ಹಾಸನ: ಕೊರೊನಾ ವೈರಸ್ ಜಿಲ್ಲೆಯ ಕಲ್ಯಾಣ ಮಂಟಪದ ಮಾಲೀಕರನ್ನು ಅತಂತ್ರ ಸ್ಥಿತಿಗೆ ದೂಡಿದೆ. ಹಾಸನ ನಗರದಲ್ಲೇ ಕಲ್ಯಾಣ ಮಂಟಪ ಮಾಲೀಕರಿಗೆ ಬರೋಬ್ಬರಿ 50 ರಿಂದ 60 ಕೋಟಿ ನಷ್ಟ ಆಗಿದೆ ಎಂದು ಹಾಸನ ಕಲ್ಯಾಣ ಮಂಟಪದ ಅಧ್ಯಕ್ಷ ದಿನೇಶ್ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಅವರು, ಕಲ್ಯಾಣ ಮಂಟಪ ಮಾಲೀಕರು ಈಗಾಗಲೇ ಮದುವೆಗೆ ಬುಕ್ ಮಾಡಿದವರ ಹಣ ವಾಪಸ್ ಕೊಡಲು ಅಸಾಹಯಕತೆ ತೋಡಿಕೊಂಡಿದ್ದಾರೆ. ಈ ಕುರಿತು ಹಾಸನ …
Read More »ಗ್ರೀನ್ ಝೋನ್‍ನಲ್ಲಿದ್ದ ಹಾಸನ ಜಿಲ್ಲೆಗೆ ಮುಂಬೈ ಕಂಟಕ!…….
ಹಾಸನ: ಗ್ರೀನ್ ಝೋನ್‍ನಲ್ಲಿದ್ದ ಹಾಸನ ಜಿಲ್ಲೆಗೆ ಮಹಾಮಾರಿ ಕೊರೊನಾ ಕಾಲಿಟ್ಟಿದೆ. ಮುಂಬೈಯಿಂದ ಹಾಸನಕ್ಕೆ ಆಗಮಿಸಿದ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ದೃಢ ಪಟ್ಟಿದೆ. ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಐವರಲ್ಲಿ ಕೊರೊನಾ ದೃಢಪಟ್ಟಿದೆ. ಚನ್ನರಾಯಪಟ್ಟಣ ತಾಲೂಕಿನ ಐವರು ಮೇ 10ರಂದು ಮುಂಬೈನಿಂದ ಬಂದಿದ್ದರು. ಅದರಲ್ಲಿ ಒಂದೇ ಕುಟುಂಬದ ನಾಲ್ವರು ಒಂದೇ ಕಾರಿನಲ್ಲಿ ಬಂದಿದ್ದರು. ಒಂದೇ ಫ್ಯಾಮಿಲಿಯ ಇಬ್ಬರು ಮಕ್ಕಳು, ಓರ್ವ ಮಹಿಳೆ, ಓರ್ವ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಕಾರ್ ಚಾಲಕನ …
Read More »ಲಾಕ್‍ಡೌನ್ ಎಫೆಕ್ಟ್ – ಸೈಕಲ್ ಹತ್ತಿ ಉತ್ತರಪ್ರದೇಶಕ್ಕೆ ಹೊರಟ ನಾಲ್ವರು ಯುವಕರು
ಹಾಸನ: ಕೊರೊನಾ ವೈರಸ್ ಹಾವಳಿಯಿಂದ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದಾಗಿ ತಮ್ಮ ರಾಜ್ಯಕ್ಕೆ ತೆರಳಲು ಸಾಧ್ಯವಾಗದೆ ನಾಲ್ವರು ಯುವಕರು ಹಾಸನದಲ್ಲೇ ಉಳಿದಿದ್ದರು. ಆದರೆ ಈಗ ಹೊಸದಾಗಿ ಸೈಕಲ್ ಖರೀದಿಸಿ ತಮ್ಮ ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ. ಉತ್ತರಪ್ರದೇಶದಿಂದ ಹಾಸನಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಲಾಕ್‍ಡೌನ್ ನಂತರ ವಾಪಸ್ ತಮ್ಮ ರಾಜ್ಯಕ್ಕೆ ತೆರಳಲಾಗದೇ ಇಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಲಾಕ್‍ಡೌನ್ ಸಡಿಲಿಕೆ ಮಾಡಿದ್ದರು ಕೂಡ ವಾಪಸ್ ತೆರಳಲು ಬಸ್ ಇಲ್ಲದಂತಾಗಿದೆ. ಇತ್ತ ಸ್ವಂತ ವಾಹನ …
Read More »2021ರ ಮಾರ್ಚ್ ವೇಳೆಗೆ ಎತ್ತಿನಹೊಳೆ ಕಾಮಗಾರಿ ಮೊದಲ ಹಂತಕ್ಕೆ ಚಾಲನೆ; ಸಚಿವ ರಮೇಶ್ ಜಾರಕಿಹೊಳಿ
ಶಾಸಕರಾದ ಎಚ್.ಕೆ. ಕುಮಾರಸ್ವಾಮಿ ಹಾಗೂ ಕೆ.ಎಂ. ಶಿವಲಿಂಗೇಗೌಡ ಅವರು ಯೋಜನೆ ಬಗ್ಗೆ ಸಚಿವರಿಗೆ ಮಾಹಿತಿ ನೀಡಿ ತುರ್ತಾಗಿ ಕಾಮಗಾರಿಗಳು ಪೂರ್ಣವಾಗಬೇಕು. ಭೂಮಿ ಕಳೆದುಕೊಂಡವರಿಗೆ ತ್ವರಿತವಾಗಿ ಪರಿಹಾರ ವಿತರಣೆಯಾಗಬೇಕು ಹಾಗೂ ಮೊದಲ ಹಂತದ ಯೋಜನೆ ಆದಷ್ಟು ಬೇಗ ಮುಗಿಯಬೇಕು ಎಂದು ಮನವಿ ಮಾಡಿದರು. ಹಾಸನ: ಜಲ ಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳೆ ಅವರು ಇಂದು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಎತ್ತಿನ ಹೊಳೆ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿದರು. ಸಕಲೇಶಪುರ ತಾಲ್ಲೂಕಿನ …
Read More »ನಮಗೆ ಕೊರೊನ ಬಂದುಬಿಡುತ್ತೆ ಎಂಬ ರೀತಿಯ ಭೀತಿ ಸಚಿವರಲ್ಲಿದೆ:ಗೋಪಾಲಸ್ವಾಮಿ ವ್ಯಂಗ್
ಹಾಸನ: ಗ್ರೀನ್‍ಝೋನ್‍ನಲ್ಲಿರುವ ಹಾಸನ ಜಿಲ್ಲೆಗೆ ಹೊಸ ಸವಾಲು ಎದುರಾಗಿದೆ. ಮುಂಬೈನಿಂದ ಚನ್ನರಾಯಪಟ್ಟಣಕ್ಕೆ ಮೂರು ಸಾವಿರ ಜನ ಆಗಮಿಸಲು ಕಾಯುತ್ತಿರುವ ಬಗ್ಗೆ ಎಂಎಲ್‍ಸಿ ಗೋಪಾಲಸ್ವಾಮಿ ಮಾಹಿತಿ ನೀಡಿದ್ದು, ಅವರೆಲ್ಲರನ್ನು ಸಮರ್ಪಕವಾಗಿ ಕ್ವಾರಂಟೈನ್ ಮಾಡುವ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಮುಂಬೈನಿಂದ ಆಗಮಿಸಿದ್ದ ಮಂಡ್ಯ ಜಿಲ್ಲೆ, ನಾಗಮಂಗಲ ಮೂಲದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಆತ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ 5 ಗ್ರಾಮಗಳಿಗೆ ಭೇಟಿ ನೀಡಿ ಸ್ನೇಹಿತರು, ಸಂಬಂಧಿಕರನ್ನು ಭೇಟಿ …
Read More »ವಾರದಲ್ಲಿ 3 ದಿನ ಮಾತ್ರ ಮದ್ಯ ಖರೀದಿ – ಹಾಸನ ಡಿಸಿ ಸ್ಪಷ್ಟನೆ……….
ಹಾಸನ: ಜಿಲ್ಲೆ ಗ್ರೀನ್‍ಝೋನ್‍ಗೆ ಸೇರಿದರೂ ಕೂಡ ವಾರದಲ್ಲಿ ಮೂರು ದಿನ ಮಾತ್ರ ಮದ್ಯ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಎಂದಿನಂತೆ ಲಾಕ್‍ಡೌನ್ ಮೇ 17ರವರೆಗೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾತನಾಡಿರುವ ಜಿಲ್ಲಾಧಿಕಾರಿ ಆರ್.ಗಿರೀಶ್, ಮಂಗಳವಾರ, ಗುರುವಾರ, ಶನಿವಾರ ಮಾತ್ರ ಹಾಸನದಲ್ಲಿ ಮದ್ಯ, ದಿನಸಿ ವಸ್ತು ಸೇರಿದಂತೆ ಇತರೆ ವಸ್ತು ಕೊಳ್ಳಲು ಅಂಗಡಿಗಳನ್ನು ತೆರೆಯಬಹುದು. ಉಳಿದ ದಿನಗಳು ಎಂದಿನಂತೆ ಲಾಕ್‍ಡೌನ್ ಮುಂದುವರಿಯಲಿದೆ. ಮೇ …
Read More »ಕೋವಿಡ್ ಇರಬೇಕು ಇಲ್ಲ ನಾವಿರಬೇಕು. ಏಕೆಂದರೆ ಕೋವಿಡ್ ನಮ್ಮನ್ನು ಬಿಟ್ಟು ಅಷ್ಟು ಬೇಗ ಹೋಗಲ್ಲ: ಶ್ರೀರಾಮುಲು
ಹಾಸನ: ಕೋವಿಡ್ ಇರಬೇಕು ಇಲ್ಲ ನಾವಿರಬೇಕು. ಏಕೆಂದರೆ ಕೋವಿಡ್ ನಮ್ಮನ್ನು ಬಿಟ್ಟು ಅಷ್ಟು ಬೇಗ ಹೋಗಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ. ಜನರ ಜೊತೆಗೆ ಸರ್ಕಾರ ಕೆಲಸ ಮಾಡುತ್ತಿದೆ. ಇಷ್ಟು ದಿನ ನಾವು ತಾಳ್ಮೆಯಿಂದ ಇದ್ದೇವೆ. ಮುಂದೆಯೂ ಯಾರು ತಾಳ್ಮೆ ಕಳೆದುಕೊಳ್ಳಬೇಡಿ. ಕೋವಿಡ್ ನಮ್ಮನ್ನು ಅಷ್ಟು ಬೇಗ ಬಿಟ್ಟು ಹೋಗಲ್ಲ. ನಾವು ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಶ್ರೀರಾಮುಲು ಹೇಳಿದರು. ಕೊರಾನಾ ವಾರಿಯರ್ಸ್ ವಿರುದ್ಧ ಹಲ್ಲೆ …
Read More »ಬಾರ್ ಶೆಟರ್ ತೆಗೆದು ಸಾವಿರಾರು ಬೆಲೆಯ ಮದ್ಯ ಕದ್ದ ಕಳ್ಳರು..! ………
ಹಾಸನ; ನಗರದ ಹೊರವಲಯದ ಕಸ್ತೂರ ಹಳ್ಳಿ ಕ್ರಾಸ್ ಬಳಿಯ ಬೂವನಹಳ್ಳಿ ರಸ್ತೆಯಲ್ಲಿರುವ ಧನಲಕ್ಷ್ಮಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಮದ್ಯದ ಬಾಟಲಿಗಳ ಕಳ್ಳತನವಾಗಿದೆ. ನಗರದ ಹೊರ ವಲಯದಲ್ಲಿ ಮದ್ಯದ ಅಂಗಡಿ ಇರುವುದರಿಂದ ಕಳ್ಳರು ಸುಲಭವಾಗಿ ಅಂಗಡಿಯ ಶೆಟರ್ ತೆರೆದು ದಾಸ್ತಾನು ಮಾಡಿದ್ದ ಸಾವಿರಾರು ರೂ ಮದ್ಯವನ್ನು ಕದ್ದೊಯ್ದಿದ್ದಾರೆ. ನಗರದ ಬಹುತೇಕ ಮದ್ಯದಂಗಡಿಗಳ ಕಳ್ಳತನ ಮರುಕಳಿಸುತ್ತಿದ್ದು ಮದ್ಯವ್ಯಸನಿಗಳ ಸಹನೆಯ ಕಟ್ಟೆ ಒಡೆದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸ್ಥಗಿತಗೊಂಡಿರುವ ಕಾರಣ …
Read More »ಅರಸೀಕೆರೆ ನಗರಸಭೆ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಟಿಕ್ ಟಾಕ್ ನಲ್ಲಿ ತೊಡಗಿದ್ದು ಸರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರೆ.
ಹಾಸನ; ಕರೋನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ,ಜಿಲ್ಲಾಡಳಿತ ಕರೋನಾ ಭೀತಿ ತಪ್ಪಿಸಲು ಬಾರೀ ಹರಸಾಹಸ ಪಡುತ್ತಿದೆ ಆದರೆ….!! ಅರಸೀಕೆರೆ ನಗರಸಭೆ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಟಿಕ್ ಟಾಕ್ ನಲ್ಲಿ ತೊಡಗಿದ್ದು ಸರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರೆ. ಹೌದು ..ಜಗತ್ತು ಕೊರೋನ ಮಹಾಮಾರಿಗೆ ತತ್ತರಿಸಿದೆ ಅಲ್ಲದೆ ಜನ ಮನೆಯಿಂದ ಹೊರಬರಬಾರದು ಎಂದು ಲಾಕ್ ಡೌನ್ ಮಾಡಲಾಗಿದೆ ಸಾಮಾಜಿಕ ಅಂತರ ಪಾಲಿಸಿ ಎಂದು ಸ್ವತಃ ನಗರಸಭೆ ಪುರಸಭೆ ಆಟೋಗಳ ಮೂಲಕ ಪ್ರಚಾರದ …
Read More »ಮಾಸ್ಕ್ ಇಲ್ಲದೆ ಓಡಾಡುವವರಿಗೆ ಬಸ್ಕಿ ಹೊಡೆಯುವ ಶಿಕ್ಷೆ…
ಹಾಸನ: ಹಾಸನದಲ್ಲಿ ಈ ವರೆಗೆ ಯಾವುದೇ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಗ್ರೀನ್ ಝೋನ್‍ಗೆ ಒಳಪಟ್ಟಿದೆ. ಹೀಗಾಗಿ ಲಾಕ್‍ಡೌನ್ ನಿಯಮಗಳನ್ನು ಕೊಂಚ ಸಡಿಲಿಕೆ ಮಾಡಿದ್ದು, ಜನ ಮಾಸ್ಕ್ ಇಲ್ಲದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಗ್ರೀನ್‍ಝೋನ್‍ನಲ್ಲಿ ನಿಯಮ ಸಡಿಲಿಕೆ ಮಾಡಿದ ಬೆನ್ನಲ್ಲೇ ಜನ ಬೇಕಾಬಿಟ್ಟಿಯಾಗಿ ಬೀದಿಗಿಳಿಯುತ್ತಿದ್ದು, ಕೆಲವರು ಏನೂ ಕೆಲಸವಿಲ್ಲದಿದ್ದರೂ ರಸ್ತೆಗಿಳಿಯುತ್ತಿದ್ದಾರೆ. ಅಲ್ಲದೆ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದಾರೆ. ಇದನ್ನು ಮನಗಂಡ ಪೊಲೀಸರು ಶಿಕ್ಷೆ ನೀಡಲು ಮುಂದಾಗಿದ್ದು, ಅನಗತ್ಯವಾಗಿ ಓಡಾಡುವವರಿಗೆ ಹಾಗೂ ಮಾಸ್ಕ್ ಇಲ್ಲದೆ ರಸ್ತೆಗಿಳಿಯುವವರಿಗೆ …
Read More »