ಬೆಳಗಾವಿ: ದೆಹಲಿಯಲ್ಲಿ ಆ.15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅತಿಥಿಯಾಗಿ ಭಾಗವಹಿಸಲು ಇಲ್ಲಿನ ಸರ್ಕಾರಿ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಕೀರ್ತಿ ಜಟಗಣ್ಣವರ, ಸಂಜನಾ ಮುದಿಗೌಡರ ಹಾಗೂ ಉಪನ್ಯಾಸಕಿ ಅನುಸೂಯಾ ಹಿರೇಮಠ ಆಯ್ಕೆಯಾಗಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನನ್ನ ಮತಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕಿ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದು ಅಭಿಮಾನದ ಸಂಗತಿ’ ಎಂದು ಶಾಸಕ ಅಭಯ ಪಾಟೀಲ …
Read More »ತುಂಗಭದ್ರಾ ಕ್ರಸ್ಟ್‌ಗೇಟ್ ಕೊಚ್ಚಿ ಹೋದ ಪ್ರಕರಣ: ಕಲ್ಲಿನ ಮಂಟಪ ಭಾಗಶಃ ಮುಳುಗಡೆ
ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಚ್ಚಿ ಹೋಗಿರುವುದರಿಂದ ನದಿಗೆ ನೀರು ಬಿಡಲಾಗಿದ್ದು, ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಬಳಿ ಇರುವ ಕೃಷ್ಣದೇವರಾಯ ಸಮಾಧಿಯ 64 ಸಾಲಿನ ಕಲ್ಲಿನ ಮಂಟಪ ಮುಳುಗುವ ಹಂತ ತಲುಪಿದೆ. ಕೆಲವು ದಿನಗಳ ಹಿಂದೆ ಜಲಾಶಯಕ್ಕೆ ವ್ಯಾಪಕ ನೀರು ಹರಿದು ಬಂದು ನದಿಗೆ ನೀರು ಹರಿಸಿದ್ದಾಗ ಇದು ಮುಳುಗಡೆಯಾಗಿತ್ತು. ಕ್ರಸ್ಟ್‌ಗೇಟ್ ಈಗ ಮರಳಿ ಅಳವಡಿಸಬೇಕಾಗಿರುವ ಕಾರಣ ಜಲಾಶಯದ 61 ಟಿಎಂಸಿ ಅಡಿ ನೀರು ಖಾಲಿ ಮಾಡಬೇಕಾಗಿದೆ. ಆದ್ದರಿಂದ …
Read More »ನಿತ್ಯಭವಿಷ್ಯ
ಮೇಷ: ಜೇನು ಕೃಷಿಯಲ್ಲಿ ಪ್ರಗತಿ. ಸ್ನೇಹಿತರಿಂದ ಸಹಾಯ. ಕೋರ್ಟ್ ವ್ಯಾಜ್ಯಗಳಲ್ಲಿ ಜಯ. ಸ್ಥಿರಾಸ್ತಿ ಲಾಭ. ಆಧ್ಯಾತ್ಮದ ಒಲವು. ಶುಭಸಂಖ್ಯೆ: 5 ವೃಷಭ: ಉದ್ಯೋಗದಲ್ಲಿ ಒತ್ತಡ. ಕಲಾವಿದರಿಗೆ ಅಪಕೀರ್ತಿ. ಅನಗತ್ಯ ಪ್ರಯಾಣ. ದಾಂಪತ್ಯದಲ್ಲಿ ಕಲಹ. ಪಾಲುದಾರಿಕೆಯಲ್ಲಿ ಕಿರಿಕಿರಿ. ಶುಭಸಂಖ್ಯೆ: 9 ಮಿಥುನ: ಆರ್ಥಿಕ ಲಾಭ. ಶತ್ರು ದಮನ. ಸಂಗಾತಿಯಿಂದ ಸಹಾಯ. ಉದ್ಯೋಗದಲ್ಲಿ ಅನುಕೂಲ. ದಾಂಪತ್ಯದಲ್ಲಿ ಅಂತರ. ಅನಾರೋಗ್ಯ. ಶುಭಸಂಖ್ಯೆ:1 ಕಟಕ: ಸಾಲಬಾಧೆ. ಶತ್ರು ಕಾಟ. ಮಕ್ಕಳಿಂದ ಬೇಸರ. ಉದ್ಯೋಗದಲ್ಲಿ ತೊಂದರೆ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಜೂಜಿನಿಂದ ತೊಂದರೆ. ಶುಭಸಂಖ್ಯೆ: 8 ಸಿಂಹ: ವಾಹನ ಯೋಗ. …
Read More »ಬೆಂಗಳೂರಿನಲ್ಲಿ ಮುಂಜಾನೆವರೆಗೂ ಅಬ್ಬರಿಸಿದ ಮಳೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆವರೆಗೂ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ. ನಿನ್ನೆ ಮಧ್ಯರಾತ್ರಿಯವರೆಗೂ ಮಳೆ ಬರುವ ಯಾವುದೇ ವಾತಾವರಣ ಇರಲಿಲ್ಲ. ಆದರೆ, ನಸುಕಿನ ಜಾವ ಮಳೆರಾಯ ಅಬ್ಬರಿಸಿದ್ದಾನೆ. ನಿದ್ರೆಯಿಂದ ಎಚ್ಚರಗೊಂಡ ಎಷ್ಟೋ ಮಂದಿ ವರುಣ ಅಬ್ಬರ ಕಂಡು ದಂಗಾಗಿದ್ದಾರೆ. ಸುಮಾರು ಮೂರ್ನಾಲ್ಕು ಗಂಟೆ ಮಳೆ ಎಡಬಿಡದೆ ಸುರಿದಿದೆ. ಇದರ ಪರಿಣಾಮ ರಾಜಧಾನಿಯಲ್ಲಿ ಜನ-ಜೀವನ ಅಸ್ತವ್ಯಸ್ತಗೊಂಡಿದೆ. ನಾಗಾವಾರ ಜಂಕ್ಷನ್ ಮತ್ತು …
Read More »ಕೋಚಿಂಗ್ ಇಲ್ಲದೆ ಒಂದೇ ವರ್ಷದಲ್ಲಿ 6 ಸರ್ಕಾರಿ ನೌಕರಿ ಗಿಟ್ಟಿಸಿದ ಯುವತಿ
ಸರ್ಕಾರಿ ಕೆಲಸಕ್ಕಾಗಿ ಹಗಲಿರುಳು ತಪಸ್ಸು ಮಾಡುವ ಎಷ್ಟೋ ಮಂದಿ ನಮ್ಮ ನಡುವೆ ಇದಾರೆ. ಅದೇನೆ ಆಗಲಿ ಸರ್ಕಾರಿ ನೌಕರಿ ಪಡೆಯಲೇಬೇಕು ಎಂಬ ದೃಢ ಸಂಕಲ್ಪದೊಂದಿಗೆ ಓದಿನಲ್ಲಿ ಮಗ್ನರಾಗಿರುತ್ತಾರೆ. ಕೆಲವರಂತೂ ಕೋಚಿಂಗ್ ಕ್ಲಾಸ್ಗಳಿಗೆ ಸೇರಿ ಕಠಿಣ ತರಬೇತಿ ನಡೆಸುತ್ತಾರೆ. ಆದರೆ, ಕೆಲವರು ಯಾವುದೇ ಕೋಚಿಂಗ್ ಪಡೆಯದೇ ಸರ್ಕಾರಿ ಕೆಲಸ ಗಿಟ್ಟಿಸಿದ ಎಷ್ಟೋ ಉದಾಹರಣೆಗಳು ಸಹ ನಮ್ಮ ನಡುವೆ ಇದೆ. ನೀವು ಮೇಲಿನ ಫೋಟೋದಲ್ಲಿ ನೋಡುತ್ತಿರುವ ಯುವತಿ ಈ ಸಾಧನೆಗೆ ತಾಜಾ ಉದಾಹರಣೆಯಾಗಿದ್ದಾರೆ. ಸದ್ಯ …
Read More »ಹೊನ್ನಾವರ: ಬಾವಿಗೆ ಬಿದ್ದು ಮಹಿಳೆ ಸಾವು
ಹೊನ್ನಾವರ: ತಾಲ್ಲೂಕಿನ ನಗರಬಸ್ತಿಕೇರಿ ಗ್ರಾಮದ ಕುಂಟೋಡಿಯಲ್ಲಿ ಶನಿವಾರ ಮಹಿಳೆಯೊಬ್ಬಳು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಕುದ್ರಗಿಯ ಅಕ್ಷತಾ ಮಂಜುನಾಥ ನಾಯ್ಕ(26) ಮೃತರು. ‘ಅನಾರೋಗ್ಯಕ್ಕೊಳಗಾಗಿದ್ದ ಸಹೋದರನ್ನು ನೋಡಿಕೊಳ್ಳಲು 15 ದಿನದ ಹಿಂದೆ ಅಕ್ಷತಾ ತವರು ಮನೆ ಕುದ್ರಿಗೆ ಬಂದಿದ್ದಳು.ಮನೆಯ ಸಮೀಪ ಬಾವಿಯಲ್ಲಿ ಕಂಡುಬಂದ ಹಾವೊಂದನ್ನು ನೋಡಲು ಬಾವಿಯ ಕಟ್ಟೆಯ ಮೇಲೆ ಕೈಯೂರಿ ಬಗ್ಗಿ ನೋಡುವಾಗ ಆಕಸ್ಮಿಕವಾಗಿ ಜಾರಿ ತಲೆಕೆಳಗಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ’ ಎಂದು ಅವರ ಅಕ್ಷತಾ ತಾಯಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. …
Read More »ದುಬೈನಲ್ಲಿ ಅಂಗಡಿ ಕೊಡಿಸುವುದಾಗಿ ₹35 ಲಕ್ಷ ವಂಚನೆ
ಶಿರಸಿ: ದುಬೈನಲ್ಲಿ ಅಂಗಡಿ ಕೊಡಿಸುವುದಾಗಿ ನಂಬಿಸಿ, ಮಂಗಳೂರು ಮೂಲದ ವ್ಯಕ್ತಿಯೊಬ್ಬನಿಗೆ ಶಿರಸಿ ಮೂಲದ ಮೂವರು ₹35 ಲಕ್ಷ ವಂಚನೆ ಮಾಡಿದ ಕುರಿತು ಶನಿವಾರ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲ್ಲೂಕಿನ ಹುಲೇಕಲ್ ಸಮೀಪದ ಹೆಂಚರಟಾದ ಅಬ್ದುಲ್ ಮತಿನ‌್ ಅಬ್ದುಲ್ ಗಫಾರ ಸಾಬ್, ಅಬ್ದುಲ್ ರೆಹಮಾನ್ ಅಬ್ದುಲ್ ಗಫಾರ್ ಸಾಬ್ ಹಾಗೂ ನಾಝೀಯಾ ಅಬ್ದುಲ್ ಮತೀನ್ ಆರೋಪಿಗಳಾಗಿದ್ದಾರೆ. ಈ ಮೂವರು ಮಂಗಳೂರು ಹಂಪನಕಟ್ಟಾ ಲೈಟ್ ಹೌಸ್ ಹಿಲ್ ರಸ್ತೆಯ …
Read More »ಬೇಲೂರು: ವಯನಾಡಿಗೆ ಅಗತ್ಯ ವಸ್ತುಗಳ ಪೂರೈಕೆ
ಬೇಲೂರು: ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ಕೇರಳದ ವಯನಾಡಿನ ಜನತೆಗೆ ಇಲ್ಲಿನ 24*7 ಸೇವಾತಂಡ ಹಾಗೂ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವತಿಯಿಂದ, ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ ಅಗತ್ಯ ವಸ್ತುಗಳನ್ನು ಕೇರಳಕ್ಕೆ ವಾಹನಗಳಲ್ಲಿ ಕಳುಹಿಸಲು ತಹಶೀಲ್ದಾರ್ ಎಂ.ಮಮತಾ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಮತಾ ಮಾತನಾಡಿ, ಪ್ರಕೃತಿ ವಿಕೋಪಕ್ಕೆ ನಲುಗಿರುವ ಕೇರಳ ರಾಜ್ಯದ ವಾಯನಾಡಿಗೆ ಅಗತ್ಯ ವಸ್ತುಗಳನ್ನು ಕಳುಹಿಸುತ್ತಿರುವುದು ಶ್ಲಾಘನೀಯವಾಗಿದೆ. ಪಕ್ಕದ ರಾಜ್ಯದವರು ಸಂಕಷ್ಟದಲ್ಲಿದ್ದಾಗ ಅವರಿಗೆ ನೆರವಾಗುವುದು …
Read More »ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ಎಚ್‌ಡಿಕೆ
ಮಂಡ್ಯ: ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಇಂದು ಮಧ್ಯಾಹ್ನ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ರೈತ ಲಕ್ಷ್ಮಣ ಅವರ ಗದ್ದೆಯಲ್ಲಿ ಭತ್ತ ನಾಟಿ ಮಾಡಿದರು. ಈ ಕುರಿತ ಚಿತ್ರಗಳನ್ನು ಅವರು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಭೂಮಿ ತಾಯಿ ಮಕ್ಕಳಾದ ನಮ್ಮೆಲ್ಲರಿಗೂ ಭೂಮಿಯೇ ಸರ್ವಸ್ವ. ಬೇಸಾಯವೇ ಬದುಕು. ಭತ್ತದ ನಾಟಿ ನನ್ನ ಮನೆಯ ಕಾರ್ಯಕ್ರಮವೇ ಆಗಿತ್ತು. ರೈತಾಪಿ ಜನರೊಂದಿಗೆ ಇಂತಹ ಸಾರ್ಥಕ, ಅನನ್ಯ …
Read More »ಮದ್ವೆ ಬಳಿಕ ಮೊದಲ ಬಾರಿ ಮನೆಗೆ ಬಂದ ಅಳಿಯನಿಗೆ 100 ಬಗೆಯ ಖಾದ್ಯ ತಯಾರಿಸಿ, ಉಣಬಡಿಸಿದ ಅತ್ತೆ!
ವಿಜಯವಾಡ: ಮನೆಗೆ ಬಂದ ಅಳಿಯನಿಗೆ ಅತ್ತೆ-ಮಾವಂದಿರು ವಿಶೇಷ ಮನ್ನಣೆ ನೀಡುವುದು ಸಾಮಾನ್ಯ ಸಂಗತಿ. ಆದರೆ, ಆಂಧ್ರಪ್ರದೇಶದಲ್ಲಿ ಬಹಳ ಹಿಂದಿನಿಂದ ಒಂದು ವಿಶೇಷ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಅದೇನೆಂದರೆ, ಮದುವೆಯಾಗಿ ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಿ ಉಣಬಡಿಸುವುದು. ಆಂಧ್ರದ ಗೋದಾವರಿ ಜಿಲ್ಲೆಯಲ್ಲಿ ಇಂತಹ ಆಚರಣೆಗಳು ಹೆಚ್ಚಾಗಿ ಕಂಡುಬರುತ್ತವೆ. ಇದೀಗ ಕಾಕಿನಾಡದಲ್ಲಿ ಮನೆಗೆ ಬಂದ ಹೊಸ ಅಳಿಯನಿಗೆ ಅತ್ತೆ 100 ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸಿದ್ದಾರೆ. ಇದಕ್ಕೆ …
Read More »
Laxmi News 24×7