Breaking News

ಶಿವಮೊಗ್ಗ

Districts ಕೃಷ್ಣನ ತೊಟ್ಟಿಲು ತೂಗಿ, ಭಜನೆ ಮಾಡಿದ ಈಶ್ವರಪ್ಪ…

ಶಿವಮೊಗ್ಗ : ಕೃಷ್ಣ ಜನ್ಮಾಷ್ಟಮಿ ದಿನವಾದ ಇಂದು ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದ ಇಸ್ಕಾನ್ ಮಂದಿರದಲ್ಲಿ ಕೃಷ್ಣನ ತೊಟ್ಟಿಲು ತೂಗಿ ಭಜನೆ ಮಾಡಿ ಗಮನ ಸೆಳೆದಿದ್ದಾರೆ. ಗೋವಿಂದ ಗುರುಹರಿ ಗೋಪಾಲು ಬೋಲೊ ಎಂದು ಭಜನೆ ಮಾಡುವ ಮೂಲಕ ಕೃಷ್ಣನ ನಾಮಸ್ಮರಣೆ ಮಾಡಿದ್ದಾರೆ. ಶಿವಮೊಗ್ಗ ತಾಲೂಕಿನ ಬಿದರೆಯ ಇಸ್ಕಾನ್ ಮಂದಿರದಲ್ಲಿ ಇಂದು ನಡೆದ ಕೃಷ್ಣನ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಕುಟುಂಬಸ್ಥರೊಂದಿಗೆ ಭಾಗಿಯಾದ ಸಚಿವರು, ಕೃಷ್ಣನ ತೊಟ್ಟಿಲು ತೂಗುವ ಮೂಲಕ ತಮ್ಮ ಭಕ್ತಿಯನ್ನು ಕೃಷ್ಣನಿಗೆ ಸಮರ್ಪಿಸಿದ್ದಾರೆ. …

Read More »

ನನ್ನ ಹೇಳಿಕೆಗೆ ನಾನು ಬದ್ಧ. ನನ್ನ ಇಡೀ ಜೀವನವನ್ನು ಜೈಲಿನಲ್ಲೇ ಕಳೆಯಲು ಸಿದ್ಧ

ಶಿವಮೊಗ್ಗ: ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳ ಜಾಗದಲ್ಲಿ ದೇವಸ್ಥಾನಗಳನ್ನು ನಿರ್ಮಿಸಬೇಕು ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಈಶ್ವರಪ್ಪನವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿರುವ ಈ ಈಶ್ವರಪ್ಪ, ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನನ್ನ ಇಡೀ ಜೀವನವನ್ನು ಬೇಕಾದರೂ ಜೈಲಿನಲ್ಲೇ …

Read More »

ನೆಚ್ಚಿನ ನಟನನ್ನು ನೋಡಿದ ಖುಷಿಯಲ್ಲಿ ಬಂಕ್ ಸಿಬ್ಬಂದಿ ಪೆಟ್ರೋಲ್ ಬದಲಿಗೆ ಡೀಸೆಲ್ ತುಂಬಿಸಿದ್ದಾರೆ.

ಶಿವಮೊಗ್ಗ: ನಟ ವಿಜಯ್ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲಿ ಡೀಸೆಲ್ ಹಾಕಿ ಬಂಕ್ ಸಿಬ್ಬಂದಿ ಎಡವಟು ಮಾಡಿದ್ದಾರೆ.ವಿಜಯ್ ರಾಘವೇಂದ್ರ ಕುಟುಂಬದ ಜೊತೆ ಶಿವಮೊಗ್ಗ ಪ್ರವಾಸಕ್ಕೆ ಬಂದಿದ್ದರು. ಜೋಗ ನೋಡಿಕೊಂಡು ನಗರದ ಬಂಕ್ ನಲ್ಲಿ ಕಾರ್ ಗೆ ಪೆಟ್ರೋಲ್ ತುಂಬಿಸುವಂತೆ ಹೇಳಿದ್ದಾರೆ. ನೆಚ್ಚಿನ ನಟನನ್ನು ನೋಡಿದ ಖುಷಿಯಲ್ಲಿ ಬಂಕ್ ಸಿಬ್ಬಂದಿ ಪೆಟ್ರೋಲ್ ಬದಲಿಗೆ ಡೀಸೆಲ್ ತುಂಬಿಸಿದ್ದಾರೆ. ತಪ್ಪಿನ ಅರಿವಾಗುತ್ತಲೇ ಎಚ್ಚೆತ್ತ ಸಿಬ್ಬಂದಿ ವಿಜಯ್ ರಾಘವೇಂದ್ರ ಅವರ ಬಳಿ ಕ್ಷಮೆ ಕೇಳಿದ್ದಾರೆ. ನಂತರ …

Read More »

ಭಾರೀ ಮಳೆಶರಾವತಿ ನದಿ ನಡುವೆ ಸಿಕ್ಕಿ ಬಿದ್ದಲಾಂಚ್……………..

ಶಿವಮೊಗ್ಗ:ಭಾರೀ ಮಳೆಯ ನಡುವೆ  ಹಸಿರುಮಕ್ಕಿ ಲಾಂಚ್ ಶರಾವತಿ ನದಿ ನಡುವೆ ಸಿಕ್ಕಿ ಬಿದ್ದಿದ್ದು ಲಾಂಚ್ ನಲ್ಲಿರುವ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸಮೀಪದ ಶರಾವತಿ ನದಿಯಲ್ಲಿ ಈ ಘಟನೆ ನಡೆದಿದೆ. ಲಾಂಚ್ ನಲ್ಲಿರುವ ಪ್ರಯಾಣಿಕರು ಅತಂತ್ರಗೊಂಡಿದ್ದು, ಮೊಬೈಲ್ ಸಂಪರ್ಕಕ್ಕೆ ಸಿಗದೇ ಲಾಂಚ್ ನಲ್ಲಿರುವ ಪ್ರಯಾಣಿಕರು ಪರದಾಡುವಂತಾಗಿದೆ. ಕ್ರೈನ್ ಮೂಲಕ ಲಾಂಚ್ ದಡಕ್ಕೆ ತರುವ ಪ್ರಯತ್ನಗಳು ನಡೆದಿವೆ.

Read More »

ಸಿಎಂ ತವರು ಶಿವಮೊಗ್ಗದಲ್ಲಿ ಮತ್ತೊಬ್ಬ ಶಾಸಕರಿಗೆ ಕೋವಿಡ್-19 ಪಾಸಿಟಿವ್

ಶಿವಮೊಗ್ಗ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮತ್ತೋರ್ವ ಶಾಸಕರಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರಿಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ರ್ಯಾಪಿಡ್ ಆಯಂಟಿಜೆನ್ ಟೆಸ್ಟ್ ನಲ್ಲಿ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಇಂದು ಆರ್.ಪ್ರಸನ್ನ ಕುಮಾರ್ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡರು. ಈ ವೇಳೆ ಸೋಂಕು ಪತ್ತೆಯಾಗಿದೆ. ಆದರೆ ರೋಗ …

Read More »

1.5 ಲಕ್ಷಕ್ಕೆ 15 ದಿನದ ಮಗು ಮಾರಾಟಕ್ಕೆ ಯತ್ನ-ನಾಲ್ವರ ಬಂಧನ

ಶಿವಮೊಗ್ಗ : ಹಣಕ್ಕಾಗಿ 15 ದಿನದ ಗಂಡು ಮಗುವನ್ನು ಮಾರಾಟ ಮಾಡಲು ಸಿದ್ಧಗೊಂಡಿದ್ದ ಜಾಲವೊಂದನ್ನು ಬಂಧಿಸುವಲ್ಲಿ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಟಿಪ್ಪುನಗರದ ನಿವಾಸದ ಮೇಲೆ ದಾಳಿ ನಡೆಸಿದ್ದರು. ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆ ತನ್ನ ನಿವಾಸದಲ್ಲಿ ಸ್ಥಳೀಯ ಮಹಿಳೆಯ ಸಹಾಯದೊಂದಿಗೆ 15 ದಿನಗಳ ಮಗುವೊಂದನ್ನು ಮಾರಾಟ ಮಾಡಲು ಸಿದ್ಧವಾಗಿದ್ದಳು. ಈ ವೇಳೆ ಮಹಿಳೆ ಮನೆ ಮೇಲೆ …

Read More »

12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ………….

ಶಿವಮೊಗ್ಗ: 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿರುವ ಘಟನೆ ಶಿವಮೊಗ್ಗ ಹೊಸನಗರ ಪಟ್ಟಣದಲ್ಲಿ ನಡೆದಿದೆ. ಹೊಸನಗರದ ಸಾಗರ ರಸ್ತೆಯ ರಮಾನಂದ್ ಎಂಬವರ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಹಾವು ಪ್ರತ್ಯಕ್ಷವಾಗಿದ್ದು, ಮನೆಯ ಹೊರಗಡೆ ಇದ್ದ ನಾಯಿ ಹಾವನ್ನು ಕಂಡು ಬೊಗಳಲು ಆರಂಭಿಸಿದೆ. ಅಲ್ಲದೇ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ಸಹ ಹಾವನ್ನು ಕಂಡು ಹಾವು ಹಾವು ಎಂದು ಕೂಗಿದ್ದಾರೆ. ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ವಿಷಯ …

Read More »

ವಿಡಿಯೋ: ನಡುರಸ್ತೆಯಲ್ಲೇ ಮಹಿಳೆಯನ್ನು ಏಕವಚನದಲ್ಲಿ ನಿಂದಿಸಿದ ಕುಮಾರ್ ಬಂಗಾರಪ್ಪ

ಶಿವಮೊಗ್ಗ: ಜಿಲ್ಲೆಯ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ನಡು ರಸ್ತೆಯಲ್ಲೇ ಮಹಿಳೆಯನ್ನು ಏಕ ವಚನದಲ್ಲಿ ನಿಂದಿಸಿ ಅವಾಜ್ ಹಾಕಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೊರಬ ಸಾಗರ ರಸ್ತೆಯಲ್ಲಿರುವ ಸಿಮೆಂಟ್ ಅಂಗಡಿಯೊಂದರ ಮುಂದೆ ರಸ್ತೆಗೆ ವಾಹನವನ್ನು ಅಡ್ಡಲಾಗಿ ನಿಲ್ಲಿಸಲಾಗಿತ್ತು. ಇದೇ ರಸ್ತೆಯಲ್ಲಿ ಶಾಸಕರು ಸಾಗುವಾಗ ರಸ್ತೆಗೆ ವಾಹನ ಅಡ್ಡಲಾಗಿ ನಿಲ್ಲಿಸಿದ್ದಕ್ಕೆ ತಮ್ಮ ಕಾರಿನಿಂದ ಇಳಿದು, ಮೊದಲು …

Read More »

ಶಿವಯೋಗಿ ಮಠದ ಪರಮ ಪೂಜ್ಯ ಹಾಲಸ್ವಾಮಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಶಿವಮೊಗ್ಗ : ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ರಾಂಪುರದ ಶಿವಯೋಗಿ ಮಠದ ಪರಮ ಪೂಜ್ಯ ಹಾಲಸ್ವಾಮಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಹಲವು ದಿನಗಳಿಂದ ತೀವ್ರ ತರ ಉಸಿರಾಟದ ತೊಂದರೆಯಿಂದ ನರಳುತ್ತಿದ್ದರು. ಭಕ್ತರು ಎಷ್ಟೇ ವಿನಂತಿಸಿದರೂ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು. ಕೊನೆಗೆ ಎರಡು ದಿನಗಳ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಕೋವಿಡ್‌ ಕೇಂದ್ರಕ್ಕೆ ಕರೆತರಲಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದಾವಣಗೆರೆ ಜಿಲ್ಲೆ ಸಾಸ್ವೆಹಳ್ಳಿ ಸಮೀಪದ ರಾಂಪುರ ಮಹಾಸಂಸ್ಥಾನದ ಹಾಲಸ್ವಾಮಿ ಅವರಿಗೆ …

Read More »

ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕಸಾವು

ಶಿವಮೊಗ್ಗ : ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕರೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತಪಟ್ಟ ಶಿಕ್ಷಕ ಭದ್ರಾವತಿಯ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಕುಮಾರ್ (48) ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕ ಕುಮಾರ್ ಶಿವಮೊಗ್ಗದ ಎನ್.ಇ.ಎಸ್ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಸಮಾಜ ವಿಜ್ಞಾನ ವಿಷಯದ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದರು. ಇಂದು ಮಧ್ಯಾಹ್ನದವರೆಗೂ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದ ಮೃತ ಶಿಕ್ಷಕ ಕುಮಾರ್ ಮಧ್ಯಾಹ್ನ ಊಟಕ್ಕೆ ತೆರಳಲು ಹೊರಡುತ್ತಿದ್ದರು. ಈ ವೇಳೆ …

Read More »