Breaking News

ಹುಬ್ಬಳ್ಳಿ

ಸಿಎಂ ಸಿದ್ದರಾಮಯ್ಯಗೆ ಇದು ಕೊನೆಯ ‘ದಸರಾ’ : ಶಾಸಕ ಮಹೇಶ್ ಟೆಂಗಿನಕಾಯಿ ಸ್ಪೋಟಕ ಭವಿಷ್ಯ!

ಹುಬ್ಬಳ್ಳಿ : ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯಗೆ ರಾಜಿನಾಮೆ ನೀಡಿ ಎಂದು ವಿಪಕ್ಷಗಳು ಆಗ್ರಹಿಸುತ್ತಿದ್ದರೆ. ಇನ್ನೊಂದೆಡೆ ನಾನು ಯಾವುದೇ ತಪ್ಪು ಮಾಡಿಲ್ಲ ರಾಜೀನಾಮೆ ನೀಡಲ್ಲ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಇದರ ಮಧ್ಯ ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ತೆಂಗಿನಕಾಯಿ ಇದು ಸಿದ್ದರಾಮಯ್ಯ ಅವರಿಗೆ ಕೊನೆಯ ದಸರಾ ಹಾಗೂ ವಿಜಯದಶಮಿ ಆಗಲಿದ್ದು, ಬಳಿಕ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೊಡುತ್ತಾರೆ ಎಂದು ಸ್ಪೋಟಕ ಭವಿಷ್ಯ ನುಡಿದರು.   …

Read More »

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಘೋರ ಕೃತ್ಯ: ಚಾಕುವಿನಿಂದ ಇರಿದು ಯುವಕನ ಹತ್ಯೆ

ಹುಬ್ಬಳ್ಳಿಯ ಗೋಪನಕೊಪ್ಪ ಸಮೀಪ ಚಾಕುವಿನಿಂದ ಇರಿದು ಯುವಕನನ್ನು ಹತ್ಯೆ ಮಾಡಲಾಗಿದೆ. ಹಳೆದ್ವೇಷದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ. ಶಿವರಾಜ್(22) ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಕ್ಷುಲ್ಲಕ ಕಾರಣಕ್ಕೆ ನಿನ್ನ ಸಂದೀಪ್ ಎಂಬಾತನ ಜೊತೆಗೆ ಗಲಾಟೆಯಾಗಿತ್ತು. ಹೀಗಾಗಿ ಶಿವರಾಜನನ್ನು ಸಂದೀಪ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮನೆಯಿಂದ ಹೊರಗೆ ಹೋದಾಗ ದುಷ್ಕರ್ಮಿಗಳು ಶಿವರಾಜ್ ನನ್ನು ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಬ್ಬಳ್ಳಿಯ ಅಶೋಕನಗರ …

Read More »

ಮಹಿಳೆಗೆ ನಂಬಿಸಿ ಹಣ ದೋಚಿದ 71 ವರ್ಷದ ನಿವೃತ್ತ ನೌಕರ

ಹುಬ್ಬಳ್ಳಿ, ಅ.10: ಹಲವು ಊಹೆಗೂ ಮೀರಿದ ವಿಚಿತ್ರ, ವಿಶೇಷ ಘಟನೆಗಳು ನಡೆಯುತ್ತಿರುತ್ತದೆ. 70 ವರ್ಷದ ಶ್ರೀಮಂತ ವ್ಯಕ್ತಿಯ ಜೊತೆಗೆ 21 ರ ಯುವತಿ ಮದುವೆ, ತಂದೆಯೇ ಮಗಳನ್ನುಮದುವೆಯಾಗುವಪದ್ದತಿ ಸೇರಿದಂತೆ ಅನೇಕ ಚಿತ್ರ ವಿಚಿತ್ರ ಸನ್ನಿವೇಷಗಳು ಜರುಗುತ್ತವೆ. ಅದರಂತೆ ಇದೀಗ ‘ನನಗೆ ಡಿವೋರ್ಸ್ ಆಗಿದೆ ಎಂದು ನಂಬಿಸಿ ಮಹಿಳೆಗೆ ಮೋಸ ಮಾಡಿದ 71 ವರ್ಷದ ನಿವೃತ್ತ ನೌಕರನಿಗೆ ಧರ್ಮದೇಟು ಕೊಟ್ಟ ಘಟನೆ ಹುಬ್ಬಳ್ಳಿ(Hubli)ಯ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಮಹಿಳೆಗೆ …

Read More »

ಮುಖ್ಯಮಂತ್ರಿ ಆಕಾಂಕ್ಷಿತರಲ್ಲಿ ಡಿ.ಕೆ.ಶಿವಕುಮಾರ್ ಮೊದಲಿಗರು: ಬಿ.ವೈ.ವಿಜಯೇಂದ್ರ

ಹುಬ್ಬಳ್ಳಿ: ‘ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವವರೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಅವಧಿ ಪೂರ್ಣಗೊಳಿಸುವರು ಎಂದು ಹೇಳುವವರೇ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಅವರಲ್ಲಿ ಡಿ.ಕೆ.ಶಿವಕುಮಾರ್ ಮೊದಲಿಗರು’ ಎಂದರು. ‘ಸಿದ್ದರಾಮಯ್ಯ ಅವರು ಸೂಚಿಸುವ ವ್ಯಕ್ತಿಗಳೇ ಸಹಜವಾಗಿ ಮುಖ್ಯಮಂತ್ರಿಯಾಗುತ್ತಾರೆ. ಹೀಗಾಗಿ ಅವರನ್ನು ಓಲೈಸಿಕೊಳ್ಳಲು ಪದೇ ಪದೇ …

Read More »

ಆಯುಧ ಪೂಜೆಗೆ ಸಿದ್ಧತೆ: ಕುಂಬಳಕಾಯಿ ಮಾರಾಟ ಜೋರು

ಆಯುಧ ಪೂಜೆಗೆ ಸಿದ್ಧತೆ: ಕುಂಬಳಕಾಯಿ ಮಾರಾಟ ಜೋರು ಹುಬ್ಬಳ್ಳಿ: ದಸರಾ ಹಬ್ಬದ ನಿಮಿತ್ತ ಅ.11ರಂದು ನಡೆಯುವ ಆಯುಧ ಪೂಜೆಯ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಕುಂಬಳಕಾಯಿ, ಬೂದ ಕುಂಬಳಕಾಯಿ, ಬಾಳೆ ಕಂದು, ನಿಂಬೆಹಣ್ಣು ಹಾಗೂ ಹೂವಿನ ಮಾರಾಟ ಜೋರಾಗಿದೆ. ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ದುರ್ಗದ ಬೈಲು ಮಾರುಕಟ್ಟೆ, ಜನತಾ ಬಜಾರ್, ಕೇಶ್ವಾಪುರ, ಹಳೇ ಹುಬ್ಬಳ್ಳಿ ಹಾಗೂ ಗೋಕುಲ ರಸ್ತೆಯ ಬದಿ ಸೇರಿದಂತೆ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಈಗಾಗಲೇ …

Read More »

ಸಮಸ್ಯೆಗಳ ನಡುವೆಯೇ ನಿತ್ಯದ ಬದುಕು

ಹುಬ್ಬಳ್ಳಿ: ಕಿರಿದಾದ ಮಣ್ಣಿನ ರಸ್ತೆಗಳು, ಚರಂಡಿ ವ್ಯವಸ್ಥೆ ಇಲ್ಲ. ಪದೇ ಪದೇ ರಸ್ತೆಯಲ್ಲಿಯೇ ಹರಿಯುವ ಗಟಾರದ ಕೊಳಚೆ ನೀರು, ಮಳೆಗಾಲದ ವೇಳೆ ಮನೆಯೊಳಗೆ ನುಗ್ಗುವ ಗಲೀಜು ನೀರು, ರಸ್ತೆ ಬದಿಯಲ್ಲಿಯೇ ತ್ಯಾಜ್ಯದ ರಾಶಿ, ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ, ಕೊಳಚೆ ನೀರು ಮಿಶ್ರಿತ ಕುಡಿಯುವ ನೀರು ಪೂರೈಕೆ, ಪಾಲಿಕೆಗೆ ಸಕಾಲಕ್ಕೆ ತೆರಿಗೆ ಪಾವತಿಸಿದರೂ ಸಿಗದ ಮನೆಯ ಹಕ್ಕುಪತ್ರ.   -ಇದು ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ 49 ವಾರ್ಡ್‌ನಲ್ಲಿನ ಹನುಮಂತ ನಗರ, ಶೆಟ್ಟರ …

Read More »

ರಭಸದ ಗಾಳಿ, ಮಳೆ: ನೆಲಕಚ್ಚಿದ ಟೊಮೆಟೊ, ಹಾಗಲಕಾಯಿ, ಭತ್ತ

ಹುಬ್ಬಳ್ಳಿ: ಧಾರವಾಡ ಜಿಲ್ಲೆ, ಹುಬ್ಬಳ್ಳಿ ನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಬೆಳಗಿನ ಜಾವದಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನಲ್ಲಿ ರಭಸದ ಗಾಳಿಗೆ ನೂರಾರು ಎಕರೆ ಭತ್ತದ ಗದ್ದೆಗೆ ಹಾನಿಯಾಗಿದೆ. ಧಾರಾಕಾರ ಮಳೆಗೆ ಧಾರವಾಡ ತಾಲ್ಲೂಕಿನ ಕಮಲಾಪುರದಲ್ಲಿ ಜಮೀನಿನಲ್ಲಿ ಟೊಮೆಟೊ ಹಾಗೂ ಹಾಗಲಕಾಯಿ ಬೆಳೆ ನೆಲಕಚ್ಚಿವೆ. ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದು ಕಲಘಟಗಿ ಭಾಗದಲ್ಲಿ ಹೆಚ್ಚು 5.5 ಸೆಂ.ಮೀ ಮಳೆಯಾಗಿದೆ. ಹುಬ್ಬಳ್ಳಿ …

Read More »

ಬಡ ಪ್ರತಿಭೆಗೆ ನೆರವಾದ ಕ್ರಿಕೆಟಿಗ ಕೆ.ಎಲ್.ರಾಹುಲ್

ಹುಬ್ಬಳ್ಳಿ: ಕ್ರಿಕೆಟಿಗ ಕೆ.ಎಲ್.ರಾಹುಲ್ (KL Rahul) ಅವರು ಇಲ್ಲಿನ ಪ್ರತಿಭಾವಂತ ಬಡ ವಿದ್ಯಾರ್ಥಿಯೊಬ್ಬರ ಎರಡನೇ ವರ್ಷದ ಶೈಕ್ಷಣಿಕ ಶುಲ್ಕ ಪಾವತಿಸುವ ಮೂಲಕ ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ. ಇಲ್ಲಿನ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬಿಕಾಂ ಕಲಿಯುತ್ತಿರುವ ಅಮೃತ್ ಮಾವಿನಕಟ್ಟಿ ಎನ್ನುವ ವಿದ್ಯಾರ್ಥಿಯ ಎರಡನೇ ವರ್ಷದ ಶುಲ್ಕವನ್ನು ಕೆ.ಎಲ್.ರಾಹುಲ್ ಅವರು ಪಾವತಿ ಮಾಡಿದ್ದಾರೆ. 3 ಮತ್ತು 4 ನೇ ಸೆಮಿಸ್ಟರ್ ನ 75,504 ರೂ. ಪಾವತಿಸಿದ್ದಾರೆ. ಇದರ ಮೂಲಕ ಕಳೆದ ವರ್ಷ ಬಿಕಾಂ …

Read More »

ದರೋಡೆಗೆ ಯತ್ನ. ಪೊಲೀಸರಿಂದ ಓರ್ವನ ಕಾಲಿಗೆ ಗುಂಡು

ಹುಬ್ಬಳ್ಳಿ: ದರೋಡೆಗೆ ಯತ್ನಿಸಿದ ತಂಡದ ಮೇಲೆ ಪೊಲೀಸರು ಗುಂಡಿನ‌ ದಾಳಿ‌ ನಡಸಿದ್ದು, ಒಬ್ಬ ದರೋಡಕೋರನ ಕಾಲಿಗೆ ಗುಂಡು ತಗುಲಿದ ಘಟನೆ ರೇವಡಿಹಾಳ ಸೇತುವೆ ಬಳಿ ಸೋಮವಾರ ಬೆಳಗಿನ ಜಾವ ನಡೆದಿದೆ. ಸೋಮವಾರ ಬೆಳಗಿನ‌ ಜಾವ 3:00 ಗಂಟೆ ಸುಮಾರಿಗೆ ಗೋಕುಲ ಗ್ರಾಮದಲ್ಲಿ 5-6 ಜನರ ತಂಡವು ರಜನಿಕಾಂತ ದೊಡ್ಡಮನಿ ಎಂಬುವರ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದೆ. ಈ ವೇಳೆ ಮನೆಯವರು ಎಚ್ಚರಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಗೋಕುಲ …

Read More »

ಓದಿನ ಹಸಿವು ನೀಗಿಸುವ ‘ಪುಸ್ತಕ ದಾಸೋಹ’

ಹುಬ್ಬಳ್ಳಿ: ನಿಮ್ಮ ಮನೆಯಲ್ಲಿ ಪುಸ್ತಕಗಳಿವೆಯೇ? ಬೇರೆಯವರೂ ಅವುಗಳನ್ನು ಓದಬೇಕೆ? ಹಾಗಿದ್ದರೆ, ಅವುಗಳನ್ನು ಅಲ್ಲಿಯೇ ದೂಳು ಹಿಡಿಸುವ ಅಥವಾ ಬಿಸಾಡುವ ಬದಲು; ಚುಟುಕು ಸಾಹಿತ್ಯ ಪರಿಷತ್ತಿಗೆ ನೀಡಿ. ನೀವು ಓದಿ, ಆಸ್ವಾದಿಸಿದ ಪುಸ್ತಕಗಳನ್ನು ಇತರರೂ ಓದಿ, ಆನಂದಿಸುವರು. ಓದಿನ ಅಭಿರುಚಿ, ಜ್ಞಾನ ಪಸರಿಸಿದ ಖುಷಿ ನಿಮಗೂ ಲಭಿಸುತ್ತದೆ.  ಹೌದು, ಮನೆಯಲ್ಲಿ ಹೆಚ್ಚು ಪುಸ್ತಕ ಇಟ್ಟುಕೊಂಡವರಿಗೆ, ಅವುಗಳ ನಿರ್ವಹಣೆ ದೊಡ್ಡ ಸವಾಲು. ಓದಿನ ಆಸಕ್ತಿ ಇದ್ದವರಿಗೆ ಪುಸ್ತಕ ಕೊಳ್ಳುವುದು ಕಷ್ಟಸಾಧ್ಯ. ಇಂತಹವರ ನಡುವೆ …

Read More »