Breaking News

ರಾಜ್ಯ

BJP ಅವಧಿಯಲ್ಲಿನ 40% ಕಮಿಷನ್ ಆರೋಪ: 20 ಸಾವಿರ ಪುಟದ ವರದಿ

ಬೆಂಗಳೂರು, (ಮಾರ್ಚ್​ 13): ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಪ್ರಮುಖ ಕಾಮಗಾರಿ ನಡೆಸುವ ಐದು ಇಲಾಖೆಗಳಲ್ಲಿ 40 ಪರ್ಸೆಂಟ್‌ ಭ್ರಷ್ಟಾಚಾರ(40 percent commission )ನಡೆಯುತ್ತಿದೆ ಎಂಬ ರಾಜ್ಯ ಗುತ್ತಿಗೆದಾರರ ಸಂಘದ ಆರೋಪ ಕುರಿತ ತನಿಖೆಗೆ ರಚಿಸಲಾಗಿದ್ದ ನಿವೃತ್ತಿ ನ್ಯಾಯಮೂರ್ತಿ ಎಚ್.ಎನ್‌.ನಾಗಮೋಹನ್‌ ದಾಸ್‌ (Nagamohan Das) ನೇತೃತ್ವದ ವಿಚಾರಣಾ ಆಯೋಗವು 20,000 ಪುಟಗಳ ಬೃಹತ್‌ ತನಿಖಾ ವರದಿಯನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದೆ.  ಬಿಜೆಪಿ ಅವಧಿಯಲ್ಲಿನ ಕಾಮಗಾರಿಗಳ ಬಗ್ಗೆ ತನಿಖಾ ವರದಿಯನ್ನ ಸಲ್ಲಿಸಲಾಗಿದ್ದು, …

Read More »

ರಾಜ್ಯ ಸರ್ಕಾರ ದಿಂದ ರೇಶನ ಕಾರ್ಡ್ ಇದ್ದವರಿಗೆ ಪ್ರತಿಯೋಬ್ಬರಿಗೆ 15ಕೆಜಿ ಅಕ್ಕಿ ವಿತರಣೆ

ಬೆಳಗಾವಿ: ರಾಜ್ಯ ಸರ್ಕಾರ ಕೊಡುವ ಫೆಬ್ರು ವರಿ ಹಾಗೂ ಮಾರ್ಚ್ ತಿಂಗಳ ಅಕ್ಕಿಯ ಬಗ್ಗೆ ಪಡಿತರ ಚೀಟಿ ದಾರ ರಿಗೆ ಒಂದು ಮಾಹಿತಿ ಒದ ಗಿಸಲು ಬಯಸು ತ್ತೇವೆ ರಾಜ್ಯ ಸರ್ಕಾರ ಫೆಬ್ರುವರಿ ತಿಂಗಳ ಅಕ್ಕಿ ಕೆಜಿ ಹಾಗೂ ಮಾರ್ಚ್ ತಿಂಗಳ ಅಕ್ಕಿ 10 ಕೆಜಿ ಈರೀತಿ ರಾಜ್ಯ ದಲ್ಲಿರುವ ಎಲ್ಲ ಬಿಪಿಎಲ್ ಹಾಗೂ ಅಂತ್ಯೋ ದಯ ಕಾರ್ಡ್ ಇರುವವರಿಗೆ ವಿತರಣೆ ಮಾಡಲು ಸೂಚಿ ಸಿದೆ ರೇಷನ್ ಅಂಗಡಿ ಗಳಲ್ಲಿ …

Read More »

ದಕ್ಷಿಣ ಕನ್ನಡದಲ್ಲಿ ಆಲಿಕಲ್ಲು ಮಳೆ

ಬೆಳ್ತಂಗಡಿಯಲ್ಲಿ ಆಲಿಕಲ್ಲು ಮಳೆ: ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಬುಧವಾರ ರಾತ್ರಿ ಆಲಿಕಲ್ಲು ಮಳೆ ಸುರಿದಿದೆ. ಉಜಿರೆ, ಕಕ್ಕಿಂಜೆ, ಚಾರ್ಮಾಡಿ ಭಾಗದಲ್ಲಿ ಸುರಿದ ಮಳೆಯಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದಿದೆ. ವಿಮಾನಗಳು ಡೈವರ್ಟ್: ಭಾರೀ ಮಳೆಯ ಪರಿಣಾಮ ಮಂಗಳೂರಿನಲ್ಲಿ ಕಳೆದ ರಾತ್ರಿ ಇಳಿಯಬೇಕಿದ್ದ ಮೂರು ವಿಮಾನಗಳನ್ನು ಕೇರಳಕ್ಕೆ ಡೈವರ್ಟ್ ಮಾಡಲಾಗಿತ್ತು. ಹೈದರಾಬಾದ್​​ನ ಒಂದು ವಿಮಾನ ಮತ್ತು ಬೆಂಗಳೂರಿನ ಎರಡು ವಿಮಾನಗಳನ್ನು ಕೇರಳದ ಕಣ್ಣೂರಿಗೆ ಡೈವರ್ಟ್ ಮಾಡಲಾಯಿತು. ವಾತಾವರಣ ಸರಿಯಾದ ಬಳಿಕ ಮತ್ತೆ …

Read More »

ಹುಬ್ಬಳ್ಳಿಯಲ್ಲಿ ಹಣ ವಸೂಲಿ ಮಾಡಲು ಹೋಗಿ ಸಿಕ್ಕಿಬಿದ್ದ ಡುಪ್ಲಿಕೇಟ್ ಫುಡ್ ಆಫೀಸರ್

ಹುಬ್ಬಳ್ಳಿಯಲ್ಲಿ ಹಣ ವಸೂಲಿ ಮಾಡಲು ಹೋಗಿ ಸಿಕ್ಕಿಬಿದ್ದ ಡುಪ್ಲಿಕೇಟ್ ಫುಡ್ ಆಫೀಸರ್ ಹುಬ್ಬಳ್ಳಿಯಲ್ಲಿ ಜನರಲ್ ಸ್ಟೋರ್ ಹಣ ವಸೂಲಿ ಮಾಡುತ್ತಿದ್ದ ಡುಪ್ಲಿಕೇಟ್ ಫುಡ್ ಆಫೀಸರ್ ಅನ್ನು ಹಿಡಿದು ಅಂಗಡಿ ಮಾಲಿಕರು ತರತೆಗೆತೆಗೆದುಕೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹುಬ್ಬಳ್ಳಿ ವೀರಾಪೂರ ಓಣಿ ಜನರಲ್ ಸ್ಟೋರ್ ಅಂಗಡಿಯಲ್ಲಿ ವಸ್ತುಗಳ ಮೇಲೆ ದಿನಾಂಕ ,ಲೆಬಲ್ ಇರುವುದಿಲ್ಲ ಎಂದು ಬೆದರಿಕೆ ಹಾಕಿ ದಂಡ ಹಾಕುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಡುಪ್ಲಿಕೇಟ್ ಫುಡ್ …

Read More »

ದೂರದೃಷ್ಠಿಯಿಲ್ಲದ ಸಾಲದ ಬಜೆಟ್ ಎಂದು ಅರೋಪಿಸಿದ ಆರ್. ಅಶೋಕ… ಕೇಂದ್ರದ ಸಾಲವನ್ನು ಉಲ್ಲೇಖಿಸಿ ಭಂಡತನ ಬಿಡಿ ಎಂದ ಸಿಎಂ

ದೂರದೃಷ್ಠಿಯಿಲ್ಲದ ಸಾಲದ ಬಜೆಟ್ ಎಂದು ಅರೋಪಿಸಿದ ಆರ್. ಅಶೋಕ… ಕೇಂದ್ರದ ಸಾಲವನ್ನು ಉಲ್ಲೇಖಿಸಿ ಭಂಡತನ ಬಿಡಿ ಎಂದ ಸಿಎಂ ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಇಂದು ವಿಪಕ್ಷ ನಾಯಕ ಆರ್. ಅಶೋಕ ಅವರು ಸಿಎಂ ಸಿದ್ಧರಾಮಯ್ಯನವರು 1 ಲಕ್ಷ 16 ಸಾವಿರ ಕೋಟಿ ಸಾಲವನ್ನು ಮಾಡಿ ರಾಜ್ಯದ ಜನರ ಮೇಲೆ ಹೊರೆ ಮಾಡಿದ್ದಾರೆಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯನವರು ಕೇಂದ್ರ ಸರ್ಕಾರ ಮಾಡಿರುವ ಸಾಲವನ್ನು ಉಲ್ಲೇಖಿಸುತ್ತಿದ್ದಂತೆ ಸದನದಲ್ಲಿ ಸದ್ದು ಗದ್ದಲ ಉಂಟಾಯಿತು. …

Read More »

ಸಮುದ್ರದಲ್ಲಿ ಮೀನುಗಾರರಿಂದ ವಿನೂತನ ಪ್ರತಿಭಟನೆ

ಕಾರವಾರ: ಅಂಕೋಲಾದ ಕೇಣಿಯಲ್ಲಿ ಗ್ರೀನ್‌ಫೀಲ್ಡ್ ಬಂದರು ವಿರೋಧಿಸಿ ಸ್ಥಳೀಯ ಮೀನುಗಾರರ ಆಕ್ರೋಶ ಮತ್ತೆ ಜೋರಾಗಿದೆ. ಉದ್ದೇಶಿತ ಈ ವಾಣಿಜ್ಯ ಬಂದರನ್ನು ಕೈ ಬಿಡುವಂತೆ ಒತ್ತಾಯಿಸಿ ಅಂಕೋಲಾದ ಬೇಲೆಕೇರಿ ಕಡಲತೀರದಲ್ಲಿ ನೂರಾರು ಮೀನುಗಾರರು ಮಾನವ ಸರಪಳಿ ನಿರ್ಮಿಸಿ ಹಾಗೂ ಬೋಟ್‌ಗಳ ಮೂಲಕ ಸಮುದ್ರಕ್ಕೆ ತೆರಳಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕೇಣಿ ಹಾಗೂ ಭಾವಿಕೇರಿ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿರುವ ಕಾರಣ ತಾಲೂಕಿನ ಬೇಲೆಕೇರಿ ಕಡಲತೀರದಲ್ಲಿ ಮೀನುಗಾರಿಕೆ ಹಾಗೂ ಮೀನು ಮಾರಾಟ …

Read More »

ಪರಪ್ಪನ ಅಗ್ರಹಾರ ಜೈಲಿನಲ್ಲಿ ಡ್ರಗ್ಸ್ ಪತ್ತೆಗೆ ವಿಶೇಷ ಶ್ವಾನದಳ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಅವ್ಯಾಹತವಾಗಿ ಸರಬರಾಜು ಆಗುವ ಮಾದಕ ವಸ್ತುಗಳನ್ನು ಪತ್ತೆ ಹಚ್ಚಲು ಮೊದಲ ಬಾರಿಗೆ ವಿಶೇಷ ಶ್ವಾನದಳ ಸ್ಥಾಪಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ಜೈಲಿನಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುವುದು ಹೊಸದೇನಲ್ಲ.‌ ಒಂದಲ್ಲ ಒಂದು ರೀತಿ ನಿರಂತರ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಜೈಲು ವಾರ್ಡನ್​ಗಳು ನಿರಂತರ ತಪಾಸಣೆ ನಡೆಸಿದರೂ ಅನಿರೀಕ್ಷಿತವಾಗಿ ಡ್ರಗ್ಸ್ ಸರಬರಾಜು ಆಗುತ್ತಿದೆ. ಸಿಬ್ಬಂದಿಗಳ ವಿರುದ್ಧ ಕರ್ತವ್ಯಲೋಪದ ಬಗ್ಗೆ ದೂರುಗಳು ಬಂದಿದ್ದರಿಂದ ಬಿಗಿ ತಪಾಸಣೆ …

Read More »

ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಇದರ ಜೊತೆಗೆ, ಬಾಲ್ಯ ವಿವಾಹ ಪ್ರಕರಣಗಳು ಏರಿಕೆ ಕಾಣುತ್ತಿರುವ ಆತಂಕಕಾರಿ ವಿಚಾರವನ್ನು ರಾಜ್ಯ ಸರ್ಕಾರ ತಿಳಿಸಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಾದ ಮಕ್ಕಳ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾಹಿತಿ ಕೇಳಿದ್ದ ಬಿಜೆಪಿ ಶಾಸಕ ಚನ್ನಬಸಪ್ಪ ಅವರ ಪ್ರಶ್ನೆಗೆ ರಾಜ್ಯ ಸರ್ಕಾರ ಈ ಆತಂಕಕಾರಿ ಉತ್ತರ ನೀಡಿದೆ. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳ ಕಂಡಿರುವುದಾಗಿ …

Read More »

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆಯಲ್ಲಿ ಹಲವು ಬಾರಿ ಭಾಷಾಂತರ ವಿವಾದ, ಕೆಪಿಎಸ್‌ಸಿ ಅವ್ಯವಸ್ಥೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷಗಳ ನಾಯಕರ ಚರ್ಚೆಗೆ ವಿಧಾನಸಭೆ ಕಲಾಪದಲ್ಲಿ ಇಂದು ಉತ್ತರಿಸಿದರು.

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆಯಲ್ಲಿ ಹಲವು ಬಾರಿ ಭಾಷಾಂತರ ವಿವಾದ, ಕೆಪಿಎಸ್‌ಸಿ ಅವ್ಯವಸ್ಥೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷಗಳ ನಾಯಕರ ಚರ್ಚೆಗೆ ವಿಧಾನಸಭೆ ಕಲಾಪದಲ್ಲಿ ಇಂದು ಉತ್ತರಿಸಿದರು. ಭಾಷಾಂತರ ಅವಾಂತರಕ್ಕೆ ಕಾರಣರಾದ ಭಾಷಾಂತರಕಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮವಹಿಸಲಾಗುವುದು. ಕೆಪಿಎಸ್‌ಸಿ ಭಾಷಾಂತರಕಾರರನ್ನು ಕಪ್ಪುಪಟ್ಟಿಗೆ ಸೇರಿಸುವುದು ನಿಶ್ಚಿತ ಎಂದ ಸಿಎಂ, ಭಾಷಾಂತರ ತಪ್ಪು ಮಾಡಿದವರ ವಿರುದ್ಧ ಶಿಸ್ತುಕ್ರಮ, ಕ್ರಿಮಿನಲ್ ಆ್ಯಕ್ಷನ್ ಕೈಗೊಳ್ಳುವುದಾಗಿ ಮಹತ್ವದ ಘೋಷಣೆ ಮಾಡಿದರು. ಕೆಪಿಎಸ್‌ಸಿ ಹಗರಣದ ಬಗ್ಗೆ ವಿಧಾನಸಭೆಯಲ್ಲಿ ನಡೆದ …

Read More »

ಗ್ಯಾರಂಟಿ ಅನುಷ್ಠಾನ ಸಮಿತಿ ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸದಸ್ಯರು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ಬಳಿಕ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಗ್ಯಾರಂಟಿ ಅನುಷ್ಠಾನ ಸಮಿತಿ ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸದಸ್ಯರು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ಬಳಿಕ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಜನರ ತೆರಿಗೆ ಹಣ ನೀಡುತ್ತಿದೆ ಎಂದು ಆರೋಪಿಸಿ, ಬಿಜೆಪಿ-ಜೆಡಿಎಸ್ ಸದಸ್ಯರು ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಸದನದಲ್ಲಿ ಪ್ರತಿಭಟನೆ ಮುಂದುವರೆಸಿದ ದೋಸ್ತಿಗಳು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆಯೂ ಕಾಂಗ್ರೆಸ್ ಸರ್ಕಾರದ …

Read More »