದಲ್ಲಿ ಅಂತಹ ಮತದಾರರು, ಡಿಸೆಂಬರ್ 6 ರೊಳಗಾಗಿ ಸಂಬಂಧಪಟ್ಟ ಸ್ಥಳೀಯ ಸಂಘ ಸಂಸ್ಥೆಗಳ ಮುಖ್ಯಾಧಿಕಾರಿಗಳು/ ಆಯುಕ್ತರು ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿಗಳನ್ನು ಪಡೆದುಕೊಳ್ಳಬೇಕು.
ಸ್ಥಳೀಯ ಸಂಘ ಸಂಸ್ಥೆಗಳ ಮುಖ್ಯಾಧಿಕಾರಿಗಳು , ಆಯುಕ್ತರು ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಮತದಾರರು ಕುರುಡು / ದುರ್ಬಲ / ಅನಕ್ಷರಸ್ಥ ಮತದಾರರು ಮತದಾನ ಸಮಯದಲ್ಲಿ ಅವರ ಸಹಾಯಕ್ಕಾಗಿ ಯಾರಾದರೂ ಜೊತೆಗಾರ ( Companion ) ಅವಶ್ಯಕತೆ ಇದೆ ಎಂದು ಸಲ್ಲಿಸಿದ ಅರ್ಜಿಗಳ ಬಗ್ಗೆ ಕಾನೂನಿನ ಪ್ರಕಾರ ಪರಿಶೀಲನೆ ಮಾಡಿ ತಮ್ಮ ದೃಢೀಕರಣ ಮಾಡತಕ್ಕದ್ದು.
ಸದರಿ ಅರ್ಜಿಗಳನ್ನು ಚುನಾವಣಾಧಿಕಾರಿಗಳು ಪರಿಶೀಲನೆ ಮಾಡಿ ಅರ್ಹರಿರುವ ಮತದಾರರಿಗೆ ಜೊತೆಗಾರ (Companion) ರನ್ನು ಒದಗಿಸಲು ತಿಳಿಸಲಾಗುವುದು.
ಅಂತಹ ಮತದಾರರು ಮತ ಚಲಾವಣೆ ಸಮಯದಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿಗೆ ನಿಗದಿತ ನಮೂನೆ ಧೃಢೀಕರಣದೊಂದಿಗೆ ಸಲ್ಲಿಸುವುದು.
ಅಧ್ಯಕ್ಷಾಧಿಕಾರಿಗಳು ಕುರುಡು/ದುರ್ಬಲ/ಅನಕ್ಷರಸ್ಥ ಮತದಾರರು ಅಧ್ಯಕ್ಷಾಧಿಕಾರಿಗೆ ನಿಗದಿತ ನಮೂನೆ ಅರ್ಜಿ ಸಲ್ಲಿಸಿದಂತ ಮತದಾರರ ವಿವರಗಳನ್ನು ನಮೂನೆ 14 – ಎ ರಲ್ಲಿ ತಪ್ಪದೇ ದಾಖಲಿಸಿ ಡಿಮಸ್ಟರಿಂಗ್ ಸಮಯದಲ್ಲಿ ಪ್ರತ್ಯೇಕವಾಗಿ ಪೂರೈಸಲು ತಿಳಿಸುವುದು.
 ಕುರುಡು/ದುರ್ಬಲ/ಅನಕ್ಷರಸ್ಥ ಮತದಾರರು ಮತದಾನ ಸಮಯದಲ್ಲಿ ಅವರ ಸಹಾಯಕ್ಕಾಗಿ ಯಾರಾದರೂ ಜೊತೆಗಾರ (Companion) ಅರ್ಜಿಗಳನ್ನು ಸಂಬಂಧಪಟ್ಟ ಸ್ಥಳೀಯ ಸಂಘ ಸಂಸ್ಥೆಗಳ ಮುಖ್ಯಾಧಿಕಾರಿಗಳು/ ಆಯುಕ್ತರು ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಇವರಿಂದ ಸ್ವೀಕರಿಸಿಕೊಂಡು ಸಂಬಂಧಪಟ್ಟ ತಾಲ್ಲೂಕಿನ ತಹಶೀಲದಾರರು ಡಿಸೆಂಬರ್ 6 ರೊಳಗಾಗಿ ಕ್ರೋಢೀಕರಿಸಿ ವಿಶೇಷ ದೂತನೊಂದಿಗೆ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಬೆಳಗಾವಿ ಇವರ ಕಾರ್ಯಾಲಯಕ್ಕೆ ತಪ್ಪದೇ ಪೂರೈಸತಕ್ಕದ್ದು.
ಮತದಾನ ದಿನದಂದು ಮತದಾರರು ಕಡ್ಡಾಯವಾಗಿ ಗುರುತಿನ ಚೀಟಿ ತರಲು ನಿರ್ದೇಶನ ನೀಡುವುದು ಹಾಗೂ ಈ ಎಲ್ಲಾ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ವಿಡಿಯೋಗ್ರಾಫಿ ಮಾಡಲು ನಿರ್ದೇಶಿಸಲಾಗಿದೆ.

Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ