Breaking News

ಮದುಮಗಳ ಕೈ ಹಿಡಿಯಲು ಹೋಗಿ ಹೆಣವಾದ ರೌಡಿ ಶೀಟರ್

Spread the love

ಯಾದಗಿರಿ: ಮದುವೆ ಮನೆಗೆ ಹೋಗಿ ಮದುಮಗಳ ಕೈ ಹಿಡಿಯಲು ಮುಂದಾದ ರೌಡಿ ಶೀಟರ್, ಆಕೆಯ ತಂದೆ ಮತ್ತು ಸಹೋದರರಿಂದ ಕೊಲೆಯಾಗಿದ್ದಾನೆ. ಈ ಘಟನೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಪರಮೇಶ್ವರಪಲ್ಲಿಯಲ್ಲಿ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಮೊಹಮ್ಮದ್ ಹನೀಪ್ (34) ಕೊಲೆಯಾದವನಾಗಿದ್ದು, ಈತ ಚಿನ್ನಕಾರ ಗ್ರಾಮದ ರೌಡಿ ಶೀಟರ್. ಆರೋಪಿಗಳನ್ನು ಮದುಮಗಳ ತಂದೆ ತಂದೆ ರಸೂಲ್ ಮತ್ತು ಮಕ್ಕಳಾದ ಗುಲಾಮ್, ಇರ್ಫಾನ್, ಹಾರೂನ್ ಎಂದು ಗುರುತಿಸಲಾಗಿದೆ.

 

ಸೋಮವಾರ ಮಧ್ಯಾಹ್ನ ಪರಮೇಶ್ವರಪಲ್ಲಿಯ ತನ್ನ ಸಂಬಂಧಿ ರಸೂಲ್ ರ ಮಗಳ ಮದುವೆಗೆ ಹೋಗಿದ್ದ. ಮದುವೆಯಲ್ಲಿ ಅಸಭ್ಯ ವರ್ತನೆ ತೋರಿದ ಮೊಹಮ್ಮದ್, ವೇದಿಕೆ ಮೇಲೇರಿ ಮದುಮಗಳ ಕೈ ಹಿಡಿಯಲು ಮುಂದಾಗಿದ್ದ. ಇದರಿಂದ ಕೋಪಗೊಂಡ ಮದುಮಗಳ ತಂದೆ ಮತ್ತು ಸಹೋದರರು, ಮೊಹಮ್ಮದ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ