ಕೋರೋನಾ ವೈರಸ್ ಭೀತಿಯಿಂದಾಗಿ ಮನೆಯಲ್ಲಿಯೇ ವಾಸವಾಗಿರುವ ನಟಿ ಕತ್ರಿನಾ ಕೈಫ್ ಇತ್ತೀಚೆಗೆ ಪಾತ್ರೆ ತೊಳೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಗಮನಿಸಿದ ಬಾಲಿವುಡ್ ನಟ ಅರ್ಜುನ್ ಕಫೂರ್, ಕತ್ರಿನಾರ ಕಾಲೆಳೆದಿದ್ದಾರೆ. ಕೊರೋನಾದಿಂದಾಗಿ ದೇಶವೇ ಸಂಫೂರ್ಣ ಲಾಕ್ ಡೌನ್ ಆಗಿದೆ. ಜನಸಾಮಾನ್ಯರಿಂದ ಹಿಡಿದು, ಸೆಲೆಬ್ರಿಟಿಗಳು ಕೂಡ ಮನೆಯಲ್ಲಿ ಕುಳಿತು ಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಮನೆಯಲ್ಲಿ ಮಾಡುತ್ತಿರುವ ಕೆಲಗಳನ್ನು, ದೈನಂದಿನ ದಿನಚರಿಗಳನ್ನು ಸಾಮಾಜಿಕ ತಾಣದಲ್ಲಿ ವಿಡಿಯೋ …
Read More »ಹಾಸನದಲ್ಲಿ ಹೆಚ್ಚಿದ ಕೊರೋನಾ ಭೀತಿ; ಇಡೀ ಊರಿಗೆ ಊರೇ ಹೋಮ್ ಐಸೋಲೇಷನ್ನಲ್ಲಿ!
ಹಾಸನ (ಮಾ. 25): ಹಾಸನದಲ್ಲಿ ಮತ್ತೆ ಕೊರೋನಾ ಭೀತಿ ಹೆಚ್ಚಾಗಿದ್ದು, ಇಲ್ಲಿನ ಒಂದು ಊರಿಗೆ ಊರೇ ಹೋಂ ಐಸೋಲೇಷನ್ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಹಾಸನದ ಅರಕಲಗೂಡು ತಾಲೂಕಿನ ರಾಂಪುರ ಗ್ರಾಮದ 75 ಜನರಿಗೆ ಹೋಮ್ ಐಸೋಲೇಷನ್ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಈ ಊರಿನ ಯಾರೂ ಮನೆಯಿಂದ ಹೊರಗೆ ಹೋಗದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಇಲ್ಲಿನ ಗ್ರಾಮಸ್ಥರ ಕೈಗೆ ಸೀಲ್ ಹಾಕಿದ್ದಾರೆ. ಮಸ್ಕತ್, ದುಬೈ, ಮಂಗಳೂರಿನಿಂದ ಬಂದಿರುವ 75 ಮಂದಿ ಈ ಗ್ರಾಮದಲ್ಲಿದ್ದಾರೆ. …
Read More »ದೇಶಾದ್ಯಂತ 21 ದಿನಗಳ ಲಾಕ್ ಡೌನ್ – ವಿದೇಶದಿಂದ ಬೆಂಗಳೂರಿಗೆ ಬಂದ 14 ಸಾವಿರ ಜನರ ಪತ್ತೆ ಹಚ್ಚಿದ ಪೊಲೀಸರು
ಬೆಂಗಳೂರು(ಮಾ.25) : ಕೊರೋನಾ ಭೀತಿಯ ಹಿನ್ನೆಲೆ ದೇಶಾದ್ಯಂತ 21 ದಿನಗಳ ಲಾಕ್‍ಡೌನ್ ಮಾಡಲಾಗಿದೆ. ವಿದೇಶದಿಂದ ಬೆಂಗಳೂರಿಗೆ ಬಂದಿದ್ದ ಜನರನ್ನು ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿಗಳು ಪತ್ತೆ ಮಾಡಿದ್ದಾರೆ. ಕರ್ಪ್ಯೂ ಇರುವುದರಿಂದ ಪೊಲೀಸರು ತೀವ್ರ ಕಟ್ಟೆಚ್ಚರವನ್ನು ವಹಿಸಲಾಗಿದೆ. ವಿದೇಶದಿಂದ ಬೆಂಗಳೂರಿಗೆ ಬಂದಿದ್ದ 14 ಸಾವಿರ ಜನರನ್ನು ಬಿಬಿಎಂಪಿ ಸಿಬ್ಬಂದಿಗಳು ಹಾಗೂ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಫೆಬ್ರವರಿ 13 ರಿಂದ ಮಾರ್ಚ್ 19ರ ಅವಧಿಯಲ್ಲಿ ಬಂದಿದ್ದವರಿಗೆ ಸ್ಟಾಂಪಿಂಗ್ ಮಾಡಲಾಗಿದೆ. ಇವರೆಲ್ಲರು ಬಿಬಿಎಂಪಿ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ …
Read More »ಕೊರೋನಾದಿಂದ ರಾಜ್ಯದಲ್ಲಿ ಎರಡನೇ ಸಾವು?; ಶಂಕಿತೆಯ ವರದಿ ಬಂದ ನಂತರ ದೃಢ
ಆಂಧ್ರಪ್ರದೇಶ ಮೂಲದ 75 ವರ್ಷದ ಮಹಿಳೆ ಮಾರ್ಚ್ 23ರಂದು ಮೆಕ್ಕಾದಿಂದ ವಾಪಸ್ಸಾಗಿ ಗೌರಿ ಬಿದನೂರಿನಲ್ಲಿರುವ ಮಗನ ಮನೆಯಲ್ಲಿ ಕ್ವಾರಟೈನ್ ನಲ್ಲಿದ್ದರು. ಆದರೆ, ಮಾರ್ಚ್ 24 ರಂದು ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು ಬೆಂಗಳೂರು (ಮಾರ್ಚ್ 25); ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಮತ್ತೋರ್ವ ಮಹಿಲೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.ಆದರೆ, ಆಕೆಯ ಸಾವಿನ ಕುರಿತ ಸಂಪೂರ್ಣ ವರದಿ ಕೈಸೇರುವ ತನಕ ಇದು ಕೊರೋನಾ ಸೋಂಕಿನಿಂದಲೇ ಉಂಟಾದ ಮರಣ ಎಂದು ದೃಢಪಡಿಸಲು ಸಾಧ್ಯವಿಲ್ಲ ಎಂದು ಆರೋಗ್ಯ …
Read More »21 ದಿನ ಮನೆಯಲ್ಲಿ ಇರಬೇಕು.! ಸಂಪೂರ್ಣ ಭಾರತ ಲಾಕ್ ಡೌನ್: ಪ್ರಧಾನಿ ಮೋದಿ
ಪ್ರಧಾನಮಂತ್ರಿಯಾಗಿ ನಾನು ನಿಮಗೆ ಹೇಳ್ತಿಲ್ಲ. ನಿಮ್ಮ ಮನೆಯ ಸದಸ್ಯನಾಗಿ ಕೈಮುಗಿದು ಕೇಳ್ತಿದ್ದಿನಿ. ಇಂದು ರಾತ್ರಿ 12 ಗಂಟೆಯಿಂದ 21 ದಿನ ಮನೆಯಲ್ಲೇ ಇರಿ ಎಂದು ಪ್ರಧಾನ ಮಂತ್ರಿ ನರೇಂದ ಮೋದಿ ಜನರಲ್ಲಿ ವಿನಂತಿಸಿಕೊಂಡ್ರು. ನಿಮ್ಮ ಕುಟುಂಬಗಳನ್ನ ಕಾಪಾಡಲು ನನಗೆ ಇರುವ ಒಂದೇ ಒಂದು ಮಾರ್ಗವಿದು. ನಿಮ್ಮ ಮನೆಯವರಿಗಾಗಿ, ನಿಮ್ಮ ಕುಟುಂಬ ಕಾಪಾಡಿಕೊಳ್ಳುವುದಕ್ಕಾಗಿಯಾದ್ರು ಮನೆಯಲ್ಲೇ ಇರಿ. ಕೊರೊನಾ ಎಂಬ ಮಹಾಪಿಡುಗನ್ನ ತೊಲಗಿಸಲು ಸಹಕರಿಸಿ ಎಂದು ಪದೇ ಪದೇ ಮೋದಿ ದೇಶದ ಜನತೆಗೆ …
Read More »ಇಂದು ರಾತ್ರಿ 8 ಗಂಟೆಗೆ ಮತ್ತೆ ದೇಶದ ಜನತೆಯನ್ನು ಉದ್ದೇಶಿಸಿ ಮೋದಿ ಭಾಷಣ..!
ಬೆಂಗಳೂರು,ಮಾ.24-ದೇಶದ ಜನತೆಯನ್ನು ಉದ್ದೇಶಿಸಿ ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಎಲ್ಲರೂ ಇದಕ್ಕೆ ಸಹಕರಿಸುವಂತೆ ಪ್ರಧಾನಿಯವರು ಈಗಾಗಲೇ ಮನವಿ ಮಾಡಿದ್ದಾರೆ. ಕೊರೊನಾ ತೀವ್ರತೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಇನ್ನಷ್ಟು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಇಂದು ರಾತ್ರಿ ಎರಡನೇ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಕ್ರಿಯೆಗಿಂತ ನಿಷ್ಕ್ರಿಯೆಯೇ ಹೆಚ್ಚು ಮಹತ್ವದ್ದಾಗಿರುವ ಹಿನ್ನೆಲೆಯಲ್ಲಿ …
Read More »ಕೋವಿಡ್-19 ಸೋಂಕು ಪೀಡಿತರಾಗಿದ್ದವರಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ.
ನವದೆಹಲಿ, ಮಾ.24- ಈಗಾಗಲೇ 16,500ಕ್ಕೂ ಹೆಚ್ಚು ಮಂದಿ ಬಲಿಯಾಗಿ 3.78 ಲಕ್ಷ ಜನರು ಬಾಧಿತವಾಗಿರುವ ಮಾರಕ ಕೊರೊನಾ ವೈರಸ್ ದಾಳಿಗೆ ವಿಶ್ವವೇ ಕಂಗೆಟ್ಟು ಆತಂಕ ಮತ್ತು ಭಯ-ಭೀತಿ ವಾತಾವರಣ ನೆಲೆಸಿರುವಾಗಲೇ ತುಸು ಸಮಾಧಾನಕರ ಸುದ್ದಿಯೊಂದು ಆಶಾಭಾವನೆ ಮೂಡಿಸಿದೆ. ಕೋವಿಡ್-19 ಸೋಂಕು ಪೀಡಿತರಾಗಿದ್ದವರಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಇವರಲ್ಲಿ ಅನೇಕರು ಸಂಪೂರ್ಣ ಗುಣಮುಖರಾಗಿದ್ದಾರೆ. ಕೊರೊನಾ ವೈರಸ್‍ನ ಕೇಂದ್ರ ಬಿಂದುವಾದ ಚೀನಾದಲ್ಲಿ ಸುಮಾರು 60.000 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೆ, ವಿಶ್ವದ …
Read More »ಮನೆಯಲ್ಲೇ ಇರಿ ಎಂದ್ರೂ ಕೇಳಿಲ್ಲ – ರಸ್ತೆಗೆ ಬಂದವರಿಗೆ ಬಿತ್ತು ಲಾಠಿ ಏಟು
ಬೆಂಗಳೂರು: ರಸ್ತೆಗೆ ಇಳಿಯಬೇಡಿ, ಮನೆಯಲ್ಲೇ ಇರಿ ಎಂದು ಸಾಕಷ್ಟು ಬಾರಿ ಹೇಳಿದರೂ ಈ ಮನವಿಯನ್ನು ಲೆಕ್ಕಿಸದೇ ರಸ್ತೆಗೆ ಇಳಿದ ಜನತೆಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. ಕರ್ನಾಟಕ ಸಂಪೂರ್ಣ ಲಾಕ್‍ಡೌನ್ ಆಗಿದ್ದರೂ ಜನ ಇಂದು ಬೆಳಗ್ಗೆಯಿಂದಲೇ ರಸ್ತೆಗೆ ಇಳಿಯುತ್ತಿದ್ದರು. ಈ ವೇಳೆ ಪೊಲೀಸರು ಮನೆಗೆ ತೆರಳುವಂತೆ ಮನವಿ ಮಾಡುತ್ತಿದ್ದರು. ಮನವಿಗೂ ಕ್ಯಾರೇ ಎನ್ನದ ಜನರಿಗೆ ಪೊಲೀಸರಿಗೆ ಲಾಠಿ ಏಟು ನೀಡಿದ್ದಾರೆ. ಯಶವಂತಪುರದ ಗೋವರ್ಧನ್ ಥಿಯೇಟರ್ ಬಳಿ ಆಟೋಗಳು, ಸಾರ್ವಜನಿಕರ ಅನಗತ್ಯ …
Read More »ಕೊರೋನಾ ಭೀತಿಯಿಂದ ಕೇರಳ ಗಡಿ ಬಂದ್ – ಬಂಡೀಪುರ ಚೆಕ್ ಪೋಸ್ಟ್ ನಲ್ಲಿ ವಾಹನ ಸಂಚಾರ ನಿಷೇಧ
ನೆರೆಯ ಕೇರಳದಿಂದ ಯಾವುದೇ ವಾಹನ ಕರ್ನಾಟಕ ಪ್ರವೇಶ ಮಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಆ್ಯಂಬುಲೆನ್ಸ್ ನಂತಹ ತುರ್ತು ವಾಹನಗಳಿಗಷ್ಟೆ ಅವಕಾಶ ನೀಡಲಾಗಿದೆ ಚಾಮರಾಜನಗರ(ಮಾ.23) : ಕೊರೋನಾ ಭೀತಿಯ ಹಿನ್ನಲೆಯಲ್ಲಿ ಕರ್ನಾಟಕ ಕೇರಳ ಗಡಿ ಬಂದ್ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೆರೆಯ ಕೇರಳದಿಂದ ಯಾವುದೇ ವಾಹನ ಕರ್ನಾಟಕ ಪ್ರವೇಶ ಮಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಆ್ಯಂಬುಲೆನ್ಸ್ ನಂತಹ ತುರ್ತು ವಾಹನಗಳಿಗಷ್ಟೆ ಅವಕಾಶ …
Read More »ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಲು ಸರಕಾರ ನಿರ್ಧರಿಸಿದೆ.
ರಾಜ್ಯದ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದ್ದ ರಾಜ್ಯ ಸರಕಾರ ಇದೀಗ ಸಂಪೂರ್ಣ ಕರ್ನಾಟಕವನ್ನು ಲಾಕ್ ಡೌನ್ ಮಾಡಿ ಆದಶ ಹೊರಡಿಸಿದೆ. ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಲು ಸರಕಾರ ನಿರ್ಧರಿಸಿದೆ. ಇದರಿಂದಾಗಿ ಇಡೀ ರಾಜ್ಯದಲ್ಲಿ ಸಾರಿಗೆ ಸಂಚಾರ ವ್ಯವಸ್ಥೆ ಸ್ಥಗಿತವಾಗಲಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಂಚಾರ ಬಂದ್ ಆಗಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೇನೂ ಸಿಗುವುದಿಲ್ಲ. ಮಾರ್ಚ್ 31ರ ವರೆಗೆ ಇಡೀ …
Read More »