Breaking News

ಖಾಲಿ ಮಾತನಾಡುವ ಗಿರಾಕಿ ಅಲ್ಲ, ರಾಜ್ಯದ ಪ್ರಜಾ ಸೇವಕನಾಗಿ ನುಡಿದಂತೆ ನಡೆಯುತ್ತೇನೆ: ಡಿಕೆಶಿ

Spread the love

ಚಿತ್ರದುರ್ಗ: ನಾನು ಬರೀ ಖಾಲಿ ಮಾತನಾಡುವ ಗಿರಾಕಿ ಅಲ್ಲ, ನಾನು ರಾಜ್ಯದ ಪ್ರಜಾ ಸೇವಕನಾಗಿ ನುಡಿದಂತೆ ನಡೆಯುತ್ತೇನೆ ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ಹಿರಿಯೂರು  ತಾಲೂಕಿನಲ್ಲಿ 2,328 ಕೋಟಿ ರೂ. ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗ್ಯಾರಂಟಿ ಕೊಟ್ಟಾಗ ವಿರೋಧ ಪಕ್ಷದವರು ನಕ್ಕರು. ಆದರೆ ನಮ್ಮ ಸರ್ಕಾರ ಯಶಸ್ವಿಯಾಗಿ ಗ್ಯಾರಂಟಿ ಕೊಟ್ಟಿದೆ. ಎಲ್ಲಾ ತಾಯಂದಿರು ಉಚಿತವಾಗಿ ಓಡಾಡುತಿದ್ದಾರೆ. 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಹಣ ಕೊಡುತ್ತಿದ್ದೇವೆ. ಈ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಕನಕಪುರದಷ್ಟೇ ಮುಖ್ಯ ಹಿರಿಯೂರು ಕ್ಷೇತ್ರ. ಹಿರಿಯೂರು ಉಪ ಚುನಾವಣೆಯಲ್ಲಿ ಅವರು ಇಬ್ಬರು ಸೇರಿ ಮೈತ್ರಿ ಮಾಡಿಕೊಂಡು ಒಂದೇ ಅಭ್ಯರ್ಥಿ ನಿಲ್ಲಿಸುತ್ತಾರೆ ಎಂದು ನನಗೆ ಗೊತ್ತಿದೆ. ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ, ಅಭಿವೃದ್ಧಿ ಮಾಡುತ್ತೇವೆ. ನೀವು ನನ್ನ ಕೈ ಹಿಡಿಯುತ್ತೀರಲ್ಲಾ? ನನಗೆ ಮೋಸ ಮಾಡಲ್ವಲ್ಲಾ ಎಂದು ಜನತೆಗೆ ಪ್ರಶ್ನಿಸಿದರು.

ಈ ಕಾರ್ಯಕ್ರಮಕ್ಕೆ ಬಹಳ ದುಃಖದಿಂದ ಬಂದಿದ್ದೇನೆ. ಇವತ್ತು ಡಿ.ಸುಧಾಕರ್ ಇದ್ದಿದ್ದರೆ ಸಂತೋಷ, ಆನಂದ ಪಡುತ್ತಿದ್ದ. ತಾನು ಮಂತ್ರಿ ಆಗದಿದ್ದರೂ ಪರವಾಗಿಲ್ಲ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಎಲ್ಲರ ಮುಂದೆ ಘೋಷಣೆ ಮಾಡಿದ್ದ. ನಾನು ಬರಿಗೈಯಲ್ಲಿ ಇಲ್ಲಿಗೆ ಬಂದಿಲ್ಲ, ಅಭಿವೃದ್ಧಿ ಲಕ್ಷ್ಮೀಯನ್ನು ತೆಗೆದುಕೊಂಡು ಬಂದಿದ್ದೇವೆ. 2,300 ಕೋಟಿ ರೂ. ಅಭಿವೃದ್ಧಿ ಕೆಲಸದ ಹಣ ಬಿಡುಗಡೆ ಮಾಡಿ ಬಂದಿದ್ದೇವೆ. ಈಗ ಪ್ರತಿಯೊಂದು ಊರಲ್ಲಿ, ಹಳ್ಳಿಯಲ್ಲಿ ಏನಾಗಬೇಕು ಎಂದು ಪಟ್ಟಿ ಮಾಡಿಕೊಂಡು ಕೆಲಸ ಆರಂಭಿಸಿದ್ದೇವೆ ಎಂದರು.

ಈ ರಾಜ್ಯದಲ್ಲಿ ಬಡ 5 ಲಕ್ಷ ಜನರಿಗೆ ಸೈಟ್ ಹಂಚಲು ತಯಾರಾಗಿದ್ದೇವೆ. ಸರ್ಕಾರಿ ಜಾಗ ಇಲ್ಲಾ ಅಂದರೆ ಖಾಸಗಿ ಜಮೀನು ಖರಿದಿ ಮಾಡಿ ಸೈಟ್ ಹಂಚುತ್ತೇವೆ. ಚಿತ್ರದುರ್ಗದಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ಜಮೀನಿನ ಪಟ್ಟಿ ಕೊಟ್ಟಿದ್ದಾರೆ. ಪ್ರಜಾಸೇವಾ ಇಲಾಖೆಯಲ್ಲಿ ನಿಮ್ಮ ಸಮಸ್ಯೆ ಬಗ್ಗೆ ಅರ್ಜಿ ಕೊಡಿ. ಎಲ್ಲರಿಗೂ ಭೂಮಿ ಗ್ಯಾರಂಟಿ ಕೊಡುತ್ತೇವೆ. ನಮ್ಮ ಸರ್ಕಾರ ಬಂದ ಮೇಲೆ ಭೂಮಿ ಬೆಲೆ ಹೆಚ್ಚಾಗಿದೆ. ನಮ್ಮ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ. ಇದು ಆಂದೋಲನ ರೀತಿಯಲ್ಲಿ ನಡೆಯುತ್ತಿದೆ. ಈ ಕೆಲಸ ಯಾಕೆ ದಳದವರು, ಬಿಜೆಪಿಯವರು ಮಾಡಿಲ್ಲ, ಆದರೆ ಕಾಂಗ್ರೆಸ್‌ನಿಂದ ಮಾತ್ರ ಬಡಜನರಿಗೆ ಅನುಕೂಲ ಆಗುತ್ತದೆ. ಡಬಲ್ ಇಂಜಿನ್ ಸರ್ಕಾರ ಇದ್ದರೂ ಕಳೆದ ಬಾರಿ 126 ಸೀಟು ಕೊಟ್ಟು ನಮಗೆ ಅಧಿಕಾರ ಕೊಟ್ಟಿದ್ದೀರಿ. ರೈತರಿಗೆ ಉಚಿತ ವಿದ್ಯುತ್ ಕೊಡುವ ಕೆಲಸ ಸರ್ಕಾರ ಮಾಡಿದೆ. 22 ಸಾವಿರ ಕೋಟಿ ರೈತರ ಪಂಪುಗಳಿಂದ ವಿದ್ಯುತ್ ಬಿಲ್ ಬಂದಿದೆ. ಪ್ರಧಾನಿಗಳು ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ. ಧರ್ಮಪುರ ಬಸ್ ನಿಲ್ದಾಣ 3 ಕೋಟಿ ರೂಪಾಯಿಯಲ್ಲಿ ನಿರ್ಮಾಣ ಆಗಲಿದೆ ಎಂದು ನುಡಿದರು.

ಎನ್‌ಡಿಎಯ ಯಾವ ಲೀಡರ್ ಬಂದರೂ ನೀವು ಕೇಳಬೇಕು. ಬರೀ ಖಾಲಿ ಮಾತು ನಿಂದು ಎಂದು ಕುಮಾರಸ್ವಾಮಿ ಅವರಿಗೆ ಕೇಳಬೇಕು. ಎಸ್‌ಐಆರ್ ಈಗ ನಡೆಯುತ್ತಿದೆ. ನಾವು ಏನು ಮಾಡಲು ಆಗಲ್ಲ. ಒಕ್ಕಲಿಗರ ಸಮುದಾಯ ಭವನ, ಕನಕ ಭವನ ಎಲ್ಲದಕ್ಕೂ ದುಡ್ಡು ಕೊಡುತ್ತೇನೆ. ಚನ್ನಪಟ್ಟಣ ಚುನಾವಣೆಯಲ್ಲಿ ಕುಮಾರಣ್ಣನ ಮಗನನ್ನು ಒತ್ತಾಯವಾಗಿ ನಿಲ್ಲಿಸಿದರು. ಆದರೆ ಯಾರು ಗೆದ್ದರು? ತುಮಕೂರು, ದಾವಣಗೆರೆ, ಚಿತ್ರದುರ್ಗದ ಎಲ್ಲಾ ಕಾಂಗ್ರೆಸ್ ಶಾಸಕರು ಹಿರಿಯೂರು ಚುನಾವಣೆಯಲ್ಲಿ ಇರುತ್ತಾರೆ. ಮುಂದಿನ ಬಾರಿ ಮತ್ತೇ ನಮ್ಮದೇ ಸರ್ಕಾರ ಗ್ಯಾರಂಟಿ. ಬರಗಾಲದ ಪರಿಹಾರವಾಗಿ ಕೇಂದ್ರ ರ್ಸಕಾರ ಇನ್ನೂ ಏನೂ ಕೊಟ್ಟಿಲ್ಲ. ಆದರೂ ನಾನು ಪರಿಹಾರ ಕೊಡುತ್ತಿದ್ದೇನೆ ಎಂದರು. ಈ ವೇಳೆ ಡಿ.ಸುಧಾಕರ್ ಪುತ್ರ ಸುಹಾಸ್‌ನನ್ನು ಅಭ್ಯರ್ಥಿ ಎಂದು ಘೋಷಣೆ ಮಾಡುವಂತೆ ಜನರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾನು ಕಾಂಗ್ರೆಸ್ ಅಧ್ಯಕ್ಷ ಅಲ್ಲಾ, ನಾನೇ ಅಭ್ಯರ್ಥಿ ಎಂದು ಭಾವಿಸಿ ಮತ ಹಾಕಿ ಎಂದರು.


Spread the love

About Laxminews 24x7

Check Also

ಡಿಸೆಂಬರ್ ಅಂತ್ಯಕ್ಕೆ ವಿಜಯಪುರದಲ್ಲಿ ವಿಮಾನ ಹಾರಾಟ – ಎಂ.ಬಿ ಪಾಟೀಲ್

Spread the loveವಿಜಯಪುರ: ಇದೇ ಡಿಸೆಂಬರ್ ಅಂತ್ಯದೊಳಗೆ ವಿಜಯಪುರದಲ್ಲಿ ವಿಮಾನ ಹಾರಾಟ ಪ್ರಾರಂಭಗೊಳ್ಳಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ