ಧಾರವಾಡ: ಡ್ರಗ್ಸ್ ಪ್ರಕರಣ ರಾಜ್ಯಾದ್ಯಂತ ತನಿಖೆ ಆಗಬೇಕುಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಡ್ರಗ್ಸ್ ವಿಚಾರವಾಗಿ ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣ ತನಿಖೆ ಬೇಗ ಬೇಗ ಮಾಡಬೇಕಿತ್ತು.ಕೆಲವು ಕಡೆ ಒಳ್ಳೆಯ ರೀತಿಯಿಂದ ತನಿಖೆ ನಡೆದಿದೆ . ಇನ್ನೂ ಕಾಲ ಮೀರಿಲ್ಲ. ರಾಜ್ಯಾದ್ಯಂತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದರು. ಎಐಸಿಸಿ ಕಾರ್ಯಕಾರಿ ಸಮಿತಿ ಬದಲಾವಣೆ ವಿಚಾರ ಮಾತನಾಡಿ, ಕೆಲಸ ಮಾಡುವ …
Read More »ಚಿಗರಿ ಬಸ್‍ಗಳ ಮಾಸಿಕ ಪಾಸ್, ಸ್ಮಾರ್ಟ್ ಕಾರ್ಡ್ ಸೇವೆ ಪ್ರಾರಂಭ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೆ ಐಷಾರಾಮಿ ಚಿಗರಿ ಬಸ್ ಓಡಾಟ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತವಾಗಿತ್ತು. ಲಾಕ್‍ಡೌನ್ ಸಡಿಲಿಕೆಯಿಂದ ಬಸ್ ಸಂಚಾರ ಪುನರಾಂಭಗೊಂಡಿದ್ದು, ಈಗ ಮತ್ತೆ ಸಂಚಾರ ಪ್ರಾರಂಭಿಸಿವೆ. ಅಲ್ಲದೇ ಬಿ.ಆರ್.ಟಿ.ಎಸ್ ಬಸ್ಸುಗಳಲ್ಲಿ ಪ್ರಯಾಣಿಸಲು ಲಭ್ಯವಿರುವ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಬಿ.ಆರ್.ಟಿ.ಎಸ್ ಮುಂದಾಗಿದೆ. ಪ್ರತಿನಿತ್ಯ ಬಿ.ಆರ್.ಟಿ.ಎಸ್ ಬಸ್ಸುಗಳಲ್ಲಿ ಪ್ರಯಾಣಿಸುವ ನೌಕರರಿಗೆ ಹಾಗೂ ಇತರೇ ಶೈಕ್ಷಣಿಕ ವಾಣಿಜ್ಯ ಕೆಲಸ ಕಾರ್ಯಗಳಿಗಾಗಿ ಮೇಲಿಂದ ಮೇಲೆ ಪ್ರಯಾಣಿಸುವ ಪ್ರಯಾಣಿಕರ …
Read More »ಕಿತ್ತೂರು ಚೆನ್ನಮ್ಮನ ಮೂರ್ತಿಯ ಮುಖಕ್ಕೆ ಜೇನು ಹುಳುಗಳು……………
ಹುಬ್ಬಳ್ಳಿ: ಸೂಕ್ತ ನಿರ್ವಹಣೆ ಹಾಗೂ ಸ್ವಚ್ಛತೆ ಕಾಪಾಡದ ಹಿನ್ನೆಲೆ ಹುಬ್ಬಳಿಯ ಐಕಾನ್, ಸುಪ್ರಸಿದ್ಧ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಪುತ್ಥಳಿಗೆ ಜೇನು ಹುಳುಗಳು ಮುತ್ತಿಕೊಂಡಿವೆ. ಚೆನ್ನಮ್ಮನ ಮುಖ ಕಾಣದಂತೆ ದಟ್ಟವಾಗಿ ಹುಳುಗಳು ಮುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಗರ ವಾಸಿಗಳು ಕಿಡಿಕಾರಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಹುಬ್ಬಳ್ಳಿಯ ಜನನಿಬೀಡ ಪ್ರದೇಶವಾಗಿದ್ದು, ಎಲ್ಲರಿಗೂ ತಿಳಿದ ವಿಚಾರ. ಹುಬ್ಬಳ್ಳಿಯನ್ನು ಇದೇ ವೃತ್ತದಿಂದಲೂ ಹಲವರು ಗುರುತಿಸುತ್ತಾರೆ. ಹುಬ್ಬಳ್ಳಿಯ ಐಕಾನ್ ಎಂದೇ ಈ ವೃತ್ತವನ್ನು ಕರೆಯಲಾಗುತ್ತದೆ. …
Read More »ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನ ಬಾಲಕಿಯೋರ್ವಳು ಭೇಟಿ ಮಾಡಿ ಬೇಗ ಶಾಲೆ ಆರಂಭಿಸಿ ಎಂದು ಕೇಳಿಕೊಂಡಿದ್ದಾಳೆ
ಧಾರವಾಡ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನ ಬಾಲಕಿಯೋರ್ವಳು ಭೇಟಿ ಮಾಡಿ ಬೇಗ ಶಾಲೆ ಆರಂಭಿಸಿ ಎಂದು ಕೇಳಿಕೊಂಡಿದ್ದಾಳೆ ಧಾರವಾಡದ ನಿಸರ್ಗ ಲೇಔಟ್‍ಗೆ ಆಗಮಿಸಿದ್ದ ಸಚಿವರಿಗೆ ಸೈಕಲ್‍ನಲ್ಲಿ ಬಂದು ಭೇಟಿ ಮಾಡಿದ ಬಾಲಕಿ ಶ್ರದ್ಧಾ, ಶಾಲೆ ಬೇಗ ಆರಂಭಿಸಿ ಎಂದು ಕೇಳಿಕೊಂಡಿದ್ದಾಳೆ. ಈ ವೇಳೆ ಸಚಿವರು ನಿನ್ನ ನೋಡಿ ನಂಗೆ ಖುಷಿಯಾಯ್ತು ಎಂದರು ನಮಗೆ ಎಲ್ಲಿಯೂ ಶ್ರದ್ಧೆ ಸಿಗುವುದಿಲ್ಲ. ಆದರೆ ಶ್ರದ್ಧಾ ಭೇಟಿಯಾಗಿ ಖುಷಿಯಾದೆ. ಶಾಲೆ ಆರಂಭಿಸಿ ಕೊರೊನಾವನ್ನೇ …
Read More »ಪಬ್‍ಜಿ ಗೇಮ್ ಬ್ಯಾನ್,ಇಂಟರ್ನೆಟ್ ಹಾಕಿಸದೇ ಇರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ
ಹುಬ್ಬಳ್ಳಿ: ಪಬ್‍ಜಿ ಗೇಮ್ ಬ್ಯಾನ್ ಆಗಿದ್ದರು ಕೂಡ ಆಟ ಬಾಲಕನೊಬ್ಬನನ್ನು ಬಲಿ ತೆಗೆದುಕೊಂಡಿದೆ. ಪಬ್‍ಜಿ ಆಟವಾಡಲು ಇಂಟರ್ನೆಟ್ ಹಾಕಿಸದೇ ಇರುವ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆಯ ಸಂಗೂರ ಗ್ರಾಮದ ತೇಜಸ್ ಸಿಡ್ಲಾಪುರ (17) ಮೃತಪಟ್ಟ ಬಾಲಕ. ಆಗಸ್ಟ್ 31 ರಂದು ವಿಷ ಸೇವಿಸಿದ್ದ ಬಾಲಕ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೊಬೈಲ್‍ನಲ್ಲಿ ಇಂಟರ್ನೆಟ್ ಖಾಲಿ ಆಗಿತ್ತು. ಖಾಲಿ ಆಗಿದ್ದ ಇಂಟರ್ನೆಟ್ …
Read More »ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಸಿದ್ದಾರೂಢರ ಹೆಸರು ನಾಮಕರಣ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಉತ್ತರ ಕರ್ನಾಟಕ ಭಾಗದ ಆರಾಧ್ಯ ದೈವ ಹೂಬಳ್ಳಿಯ ಸಿದ್ದಾರೂಢ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೇಂದ್ರ ಗೃಹ ಇಲಾಖೆಯಿಂದ ರಾಜ್ಯ ಕಂದಾಯ ಇಲಾಖೆಗೆ ಆದೇಶದ ಪ್ರತಿ ರವಾನೆ ಮಾಡಲಾಗಿದೆ. ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ಪಿಯೂಷ್ ಗೋಯಲ್ ಅವರಿಗೆ ಟ್ವಿಟರ್ ಮೂಲಕ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಹುಬ್ಬಳ್ಳಿ ಜನರ ಬಹುನಿರೀಕ್ಷಿತ ಬೇಡಿಕೆಯಲ್ಲಿ …
Read More »ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ- 40 ಪ್ರಯಾಣಿಕರು ಬಚಾವ್
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೇ ಸಂಚರಿಸುವ ಬಿ.ಆರ್.ಟಿ.ಎಸ್ ಬಸ್ ಚಾಲಕ ಸಮಯ ಪ್ರಜ್ಞೆ ತೋರಿ 40ಕ್ಕೂ ಹೆಚ್ಚು ಜನರ ಪ್ರಾಣವನ್ನು ಉಳಿಸಿರುವ ಘಟನೆ ನಡೆದಿದೆ. ಬಸ್‍ನಲ್ಲಿ ನಡೆದ ಪ್ರತಿ ಕ್ಷಣದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ .ಸೆ.5 ರಂದು ನವನಗರದ ಬ್ರಿಡ್ಜ್ ಬಳಿ ಬರುತ್ತಿದಂತೆ ಬಿ.ಆರ್.ಟಿ.ಎಸ್‍ನ ಚಿಗರಿ ಬಸ್ ಚಾಲಕನಿಗೆ ತಲೆಸುತ್ತು ಶುರುವಾಗಿದ್ದು, ಇದರ ನಡುವೆಯೇ ಸ್ವಲ್ಪ ದೂರ ಬಸ್ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಆದರೆ ಆತನಿಗೆ ಮುಂದೆ ಬಸ್ ಚಾಲನೆ ಮಾಡಲು …
Read More »ಮಾಜಿ ಸೈನಿಕನ ಕೈ ಕಾಲು ಕಟ್ಟಿ ಗ್ರಾಮಸ್ಥರು ಮನಬಂದಂತೆ ಒದೆ………..
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಲಗುಂಡಿ ಗ್ರಾಮದಲ್ಲಿ ಯುವಕನೊಬ್ಬನಿಗೆ ಚಾಕು ಇರಿದು ಕೊಲೆ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕನ ಕೈ ಕಾಲು ಕಟ್ಟಿ ಗ್ರಾಮಸ್ಥರು ಮನಬಂದಂತೆ ಒದೆ ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾಜಿ ಸೈನಿಕನಿಗೆ ಕೊಲೆಯಾದ ಯವಕನ ಸಂಬಂಧಿಕರು ಹಾಗೂ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ಮಾಜಿ ಸೈನಿಕ ಗಂಗಾಧರ ನಿಂಗಪ್ಪ ನೂಲ್ವಿ ತಿಪ್ಪೆಗೆ ಕಸ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಶಾರದಾ ಪಾಟೀಲ್ ಎನ್ನುವ ಮಹಿಳೆಯ …
Read More »ಛೋಟಾ ಮುಂಬೈ ಯಲ್ಲಿ ಗಾಂಜಾ ಮಾರಾಟ ಮಾಡುವವರ ಮೇಲೆ ಪೊಲೀಸರ ದಾಳಿ ಮುಂದುವರಿದಿದೆ.
ಹುಬ್ಬಳ್ಳಿ: ಛೋಟಾ ಮುಂಬೈ ಎಂದು ಹೆಸರುವಾಸಿಯಾಗಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ಮಾಡುವವರ ಮೇಲೆ ಪೊಲೀಸರ ದಾಳಿ ಮುಂದುವರಿದಿದೆ. ಸೋಮವಾರ ಎರಡು ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ, 14 ಸಾವಿರಕ್ಕೂ ಹೆಚ್ಚಿನ ಮೊತ್ತದ ಒಂದು ಕೆಜಿಗೂ ಹೆಚ್ಚಿನ ಗಾಂಜಾ ವಶಕ್ಕೆ ಪಡೆದಿದ್ದಾರೆ. ಕೇಶ್ವಾಪುರ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ-ಗದಗ ರಸ್ತೆಯ ರೈಲ್ವೇ ಪ್ಲೈ ಓವರ್ ಬ್ರಿಡ್ಜ್ ಬಳಿ ಮೂವರನ್ನು ಬಂಧಿಸಿ, 6 ಸಾವಿರ ಮೌಲ್ಯದ 600 …
Read More »Davanagere ನಟ, ನಟಿಯರು ಮಾತ್ರವಲ್ಲ ಯುವ ಪೀಳಿಗೆಯೂ ಡ್ರಗ್ಸ್ ಮಾಫಿಯಾದಲ್ಲಿದೆ: ಶ್ರೀರಾಮುಲು
ದಾವಣಗೆರೆ: ಡ್ರಗ್ಸ್ ಮಾಫಿಯಾದಲ್ಲಿ ಕೇವಲ ಸ್ಯಾಂಡಲ್‍ವುಡ್ ನಟ, ನಟಿಯರು ಮಾತ್ರವಲ್ಲ ಯುವ ಪೀಳಿಯೇ ಇದೆ. ಈ ಡ್ರಗ್ಸ್ ಮಾಫಿಯಾವನ್ನು ನಮ್ಮ ಸರ್ಕಾರ ಬೇರು ಸಮೇತ ಕಿತ್ತು ಹಾಕಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಅವರು, ಸ್ಯಾಂಡಲ್‍ವುಡ್ ನಟ, ನಟಿಯರು ಮಾತ್ರ ಡ್ರಗ್ಸ್ ಮಾಫಿಯಾದಲ್ಲಿಲ್ಲ. ಯುವ ಪೀಳಿಗೆಯೂ ಇದೆ. ನಮ್ಮ ಸರ್ಕಾರದ ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಲಿದೆ. …
Read More »