Breaking News

ರಾಜ್ಯ

ಮಕ್ಕಳ ಎದುರೇ ಪತ್ನಿ, ಅತ್ತೆಯನ್ನು ಹತ್ಯೆ ಮಾಡಿದ ಭೂಪ

    ಗುವಾಹತಿ : ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಂದಿದ್ದಲ್ಲದೆ ಕೋಳಿ ಮಾಂಸ ಕಟ್ ಮಾಡುವ ಹಾಗೆ ಅವರಿಬ್ಬರನ್ನು ತುಂಡರಿಸಿದ್ದಾನೆ. ತ್ರಿಪುರಾದಧಲೈ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯ ಬಳಿಕ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಾವು ಆರೋಪಿಯನ್ನು ಬಂಧಿಸಿದ್ದೇವೆ. ಆತನಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದೇವೆ. ಆತನ ದೇಹದಲ್ಲಿ ವಿಷಾಂಶ ಪತ್ತೆಯಾಗಿದೆ. ಆತ ಅಪಾಯದಿಂದ ಪಾರಾಗಿದ್ದಾನೆ. ಆತನನ್ನು ವಿಚಾರಣೆಗೆ ಒಳಪಡಿಸಲು …

Read More »

ಹೈಕಮಾಂಡ್ ಗೆ ದೂರು ನೀಡಲು ಶಾಸಕ ರೇಣುಕಾಚಾರ್ಯ ದೆಹಲಿಗೆ ಪ್ರಯಾಣ

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಅಸಮಾಧಾಣ ಸ್ಪೋಟಗೊಂಡಿದ್ದು, ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹೈಕಮಾಂಡ್ ಗೆ ದೂರು ನೀಡಲು ಇಂದು ಶಾಸಕ ರೇಣುಕಾಚಾರ್ಯ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ 8.20 ರ ಸುಮಾರಿಗೆ ಶಾಸಕ ರೇಣುಕಾಚಾರ್ಯ ಅವರು ದೆಹಲಿಗೆ ಪ್ರಯಾಣ ಬೆಳಸಲಿದ್ದು, ಹೈಕಮಾಂಡ್ ಗೆ ದೂರು ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಎಂಎಲ್ ಸಿಗಳಿಗೆ ಸಚಿವ ಸ್ಥಾನ ನೀಡಿದ್ದಾರೆ. ಗೆದ್ದವರನ್ನು ಬಿಟ್ಟು ಸೋತವರನ್ನು ಮಂತ್ರಿ …

Read More »

ಬೇಟಿ ಬಚಾವೊ’, ‘ಮಿಷನ್ ಶಕ್ತಿ’ ಪೊಳ್ಳು ಘೋಷಣೆ: ಪ್ರಿಯಾಂಕಾ ಗಾಂಧಿ ವಾದ್ರಾ

ಹೊಸದಿಲ್ಲಿ, : ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರ ಮಹಿಳೆಯರ ಭದ್ರತೆ ಕುರಿತು ಪ್ರಚಾರ ನಡೆಸಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತದೆ. ಆದರೆ, ತಳ ಮಟ್ಟದಲ್ಲಿ ಈ ವಿಷಯದ ಬಗ್ಗೆ ನಿರ್ಲಕ್ಷ್ಯದ ಮನೋಭಾವ ಹೊಂದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಹಿಂದಿ ಪೋಸ್ಟ್‌ನಲ್ಲಿ ಪ್ರಿಯಾಂಕಾ ಗಾಂಧಿ, ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆದ ಅಪರಾಧದ ಕುರಿತ ಇತ್ತೀಚೆಗಿನ ವರದಿಯನ್ನು ಉಲ್ಲೇಖಿಸಿದ್ದಾರೆ. ”ಬೇಟಿ ಬಚಾವೊ” …

Read More »

‘ಅಂಬೇಡ್ಕರ್ ಅಭಿವೃದ್ಧಿ ಮಂಡಳಿ ಅಧ್ಯಕ್ಷ’ರಾಗಿ ‘ಹೆಚ್.ನಾಗೇಶ್’ಗೆ ನೇಮಕ

ಬೆಂಗಳೂರು : ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದಂತ ಸಚಿವ ಹೆಚ್.ನಾಗೇಶ್ ಸಿಎಂ ಸೂಚನೆಯ ಮೇರೆಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂತಹ ಹೆಚ್ ನಾಗೇಶ್ ಗೆ ಡಾ.ಅಂಬೇಡ್ಕರ್ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ನಾನ್ ಮಾಡಿದ್ದಾದ್ರೂ ಏನು..? ಯಾಕೆ ನನಗೆ ಮೋಸ ಮಾಡಿದ್ರೆ ಎಂಬುದಾಗಿ ಸಿಎಂ ಯಡಿಯೂರಪ್ಪ ಅವರ ಮುಂದೆಯೇ ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತ ಸಂದರ್ಭದಲ್ಲಿ …

Read More »

BIG NEWS : ‘ಸಿಎಂ ಯಡಿಯೂರಪ್ಪ’ ಸಂಪುಟಕ್ಕೆ ಮತ್ತಷ್ಟು ಬಲ : 7 ಶಾಸಕರು ‘ನೂತನ ಸಚಿವ’ರಾಗಿ ಸಂಪುಟಕ್ಕೆ ಸೇರ್ಪಡೆ

ಬೆಂಗಳೂರು : ಅಂತೂ ಇಂತೂ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೂತನ 7 ಶಾಸಕರು ಸಚಿವರಾಗುವ ಮೂಲಕ ಸೇರ್ಪಡೆಗೊಂಡಿದ್ದಾರೆ. ಸಿಎಂ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟಕ್ಕೆ 7 ಶಾಸಕರು ರಾಜಭವನದಲ್ಲಿ ನಡೆದಂತ ಸರಳ ಸಮಾರಂಭದಲ್ಲಿ ಅರವಿಂದ ಲಿಂಬಾವಳಿ, ಆರ್.ಶಂಕರ್, ಎಂಟಿಬಿ.ನಾಗರಾಜ್, ಅಂಗಾರ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೀಶ್ವರ್ ಹಾಗೂ ಉಮೇಶ್ ಕತ್ತಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೊದಲು ಆಗಮಿಸಿದಂತ ಶಾಸಕ ಉಮೇಶ್ ಕತ್ತಿಯವರು ಸಂಪುಟ ದರ್ಜೆಯ ಸಚಿವರಾಗಿ ದೇವರ ಹೆಸರಿನಲ್ಲಿ …

Read More »

ಯಡಿಯೂರಪ್ಪ ಕ್ಯಾಬಿನೆಟ್​ ಸೇರಿದ ಸಪ್ತ ಸಚಿವರು

ಬೆಂಗಳೂರು (ಜ. 13): ಬಿಎಸ್​ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಕಾರ್ಯಕ್ಕೆ ಕಡೆಗೂ ಅಂತ್ಯ ಸಿಕ್ಕಿದ್ದು, ರಾಜಭವನದಲ್ಲಿ ನಡೆಯುತ್ತಿರುವ ಸಂಪುಟ ವಿಸ್ತರಣೆ ಕಾರ್ಯದಲ್ಲಿ ಏಳು ಜನ ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ 3:50ಕ್ಕೆ ನೂತನ ಸಚಿವರ ಪದಗ್ರಹಣ ಕಾರ್ಯ ಆರಂಭವಾಗಿದ್ದು, ರಾಷ್ಟ್ರಗೀತೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೂತನ ಸಚಿವರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು. ಮೊದಲಿಗೆ ಸಂಪುಟ ದರ್ಜೆ ಸಚಿವರಾಗಿ ಉಮೇಶ್ ಕತ್ತಿ ಪ್ರಮಾಣವಚನ ಸ್ವೀಕರಿಸಿದ್ದರು. ಬಳಿಕ ಬೆಳಗಾವಿಯ ಹುಕ್ಕೇರಿ ಶಾಸಕ …

Read More »

ಸ್ಥಾನ ಪಡೆಯಲು ಅನ್ಯ ಮಾರ್ಗ ಅನುಸರಿಸದೆ ಪಕ್ಷಕ್ಕೆ ನಿಷ್ಠೆ ಮತ್ತು ವಿಚಾರಕ್ಕೆ ಬದ್ಧತೆ ಇರುವ ಕಾರ್ಯಕರ್ತರಿಗೆ ಇಂದಿನ ದಿನಮಾನಗಳಲ್ಲಿ ಸ್ಥಾನವಿಲ್ಲ: ಅಭಯ ಪಾಟೀಲ

ಬೆಳಗಾವಿ – ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಜ್ಯ ಬಿಜೆಪಿ ಸರಕಾರದ ನಡೆಯ ಬಗ್ಗೆ ಬೆಳಗಾವಿ ಶಾಸಕ ಅಭಯ ಪಾಟೀಲ ತೀವ್ರ ನೋವು ತೋಡಿಕೊಂಡಿದ್ದಾರೆ. ಜೊತೆಗೆ ಇವೆಲ್ಲ ತಾತ್ಕಾಲಿಕ ಎನ್ನುವ ಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವಿಚಾರಕ್ಕೆ ಬದ್ಧತೆ ಮತ್ತು ಪಕ್ಷಕ್ಕೆ ನಿಷ್ಠೆ ಇದು ದೌರ್ಭಲ್ಯವಲ್ಲ ಎನ್ನುವ ಎಚ್ಚರಿಕೆ ಸಂದೇಶವನ್ನೂ ಬಿಜೆಪಿಗೆ ಮತ್ತು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ. ತೀವ್ರ ನೋವು ತೋಡಿಕೊಂಡ ಶಾಸಕ ಅಭಯ ಪಾಟೀಲ …

Read More »

ಬ್ರಾ ವಿಚಾರಕ್ಕೆ ಜಗಳವಾಡಿದ ಪತ್ನಿಯಿಂದ ಡಿವೋರ್ಸ್​ಗೆ ಡಿಮ್ಯಾಂಡ್..!

ಸಣ್ಣ ಸಣ್ಣ ವಿಚಾರಕ್ಕೆ ಡಿವೋರ್ಸ್​ ತೆಗೆದುಕೊಂಡ ಅದೆಷ್ಟೂ ದಂಪತಿಯ ಕತೆಯನ್ನ ನಾವು ಕೇಳಿದ್ದೇವೆ. ಚೀನಾದಲ್ಲೂ ದಂಪತಿ ನಡುವೆ ಬ್ರಾ ವಿಚಾರಕ್ಕಾಗಿ ಶುರುವಾದ ಜಗಳ ಡಿವೋರ್ಸ್​ವರೆಗೆ ಹೋಗಿ ತಲುಪಿದೆ. ತನ್ನ ಪತಿ ಚಿಕ್ಕ ಸೈಜ್​ ಬ್ರಾ ತಂದಿದ್ದಕ್ಕೆ ಕೋಪಗೊಂಡ ಪತ್ನಿ ರಾದ್ದಾಂತ ಎಬ್ಬಿಸಿದ್ದು ಮಾತ್ರವಲ್ಲದೇ ವಿಚ್ಚೇದನ ಬೇಕೆಂದು ಪಟ್ಟು ಹಿಡಿದಿದ್ದಾಳೆ. ಈ ವಿಚಾರ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಚೀನಾದ ಗುಂಜಾವೋ ಪ್ರಾಂತ್ಯದ ನಿವಾಸಿಗಳಾದ ಲುವೋ ಹಾಗೂ ಯಾಂಗ್​ …

Read More »

ನಾನು ಇಲ್ಲಿ ತನಕ ಗೋ, ಹಂದಿ ಮಾಂಸ ತಿಂದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು : ನಾನು ಇಲ್ಲಿ ತನಕ ಗೋ, ಹಂದಿ ಮಾಂಸ ತಿಂದಿಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು, ಇದೇ ವೇಳೆ ಅವರು ಮಾತನಾಡಿ, ನಾನು ಇಲ್ಲಿ ತನಕ ಗೋ, ಹಂದಿ ಮಾಂಸ ತಿಂದಿಲ್ಲ ಒಂದು ವೇಳೇ ತಿನ್ನಬೇಕು ಅಂತ ಅನ್ನಿಸಿದರೇ ತಿನ್ನುವೇ, ಆಹಾರ ಪದ್ದತಿ ನನ್ನ ಹಕ್ಕು, ಅದನ್ನು ಯಾರು ಕೂಡ ಪ್ರಶ್ನೆ …

Read More »

ನಮ್ಮ ಟೀಂ ನಲ್ಲಿ ಇನ್ನೂ ಐವರಿಗೆ ಸಚಿವ ಸ್ಥಾನ ಸಿಗಬೇಕು.: ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ.

ಬೆಳಗಾವಿ: ನಮ್ಮ ಟೀಂ ನ ಇನ್ನೂ ಹಲವರಿಗೆ ಸಚಿವ ಸ್ಥಾನ ಸಿಗಬೇಕಿದೆ. ಮಾರ್ಚ್-ಏಪ್ರಿಲ್ ನಲ್ಲಿ ದೊಡ್ಡ ಮಟ್ಟದಲ್ಲಿ ಸಂಪುಟ ಪುನರಚನೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ. ಈಗ ಸಚಿವ ಸ್ಥಾನ ಕೈತಪ್ಪಿದವರಿಗೆ ಆಗ ಸ್ಥಾನ ಸಿಗುವ ವಿಶ್ವಾಸವಿದೆ ಎಂದೂ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಜಾರಕಿಹೊಳಿ, ಇಂದು 7 ಶಾಸಕರು ಸಚಿವರಾಗಿ ಪದಗ್ರಹಣ ಮಾಡಲಿದ್ದು, ಮಾರ್ಚ್-ಏಪ್ರಿಲ್ಲ್ ನಲ್ಲಿ ನಡೆಯಲಿರುವ ಸಂಪುಟ ಪುನಾರಚನೆಯಲ್ಲಿ ಇಂದು ಸಚಿವ ಸ್ಥಾನ …

Read More »