Breaking News

ರಾಷ್ಟ್ರೀಯ

ಜನ ಅನವಶ್ಯಕವಾಗಿ ಸುತ್ತಾಡುವದನ್ನು ನಿಯಂತ್ರಿಸಲು ಶಾಸಕ ಅಭಯ ಪಾಟೀಲ ಹೊಸ ಐಡಿಯಾ

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ಸಮರ್ಪಕವಾಗಿ ತಡೆಗಟ್ಟಲು,ಬೆಳಗಾವಿ ನಗರದ ಜನ ಅನವಶ್ಯಕವಾಗಿ ಸುತ್ತಾಡುವದನ್ನು ನಿಯಂತ್ರಿಸಲು ಶಾಸಕ ಅಭಯ ಪಾಟೀಲ ಹೊಸ ಐಡಿಯಾ ಹುಡಕಿದ್ದಾರೆ . ಅತ್ಯಂತ ವಿಶಾಲವಾಗಿರುವ ಬೆಳಗಾವಿ ನಗರದಲ್ಲಿ ಹೊರಗಡೆ ಸುತ್ತಾಡುವ ಜನರನ್ನು ತಡೆಯಲು ಪೋಲೀಸರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.ಅನವಶ್ಯಕವಾಗಿ ಸುತ್ತಾಡುವ ಜನರನ್ನು ಸರಳವಾಗಿ ಗುರುತಿಸಿ ಅವರನ್ನು ದಂಡಿಸಲು ಶಾಸಕ ಅಭಯ ಪಾಟೀಲ ಬೆಳಗಾವಿ ನಗರದಲ್ಲಿ ಹದಿನಾಲ್ಕು ದ್ರೋಣ ಕ್ಯಾಮರಾಗಳನ್ನು ಬೆಳಗಾವಿಯ ಬಾನಂಗಳದಲ್ಲಿ ಹಾರಿ …

Read More »

ಕೊರೋನಾ ಸೋಂಕು ನಿಯಂತ್ರಣಕ್ಕೆ ಗ್ರಾಮಗಳು ತೆಗೆದುಕೊಂಡ ಕ್ರಮಗಳು ಅನೇಕರಿಗೆ ಮಾದರಿಯಾಗಿವೆ: ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ಸೋಂಕು ನಿಯಂತ್ರಣಕ್ಕೆ ಗ್ರಾಮಗಳು ತೆಗೆದುಕೊಂಡ ಕ್ರಮಗಳು ಅನೇಕರಿಗೆ ಮಾದರಿಯಾಗಿವೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಸರಪಂಚರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾ ವೈರಸ್​ ನಿಯಂತ್ರಣಕ್ಕೆ ಸಾಕಷ್ಟು ಗ್ರಾಮಗಳು ಸ್ವಯಂ ನಿರ್ಬಂಧ ಹೇರಿಕೊಂಡಿವೆ. ಹಳ್ಳಿಗರಿಂದ ಸಾಕಷ್ಟು ಜನರು ಸ್ಫೂರ್ತಿ ಪಡೆದುಕೊಂಡಿದ್ದಾರೆ ಎಂದರು. ಮೊದಲು ಗ್ರಾಮ ಪಂಚಾಯ್ತಿಯಲ್ಲಿ ಸರಿಯಾದ ಇಂಟರ್​ನೆಟ್​ ಸೌಲಭ್ಯ ಇರುತ್ತಿರಲಿಲ್ಲ. ಆದರೆ, ಇಂದು ಲಕ್ಷಾಂತರ ಪಂಚಾಯತಿಗಳಲ್ಲಿ ವೇಗದ ಇಂಟರ್​ನೆಟ್​ ಇದೆ. ದೇಶದ ಅನೇಕ …

Read More »

ಬರಿದಾದ ರಾಜ್ಯ ಸರ್ಕಾರದ ಬೊಕ್ಕಸ ಖಜಾನೆ ತುಂಬಿಸಲು ರಾಜ್ಯ ಸರ್ಕಾರ ನಾನಾ ಕಸರತ್ತು .! B.S.Y.

ಬೆಂಗಳೂರು, ಏ.24- ಕೊರೊನಾ ಲಾಕ್‍ಡೌನ್‍ನಿಂದ ವ್ಯಾಪಾರ-ವಹಿವಾಟು ಸ್ಥಗಿತವಾಗಿ ಬೊಕ್ಕಸ ಖಾಲಿಯಾಗಿದ್ದು, ಖಜಾನೆ ತುಂಬಿಸಲು ರಾಜ್ಯ ಸರ್ಕಾರ ನಾನಾ ಕಸರತ್ತು ಆರಂಭಿಸಿದೆ. ಆರ್ಥಿಕ ವರ್ಷದಲ್ಲಿ ಸರ್ಕಾರ ಭಾರೀ ಆದಾಯ ಖೋತಾ ಕಂಡಿದ್ದು, ಇತ್ತ ಜಿಎಸ್‍ಟಿ ತೆರಿಗೆ ನಷ್ಟವೂ ದುಪ್ಪಟ್ಟು ಆಗಿದೆ. ಈ ಮಧ್ಯೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅಲ್ಪಸ್ವಲ್ಪ ಆರ್ಥಿಕ ನೆರವು ಬಂದಿದ್ದು, ಇನ್ನಷ್ಟು ನೆರವಿನ ನಿರೀಕ್ಷೆಯಲ್ಲಿದೆ. ಆರ್ಥಿಕ ಸಂಕಷ್ಟವನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಲು ಲಾಕ್ ಡೌನ್ ಸಡಿಲಿಕೆ ಮಾಡುವ ಕೆಲವು …

Read More »

ಇಬ್ಬರಲ್ಲಿ ಕೊರೊನಾ ಪತ್ತೆ, ಪಾದರಾಯನಪುರ ಪುಂಡರು ಬೆಂಗಳೂರಿಗೆ ಶಿಫ್ಟ್ :,,,,,,

ರಾಮನಗರ, ಏ.24- ಪಾದರಾಯನಪುರದಲ್ಲಿ ದಾಂಧಲೆ ಮಾಡಿದ್ದ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದು, ಮತ್ತೆ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ. ರಾಮನಗರ ಜೈಲಿನಲ್ಲಿದ್ದ 121 ಆರೋಪಿಗಳ ಪೈಕಿ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ. ಸೋಂಕು ಕಾಣಿಸಿಕೊಂಡ ಇಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆತರಲಾಗಿದ್ದು, ಉಳಿದ 119 ಮಂದಿ ಆರೋಪಿಗಳನ್ನು 14 ಬಸ್‍ಗಳ ಮೂಲಕ ಬೆಂಗಳೂರಿಗೆ ಕರೆತರಲಾಯಿತು. ಬಸ್‍ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.ಪಾದರಾಯನಪುರ ಗಲಭೆಯಲ್ಲಿ …

Read More »

BREAKING : ಈ ಚಿಕಿತ್ಸೆಯಿಂದ ಕೇವಲ 30 ಸೆಕೆಂಡ್‍ಗಳಲ್ಲಿ ಫಿನಿಶ್ ಆಗಲಿದೆ ಕೊರೋನಾ ವೈರಸ್..!

ವಾಷಿಂಗ್ಟನ್, ಏ.24-ವಿಶ್ವಕ್ಕೇ ಕಂಟಕವಾಗಿರುವ ಕಿಲ್ಲರ್ ಕೊರೊನಾ ನಿಗ್ರಹಕ್ಕಾಗಿ ವಿಶ್ವಾದ್ಯಂತ ಹೊಸ ಹೊಸ ಪ್ರಯೋಗಗಳು ಮುಂದುವರಿದಿರುವಾಗಲೇ ಕೋವಿಡ್-19 ಪ್ರಕರಣ ತಡೆಗಟ್ಟುವಲ್ಲಿ ಸೂರ್ಯನ ಕಿರಣ ಸಹಕಾರಿ ಎಂಬ ಸಂಗತಿ ಬೆಳಕಿಗೆ ಬಂಧಿದೆ. ಸೂರ್ಯರಶ್ಮಿ, ತಾಪಮಾನ ಮತ್ತು ವಾತಾವರಣದ ಆದ್ರ್ರತೆ (ಬೇಸಿಗೆಯಂಥ ವಾತಾವರಣ) ಕೊರೊನಾ ವೈರಸ್ ಹರಡುವಿಕೆಯನ್ನು ಕ್ಷೀಣಿಸಬಲ್ಲದು ಎಂದು ಅಮೆರಿಕದ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತದಲ್ಲೀಗ ಬೇಸಿಗೆ ಕಾಲ. ಸೂರ್ಯನ ಬಿಸಿಲು ಪ್ರಖರವಾಗಿರುವುದರಿಂದ ಇದು ಭಾರತೀಯರಿಗೆ ಶುಭ ಸುದ್ದಿಯಾಗಿದೆ. ಸೂರ್ಯನ ಪ್ರಖರ …

Read More »

ರಂಜಾನ್ ಮಾಸಾಚರಣೆ ಪಾಲಿಸಬೇಕಾದ ಮಾರ್ಗಸೂಚಿ…….

ಮಸೀದಿಯ ಸಿಬ್ಬಂದಿಗಳು ಯಾವುದೇ ತರಹದ ಧ್ವನಿವರ್ಧಕಗಳನ್ನು ಮಸೀದಿಯಲ್ಲಿ ಐದು ಹೊತ್ತಿನ ಪ್ರಾರ್ಥನೆ(ನಮಾಜ್) ಯನ್ನು ಶುಕ್ರವಾರ (ನಮಾಜ್) ಪ್ರಾರ್ಥನೆ ಸಹ ಒಳಗೊಂಡಂತೆ ಮತ್ತು ತರ್ಹಾವಿ (ನಮಾಜ್) ಪ್ರಾರ್ಥನೆಗೆ ಬಳಸಲು ನಿರ್ಬಂಧಿಸಲಾಗಿದೆ. ಬೆಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸ ಪ್ರಾರಂಭವಾಗಲಿದ್ದು, ಮೇ 3ರವರೆಗೆ ಅನ್ವಯವಾಗುವಂತೆ ಸರ್ಕಾರದ ಮಾರ್ಗದರ್ಶನಗಳನ್ನು ಮುಂದುವರೆಸುತ್ತಾ ದಾವಣಗೆರೆ ಜಿಲ್ಲೆಯಾದ್ಯಂತ ಬರುವ ಎಲ್ಲಾ ಮಸೀದಿ, ದರ್ಗಾಗಳಲ್ಲಿ ದೈನಂದಿನ ಮತ್ತು ರಂಜಾನ್ ಮಾಸದ ಸಾಮೂಹಿಕ ಪ್ರಾರ್ಥನೆಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ …

Read More »

ಯುವ ವಕೀಲರ ಬ್ಯಾಂಕ್ ಖಾಯತೆಗೆ ತಲಾ 5 ಸಾವಿರ ಹಣ ಜಮೆ

ಬೆಂಗಳೂರು : ಬೆಂಗಳೂರು ವಕೀಲರ ಸಂಘವು ಹಿರಿಯ ಹಾಗೂ ಇತರ ವಕೀಲರಿಂದ ದೇಣಿಗೆ ಸಂಗ್ರಹಿಸಿ, ಸಂಕಷ್ಟದಲ್ಲಿದ್ದ 368 ಅರ್ಹ ಯುವ ವಕೀಲರಿಗೆ ತಲಾ 5 ಸಾವಿರ ರೂ.ಗಳಂತೆ ಒಟ್ಟು 18,40,000 ರೂ. ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಿದೆ. ಕೊರೋನಾದ ಸಂಕಷ್ಟದ ಕಾಲದಲ್ಲಿ ಹಿರಿಯ ಹಾಗೂ ಇತರೆ ವಕೀಲರಿಂದ 19,14,501 ರೂ.ಗಳನ್ನು ದೇಣಿಗೆ ಸಂಗ್ರಹಿಸಲಾಗಿತ್ತು ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದ್ದಾರೆ. ಏಪ್ರಿಲ್ 6 ರಂದು ಸಂಘದ …

Read More »

ಟ್ರೆಂಡ್ ಆಯ್ತು ಪಿಲ್ಲೋ ಚಾಲೆಂಜ್ – ಬೆತ್ತಲ ಮೈಗೆ ದಿಂಬು ಕಟ್ಟಿ ಸೆಲೆಬ್ರಿಟಿ ಫೋಟೋ ಪೋಸ್ಟ್

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾದ ಹೊಸ ಹೊಸ ಚಾಲೆಂಜ್‍ಗಳು ಟ್ರೆಂಡ್ ಆಗುತ್ತಲೇ ಇರುತ್ತೆ. ಕೆಲವೊಂದು ಚಾಲೆಂಜ್‍ಗಳು ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತದೆ. ಆದೇ ಪಟ್ಟಿಗೆ ಈಗ ಪಿಲ್ಲೋ ಚಾಲೆಂಜ್ ಕೂಡ ಸೇರಿಕೊಂಡಿದೆ. ಸದ್ಯ ಲಾಕ್‍ಡೌನ್ ಅಲ್ಲಿ ‘ಬಿ ದ ರಿಯಲ್ ಮ್ಯಾನ್ ಚಾಲೆಂಜ್’, ‘ಡಾಲ್ಗೊನಾ ಕಾಫಿ ಚಾಲೆಂಜ್’, ‘ಹೋಂ ಗಾರ್ಡನ್ ಚ್ಯಾಲೆಂಜ್’ ಹೀಗೆ ಅನೇಕ ಚಾಲೆಂಜ್‍ಗಳು ಟ್ರೆಂಡ್ ಆಗುತ್ತಿದೆ. ಈ ಮಧ್ಯೆ ಸಿಕ್ಕಾಪಟ್ಟೆ ವೈರಲ್ ಆಗಿರೋದು ಪಿಲ್ಲೋ ಚಾಲೆಂಜ್. ಈ ಚಾಲೆಂಜ್‍ಗೆ …

Read More »

ಮೇ 3ರವರೆಗೆ ಭಟ್ಕಳದಲ್ಲಿ ನಿಯಮ ಸಡಿಲಿಕೆ ಇಲ್ಲ: ಶಿವರಾಮ್ ಹೆಬ್ಬಾರ್

ಕಾರವಾರ: ಮೇ 3ರ ತನಕ ಭಟ್ಕಳದಲ್ಲಿ ಕಟ್ಟುನಿಟ್ಟಿನ ನಿಯಮ ಮುಂದುವರಿಯಲ್ಲಿದ್ದು, ರಂಜಾನ್ ಹಬ್ಬಕ್ಕೂ ಇದರಿಂದ ವಿನಾಯಿತಿ ಇಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಇಂದು ಸಂಜೆ ಭಟ್ಕಳಕ್ಕೆ ಆಗಮಿಸಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ಭಟ್ಕಳದ ತಂಜೀಂ ಸಂಸ್ಥೆ ರಂಜಾನ್ ಹಬ್ಬಕ್ಕಾಗಿ ತಮಗೆ ದಿನದಲ್ಲಿ ಕನಿಷ್ಟ 2 ಗಂಟೆಯಾದರೂ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಮನವಿಯನ್ನು ನಯವಾಗಿ ತಿರಸ್ಕರಿಸಿದ …

Read More »

ಬೆಂಗ್ಳೂರಿಗೆ ಲಾಕ್‍ಡೌನ್‍ನಿಂದ ಸದ್ಯಕ್ಕಿಲ್ಲ ರಿಲೀಫ್………

ಬೆಂಗಳೂರು: ಸರ್ಕಾರ ಮಹಾಮಾರಿ ಕೊರೊನಾ ವೈರಸ್ ಅನ್ನು ಹೊಡೆದೊಡಿಸಲು ಲಾಕ್‍ಡೌನ್ ಅಸ್ತ್ರವನ್ನು ಪ್ರಯೋಗಿಸಿದೆ. ಈ ಲಾಕ್‍ಡೌನ್ ಇಡೀ ದೇಶಾದ್ಯಂತ 3ರವರೆಗೂ ಮುಂದುವರಿಯಲಿದೆ. ಆದರೆ ಸಿಲಿಕಾನ್ ಸಿಟಿಗೆ ಮಾತ್ರ ಲಾಕ್‍ಡೌನ್‍ನಿಂದ ಮೇ 3ರಂದು ರಿಲೀಫ್ ಇಲ್ಲ. ರಾಜ್ಯದಲ್ಲೇ ಅತೀ ಹೆಚ್ಚು ಪ್ರಕರಣಗಳು ರಾಜಧಾನಿ ಬೆಂಗಳೂರಲ್ಲಿ ದಾಖಲಾಗಿವೆ. ಈ ಕೊರೊನಾ ಪಾಸಿಟಿವ್ ಪ್ರಕರಣಗಳ ನಿಯಂತ್ರಣಕ್ಕೆ ಬಿಬಿಎಂಪಿ 19 ಕಂಟೈನ್‍ಮೆಂಟ್ ಝೋನ್‍ಗಳೆಂದು ವಿಂಗಡಿಸಿ, ಬಿಗಿ ಭದ್ರತೆ ಒದಗಿಸುತ್ತಿದೆ. ಆದರೆ ಈ ಕಂಟೈನ್‍ಮೆಂಟ್ ಝೋನ್‍ಗಳು ನಾರ್ಮಲ್ …

Read More »