ಚಿಕ್ಕೋಡಿ: ತಾಯಿಯೊಬ್ಬರು ಎಂಟು ವರ್ಷಗಳ ಮಗಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದಲ್ಲಿ ನಡೆದಿದೆ. ಸವೀತಾ ಮದಗೋಂಡ ಬೆಳಗಲಿ (24) ಪವಿತ್ರಾ ಮದಗೋಂಡ ಬೆಳಗಲಿ (8) ಮೃತ ದುರ್ದೈವಿಗಳು. ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಲ್ಲಿದ್ದ ಶವಗಳನ್ನು ಸ್ಥಳೀಯರು ಹೊರತೆಗೆದಿದ್ದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ …
Read More »ಹಿಂದೂ ದೇವಸ್ಥಾನಗಳನ್ನು ಕೆಡವಿ ಅದರ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ: ಈಶ್ವರಪ್ಪ
ಚಿಕ್ಕೋಡಿ: ಹಿಂದೂ ದೇವಸ್ಥಾನಗಳನ್ನು ಕೆಡವಿ ಅದರ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಳಲಿ ಮಸೀದಿ ಒಂದೇ ಅಲ್ಲ. ದೇಶದಲ್ಲಿ 36 ಸಾವಿರ ದೇವಸ್ಥಾನಗಳನ್ನ ಪುಡಿ ಮಾಡಿ ಮಸೀದಿಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನಗಳ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ. ಅಂತಹ ಮಸೀದಿಗಳನ್ನು ಒಡೆದು 36 ಸಾವಿರ ದೇವಸ್ಥಾನವನ್ನು ಮತ್ತೆ …
Read More »ಕಲ್ಲಿನ ದೇವರ ವಿಗ್ರಹವನ್ನೂ ಬಿಡದ ಖದೀಮರು
ಚಿಕ್ಕೋಡಿ: ದೇವಸ್ಥಾನದ ಕಲ್ಲಿನ ದೇವರ ಮೂರ್ತಿಯನ್ನೇ ಕಳ್ಳರು ಕದ್ದೋಯ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಕೊಕಟನೂರ ಗ್ರಾಮದ ಐತಿಹಾಸಿಕ ದೇವಸ್ಥಾನವಾಗಿದ್ದ ಬಿರೇಶ್ವರ ದೇವಸ್ಥಾನದ ಕಲ್ಲಿನ ವಿಗ್ರಹವನ್ನು ಎತ್ತಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ದೇವರ ಮೂರ್ತಿಯನ್ನು ನಿಧಿಗಳ್ಳರು ಅಥವಾ ವಾಮಾಚಾರ ಮಾಡುವ ಖದೀಮರು ಕದ್ದಿರಬಹದು ಎನ್ನುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ ಪೂಜೆಗಾಗಿ ಅರ್ಚಕರು ಬಂದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು …
Read More »ಫಲ-ಪುಷ್ಪ ಕೃಷಿಯಿಂದ ಲಾಭ: ಪೇರಲ, ಮಾವು, ಕರಿಬೇವು ಬೆಳೆಯುವ ಜ್ಯೋತಿ
ಚಿಕ್ಕೋಡಿ: ತಾಲ್ಲೂಕಿನ ಕೇರೂರ ಗ್ರಾಮದ ಜ್ಯೋತಿ ಮಲ್ಲಪ್ಪ ಮಾಳಿ ಎನ್ನುವ ಪ್ರಯೋಗಶೀಲ ರೈತರೊಬ್ಬರು ಮಸಾರಿ ಭೂಮಿಯಲ್ಲಿ ಪೇರಲ ಮತ್ತು ಮಾವು ಜೊತೆ ಮಿಶ್ರ ಬೆಳೆಯಾಗಿ ಹೂವು ಹಾಗೂ ತರಕಾರಿ ಬೆಳೆದು ಆದಾಯ ಕಾಣುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಕಬ್ಬು ಬೆಳೆಯುತ್ತಿದ್ದ ಅವರು, ಅದರಿಂದ ಹೆಚ್ಚಿನ ಆದಾಯ ಸಿಗದಿದ್ದರಿಂದ ಪರ್ಯಾಯವಾಗಿ ಪೇರಲ ಮತ್ತು ಮಾವು ಬೆಳೆದಿದ್ದಾರೆ. 2 ವರ್ಷಗಳ ಹಿಂದೆ 300 ಪೇರಲ ಮತ್ತು 400 ಮಾವಿನ ಸಸಿಗಳನ್ನು ನೆಟ್ಟಿದ್ದಾರೆ. ನಾಟಿ ಮಾಡಿದ 9ನೇ ತಿಂಗಳಿನಲ್ಲಿಯೇ …
Read More »ದೇವಸ್ಥಾನ ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ಹಾಗೂ ಶಿಕ್ಷಕನೋರ್ವನ ಮಧ್ಯೆ ಗಲಾಟೆ
ಚಿಕ್ಕೋಡಿ: ದೇವಸ್ಥಾನ ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ಹಾಗೂ ಶಿಕ್ಷಕನೋರ್ವನ ಮಧ್ಯೆ ಗಲಾಟೆ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ. ಮುಗಳಖೋಡ ಪಟ್ಟಣದ ದುರ್ಗಾದೇವಿ ಸೇವಾಲಾಲ್ ದೇವಸ್ಥಾಕ್ಕೆ ಕಂಪೌಂಡ್ ನಿರ್ಮಾಣ ಮಾಡುವ ವಿಚಾರವಾಗಿ ಜಗಳ ನಡೆದಿದೆ. ಹಾರೂಗೇರಿ ಪಿಎಸ್‍ಐ ರಾಘವೇಂದ್ರ ಖೋತ್ ಹಾಗೂ ಶಿಕ್ಷಕ ಚಂದ್ರು ಲಮಾಣಿ ಮಧ್ಯೆ ವಾಗ್ವಾದ ನಡೆದಿದೆ. ದುರ್ಗಾದೇವಿ ಸೇವಾಲಾಲ್ ದೇವಸ್ಥಾಕ್ಕೆ ಕಂಪೌಂಡ್ ನಿರ್ಮಾಣ ಮಾಡಲು ಪುರಸಭೆ ಅಧಿಕಾರಿಗಳು ತಯಾರಿ …
Read More »ರಾಜ್ಯ ಸರ್ಕಾರಿ ನೌಕರ ಸಂಘ ಹುಕ್ಕೇರಿ ತಾಲೂಕು ಘಟಕದ ಅಧ್ಯಕ್ಷರಾಗಿ ಅವಿನಾಶ್ ಆಯ್ಕೆ
ಚಿಕ್ಕೋಡಿ(ಬೆಳಗಾವಿ): ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಹುಕ್ಕೇರಿ ತಾಲೂಕಾ ಘಟಕದ ನೂತನ ಅಧ್ಯಕ್ಷರಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆ ನೌಕರ ಅವಿನಾಶ್ ಹೊಳೆಪ್ಪಗೋಳ ಅವಿರೋಧ ಆಯ್ಕೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಜರಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸದ ಹಿನ್ನಲೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಜಗದೀಶ್ ಗೌಡ ಪಾಟೀಲ್ ಅವರ ಸಮ್ಮುಖದಲ್ಲಿ ಅವಿನಾಶ್ ಅವರನ್ನು …
Read More »ಎಂಟು ತಿಂಗಳ ಹಿಂದೆಯಷ್ಟೇಮದುವೆಯಾಗಿದ್ದ ಯುವಕ ಬರ್ಬರವಾಗಿ ಕೊಲೆ
ಚಿಕ್ಕೋಡಿ: ಎಂಟು ತಿಂಗಳ ಹಿಂದೆಯಷ್ಟೇಮದುವೆಯಾಗಿದ್ದ ಯುವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ- ಕಾತ್ರಾಳ ರಸ್ತೆ ನಡುವೆ ನಡೆದಿದೆ. ಚಿಂತಾಮಣಿ ಬಂಡಗರ (26) ಕೊಲೆಯಾದ ಯುವಕನಾಗಿದ್ದು, ತಡರಾತ್ರಿ 10 ಗಂಟೆ ಸುಮಾರಿಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಐನಾಪೂರದಿಂದ ಕಾತ್ರಾಳ ಕಡೆ ಬೈಕ್ ನಲ್ಲಿ ತೆರಳುವಾಗ ಹಿಂಬದಿಯಿಂದ ಲಾಂಗ್ ನಿಂದ ಹೊಡೆದು ಕೊಲೆ ಮಾಡಲಾಗಿದೆ. ಕೊಲೆಯಾದ ಯುವಕ ಚಿಂತಾಮಣಿ ಬಂಡಗರ, …
Read More »ಮನೆ ಕಳ್ಳತನಕ್ಕೆ ಬಂದ ಖತರ್ನಾಕ್ ಕಳ್ಳನೋರ್ವ ಬಾಲಕಿಯನ್ನೇ ಹೊತ್ತೊಯ್ದ
ಬೆಳಗಾವಿ: ಮನೆ ಕಳ್ಳತನಕ್ಕೆ ಬಂದ ಖತರ್ನಾಕ್ ಕಳ್ಳನೋರ್ವ ಬಾಲಕಿಯನ್ನೇ ಹೊತ್ತೊಯ್ದ ವಿಚಿತ್ರ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ. 1 ವರ್ಷದ ಬಾಲಕಿಯನ್ನು, ಅನಿಲ್ ರಾಮು ಲಂಬೂಗೋಳ (31) ಎಂಬ ಖದೀಮ ಭಾನುವಾರ ತಡರಾತ್ರಿ ಅಪಹರಿಸಿದ್ದಾನೆ. ಮನೆಯಲ್ಲಿ ಕಳ್ಳತನ ಮಾಡುವಾಗ ಮನೆಯವರ ಕಣ್ಣಿಗೆ ಬಿದ್ದಿದ್ದ ಅನಿಲ್ ರಾಮು, ಹೊರಗಡೆ ನಿಂತಿದ್ದ ಮಗುವನ್ನ ಅಪಹರಿಸಿದ್ದಾನೆ. ಈ ಬಗ್ಗೆ ಪೋಷಕರು ಅಂಕಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಪಹರಣ ಮಾಡಿದ ಬಾಲಕಿ ಮತ್ತು …
Read More »ಎಸ್ ಎಲ್ ಸಿ ಪೂರ್ವ ತಯಾರಿಯಲ್ಲಿ ಶೈಕ್ಷಣಿಕ ಜಿಲ್ಲಾ ಸಿದ್ದ
ಎಸ್ ಎಲ್ ಸಿ ಪೂರ್ವ ತಯಾರಿಯಲ್ಲಿ ಶೈಕ್ಷಣಿಕ ಜಿಲ್ಲಾ ಸಿದ್ದ ಈ ಬಾರಿ ಕೋವಿಡ್ ಲಕ್ಷಣಗಳು ಕಡೆಮೇ ಆದರೂ ಸಹ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ತಾಲ್ಲೂಕು ಆಡಳಿತ ಅಧಿಕಾರಿಗಳು ಸೂಕ್ಷ್ಮವಾಗಿ ಪರೀಕ್ಷೆ ಕೊಠಡಿಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಿದ್ದಾರೆ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣ ಅಧಿಕಾರಿ ಬಿ ಇ ಒ ಅವರು ನೇತೃತ್ವದಲ್ಲಿ ಪರೀಕ್ಷೆ ಬರೆಯುವ ಮಕ್ಕಳಿಗೆ ಯಾವುದೇ ರೀತಿಯ …
Read More »ಅಪ್ಪಾಸಾಬ್ ಮಕಾನಿ ಎಂಬುವರ ಮೇಲೆ ಹೆಸ್ಕಾಂ ಎಇಇ ಹಾಗೂ ಅವರ ಸಿಬ್ಬಂದಿ ಹಲ್ಲೆ ಮಾಡಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಚಿಕ್ಕೋಡಿ : ವಿದ್ಯುತ್ ಬಿಲ್ ಕಟ್ಟಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗ್ರಾಹಕನಿಗೆ ಹೆಸ್ಕಾಂ ಎಇಇ ಅಧಿಕಾರಿಯೊಬ್ಬರು ಕಸಗುಡಿಸುವ ಪೊರಕೆಯಿಂದ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬಿರಡಿ ಗ್ರಾಮದಲ್ಲಿ ನಡೆದಿದೆ. ಅಪ್ಪಾಸಾಬ್ ಮಕಾನಿ ಎಂಬುವರ ಮೇಲೆ ಹೆಸ್ಕಾಂ ಎಇಇ ಹಾಗೂ ಅವರ ಸಿಬ್ಬಂದಿ ಹಲ್ಲೆ ಮಾಡಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಬಿರಡಿ ಗ್ರಾಮದ ಅಪ್ಪಾಸಾಬ್ ಎಂಬಾತ ಕಳೆದ 1 ವರ್ಷದಿಂದ ವಿದ್ಯುತ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾನೆ. …
Read More »