ಬೆಂಗಳೂರು: ರಾಜರಾಜೇಶ್ವರಿ ಉಪ ಚುನಾವಣೆಯಲ್ಲಿ ಜೆಡಿಎಸ್ ಈ ಬಾರಿ ಹೀನಾಯವಾಗಿ ಸೋಲನುಭವಿಸಿದ್ದು, ಠೇವಣಿಯನ್ನು ಕಳೆದುಕೊಂಡಿದೆ. ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವಿನ ನಗೆ ಬೀರಿದ್ದು, ಕಾಂಗ್ರೆಸ್‍ನ ಕುಸುಮಾ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 10,251 ಮತಗಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ. ಕಳೆದ ಬಾರಿ ಜೆಡಿಎಸ್ 60 ಸಾವಿರ ಮತಗಳನ್ನು ಪಡೆದಿತ್ತು. ಆದರೆ ಈ ಬಾರಿ ಇದರ ಅರ್ಧದಷ್ಟು ಮತಗಳನ್ನು ಸಹ ಜೆಡಿಎಸ್ ಅಭ್ಯರ್ಥಿ ಪಡೆದಿಲ್ಲ. ಒಟ್ಟು …
Read More »ಹಗಲು ಮತ್ತು ರಾತ್ರಿ ವೇಳೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದಕಳ್ಳ
ಬೆಂಗಳೂರು, ನ.10- ಹಗಲು ಮತ್ತು ರಾತ್ರಿ ವೇಳೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಕೋಲಾರ ಮೂಲದ ವ್ಯಕ್ತಿಯನ್ನು ಉತ್ತರ ವಿಭಾಗದ ಆರ್‍ಟಿ ನಗರ ಠಾಣೆ ಪೊಲೀಸರು ಬಂಧಿಸಿ 14.1 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಕೋಲಾರದ ವೇಮಗಲ್, ನರಸಾಪುರದ ಸಂತೋಷ್ (36) ಬಂಧಿತ ಆರೋಪಿ. ಈತನಿಂದ 350.3 ಗ್ರಾಂ ತೂಕದ ಚಿನ್ನಾಭರಣ ಮತ್ತು ಎಲ್‍ಇಡಿ ಟಿವಿಯನ್ನು ವಶಪಡಿಸಿಕೊಂಡಿದ್ದಾರೆ. ಮುನೇಶ್ವರ ಬ್ಲಾಕ್‍ನಲ್ಲಿ ವಾಸವಾಗಿರುವ ಮುರಳಿಧರ್ ಎಂಬುವವರು ಲಾಕ್‍ಡೌನ್ …
Read More »ಕರ್ನಾಟಕ ವಿಧಾನಸಭೆಯ ಎಸ್ಟಿಮೇಟ್ ಕಮಿಟಿ (ಅಂದಾಜುಗಳ ಸಮಿತಿ) ಅಧ್ಯಕ್ಷರನ್ನಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರನ್ನು ನೇಮಕಮಾಡಲಾಗಿದೆ.
ಬೆಂಗಳೂರು – ಕರ್ನಾಟಕ ವಿಧಾನಸಭೆಯ ಎಸ್ಟಿಮೇಟ್ ಕಮಿಟಿ (ಅಂದಾಜುಗಳ ಸಮಿತಿ) ಅಧ್ಯಕ್ಷರನ್ನಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರನ್ನು ನೇಮಕಮಾಡಲಾಗಿದೆ. ಒಟ್ಟೂ 17 ಜನರ ಸಮಿತಿಯನ್ನು ನೇಮಕ ಮಾಡಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದಾರೆ. ಎಸ್.ಎ.ರವೀಂದ್ರನಾಥ, ದುರ್ಯೋಧನ ಐಹೊಳೆ, ವೀರಣ್ಣ ಚರಂತಿಮಠ, ಶಿವರಾಜ ಪಾಟೀಲ, ಹಾಲಪ್ಪ ಆಚಾರ, ಅಮೃತ ದೇಸಾಯಿ, ಮಹಾಂತೇಶ ದೊಡ್ಡಗೌಡರ್, ಸುನೀಲ ನಾಯ್ಕ, ಅಮರೇಗೌಡ ಬಯ್ಯಾಪುರ, ಶರಣ ಬಸಪ್ಪ ದರ್ಶನಾಪುರ, …
Read More »ಅಧಿಕಾರ, ಹಣದ ಹೊಳೆ ಹರಿಸಿ ಬಿಜೆಪಿ ಗೆದ್ದಿದೆ: ಸಿದ್ದರಾಮಯ್ಯ
ಬಾಗಲಕೋಟೆ: ರಾಜ್ಯದ ಶಿರಾ ಮತ್ತು ಆರ್.ಆರ್. ನಗರ ಎರಡೂ ಕಡೆ ಬಿಜೆಪಿ ಗೆದ್ದಿದೆ. ನಾವು ಎರಡು ಕಡೆ ಸೋತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಾಮಾನ್ಯ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಆರ್.ಆರ್.ನಗರದಲ್ಲಿ ಒಳ್ಳೆಯ ಸ್ಪರ್ಧೆ ನೀಡುತ್ತೇವೆ ಎಂದು ಕೊಂಡಿದ್ದೆವು. ಆದರೆ ಜನರ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ ಎಂದರು. ಸರಕಾರದಲ್ಲಿರುವವರು ಚುನಾವಣೆಯನ್ನು ನಿಷ್ಪಕ್ಷಪಾತವಾಗಿ, ಮುಕ್ತವಾಗಿ ನಡೆಸುವುದು …
Read More »ಚಿನ್ನ ಕಳವು ಮಾಡಿದವನೂ, ಅದನ್ನು ಖರೀದಿವನೂ, ಅರೆಸ್ಟ್….
ಬೆಳಗಾವಿ- ಖಾನಾಪೂರ ಪೋಲೀಸರು ವಿಶೇಷ ಕಾರ್ಯಾಚರಣೆಯ ಮೂಲಕ ಚಿನ್ನ ಕಳ್ಳತನ ಮಾಡಿದವನನ್ನು,ಜೊತೆಗೆ ಕಳವು ಮಾಡಿದ ಚಿನ್ನವನ್ನು ಖರೀಧಿ ಮಾಡಿದ ಜ್ಯುವಲರಿ ವ್ಯಾಪಾರಿ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಚಿನ್ನದ ಆಭರಣ ಕದ್ದು ಅದನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ ಅವನ ಬಳಿಯಿದ್ದ 26,5300 ಮೌಲ್ಯದ ಚಿನ್ನಾಭರಣಗಳು ವಶಪಡಿಸಿಕೊಂಡಿದ್ದಾರೆ ಕಳ್ಳತನ ಆರೋಪಿಗೆ ಸಹಾಯ ಮಾಡಿದ್ದ ಕಳುವಾದ ಚಿನ್ನವನ್ನು ಖರೀಧಿ ಮಾಡಿದ್ದ ಜ್ಯುವೆಲರಿ ಶಾಪ್ ಮಾಲೀಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಳಗಾವಿಯ ವಡಗಾಂವ ಗಲ್ಲಿಯ …
Read More »ಸೆಕ್ಸ್ ದಂಧೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸರು ದಾಳಿ
ಲಕ್ನೋ: ಸೆಕ್ಸ್ ದಂಧೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ 10 ಜನರನ್ನ ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಅಬ್ದುಲಪುರವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇಹಾತ್ ಗ್ರಾಮದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಸೋಮವಾರ ತಡರಾತ್ರಿ ಪೊಲೀಸರು ಗ್ರಾಮದಲ್ಲಿರುವ ಮನೆ ಮೇಲೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದರು. ಮನೆಯ ಐದು ಕೋಣೆಗಳಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ 10 ಜನರನ್ನು ಬಂಧಿಸಿದ್ದಾರೆ. ಇತ್ತ ದಾಳಿ ಬಳಿಕ ಸೆಕ್ಸ್ …
Read More »ಪೊಲೀಸರ ಕಿರುಕುಳದಿಂದ ನೊಂದ ಒಂದೇ ಕುಟುಂಬದ ನಾಲ್ವರು ಚಲಿಸುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ
ವಿಶಾಖಪಟ್ಟಣಂ: ಪೊಲೀಸರ ಕಿರುಕುಳದಿಂದ ನೊಂದ ಒಂದೇ ಕುಟುಂಬದ ನಾಲ್ವರು ಚಲಿಸುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ನ ಪನ್ಯಂ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ನವೆಂಬರ್ 3 ರಂದು ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಶರಣಾದ ಶೇಕ್ ಅಬ್ದುಲ್ ಸಲಾಮ್ (45), ಪತ್ನಿ ನೂರ್ಜಾನ್ (43) ಮಗ ದಾದಾ ಖಲಂದರ್ (9) ಹಾಗೂ ಮಗಳು ಸಲ್ಮಾ (14) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಪೆÇಲೀಸರು ತಮಗೆ …
Read More »ಆರ್‌ಆರ್‌ನಗರದಲ್ಲಿ ಹ್ಯಾಟ್ರಿಕ್ ಸಾಧನೆಗೈದ ಮುನಿರತ್ನ – ಅಧಿಕೃತ ಘೋಷಣೆಯೊಂದೇ ಬಾಕಿ
ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಎರಡು ಬಾರಿ ಕಾಂಗ್ರೆಸ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಮೂರನೇ ಬಾರಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ. 20ನೇ ಸುತ್ತು ಮುಕ್ತಾಯಗೊಂಡಿದ್ದು ಬಿಜೆಪಿಯ ಮುನಿರತ್ನ 1,03,139 ಕಾಂಗ್ರೆಸ್‌ನ ಕುಸುಮಾ 58,258 ಜೆಡಿಎಸ್ ಕೇಶವಮೂರ್ತಿ 8,794, ನೋಟಾಗೆ 1,878 ಮತ ಬಿದ್ದಿದೆ. ಮುನಿರತ್ನ 42,045 ಮತಗಳಿಂದ ಮುನ್ನಡೆಯಲ್ಲಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
Read More »ಮಂಗಳೂರು ವಿಮಾನ ನಿಲ್ದಾಣ ಅದಾನಿ ಗ್ರೂಪ್‍ಗೆ ಹಸ್ತಾಂತರ – ಕಾಂಗ್ರೆಸ್ ವಿರೋಧ
ಮಂಗಳೂರು: ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‍ಗೆ ಹಸ್ತಾಂತರ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಮಂಗಳೂರಿನ ಬಜಪೆ ಕೆಂಜಾರು ಬಳಿಯಲ್ಲಿರುವ ಪ್ರವೇಶ ದ್ವಾರದ ಎದುರು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ವಾರದ ಹಿಂದೆ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಗುತ್ತಿಗೆಯನ್ನು ಅದಾನಿ ಗ್ರೂಪ್‍ಗೆ ಹಸ್ತಾಂತರಿಸಲಾಗಿತ್ತು. ಅದೇ ದಿನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು …
Read More »ಆರ್‌ಆರ್ ನಗರದಲ್ಲಿ 3,249 ಮತಗಳಿಂದ ಮುನಿರತ್ನ ಮುನ್ನಡೆ, ಕುಸುಮಾಗೆ 2,915 ಮತಗಳು
ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯ ಮೊದಲ ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮುನಿರತ್ನಗೆ 6,164 ಮತಗಳು ಬಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 2,915 ಮತಗಳು ಬಿದ್ದಿವೆ. ಮುನಿರತ್ನ 3,249 ಮತಗಳ ಮುನ್ನಡೆಯಲ್ಲಿದ್ದಾರೆ. ಜೆಡಿಎಸ್ ಕೃಷ್ಣಮೂರ್ತಿಗೆ 136 ಮತಗಳು ಬಿದ್ದಿದೆ. ಆರ್‍ಆರ್ ನಗರದಲ್ಲಿ 4,62,201 ಮತದಾರರು ಇದ್ದು ಒಟ್ಟು 2,09,828 ಮತಗಳು ಚಲಾವಣೆ ಆಗಿತ್ತು. ಈ ಪೈಕಿ 412 ಅಂಚೆ ಮತಗಳು ಚಲಾವಣೆ ಆಗಿತ್ತು. ಶಿರಾದಲ್ಲಿ 2,15,694 ಮತದಾರರು ಇದ್ದು 1,77,645 …
Read More »
Laxmi News 24×7