ಹೊಸದಿಲ್ಲಿ:ಆಟಗಾರರಲ್ಲಿ ಕೋವಿಡ್-19 ಸೋಂಕು ಕಂಡು ಬರುತ್ತಿರುವ ಕಾರಣದಿಂದ ಈ ಬಾರಿಯ ಐಪಿಎಎಲ್ ಕೂಟವನ್ನು ಅಮಾನತು ಮಾಡಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಬಗ್ಗೆ ಮಾಹಿತಿ ನೀಡಿದ್ದು, 2021ನೇ ಸಾಲಿನ ಐಪಿಎಲ್ ಕೂಟವನ್ನು ಸ್ಥಗಿತಗೊಳಿಸಲಾಗಿದೆ, ಮುಂದೆ ಮತ್ತೆ ಕೂಟ ಆಯೋಜಿಸಲು ಪ್ರಯತ್ನಿಸುತ್ತೇವೆ. ಆದರೆ ರದ್ದು ಮಾಡಿಲ್ಲ ಎಂದಿದ್ದಾರೆ. ಮೂವರು ಆಟಗಾರರು ಸೇರಿದಂತೆ ಒಟ್ಟು ಆರು ಮಂದಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವರುಣ್ …
Read More »ಮಂಗಳೂರಿನಲ್ಲಿ ಬೆಂಕಿ ಅವಘಡ, ಲಾಕ್ ಡೌನ್ ಹಿನ್ನಲೆ ತಪಿತಿ ಬಹುದೊಡ್ಡ ಅನಾಹುತ
ಮಂಗಳೂರು: ಕ್ಯಾಟಸೆಂತ್ ಕೆಮಿಕಲ್ ಫ್ಯಾಕ್ಟರಿ ಯಲ್ಲಿ ಬೆಂಕಿ ಅವಘಡವಾಗಿರುವ ಘಟನೆ ಕಂಡುಬಂದಿದೆ. ಮಂಗಳೂರ ನಗರ ಹೊರವಲಯದ ಸುರತ್ಕಲ್ ಸಮೀಪದ ಕಳವಾರ ನಲ್ಲಿರುವ ಕ್ಯಾಟಸೆಂತ್ ಫ್ಯಾಕ್ಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕ್ಯಾಟಸೆಂತ್ ಫ್ಯಾಕ್ಟರಿಯ ಎರಡನೇ ಮಹಡಿಯಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ಸುರತ್ಕಲ್,MRPL ಅಗ್ನಿಶಾಮಕ ದಳದಿಂದ ತಂಡ ಕಾರ್ಯಚರಣೆ ನಡೆಸುತ್ತಿದೆ. ಪ್ರಸ್ತುತದ ಲಾಕ್ ಡೌನ್ ಹಿನ್ನಲೆ ಕಾರ್ಮಿಕರೆಲ್ಲ ಇರದ ಕಾರಣ ಬಹುದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತಿದೆ.
Read More »ರೇವ್ ಪಾರ್ಟಿ ಆಯೋಜನೆ; ಮಹಿಳಾ ಹೆಡ್ ಕಾನ್ಸ್ ಟೇಬಲ್ ಅಮಾನತು
ಮಂಗಳೂರು: ಕೊರೊನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಜಾರಿಯಾಗುತ್ತಿದ್ದಂತೆಯೇ ಭರ್ಜರಿ ರೇವ್ ಪಾರ್ಟಿ ಆಯೋಜನೆ ಮಾಡಿ, ಪುತ್ರನ ಅಕ್ರಮಗಳಿಗೆ ಬೆಂಬಲ ನೀಡಿದ್ದ ಆರೋಪ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್, ಎಕನಾಮಿಕ್, ನಾರ್ಕೊಟಿಕ್ ಠಾಣೆ ಮಹಿಳಾ ಹೆಡ್ ಕಾನ್ಸ್ ಟೇಬಲ್ ಓರ್ವರನ್ನು ಅಮಾನತು ಮಾಡಲಾಗಿದೆ. ಶ್ರೀಲತಾ ಅಮಾನತಾದ ಮಹಿಳಾ ಕಾನ್ಸ್ ಟೇಬಲ್. ರಾಜ್ಯದ 8 ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಯಾಗುತ್ತಿದ್ದಂತೆ ಏಪ್ರಿಲ್ 10ರಂದು ಹಾಸನ ಜಿಲ್ಲೆಯ ಹೈದೂರು ಗ್ರಾಮದ ರೆಸಾರ್ಟ್ ನಲ್ಲಿ ರಾಜಾರೋಷವಾಗಿ ರೇವ್ …
Read More »ಕರ್ತವ್ಯದ ಸಮಯದಲ್ಲಿ ಕ್ರಿಮಿನಲ್ ಜತೆಗೆ ಸಿಸಿಬಿ ಪೊಲೀಸರ ಎಣ್ಣೆ ಪಾರ್ಟಿ
ಮಂಗಳೂರು : ಕರ್ತವ್ಯದ ವೇಳೆಯಲ್ಲಿ ಬಾರಿನಲ್ಲಿ ಕ್ರಿಮಿನಲ್ ಹಿನ್ನಲೆ ಹೊಂದಿರುವ ವ್ಯಕ್ತಿಯೊಬ್ಬನೊಂದಿಗೆ ಮಂಗಳೂರು ಸಿಸಿಬಿ ಪೊಲೀಸರು ಎಣ್ಣೆ ಪಾರ್ಟಿ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪುಲ್ ವೈರಲ್ ಆಗಿದೆ. ಮಂಗಳೂರು ಸಿಸಿಬಿ ವಿಭಾಗದ ಎಂಟು ಮಂದಿ ಪೊಲೀಸರು ಮಂಗಳೂರು ಹೊರವಲಯದ ಕುತ್ತಾರು ಬಳಿಯ ಬಾರ್ ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಬಾರ್ ಹೊರಗೆ ಸರಕಾರಿ ಟಿ.ಟಿ ವಾಹನ ನಿಲ್ಲಿಸಿ ಪಾರ್ಟಿ ನಡೆಸುತ್ತಿದ್ದರು ಎನ್ನಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ …
Read More »