Breaking News
Home / ಅಂತರಾಷ್ಟ್ರೀಯ / ದೇಶದಲ್ಲಿ 5ನೇ ಕೊರೊನಾ ಸಾವು- 2 ದಿನದಲ್ಲಿ 2 ಬಲಿ

ದೇಶದಲ್ಲಿ 5ನೇ ಕೊರೊನಾ ಸಾವು- 2 ದಿನದಲ್ಲಿ 2 ಬಲಿ

Spread the love

ಜೈಪುರ: ಭಾರತದಲ್ಲಿ ಕೊರೊನಾಗೆ ಐದನೇ ಸಾವು ಆಗಿದ್ದು, ದೇಶದ ಜನತೆ ಆತಂಕದಲ್ಲಿದ್ದಾರೆ.

ರಾಜಸ್ಥಾನದ ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಇಟಲಿ ಪ್ರವಾಸಿಗ ಸಾವನ್ನಪ್ಪಿದ್ದಾನೆ. ಪ್ರವಾಸಿಗನ ಪತ್ನಿಗೂ ಕೊರೊನಾ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಇಟಲಿ ಪ್ರವಾಸಿಗ ಸೇರಿದಂತೆ ಭಾರತದಲ್ಲಿ ಒಟ್ಟು ಐವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕಲಬುರಗಿ, ದೆಹಲಿ, ಮಹಾರಾಷ್ಟ್ರ ಮತ್ತು ಪಂಜಾಬ್ ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಗುರುವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಮನೆಯಲ್ಲಿರಿ. ಕೊರೊನಾಗೆ ಔಷಧಿ ಇಲ್ಲ. ಹೀಗಾಗಿ ನಾವು ಜಾಗ್ರತೆಯಿಂದ ಇರಲು ಸಂಕಲ್ಪ ಮತ್ತು ಸಂಯಮ ಬಹಳ ಮುಖ್ಯ. ಸ್ವಯಂ ಸಂಕಲ್ಪದಿಂದ ನಾವು ಮಹಾಮಾರಿಯನ್ನು ಹೊಡೆದೋಡಿಸಬಹುದು. ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ವೈರಸ್ ಸೋಕದೇ ಇರಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ


Spread the love

About Laxminews 24x7

Check Also

ಆಕೆ’ಗೆ ತಾಳಿ- ‘ಈಕೆ’ಗೆ ತಾಳಿ ಭರವಸೆ: ಶ್ರೀಮಂತನ ಠಾಣೆಗೆ ಬಂದಳು ಪ್ರಿಯತಮೆ…!

Spread the loveಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಠಾಣೆಗಳಲ್ಲಿ ಪೊಲೀಸರ ಪ್ರೇಮ ಪ್ರಕರಣಗಳು ಅವರದ್ದೆ ಠಾಣೆಯ ಮೆಟ್ಟಿಲೇರನ್ನೇರುತ್ತಿರುವುದು ಕಂಡು ಬರುತ್ತಿದೆ. ಶಂಭೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ