ಮುಂಬೈ: ಸಾಲ ವಸೂಲಾತಿ ಏಜೆಂಟ್ ಗಳು ಬಳಸುವ ಕಠಿಣ ಕ್ರಮಗಳ ವಿರುದ್ಧ ಆರ್.ಬಿ.ಐ. ಗವರ್ನರ್ ಎಚ್ಚರಿಕೆ ನೀಡಿದ್ದಾರೆ. ಕೆಲವು ಸಾಲದಾತರು ತಮ್ಮ ವಸೂಲಾತಿ ಏಜೆಂಟ್ ಗಳ ಮೇಲೆ ಸಾಕಷ್ಟು ದೂರು ನೀಡಿದ್ದಾರೆ. ಏಜೆಂಟರ ಮೇಲೆ ನಿಯಂತ್ರಣಗಳಿಲ್ಲದಿದ್ದರೆ ಕಿರುಕುಳ ನೀಡುತ್ತಾರೆ ಎನ್ನಲಾಗಿದ್ದು, ಇಂತಹ ಸಂದರ್ಭದಲ್ಲಿ ನಿಯಂತ್ರಿತ ಘಟಕಗಳು ಭಾಗಿಯಾಗಿರುವ ಪ್ರಕರಣಗಳಲ್ಲಿ ಆರ್.ಬಿ.ಐ. ಗಂಭೀರ ಕ್ರಮ ತೆಗೆದುಕೊಳ್ಳುತ್ತದೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಹೊತ್ತಲ್ಲದ ಹೊತ್ತಲ್ಲಿ ಕರೆ ಮಾಡುವುದು, ಅಸಭ್ಯ …
Read More »ಖಾನಾಪೂರ ತಾಲೂಕಿನ ಮದುವೆಯಾದ ಏಳೇ ದಿನಕ್ಕೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಳಗಾವಿ: ಮದುವೆಯಾದ ಏಳೇ ದಿನಕ್ಕೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಖಾನಾಪೂರ ತಾಲೂಕಿನ ಲಕ್ಕೇಬೈಲ್ ಗ್ರಾಮದಲ್ಲಿ ನಡೆದಿದೆ. ಖಾನಾಪೂರ ತಾಲೂಕಿನ ಲಕ್ಕೇಬೈಲ್ ಗ್ರಾಮದ ದೇಮಪ್ಪ ಅರ್ಜುನ್ ಸನದಿ (23) ಮೃತ ಯುವಕ. ಮೃತ ದೇಮಪ್ಪ ಕಳೆದ ವಾರವಷ್ಟೇ ತನ್ನ ಸೋದರತ್ತೆಯ ಮಗಳನ್ನು ಮದುವೆಯಾಗಿದ್ದನು. ತನ್ನ ಸಂಬಂಧಿಕರ ಮನೆಗೆ ಹೋಗಿ ರಾತ್ರಿ ಮನೆಗೆ ಮರಳಿದ್ದ ಬಳಿಕ ಮಧ್ಯರಾತ್ರಿ ಮಲಗುವ ಕೊಠಡಿಯಲ್ಲಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ …
Read More »ರಾತ್ರಿ 10 ರಿಂದ ಬೆಳಿಗ್ಗೆ 6 ತನಕ ಧಾರ್ಮಿಕ ಸ್ಥಳ, ಪಬ್,ರೆಸ್ಟೋರೆಂಟ್‌ಗಳಲ್ಲಿ ಧ್ವನಿವರ್ಧಕ ಬ್ಯಾನ್: ಹೈಕೋರ್ಟ್
ಬೆಂಗಳೂರು:ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಗೆ ಈ ಹಿಂದೆ ಹೊರಡಿಸಿದ್ದ ನಿಷೇಧವನ್ನು ಜಾರಿಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಧಾರ್ಮಿಕ ಸ್ಥಳಗಳು ಸೇರಿದಂತೆ ಎಲ್ಲಾ ಧ್ವನಿವರ್ಧಕಗಳ ಮೇಲೆ ನಿಷೇಧ ಹೇರಲಾಗಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರ ವಿಭಾಗೀಯ ಪೀಠವು ಧ್ವನಿವರ್ಧಕಗಳು, ಸಾರ್ವಜನಿಕ ವಿಳಾಸ ವ್ಯವಸ್ಥೆಗಳು ಮತ್ತು ಸಂಗೀತ …
Read More »ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಭ್ರಷ್ಟಾಚಾರ, ಗೋಣಿಚೀಲ ಗೋಲ್ಮಾಲ್!;
ಬೆಂಗಳೂರು ಹೆಸರಿಗೆ ಟೆಂಡರ್…! ಆದರೆ ಖರೀದಿಯೇ ಆಗಲ್ಲ. ರೈತರಿಗೆ ಹಣ ಪಾವತಿಯಾಗೋದು ಲೆಕ್ಕದಲ್ಲಷ್ಟೇ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಭ್ರಷ್ಟಾಚಾರದ ಪರಿಯಿದು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ರಾಗಿ, ಭತ್ತ ಮತ್ತು ಮೆಕ್ಕೆಜೋಳ ರೈತರಿಗೆ ಉಚಿತವಾಗಿ ಗೋಣಿಚೀಲ (ಗನ್ನಿ ಬ್ಯಾಗ್) ವಿತರಣೆ ಹೆಸರಿನಲ್ಲಿ ಅಕ್ರಮ ನಡೆದಿದೆ. ರೈತರಿಗೆ ಚೀಲವನ್ನೂ ಕೊಡದೆ, ಹಣವನ್ನೂ ಕೊಡದೆ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಕೋಟಿಗಟ್ಟಲೆ ದುಡ್ಡನ್ನು ರೈತರ ಹೆಸರೇಳಿಕೊಂಡು ನಿಗಮದ ಅಧಿಕಾರಿಗಳೇ ಜೇಬಿಗಿಳಿಸಿದ್ದಾರೆ. …
Read More »ಯಾರಾಗಲಿದ್ದಾರೆ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ?
ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳಲ್ಲಾ ಸೇರಿ ಮೀಟಿಂಗ್ ಮಾಡಿ ರಣತಂತ್ರ ರೂಪಿಸಿದ್ರೆ ಇತ್ತ ಆಡಳಿತ ರೂಢ ಬಿಜೆಪಿ ಈ ಬಾರಿ ಕೂಡ ನಮ್ಮ ಪಕ್ಷದವರೇ ರಾಷ್ಟ್ರಪತಿ ಆಗ್ಬೇಕು ಅಂತ ಪ್ರತಿತಂತ್ರ ಹೆಣೀತಿದೆ. ಬಿಜೆಪಿ ಅಭ್ಯರ್ಥಿಯಾಗಿ ಈಗಿರೋ ರಾಮನಾಥ್ ಕೋವಿಂದ್ ಅವರೇ ಮತ್ತೆ ಸ್ಪರ್ಧೆ ಮಾಡೋದು ಸದ್ಯ ದೂರದ ಮಾತು. ಹಾಗಾಗಿ ಹೊಸ ಅಭ್ಯರ್ಥಿ ಯಾರು ಅನ್ನೋದೆ ಈಗ ಬಿಜೆಪಿ ವಲಯದಲ್ಲಿ ಮೂಡಿರೋ ಕುತೂಹಲ. ಸದ್ಯಕ್ಕೆ ಪ್ರಧಾನಿ ಮೋದಿ G-7 ದೇಶಗಳ ಸಭೆಗೆ …
Read More »ನೂತನ D.H.O.ಆಗಿ ಡಾ.ಮಹೇಶ್ ಕೋಣಿ, ಸಂತಾನೋತ್ಪತ್ತಿ ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾಗಿ ಡಾ. ಚೇತನ್ ಕಂಕನವಾಡಿ ನೇಮಕ
ಬೆಳಗಾವಿಯ ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾಗಿ ಡಾ. ಮಹೇಶ ಕೋಣಿ ಹಾಗೂ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಧಿಕಾರಿಗಳಾಗಿ ಡಾ ಚೇತನ ಬಿ ಕಂಕಣವಾಡಿ ಅಧಿಕಾರ ಸ್ವಿಕರಿಸಿದರು ಹೌದು ಬೆಳಗಾವಿಯಲ್ಲಿ ದಿನಾಂಕ ಶುಕ್ರವಾರ ೧೭ ಜೂನ್ ರಂದು ನೂತನ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾಗಿ ಡಾ ಮಹೇಶ ಕೋಣಿ ಹಾಗೂ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಧಿಕಾರಿಗಳಾಗಿ ಡಾ ಚೇತನ ಬಿ ಕಂಕಣವಾಡಿ …
Read More »ಬಿಜೆಪಿ ಸೋಲಿಗೆ ಸಮರ್ಥನೀಯ ಉತ್ತರ ಕೊಟ್ಟ ಕಾರಜೋಳ
ಮೊನ್ನೆ ನಡೆದ ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಹೊಳೆಯನ್ನು ಹರಿಸಿ ಚುನಾವಣೆಯಲ್ಲಿ ವಿಜಯವನ್ನು ಸಾಧಿಸಿದೆ. ಇದು ನಿಜವಾದ ಫಲಿತಾಂಶವಲ್ಲ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೊಳ ಹೇಳಿದ್ದಾರೆ. ಬೆಳಗಾವಿಯಲ್ಲಿ ಪ್ರವಾಸೀ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ್ ಕಾಂಗ್ರೆಸ್ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಹಣದ ಹೊಳೆಯನ್ನು ಹರಿಸಿ ಗೆಲುವನ್ನು ಸಾಧಿಸಿದೆ. ಈ ವೇಳೆ ಹಣದ ಹೊಳೆಯನ್ನು ಹೇಗೆ ಹರಿಸಿತು …
Read More »ಕಾಶ್ಮೀರಿ ಪಂಡಿತರ ಕುರಿತು ವಿವಾದಾತ್ಮಕ ಹೇಳಿಕೆ : ʼನಟಿ ಸಾಯಿ ಪಲ್ಲವಿʼ ವಿರುದ್ಧ ಕೇಸ್ ದಾಖಲು
ನಟಿ ಸಾಯಿ ಪಲ್ಲವಿ ತನ್ನ ಇತ್ತೀಚಿನ ಚಿತ್ರ ವಿರಾಟ ಪರ್ವಂ ಚಿತ್ರ ಪ್ರಚಾರ ಮಾಡುವಾಗ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಶ್ಮೀರಿ ಪಂಡಿತರ ಪಲಾಯನವನ್ನ ಗೋರಕ್ಷಣೆಯೊಂದಿಗೆ ಹೋಲಿಸಿ, ವಿವಾದಕ್ಕೆ ಗುರಿಯಾಗಿದ್ದಾರೆ. ಸಧ್ಯ ಈ ನಟಿಮಣಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೌದು, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ನಟಿಯ ವಿರುದ್ಧ ಬಜರಂಗದಳ ವಿದ್ಯಾನಗರ ಜಿಲ್ಲಾ ಸಮಿಯೋಜಕ್ ದೂರು ನೀಡಿದ್ದು, ಹೈದರಾಬಾದ್ʼನಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಟ್ವೀಟ್ …
Read More »ಮ್ಮ ದಿವಾಳಿತನ ಮುಚ್ಚಿಡಲು ದೇಶದ ಭದ್ರತೆಯ ಜೊತೆ ಚೆಲ್ಲಾಟವಾಡಬೇಡಿ: ಅಗ್ನಿಪಥ್ ಯೋಜನೆಗೆ ವಿರೋಧ
ಬೆಂಗಳೂರು : ಅಗ್ನಿಪಥ್ ಯೋಜನೆ ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲ ಅಗ್ನಿಪಥ್ ಎಂಬ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ತಕ್ಷಣ ರದ್ದುಪಡಿಸಿ …
Read More »ಕೌಜಲಗಿಯಲ್ಲಿಂದು ಜರುಗಿದ ಗೋಕಾಕ್ ಹಾಗೂ ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ*
ಗೋಕಾಕ್- 2019ಮತ್ತು 2021ನೇ ಸಾಲಿನ ನೆರೆ ಸಂತ್ರಸ್ತರ ಕೆಲವು ಮನೆಗಳು ಬ್ಲಾಕ್ ಆಗುತ್ತಿದ್ದು, ಅಂತಹ ಮನೆಗಳ ಬ್ಲಾಕ್ ತೆರವುಗೊಳಿಸಿ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಶುಕ್ರವಾರ ಸಂಜೆ ತಾಲೂಕಿನ ಕೌಜಲಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಮೂಡಲಗಿ ಮತ್ತು ಗೋಕಾಕ್ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರ ಅಹವಾಲುಗಳಿಗೆ ಸ್ಪಂದಿಸಿ …
Read More »
Laxmi News 24×7