Breaking News

ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ  ಕೊನೆಗೆ ಎಚ್ಚತ್ತ ಅಧಿಕಾರಿಗಳು  ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.

Spread the love

ಕಿತ್ತೂರು:  ನಿರಂತರ ಮಳೆಯಿಂದಾಗಿ ತೆಗ್ಗು, ಗುಂಡಿ ಬಿದ್ದು ಸಂಪೂರ್ಣ  ಹಾಳಾಗಿದ್ದ  ನೇಗಿನಾಳ- ಬೈಲಹೊಂಗಲ ರಸ್ತೆ  ದುರಸ್ತಿ ಮಾಡುವಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ  ಕೊನೆಗೆ ಎಚ್ಚತ್ತ ಅಧಿಕಾರಿಗಳು  ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.

ಎಂ.ಕೆ ಹುಬ್ಬಳ್ಳಿಯಿಂದ ನೇಗಿನಾಳ ಮಾರ್ಗವಾಗಿ ಬೈಲಹೊಂಗಲ ತಲುಪುವ ರಸ್ತೆ ಸಂಪೂರ್ಣ ನಾಶವಾಗಿತ್ತು. 1 ಕೀಮಿ ವರೆಗೂ ರಸ್ತೆ ಸಂಪೂರ್ಣ ಹಾಳಾಗಿದ್ದು, ತಗ್ಗು , ಗುಂಡಿಯಲ್ಲಿ  ಮಳೆ ನೀರು  ತುಂಬಿದ್ದರಿಂದ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿ ವಾಹನ ಸವಾರರು ಪರದಾಡುವಂತಾಗಿತ್ತು.

ಇದರಿಂದಾಗಿ  ಗ್ರಾಮಸ್ಥರು ಅಧಿಕಾರಿಗಳ ವಿರುದ್ದ  ಆಕ್ರೋಶ ವ್ಯಕ್ತಪಡಿಸಿ,  ಹಲವು ಬಾರಿ ಅಧಿಕಾರಿಗಳಿಗೆ  ಮನವಿ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆ ಶಾಸಕ ಸತೀಶ ಜಾರಕಿಹೊಳಿ  ಅವರ ಅಭಿಮಾನಿ ಹಬೀಬ್ ಶಿಲ್ಲೆದಾರ್ ಮತ್ತವರ ಸಂಘಡಿಗರು ರಸ್ತೆ ಸಮಸ್ಯೆಯನ್ನು ಬಗೆಹರಿಸುವಂತೆ  ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. 

ಅಲ್ಲದೇ  ರಸ್ತೆ ದುರಸ್ತಿ ವಿಚಾರವಾಗಿ ಸೋಮವಾರ ಧರಣಿ ನಡೆಸುವುದಾಗಿ ಮನವಿ ಮಾಡಿದ್ದರು. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಅಧಿಕಾರಿಗಳು ರಸ್ತೆ ದುರಸ್ತಿ ಮುಂದಾಗಿದ್ದಾರೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ