Breaking News

ಬೆಳಗಾವಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ಪತ್ತೆ: ಲಾರಿ ಸಮೇತ ಚಾಲಕ ಅರೆಸ್ಟ್

Spread the love

ಬೆಳಗಾವಿ: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಪಡಿತರ ಅಕ್ಕಿಯನ್ನು ಮಾಳಮಾರುತಿ ಪೊಲೀಸರು ಜಪ್ತಿ ಮಾಡಿ, ಲಾರಿ ಚಾಲಕನನ್ನು ಬಂಧಿಸಿದ್ದಾರೆ.

ಬೆಳಗಾವಿ ನಗರದ ಆಜಾದ್ ನಗರದ ಇಂಡಿಯಾ ಗ್ಯಾರೇಜ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಹಾರಾಷ್ಟ್ರ ಮೂಲದ ವಿಜಯ ನಾರಾಯಣ ಭೋಸಲೆ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯಿಂದ 11,700 ಕೆ.ಜಿ. ಪಡಿತರ ಅಕ್ಕಿ ಜಪ್ತಿ ಮಾಡಲಾಗಿದ್ದು, ಇದರ ಅಂದಾಜು ಮೌಲ್ಯ ₹2,63,250 ಎಂದು ತಿಳಿದುಬಂದಿದೆ. ಅಕ್ಕಿ ಸಾಗಾಟಕ್ಕೆ ಬಳಸಿದ್ದ ₹6 ಲಕ್ಷ ಮೌಲ್ಯದ ಟಾಟಾ ಲಾರಿ (KA-51/C-5271)ಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಒಟ್ಟಾರೆ ₹8,63,250 ಮೌಲ್ಯದ ಅಕ್ಕಿ ಹಾಗೂ ಲಾರಿ ಜಪ್ತಿಯಾಗಿದ್ದು, ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಇಲಾಯಸ ಇಮಾಮಸಾಬ ಮುನಿಯಾರ ನೀಡಿದ ದೂರಿನ ಆಧಾರದ ಮೇಲೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ನಡೆಸುತ್ತಿದ್ದ ಜಾಲದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Spread the love

About Laxminews 24x7

Check Also

ಅಂಬಾರಿ ತೂಕ ತಡೆಯಲಾಗದೇ ತಾಲೀಮು ಅರ್ಧಕ್ಕೆ ಮೊಟಕು – ಬಹುತೇಕ ಕ್ಯಾಪ್ಟನ್ ರೇಸ್‌ನಿಂದ ಮಹೇಂದ್ರ ಔಟ್

Spread the loveಮೈಸೂರು: ಈ ಬಾರಿ ದಸರಾದಲ್ಲಿ  ಅಂಬಾರಿ ಹೊರುವ ಆನೆ ಯಾವುದು ಅನ್ನೋದು ಇನ್ನೂ ಕುತೂಹಲವಾಗಿಯೇ ಇದೆ. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ