Breaking News

ಹುಬ್ಬಳ್ಳಿ

ಮೀಸಲು ಅಧ್ಯಾದೇಶಕ್ಕೆ ಅಧಿವೇಶನದಲ್ಲಿ ಒಪ್ಪಿಗೆ: ಮುಖ್ಯಮಂತ್ರಿ

ಹುಬ್ಬಳ್ಳಿ: ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ಅಧ್ಯಾದೇಶಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಮೀಸಲಾತಿ ಜಾರಿ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಜಾರಿಗಾಗಿ ಕಾನೂನು ರಕ್ಷಣೆ ಕೊಡಲು ಎಲ್ಲ ಸಾಧ್ಯತೆಗಳನ್ನು ಮಾಡಲಾಗುವುದು. ಅಧ್ಯಾದೇಶಕ್ಕೆ ಮುಂಬರುವ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲಾಗುವುದು. ಪಂಚಮಸಾಲಿ ಸಹಿತ ಎಲ್ಲ ಮೀಸಲಾತಿ ಕುರಿತು ಬೇರೆ ಬೇರೆ ಹಂತಗಳಲ್ಲಿ ಹಿಂದುಳಿದ ವರ್ಗಗಳ …

Read More »

ಬಂಗಾರದ ಆಶೆಗೆ ದೊಡ್ಡಮನನ್ನೆ ಕೊಲೆ ಮಾಡಿ ಮಗ ಪರಾರಿ

ಬಂಗಾರದ ಆಶೆಗೆ ದೊಡ್ಡಮನನ್ನೆ ಕೊಲೆ ಮಾಡಿ ಮಗ ಪರಾರಿಯಾದ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಹೌದು,,, ಚಿನ್ನದ ಆಶೆಗಾಗಿ ತಂಗಿಯ ಮಗ ಮಾಲತೇಶ 70 ವರ್ಷದ ದೊಡ್ಡಮ್ಮ ಕಮಲಮ್ಮನ್ನ ಕೊಲೆ ಮಾಡಿ‌ ಮಗ ಮಾಲತೇಶ್ ಎಸ್ಕೇಪ್ ಆಗಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಕಮಲಮ್ಮನ ಮನೆಗೆ ಬಂದಿದ್ದ ಮಾಲತೇಶ, ಮಲಗಿದಲ್ಲೇ ಕಮಲಮ್ಮನ ಕಿವಿ ಕಟ್ ಮಾಡಿ ಕಿವಿಯೋಲೆ, ಕೊರಳಲ್ಲಿರೊ ಸರವನ್ನು ದೋಚಿ ಪರಾರಿಯಾಗಿದ್ದಾನೆ. ಇನ್ನುಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಕಮಲಮ್ಮ …

Read More »

ಧಾರವಾಡ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ, ಆರೋಪಿಯ ಬಂಧನ

ಧಾರವಾಡ:ನಗರದಲ್ಲಿ ಯುವಕನೊಬ್ಬನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಲಿಂಗಕಾಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಪವನ್ ಬಯಾಲಿ ಎಂದು ಗುರುತಿಸಲಾಗಿದೆ. ಮೃತ ಯಾಸಿನ್ ರೊಟ್ಟಿವಾಲೆ ಪೋಷಕರು ನೀಡಿದ ದೂರಿನ ಮೇರೆಗೆ ಪವನ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   ಅತ್ತಿಕೊಲ್ಲ ನಿವಾಸಿ ಯಾಸಿನ್ ಅಕ್ಟೋಬರ್ 12ರಂದು ನಾಪತ್ತೆಯಾಗಿದ್ದ. ನಂತರ, ಅವನ ದೇಹವು ಕೆಳಗೇರಿ ಕೆರೆಯಲ್ಲಿ ಪತ್ತೆಯಾಗಿತ್ತು. ಯಾಸಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪವನ್ …

Read More »

ಬಸನಗೌಡ ಯತ್ನಾಳ್ ಮತ್ತು ಅರವಿಂದ ಬೆಲ್ಲದ ಪಕ್ಷದ ನಾಯಕರಲ್ಲ: ಉಸ್ತುವಾರಿ ಅರುಣ್ ಸಿಂಗ್

ಹುಬ್ಬಳ್ಳಿ: ಬಸನಗೌಡ ಪಾಟೀಲ ಯತ್ನಾಳ ಪಕ್ಷದ ನಾಯಕಲ್ಲ. ಅವರೇನೋ ರಾಜ್ಯ- ರಾಷ್ಟ್ರ ನಾಯಕರಲ್ಲ. ಪಕ್ಷದ ಕೋರ್ ಕಮಿಟಿಯಲ್ಲಿ ಇಲ್ಲ. ಹೀಗಾಗಿ ಅವರ ಮಾತಿಗೆ ಮನ್ನಣೆ ಕೊಡಬೇಕಾಗಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.   ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರ ಬಗ್ಗೆ ಮಾತನಾಡಿದ್ದರ ಬಗ್ಗೆ ಹಿಂದೆಯೇ ನೋಟೀಸ್ ನೀಡಲಾಗಿದೆ. ಅದಕ್ಕೆ ಉತ್ತರ ನೀಡಿದ್ದಾರೆ. ಹಲವು ಬಾರಿ ಹೇಳಿದರೂ ಅದು ಪುನರಾವರ್ತನೆಯಾಗಿದೆ. ಅವರ ಸ್ವಭಾವ ಇರುವುದೇ ಹಾಗೆ. …

Read More »

ಧಾರವಾಡ ಜಿಲ್ಲಾ ಆಸ್ಪತ್ರೆ ಬಳಿ ಮಹಿಳೆಯ ಕೊಲೆ.

ಧಾರವಾಡ: ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ಮಹಿಳೆ ಕೊಲೆ ಮಾಡಿರುವ ಘಟನೆ ಧಾರವಾಡದ ಜಿಲ್ಲಾಸ್ಪತ್ರೆ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಜಿಲ್ಲಾಸ್ಪತ್ರೆ ‌ಬಳಿಯ ಸ್ಪರ್ಶ ಆಸ್ಪತ್ರೆ ಹತ್ತಿರ ಮಹಿಳೆಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಿಳೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಲೆ ಮಾಡಿ‌ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಉಪನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಎರಡು ತಲೆ ಹಾವು ಮಾರಾಟ ಯತ್ನ: ಹುಬ್ಬಳ್ಳಿಯಲ್ಲಿ ಮೂವರ ಬಂಧನ

ಹುಬ್ಬಳ್ಳಿ: ಅಕ್ರಮವಾಗಿ ಎರಡು ತಲೆ ಹಾವು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿ ಅವರಿಂದ ಕಾರು ವಶಪಡಿಸಿಕೊಳ್ಳುವಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ರಾಯಚೂರು ಮೂಲದವರು ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಅರಣ್ಯ ಸಂರಕ್ಷಣೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ಎರಡು ತಲೆಯ ಹಾವನ್ನು ಮಾರಾಟ ಮಾಡಲು ಆರೋಪಿಗಳು ಆಗಮಿಸಿದ್ದರು. ಇದರ …

Read More »

ಹಲಾಲ್‌ ಮುಕ್ತ ದೀಪಾವಳಿ: ಪ್ರಮೋದ್‌ ಮುತಾಲಿಕ್‌ ಕರೆ

ಹುಬ್ಬಳ್ಳಿ: ಹಲಾಲ್‌ ಮುಕ್ತ ದೀಪಾವಳಿ ಆಚರಿಸುವ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಂದ ಹಬ್ಬದ ಸಾಮಗ್ರಿ ಖರೀದಿಸ ಬಾರದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.   ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಸ್ಲಿಮರಿಂದ ಹಬ್ಬದ ಸಾಮಗ್ರಿ ಖರೀದಿಸಿ ದರೆ ಅದು ಶಾಸ್ತ್ರೋಕ್ತ ಎನ್ನಿಸುವುದಿಲ್ಲ. ಇದರೊಂದಿಗೆ ಹಲಾಲ್‌ ಗುರುತು ಇರುವ ವಸ್ತುಗಳನ್ನು ಕಡೆಗಣಿಸಬೇಕು. ಈ ಗುರುತಿಗೆ ಸರಕಾರದಿಂದ ಯಾವುದೇ ಮಾನ್ಯತೆ ಇಲ್ಲ ಎಂದು ಅವರು ಹೇಳಿದರು.

Read More »

ಪಿಎಸ್‌ಐ ಪರೀಕ್ಷೆ ಅಕ್ರಮ : ಧಾರವಾಡ ದಲ್ಲಿ ಮತ್ತೋರ್ವನ ಬಂಧನ

ಧಾರವಾಡ : ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ಪರೀಕ್ಷೆ ಬರೆದ ಅಭ್ಯರ್ಥಿ ಶ್ರೀಮಂತ ಸಾತಾಪುರ ಎಂಬಾತನನ್ನು ಪೊಲೀಸರು ಬಂಧಿಸಿ, ಅ.17 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಮೊಬೈಲ್ ಕರೆ ಮಾಹಿತಿ ಮೇಲೆ ಅಭ್ಯರ್ಥಿಯನ್ನು ವಶಕ್ಕೆ ಪಡೆದಿದ್ದ ಸಿಐಡಿ ಅಧಿಕಾರಿಗಳು ಮೊಬೈಲ್ ಗೆ ಕರೆ ಮಾಡಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿ ಎಂಬುದು ಖಚಿತವಾಗಿತ್ತು. ಆದ್ದರಿಂದ ಈ ಕುರಿತು ಉಪನಗರ ಠಾಣೆಯಲ್ಲಿ ಸಿಐಡಿಯಿಂದ ಪ್ರಕರಣ ದಾಖಲು ಆಗಿದ್ದು, ಧಾರವಾಡದ 2ನೇ ಪ್ರಧಾನ …

Read More »

ಧಾರವಾಡ ರೈಲು ನಿಲ್ದಾಣಕ್ಕೆ ಪ್ರಹ್ಲಾದ್ ಜೋಶಿ ಭೇಟಿ, ಸಿದ್ಧತಾ ಕಾರ್ಯ ಪರಿಶೀಲನೆ

ಧಾರವಾಡ: ರೈಲು ನಿಲ್ದಾಣದ ನೂತನ ಕಟ್ಟದ ಉದ್ಘಾಟನೆ ಹಿನ್ನೆಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿನ್ನೆ ಭೇಟಿ ನೀಡಿ, ಸಿದ್ಧತಾ ಕಾರ್ಯಗಳ ಕುರಿತು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಧಾರವಾಡ ರೈಲು ನಿಲ್ದಾಣ ಹಾಗೂ ಸಣ್ಣ ರೈಲು ನಿಲ್ದಾಣಗಳ ಅಭಿವೃದ್ಧಿಯಾಗಬೇಕು ಎಂಬ ಕನಸು ಇತ್ತು. ಬಹಳ‌ ಜಗಳ ಮಾಡಿ ಆಗಿನ ಸರ್ಕಾರದ ಜೊತೆ ನಾವು ಹುಬ್ಬಳ್ಳಿಯ ರೈಲು ನಿಲ್ದಾಣ ಮಂಜೂರು ಮಾಡಿಸಿದ್ದು,‌ ಧಾರವಾಡದಲ್ಲಿ ಸ್ಥಳೀಯ ಕಲಾವಿದರ ಜೊತೆ ಸೇರಿ ಉತ್ತಮ …

Read More »

ಮೀಸಲಾತಿ ಹೆಚ್ಚಿಸುವ ಮೂಲಕ ರಾಜ್ಯ ಸರಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. : ಪ್ರಹ್ಲಾದ ಜೋಷಿ

ಹುಬ್ಬಳ್ಳಿ: ಮೀಸಲಾತಿ ಹೆಚ್ಚಿಸುವ ಮೂಲಕ ರಾಜ್ಯ ಸರಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಬಿಜೆಪಿ ಸರಕಾರ ಶೋಷಿತರು, ದಲಿತರು ಹಾಗೂ ಬಡವರ ಪರವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಯಾವಾಗಲೂ ಹಿಂದುಳಿದ ವರ್ಗಗಳ ಹೆಸರಿನಲ್ಲಿ ಮತ ಪಡೆದು ಅಧಿಕಾರ ಅನುಭವಿ ಸಿದೆ. ಅವರ ಕಲ್ಯಾಣದ ಬಗ್ಗೆ ಯಾವುದೇ ಕಾರ್ಯ ಗಳನ್ನು ಮಾಡಿಲ್ಲ ಎಂದರು. ಇನ್ನೂ ಕೆಲವು ಸಮುದಾಯಗಳಿಗೆ ಮೀಸಲಾತಿ ನೀಡುವ ಬಗ್ಗೆ ಮುಖ್ಯಮಂತ್ರಿ ಭರವಸೆ …

Read More »