Breaking News

ನವದೆಹಲಿ

ಸುಶಾಂತ್ ಸಿಂಗ್ ರಜಪೂತ್ ಅವರ ಜೊತೆ ಡೇಟಿಂಗ್ ಒಪ್ಪಿಕೊಂಡ ಸಾರಾ ಅಲಿ ಖಾನ್

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ನಟಿ ಸಾರಾ ಅಲಿ ಖಾನ್ ಅವರು ವಿಚಾರಣೆ ನಡೆಸಿದಾಗ ತಾವು ಅಲ್ಪಕಾಲ ಸುಶಾಂತ್ ರನ್ನು ಡೇಟಿಂಗ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸಾರಾ 2018 ರ ಚಿತ್ರ ‘ಕೇದಾರನಾಥ್’ ಚಿತ್ರದೊಂದಿಗೆ ಸುಶಾಂತ್ ಎದುರು ಪಾದಾರ್ಪಣೆ ಮಾಡಿದರು. ಅವರ ವದಂತಿಯ ಪ್ರಣಯದ ವರದಿಗಳು ಆಗ ಹೆಚ್ಚು ಕಾಣಸಿಕೊಂಡಿದ್ದವು ಆದರೆ ಬಹಿರಂಗವಾಗಿ ಇಬ್ಬರು ಇದನ್ನು ಒಪ್ಪಿರಲಿಲ್ಲ.ಜೂನ್ 14 …

Read More »

ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆದರಿಂದ ಲೋಕಲ್‌ ಲಾಕ್‌ಡೌನ್‌ ಮಾಡುವುದಾಗಿ ಘೋಷಿಸಿದ್ದಾರೆ.

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದನ್ನ ನಿಯಂತ್ರಣಕ್ಕೆ ತರುವುದು ಅತಿಮುಖ್ಯವಾಗಿದೆ. ಹಾಗಾಗಿ ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಂದು ಯೋಜನೆಯನ್ನ ಹಾಕಿಕೊಂಡಿದ್ದು, ಲೋಕಲ್‌ ಲಾಕ್‌ಡೌನ್‌ ಮಾಡುವುದಾಗಿ ಘೋಷಿಸಿದ್ದಾರೆ. ಹೌದು, ಕೊರೊನಾ ಸೋಂಕು ನಿಯಂತ್ರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯಿಂದ ಟ್ವೀಟ್‌ ಮಾಡಿದ್ದು, 1-2 ದಿನಗಳ ಲೋಕಲ್‌ ಲಾಕ್‌ಡೌನ್‌ ಮಾಡಲಾಗುವುದು ಎಂದಿದ್ದಾರೆ. ಈ ಲೋಕಲ್‌ ಲಾಕ್‌ಡೌನ್‌ ಕೊರೊನಾ ನಿಯಂತ್ರಿಸುವಲ್ಲಿ ಇದು ಎಷ್ಟು ಪ್ರಭಾವಶಾಲಿಯಾಗಲಿದೆ …

Read More »

ನರೇಂದ್ರ ಮೋದಿ ಸರ್ಕಾರ ರೈತರು, ಕೂಲಿ ಕಾರ್ಮಿಕರು, ಬಡವರ ಪರವಿಲ್ಲ. ಇದೊಂದು ಕಾರ್ಪೋರೆಟ್ ಕಂಪನಿಗಳ ಸರ್ಕಾರ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರು, ಕೂಲಿ ಕಾರ್ಮಿಕರು, ಬಡವರ ಪರವಿಲ್ಲ. ಇದೊಂದು ಕಾರ್ಪೋರೆಟ್ ಕಂಪನಿಗಳ ಸರ್ಕಾರ. ಮೋದಿ ದೇಶದಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ರಾಜ್ಯ ಸಭೆ ಸಂಸದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಇಂದು ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಕೃಷಿ ಮಸೂದೆ ವಿರೋಧಿಸಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆ ಬಳಿಕ ಮಾತನಾಡಿದ ಅವರು, ಮೋದಿ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಜಾರಗೆ ತಂದಿದೆ. ಇದು ರೈತರ …

Read More »

ಕುಮಾರಸ್ವಾಮಿ ವಿರುದ್ಧ ಕಟ್ಟು ಕಥೆಗಳನ್ನು ಕಟ್ಟಲಾಗುತ್ತಿದೆ – H.D.D. ಕಿಡಿ

ನವದೆಹಲಿ: ಕುಮಾರಸ್ವಾಮಿ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಅವರ ಪ್ರತಿ ಕೆಲಸದಲ್ಲೂ ತಪ್ಪು ಕಂಡು ಹಿಡದು ಟೀಕಿಸುವ ವ್ಯವಸ್ಥಿತ ಕೆಲಸವಾಗುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಆರೋಪಿಸಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಕಟ್ಟು ಕಥೆಗಳನ್ನು ಕಟ್ಟಲಾಗುತ್ತಿದೆ ಎಂದರು. ಹಿಂದೆ ಸರ್ಕಾರ ಇದ್ದ ಸಂದರ್ಭದಲ್ಲಿ ರೇವಣ್ಣ ವಿರುದ್ಧ ಅಪಪ್ರಚಾರ ಮಾಡಲಾಯಿತು. ರೇವಣ್ಣ ಅವರನ್ನು ಸೂಪರ್ ಸಿಎಂ ಎಂದು …

Read More »

ವಿರೋಧ ಪಕ್ಷದ  ಭಾರೀ ಪ್ರತಿಭಟನೆಯ ನಡುವೆ ಇಂದು ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅಂಗೀಕಾರವಾಗಿವೆ.

ಹೊಸದಿಲ್ಲಿ: ವಿರೋಧ ಪಕ್ಷದ  ಭಾರೀ ಪ್ರತಿಭಟನೆಯ ನಡುವೆ ಇಂದು ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅಂಗೀಕಾರವಾಗಿವೆ. ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ ಪ್ರೋತ್ಸಾಹ ಮತ್ತು ನೆರವು ಮಸೂದೆ-2020 ಹಾಗೂ  ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020 ರ ಒಪ್ಪಂದ ಮಸೂದೆ ಯನ್ನು ಮಂಡಿಸಲಾಗಿದೆ.  ಮಸೂದೆ ಚರ್ಚೆ ವೇಳೆ, ಟಿಎಂಸಿ ಸಂಸದರಾದ ಡೆರೆಕ್ ಓ ಬ್ರಯನ್ ಹಾಗೂ ಇತರೆ ಕೆಲ ಸದಸ್ಯರು ಸದನದ …

Read More »

ಜೆಡಿಎಸ್ ನವರು ಆರ್‍ಎಸ್‍ಎಸ್ ಜೊತೆ ಸೇರಿದ್ರು ಸೇರಿಕೊಳ್ಳಬಹುದು. ಅವರಿಗೆ ಅವಕಾಶವಷ್ಟೆ ಮುಖ್ಯ

ಬೆಂಗಳೂರು: ಜೆಡಿಎಸ್ ನವರು ಆರ್‍ಎಸ್‍ಎಸ್ ಜೊತೆ ಸೇರಿದ್ರು ಸೇರಿಕೊಳ್ಳಬಹುದು. ಅವರಿಗೆ ಅವಕಾಶವಷ್ಟೆ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ಜೆಡಿಎಸ್ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ, ಜೆಡಿಎಸ್ ಪಕ್ಷದ ದೇವೇಗೌಡರು ಹಾಗೂ ಕುಟುಂಬ ಒಂದು ಅವಕಾಶವಾದಿ. ಪಕ್ಷಸ್ವಾರ್ಥ ಇರುವವರು. ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುತ್ತಾರೆ. ಬಿಜೆಪಿ ಜೊತೆಯೂ …

Read More »

ವಿಧಾನ ಮಂಡಲ ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ಮಾಡಬೇಕು ಎಂಬುವುವನ್ನು ನನ್ನ ಬಯಕೆ:BSY

ಹೊಸದಿಲ್ಲಿ: ವಿಧಾನ ಮಂಡಲ ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ಮಾಡಬೇಕು ಎಂಬುವುವನ್ನು ನನ್ನ ಬಯಕೆ ಇದೆ. ವರಿಷ್ಠರ ಅನುಮತಿ ಮತ್ತು ಸಹಮತಿ ಸಿಕ್ಕಿದ ತಕ್ಷಣ ಸಂಪುಟ ವಿಸ್ತರಣೆ  ಮಾಡುವುದಾಗಿ  ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ಸಂಪುಟ ವಿಸ್ತರಣೆ ಕುರಿತಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆಗೆ ಶುಕ್ರವಾರ ಸಮಾಲೋಚನೆ ನಡೆಸಿದ್ದೇನೆ. ಅವರು ಪ್ರಧಾನಿ ಜೊತೆಗ ಚರ್ಚಿಸಿ ಸಂಜೆ ವೇಳೆಗೆ ಸೂಚನೆ ನೀಡುವ …

Read More »

Paytm ಆ್ಯಪ್​ವನ್ನು ಗೂಗಲ್​ ಪ್ಲೇ ಸ್ಟೋರ್​ನಿಂದ ತೆಗೆಯಲಾಗಿದೆ.

ದೆಹಲಿ: ತಾನು ವಿಧಿಸಿದ್ದ ನಿಯಮಗಳನ್ನು ಪದೇ ಪದೆ ಉಲ್ಲಂಘಿಸುತ್ತಿದ್ದ ಹಿನ್ನೆಲೆಯಲ್ಲಿ Paytm ಆ್ಯಪ್​ವನ್ನು ಗೂಗಲ್​ ಪ್ಲೇ ಸ್ಟೋರ್​ನಿಂದ ತೆಗೆಯಲಾಗಿದೆ. ಆದರೆ, ಉಳಿದ ಌಪ್​ಗಳಾದ Paytm ಫಾರ್​ ಬ್ಯುಸಿನೆಸ್​, Paytm ಮಾಲ್​ ಹಾಗೂ Paytm ಮನಿಗಳನ್ನು ಪ್ಲೇ ಸ್ಟೋರ್​ನಲ್ಲಿ ಹಾಗೇ ಉಳಿಸಿಕೊಳ್ಳಲಾಗಿದೆ. Paytmನ ಪ್ಲೇ ಸ್ಟೋರ್​ನಿಂದ ತೆಗೆಯಲು ಗೂಗಲ್​ ಸಂಸ್ಥೆಯು ಯಾವುದೇ ಅಧಿಕೃತ ಕಾರಣ ಅಥವಾ ಮಾಹಿತಿ ನೀಡಿಲ್ಲ. ಆದರೆ, ಕೆಲ ಮೂಲಗಳ ಪ್ರಕಾರ ಗೂಗಲ್​ ಸಂಸ್ಥೆಯ ಜೂಜು ವಿರೋಧಿ ನಿಯಮಾವಳಿಗಳನ್ನು …

Read More »

2000 ರು. ನೋಟು ಬಿಡುಗಡೆ ಕುರಿತು ಮೋದಿಗೆ ಒಲವಿರಲಿಲ್ಲ!

ನವದೆಹಲಿ : 2016 ನ.8ರಂದು ನೋಟ್‌ ಬ್ಯಾನ್‌ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, 1000 ರು. ಬದಲು 2000 ರು. ಹೊಸ ನೋಟನ್ನು ಬಿಡುಗಡೆ ಮಾಡುವ ಕುರಿತು ಒಲವನ್ನು ಹೊಂದಿರಲಿಲ್ಲ. ಆದರೆ, ಸಮಾಲೋಚನೆಯ ಬಳಿಕ ಈ ಸಲಹೆಯನ್ನು ಒಪ್ಪಿಕೊಂಡಿದ್ದರು ಎಂಬ ಸಂಗತಿಯನ್ನು ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಬಹಿರಂಗ ಪಡಿಸಿದ್ದಾರೆ. ಮೋದಿ ಅವರ ಜನ್ಮ ದಿನದ ನಿಮಿತ್ತ ಆಂಗ್ಲ ಪತ್ರಿಕೆಯೊಂದಕ್ಕೆ ಲೇಖನ ಬರೆದಿರುವ ಅವರು ನೋಟು ಅಪನಗದೀಕರಣದ …

Read More »

ಪ್ರಧಾನಿ ಮೋದಿ – ಸಿಎಂ ಯಡಿಯೂರಪ್ಪ ಭೇಟಿ: ಹೆಚ್ಚು ಪರಿಹಾರಕ್ಕೆ ಬೇಡಿಕೆ

ನವದೆಹಲಿ: ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವತ್ತು ಬೆಳಿಗ್ಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಪ್ರಧಾನಿಯವರ ನಿವಾಸದಲ್ಲಿ ಸಿಎಂ ಭೇಟಿಗೆ ಸಮಯ ನಿಗದಿಯಾಗಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಭಾರಿ ಹಾನಿಯಾಗಿದ್ದು, ಹೆಚ್ಚಿನ ಪರಿಹಾರ ಬಿಡುಗಡೆಗೆ ಬೇಡಿಕೆ ಇಡಲಿದ್ದಾರೆ. ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದ ಯಡಿಯೂರಪ್ಪ ಇಂದು ಬೆಳಗ್ಗೆ ಪ್ರಧಾನಿಯವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಪಕ್ಷ ಮತ್ತು ಸರ್ಕಾರ ಮೊದಲಾದ ವಿಚಾರಗಳ …

Read More »