ಹುಬ್ಬಳ್ಳಿ: ದೇಸಿ ಬೀಜ ಸಂರಕ್ಷಣೆಗೆ ಶ್ರಮಿಸುತ್ತಿರುವ ಉತ್ತರ ಕರ್ನಾಟಕ ಭಾಗದ ರೈತರ ಗುಂಪೊಂದು ಹುಬ್ಬಳ್ಳಿಯಲ್ಲಿ ಸಭೆ ನಡೆಸಿದ್ದು, ಅಕಾಡೆಮಿ ಅಥವಾ ಸಂಸ್ಥೆಗಳಿಗೆ ಜವಾಬ್ದಾರಿ ನೀಡುವ ಬದಲು ಸಮುದಾಯ ಬೀಜ ಬ್ಯಾಂಕ್ ಗಳ ಸ್ಥಾಪನೆಗೆ ರೈತರಿಗೆ ಅವಕಾಶ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರ ತನ್ನ 2024 ರ ಬಜೆಟ್‌ನಲ್ಲಿ ಮೊದಲ ಬಾರಿಗೆ ದೇಸಿ ಬೀಜ ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ಹಣ ಮೀಸಲಿಡುವ ವಾಗ್ದಾನ ಮಾಡಿತ್ತು. ಈ …
Read More »ಇದ್ದೂ ಇಲ್ಲದಂತಾದ ಕಲಾಭವನ:
ಧಾರವಾಡ: ಅವಳಿನಗರಗಳ ಬಹುತೇಕ ರಂಗಮಂದಿರಗಳು ದುಃಸ್ಥಿತಿಯಲ್ಲಿವೆ. ಇದು ನಾಟಕ ಪ್ರದರ್ಶನ, ರಂಗ ತಾಲೀಮು ಮೊದಲಾದ ಚಟುವಟಿಕೆಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಸಾಂಸ್ಕೃತಿಕ ನಗರವೆಂದು ಕರೆಯುವ ಧಾರವಾಡದಲ್ಲಿ ಈಗ ಕೆಲವೇ ರಂಗಮಂದಿರಗಳಲ್ಲಿ ರಂಗಭೂಮಿ ಚಟುವಟಿಕೆಗಳು ನಡೆಯುತ್ತವೆ. ಮೂಲಸೌಕರ್ಯಗಳ ಕೊರತೆ ಮತ್ತು ಅವ್ಯವಸ್ಥೆಗಳಿಂದ ನಲುಗಿರುವ ರಂಗತಾಣಗಳಿಗೆ ಕಾಯಕಲ್ಪಿಸಲು ಸಂಬಂಧಪಟ್ಟವರು ಕ್ರಮವಹಿಸಿಲ್ಲ. ಧಾರವಾಡದಲ್ಲಿ ರಂಗಾಯಣ ಇದ್ದರೂ ಅನುದಾನ ಕೊರತೆ, ಸವಲತ್ತುಗಳ ಕೊರತೆಯಿಂದಾಗಿ ರಂಗಚಟುವಟಿಕೆಗಳು ಸೊರಗಿವೆ. ಬಹುತೇಕ ರಂಗಮಂದಿರಗಳಲ್ಲಿ ಬೆಳಕು, ಧ್ವನಿ ವ್ಯವಸ್ಥೆ ಸಹಿತ ಸುಸಜ್ಜಿತ ಸಕಲ …
Read More »ಧಾರವಾಡದಲ್ಲಿ ಏರ್ಪಡಿಸಿದ್ದ ಪೊಲೀಸ್ ಹುತ್ಮಾತರ ದಿನಾಚರಣೆಯಲ್ಲಿ
ಧಾರವಾಡ: ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಬಿ.ಜಿ.ರಮಾ ತಿಳಿಸಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು. ಪೊಲೀಸರಿಗೆ ಕಾರ್ಯದ ಒತ್ತಡ ಇರುತ್ತದೆ. ಪೊಲೀಸರು ತಮ್ಮ ಮತ್ತು ಕುಟುಂಬದ ಆರೋಗ್ಯ ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು ಎಂದರು. ಪೊಲೀಸರು ಹಗಲಿರುಗಳು ಕಾರ್ಯನಿರ್ವಹಿಸುತ್ತಾರೆ. ಸಮಾಜದ ಆಂತರಿಕ ಭದ್ರತೆಗೆ ಶ್ರಮಿಸುತ್ತಾರೆ. ಪೊಲೀಸರು ಸಾರ್ವಜನಿಕರ …
Read More »2ಕೋಟಿ ರೂ. ಇಸಿದುಕೊಂಡು ವಂಚಿಸಿದ ಪ್ರಕರಣ, ಪ್ರಹ್ಲಾದ ಜೋಶಿ ಸಹೋದರ ಗೋಪಾಲ ಜೋಶಿ ಬಂಧನ
ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ 2ಕೋಟಿ ರೂ. ಇಸಿದುಕೊಂಡು ವಂಚಿಸಿದ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹೋದರ ಗೋಪಾಲ ಜೋಶಿ ಅವರನ್ನು ಬೆಂಗಳೂರು ಪೊಲೀಸರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿ ಹುಬ್ಬಳ್ಳಿಗೆ ಕರೆತಂದಿದ್ದು, ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪಂಚನಾಮೇ ನಂತರದ ಪ್ರಕ್ರಿಯೆ ನಡೆಸುತ್ತಿದ್ದಾರೆ. ಎಸಿಪಿ ಚಂದನ್ ನೇತೃತ್ವದ ಬೆಂಗಳೂರು ಬಸವೇಶ್ವರ ನಗರ ಠಾಣೆ ಪೊಲೀಸರ ತಂಡ ಕೊಲ್ಹಾಪುರದಲ್ಲಿ ವಶಕ್ಕೆ ಪಡೆದ ನಂತರ ಹುಬ್ಬಳ್ಳಿಯ ಇಂದಿರಾ ಕಾಲೋನಿಯ …
Read More »ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ
ಧಾರವಾಡ: ಮನೆ ಹುಡುಕಿಕೊಂಡು ಅಮಾಯಕರ ಮೇಲೆ ಪ್ರಕರಣ ದಾಖಲಿಸಿರುವ ಉದಾಹರಣೆಗಳು ಇರುವಾಗ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ಗಲಭೆ ಪ್ರಕರಣ ವಾಪಸ್ ಪಡೆದಿರುವುದು ಸರ್ಕಾರದ ಸರಿಯಾದ ನಿರ್ಧಾರವೇ ಆಗಿದ್ದು, ಬಿಜೆಪಿ ಪ್ರತಿಭಟನೆ ಮಾಡಿಕೊಳ್ಳಲಿ ಅಥವಾ ಕೋರ್ಟ್‌ಗೆ ಹೋಗಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಇರಲಿ, ಮುಡಾ ಪ್ರಕರಣವೇ ಇರಲಿ. ಇದರಲ್ಲಿ ಯಾವ ಪಕ್ಷ ಎನ್ನುವುದು ಮುಖ್ಯವಲ್ಲ, …
Read More »ಭೀಕರ ಅಪಘಾತ. ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಮೃತ್ಯು, ದೇಹಗಳು ಛಿದ್ರ
ಹುಬ್ಬಳ್ಳಿ: ದ್ವಿಚಕ್ರ ವಾಹನಕ್ಕೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಎರಡು ದೇಹಗಳು ಛಿದ್ರಗೊಂಡ ಘಟನೆ ನಗರದ ಹೊರವಲಯದ ಗೋಕುಲ ಗ್ರಾಮದ ಧಾರಾವತಿ ಹನುಮಂತ ದೇವಸ್ಥಾನ ಬಳಿಯ ಬೈಪಾಸ್ ರಸ್ತೆಯಲ್ಲಿ ಮಂಗಳವಾರ (ಅ.15) ಬೆಳಗ್ಗೆ ನಡೆದಿದೆ. ಅವಘಡದಲ್ಲಿ ಬೆಂಗಳೂರಿನ ಗೋಪಾಲಕೃಷ್ಣ ಉಪಾಧ್ಯಾಯ (52) ಹಾಗೂ ಧಾರವಾಡದ ಸದಾನಂದ ದೇವಾಡಿಗ (48) ಮೃತಪಟ್ಟಿದ್ದಾರೆ. ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದುಕೊಂಡು ಹೋಗಿದೆ. ನಂತರ ಇನ್ನೊಂದು ವಾಹನ ಇವರ ಮೇಲೆ ಹಾಯ್ದ ಪರಿಣಾಮ ಸವಾರರಿಬ್ಬರ …
Read More »ಅತ್ಯಾಚಾರ ಕೇಸ್ : ಸಂತ್ರಸ್ತೆ ಮಹಿಳೆಯ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಆಪ್ತನಿಂದ ದೂರು ದಾಖಲು!
ಹುಬ್ಬಳ್ಳಿ : ಮಹಿಳಾ ರೈತ ಮುಖಂಡೆಯ ಮೇಲೆ ಶಾಸಕ ವಿನಯ ಕುಲಕರ್ಣಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಮಹಿಳೆ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ದೂರು ದಾಖಲಿಸಿದ್ದರು.ಇದೀಗ ವಿನಯ್ ಕುಲಕರ್ಣಿ ಅವರ ಆಪ್ತ ಸಂತ್ರಸ್ತೆ ಮಹಿಳೆಯ ವಿರುದ್ಧವೇ ಪ್ರತಿ ದೂರು ದಾಖಲಿಸಿದ್ದಾರೆ. ಹೌದು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಹಾಗೂ ಆಪ್ತ ಅರ್ಜುನ್ ಗುಡ್ಡದ …
Read More »ಅಲ್ಪಸಂಖ್ಯಾತರ ಕಲ್ಯಾಣ ಮಾಡವುದು ತಪ್ಪೇ..?: ಎಚ್.ಕೆ. ಪಾಟೀಲ ಪ್ರಶ್ನೆ
ಹುಬ್ಬಳ್ಳಿ: ಬಿಜೆಪಿ ಅನಾವಶ್ಯಕ ರಾಜಕಾರಣ ಮಾಡುತ್ತಿರುವುದು ಸೂಕ್ತವಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇಹುಬ್ಬಳ್ಳಿ ಗಲಭೆ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ. ಈ ಹಿನ್ನೆಲೆ ಸರ್ಕಾರ ಪರಮಾರ್ಶೆ ಮಾಡಿತು. ಈ ವಿಚಾರ ಸಚಿವ ಸಂಪುಟದ ಉಪ ಸಮಿತಿ, ಅಧಿಕಾರಿಗಳ ಅಭಿಪ್ರಾಯ ಸಂಗ್ರಹ ಹಾಗೂ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುವಂತದಾಗಿದೆ ಎಂದು ಹೇಳಿದರು. ನಾವು ಅಲ್ಪಸಂಖ್ಯಾತ ಓಲೈಕೆ ಮಾಡುತ್ತಿಲ್ಲ. ಬಿಜೆಪಿ ಆ ರೀತಿ ಬಿಂಬಿಸುವ …
Read More »ರಾಜಕೀಯ ನಾಯಕರ ನಡುವೆ ಭಯೋತ್ಪಾದಕ ಪದ ಬಳಕೆ ಸರಿಯಲ್ಲ: ಶೆಟ್ಟರ್
ಹುಬ್ಬಳ್ಳಿ: ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಲು ಸಿದ್ಧವಾಗಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು. ಸೋಮವಾರ (ಅ.14) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜವಾದ ಭಯೋತ್ಪಾದಕರು ಬೇರೆಡೆ ಇದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಆಡುವ ಮಾತುಗಳು ಯಾಕೆ ಕೆಳಮಟ್ಟಕ್ಕೆ ಹೋಗಿದೆ ಗೊತ್ತಾಗುತ್ತಿಲ್ಲ ಎಂದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿಯವರು ಭಯೋತ್ಪಾದಕರನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ರಾಜಕೀಯ ನಾಯಕರ ನಡುವೆ …
Read More »ನಕಲಿ ಗಾಂಧಿಗಳ ಪಾದ ನೆಕ್ಕಿದವರು ಬಿ.ಕೆ ಹರಿಪ್ರಸಾದ್: ಪ್ರಲ್ಹಾದ ಜೋಶಿ ತಿರುಗೇಟು
ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ನಕಲಿ ಗಾಂಧಿಗಳ ಪಾದ ನೆಕ್ಕಿದವರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ. “ಪ್ರಲ್ಹಾದ ಜೋಶಿ ಇವತ್ತಿಗೂ ಗೋಡ್ಸೆ ಪೂಜೆ ಮಾಡುತ್ತಾರೆ” ಎಂಬ ಹರಿಪ್ರಸಾದ್ ಹೇಳಿಕೆಗೆ ಜೋಶಿ ತಿರುಗೇಟು ಕೊಟ್ಟರು. ಹುಬ್ಬಳ್ಳಿಯಲ್ಲಿ ಶನಿವಾರ (ಅ.12) ಮಾದ್ಯಮದವರೊಂದಿಗೆ ಮಾತನಾಡುತ್ತ ಹರಿಪ್ರಸಾದ್ ವಿರುದ್ಧ ತೀವ್ರ ಹರಿಹಾಯ್ದರು. ಈಗಿನ ಕಾಂಗ್ರೆಸ್ ನಲ್ಲಿ ಇರುವರೆಲ್ಲಾ ನಕಲಿ ಗಾಂಧಿಗಳು. ಇಂಥ ನಕಲಿ ಗಾಂಧಿಗಳ ಪಾದ ನೆಕ್ಕುವ ಹರಿಪ್ರಸಾದ್, ನಮ್ಮ …
Read More »