ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75ನೇ ಜಯಂತಿ. ಈ ದಿನದಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ತಂದೆಯ ಬಗ್ಗೆ ಭಾವನಾತ್ಮಕವಾಗಿ ಕೆಲ ಸಾಲುಗಳನ್ನು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.ರಾಜೀವ್ ಗಾಂಧಿ ಅವರು ಓರ್ವ ದೂರ ದೃಷ್ಟಿಯುಳ್ಳ ನಾಯಕಾರಗಿದ್ದರು. ಭವಿಷ್ಯದ ದೃಷ್ಟಿಕೋನದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿದ್ದರು. ಇದೆಲ್ಲಕ್ಕಿಂತ ಮಿಗಿಲಾಗಿ ಉದಾರ ಮತ್ತು ಪ್ರೀತಿಯ ಸ್ನೇಹ ಜೀವಿಯಾಗಿದ್ದರು. ಅವರನ್ನ ತಂದೆಯಾಗಿ ಪಡೆದ ನಾನಯ ಅದೃಷ್ಟವಂತ ಹಾಗೂ ಹೆಮ್ಮೆ ಪಡುತ್ತೇನೆ. ಪ್ರತಿದಿನ ತಂದೆಯನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಬರೆದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನವರು ರಾಜೀವ್ ಗಾಂಧಿ ಜಯಂತಿ ಹಿನ್ನೆಲೆ ಮಾಜಿ ಪ್ರಧಾನಿಗಳಿಗೆ ನಮನಗಳನ್ನು ಸಲ್ಲಿಸಿದ್ದಾರೆ. ಟೆಲಿಕಾಂ ಕ್ರಾಂತಿ, ಕಂಪ್ಯೂಟರೀಕರಣ, ಪಂಚಾಯತ್ ರಾಜ್, ಮತದಾನ ವಯಸ್ಸಿನ ಇಳಿಕೆ ಮೊದಲಾದ ಪುರೋಗಾಮಿ ಕಾರ್ಯಕ್ರಮಗಳ ಮೂಲಕ ಬಲಶಾಲಿಯಾದ ಆಧುನಿಕ ಭಾರತ ಕಟ್ಟಿದ, ನಮಗೆಲ್ಲ ಅಭಿವೃದ್ದಿಯ ದಾರಿ ತೋರಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಹುಟ್ಟುಹಬ್ಬದ ದಿನದ ಗೌರವಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ
https://www.facebook.com/105350550949710/posts/190184015799696/?sfnsn=wiwspmo&extid=yWsDvww5N3eOIoHU&d=n&vh=e