Home / ಕ್ರೀಡೆ / ಸ್ಪಿನ್ನರ್ಸ್ ಎದುರು ಟೀಮ್ ಇಂಡಿಯಾ ಬ್ಯಾಟ್ಸ್​ಮೆನ್​ ಸೈಲೆಂಟ್..?

ಸ್ಪಿನ್ನರ್ಸ್ ಎದುರು ಟೀಮ್ ಇಂಡಿಯಾ ಬ್ಯಾಟ್ಸ್​ಮೆನ್​ ಸೈಲೆಂಟ್..?

Spread the love

ಸ್ಪಿನ್ನರ್​ಗಳನ್ನ ಎದುರಿಸೋದ್ರಲ್ಲಿ ಟೀಮ್ ಇಂಡಿಯಾ ವಿಶ್ವದ ಅಗ್ರಗಣ್ಯ ತಂಡ. ಇದು ಟೀಮ್ ಇಂಡಿಯಾದ ಬ್ಯಾಟಿಂಗ್ ಶಕ್ತಿಯೂ ಹೌದು. ಆದ್ರೆ ಇದೇ ಈಗ ಭಾರತ ತಂಡದ ವಿಕ್ನೇಸ್ ಆಗಿದೆಯಾ ಅನ್ನೋ ಅನುಮಾನ ಹುಟ್ಟುಹಾಕಿದೆ.

ಟೀಮ್ ಇಂಡಿಯಾ.. ಕ್ರಿಕೆಟ್ ಲೋಕದ ವಿಶ್ವ ದರ್ಜೆಯ ತಂಡ. ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಭಾರತ ಕ್ರಿಕೆಟ್ ಲೋಕದ ಹೆಮ್ಮರ. ಹೀಗಾಗಿಯೇ ಟೀಮ್ ಇಂಡಿಯಾ, ಪ್ರತಿಭೆಗಳ ಕಣಜವಾಗಿದೆ. ವಿಶ್ವ ಶ್ರೇಷ್ಠ ಬ್ಯಾಟಿಂಗ್ ದಿಗ್ಗಜರನ್ನ, ವೇಗಿಗಳನ್ನ ಹೊಂದಿದೆ. ಹಾಗೇ ಸರ್ವ ಶ್ರೇಷ್ಠ ಸ್ಪಿನ್ನರ್​ಗಳನ್ನು ವಿಶ್ವ ಕ್ರಿಕೆಟ್​ಗೆ ಕೊಟ್ಟಿದೆ. ಇನ್ನೂ ವಿಶ್ವ ಕ್ರಿಕೆಟ್​ನಲ್ಲಿ ಸ್ಪಿನ್ನರ್​ಗಳನ್ನ ಸಮರ್ಥವಾಗಿ ಎದುರಿಸುವ ತಂಡ ಕೂಡ, ಟೀಮ್ ಇಂಡಿಯಾನೇ.

ಕ್ರಿಕೆಟ್ ಲೋಕದಲ್ಲಿ ನಾವೇ ರೂಲರ್​​ಗಳೆಂದು ಮೆರೆಯುತ್ತಿದ್ದಂಥ ತಂಡಗಳೂ, ಸ್ಪಿನ್ ಅಸ್ತ್ರದ ಮುಂದೆ ಮಕಾಡೆ ಮಲಗಿವೆ. ಸ್ಪಿನ್ ಎಸೆತಗಳನ್ನ ನೋಡಿ ಕ್ರೀಸ್​​ನಲ್ಲೇ ದಂಗುಬಡಿದವರಂತೆ, ನಿಂತ ಬೇಕಾದಷ್ಟು ವಿದೇಶಿ ಬ್ಯಾಟ್ಸ್​​ಮೆನ್​ ಇದ್ದಾರೆ. ಆದ್ರೆ ಈ ವಿಚಾರದಲ್ಲಿ ಟೀಮ್ ಇಂಡಿಯಾ ಎಲ್ಲಾ ತಂಡಗಳಿಗೆ ಮಾದರಿಯಾಗಿತ್ತು. ಸ್ಪಿನ್ ಅಸ್ತ್ರದ ಎದುರು ಪಾರಮ್ಯ ಮರೆಯುತ್ತಿದ್ದ ಟೀಮ್ ಇಂಡಿಯಾ ಬ್ಯಾಟ್ಸ್​​ಮೆನ್​, ಎದುರಾಳಿ ಸ್ಪಿನ್ನರ್​ಗಳಿಗೆ ಕಬ್ಬಣದ ಕಡಲೆಯಾಗಿದ್ರು. ಆದ್ರೀಗ ಈ ಟ್ರೆಂಡ್ ಬದಲಾಗಿದೆ. ಸ್ಪಿನ್ನರ್​ಗಳೇ ಟೀಮ್ ಇಂಡಿಯಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ . ಇದಕ್ಕೆ ಸಾಕ್ಷಿ ಕಳೆದ ಎರಡು ಟೆಸ್ಟ್ ಸರಣಿಗಳು.
ಎರಡು ಸರಣಿಗಳಿಂದ ಬ್ಯಾಟ್ಸ್​​ಮೆನ್​ ಸೈಲೆಂಟ್
ಸ್ಪಿನ್ನರ್ಸ್ ಎದುರು ಟೀಮ್ ಇಂಡಿಯಾ ಬ್ಯಾಟ್ಸ್​​ಮೆನ್​ , ಪಾರಮ್ಯ ಮೆರೆಯುತ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದ್ರೆ ಕಳೆದೆರೆಡು ಸರಣಿಗಳಿಂದ ಟೀಮ್ ಇಂಡಿಯಾ ಬ್ಯಾಟ್ಸ್​​ಮೆನ್​ಸ್ಪಿನ್ನರ್​ಗಳ ವಿರುದ್ಧವೇ ತಿಣುಕಾಡುತ್ತಿದ್ದಾರೆ. ಸ್ಪಿನ್ನರ್ಸ್ ಎದುರು ಅರ್ಭಟಿಸಬೇಕಿದ್ದ ಭಾರತೀಯ ದಾಂಡಿಗರೇ, ಈಗ ಫುಲ್ ಸೈಲೆಂಟ್ ಆಗಿದ್ದಾರೆ. ಇದಕ್ಕೆ ಸಾಕ್ಷಿ ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ ಪ್ರವಾಸ ಹಾಗೂ ಸದ್ಯ ಭಾರತದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೇ ಆಗಿದೆ.

ಮೊದಲ ಟೆಸ್ಟ್​ನಲ್ಲಿ ಸ್ಪಿನ್ನರ್ಸ್​ಗೆ ಉರುಳಿದ್ವು 11 ವಿಕೆಟ್ಸ್
ಆಸಿಸ್ ಪ್ರವಾಸದ ಗೆಲುವಿನ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಣೆಯಾಗಿತ್ತು. ಈ ಪಂದ್ಯದಲ್ಲಿ ಗೆಲುವಿನ ಆತ್ಮವಿಶ್ವಾಸದಲ್ಲಿದ್ದ ಟೀಮ್ ಇಂಡಿಯಾ, ಮೊದಲ ಪಂದ್ಯದಲ್ಲೇ ಸೋಲಿನ ಮುಖಭಂಗ ಅನುಭವಿಸಿತ್ತು. ಇದಕ್ಕೆ ಕಾರಣ ತಂಡದ ಬ್ಯಾಟಿಂಗ್ ವೈಫಲ್ಯ. ಅದ್ರಲ್ಲೂ ಸ್ಪಿನ್ನರ್ಸ್​ ಎದುರು ಅಬ್ಬರಿಸದ ಟೀಮ್ ಇಂಡಿಯಾ, ಆ ಪಂದ್ಯದಲ್ಲಿ 11 ವಿಕೆಟ್ ನೀಡಿ ಸುಲಭದ ತುತ್ತಾಯ್ತು

2ನೇ ಟೆಸ್ಟ್​​ನಲ್ಲಿ ಸ್ಪಿನ್ನರ್ಸ್​ಗೆ 15 ಬ್ಯಾಟ್ಸ್​​ಮೆನ್ ಔಟ್​​
ಚೆಪಾಕ್​ನ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿತ್ತು. ಆದ್ರೂ ಸ್ಪಿನ್ನರ್​ಗಳ ಎದುರಿನ ಪರದಾಟ ಮುಂದುವರಿದಿತ್ತು. ಈ ಪಂದ್ಯದಲ್ಲಿ ಬರೋಬ್ಬರಿ 15 ಭಾರತೀಯ ಬ್ಯಾಟ್ಸ್​​ಮೆನ್​ ಸ್ಪಿನ್ನರ್ಸ್​ಗೆ ವಿಕೆಟ್ ಒಪ್ಪಿಸಿದ್ರು. ಅದ್ರಲ್ಲೂ ಆಲ್​ರೌಂಡರ್ ಮೊಯಿನ್ ಆಲಿ, ಲೆಗ್ ಸ್ಪಿನ್ನರ್ ಜ್ಯಾಕ್ ಲಿಚ್, ಪಾರ್ಟ್ ಟೈಮ್ ಸ್ಪಿನ್ನರ್ ಜೋ ರೂಟ್​ಗೆ, ಟಾಪ್ ಆರ್ಡರ್ ಬ್ಯಾಟ್ಸ್​​ಮೆನ್ಗೆ ವಿಕೆಟ್ ಒಪ್ಪಿಸಿದ್ದು ವಿಶೇಷ.

ಪಿಂಕ್​ಬಾಲ್ ಟೆಸ್ಟ್​ನ ಒಂದೇ ಇನ್ನಿಂಗ್ಸ್​​ನಲ್ಲಿ 9 ವಿಕೆಟ್
ನಮೋ ಅಂಗಳದಲ್ಲಿನ ಪಿಂಕ್ ಬಾಲ್ ಟೆಸ್ಟ್​ನಲ್ಲಿ ವಿರಾಟ್ ಪಡೆ 10 ವಿಕೆಟ್​​ಗಳ ಗೆಲುವು ಸಾಧಿಸಿತ್ತು. ಆದ್ರೆ ಆ ಪಂದ್ಯದಲ್ಲೂ ಟೀಮ್ ಇಂಡಿಯಾ ಬ್ಯಾಟ್ಸ್​​ಮೆನ್​ , ಇಂಗ್ಲೆಂಡ್ ಸ್ಪಿನ್ನರ್ಸ್ ಎದುರು ಫುಲ್ ಸೈಲೆಂಟ್ ಆಗಿದ್ರು. ಘಟಾನುಘಟಿ ಬ್ಯಾಟ್ಸ್​​ಮೆನ್​ ಜ್ಯಾಕ್ ಲಿಚ್​ಗೆ ವಿಕೆಟ್ ಒಪ್ಪಿಸಿದ್ರೆ, ಇದೇ ಇನ್ನಿಂಗ್ಸ್​​ನಲ್ಲಿ ಆಪ್ ಸ್ಪಿನ್ನರ್ ಜೋ ರೂಟ್, ಐದು ಮಂದಿ ಬ್ಯಾಟ್ಸ್​​ಮೆನ್​ಗೆ ಪೆವಿಲಿಯನ್ ಹಾದಿ ತೋರಿದ್ರು.

ಸದ್ಯ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ 58 ವಿಕೆಟ್ ಪತನಗೊಂಡಿವೆ. ಅದ್ರಲ್ಲಿ 37 ಬ್ಯಾಟ್ಸ್​​ಮೆನ್​ ಸ್ಪಿನ್ನರ್​ಗಳಿಗೆ ಔಟಾಗಿದ್ರೆ, ಇನ್ನುಳಿದ 21 ಬ್ಯಾಟ್ಸ್​​ಮೆನ್​ ವೇಗಿಗಳ ಬೌಲಿಂಗ್​ನಲ್ಲಿ ವಿಕೆಟ್ ಚೆಲ್ಲಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲೂ ಟೀಮ್ ಇಂಡಿಯಾ ಬ್ಯಾಟ್ಸ್​​ಮೆನ್​ , ಸ್ಪಿನ್ನರ್ ನಾಥನ್ ಲಯನ್ ಎದುರು ತಡಬಡಾಯಿಸಿದ್ದರು. ಒಟ್ನಲ್ಲಿ ಸದ್ಯ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್​​ಮೆನ್, ಸ್ಪನ್ನರ್​ಗಳಿಗೆ ಹೆಚ್ಚು ವಿಕೆಟ್ ಒಪ್ಪಿಸಿರೋದು ಆಶ್ಚರ್ಯ ಮೂಡಿಸಿದೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ