ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಜೂನ್. 23ರ ರಾತ್ರಿ ಐದು ಬಾಟಲ್‌ಗಳಲ್ಲಿ ಏಳು ಭ್ರೂಣಗಳು ಪತ್ತೆಯಾಗಿದ್ದು, ಜನರಲ್ಲಿ ಭಾರಿ ಆತಂಕ ಮೂಡಿಸಿದ್ದವು. ಕೊನೆಗೆ ತನಿಖೆ ಕೈಗೊಂಡಿದ್ದ ಅಧಿಕಾರಿಗಳಿಗೆ ಇವು ಮೂಡಲಗಿ ಪಟ್ಟಣದಲ್ಲಿರುವ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ಗಳ ಕೃತ್ಯ ಎನ್ನುವುದು ತಿಳಿದಿತ್ತು. ಮೂರು ವರ್ಷಗಳಿಂದ ಅಬಾಷನ್ ಮಾಡಿದ್ದ ಏಳು ಭ್ರೂಣಗಳು ಇವಾಗಿದ್ದು, ಪೊಲೀಸರ ದಾಳಿ ಭೀತಿಯಿಂದ ರಾತ್ರೋರಾತ್ರಿ ಏಳು ಭ್ರೂಣಗಳನ್ನು ಹಳ್ಳಕ್ಕೆ ಎಸೆದಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದರು ಸಿಬ್ಬಂದಿ. ಇದರ ಬೆನ್ನಲ್ಲೇ …
Read More »ಎತ್ತಿನ ಮೇಲೆ ದಿವಂಗತ ಅಪ್ಪು ಚಿತ್ರ ಬಿಡಿಸಿ ವಿಶೇಷ ರೀತಿಯಲ್ಲಿ ಕಾರ ಹುಣ್ಣಿಮೆ ಆಚರಣೆ
ಕಾರ ಹುಣ್ಣಿಮೆ ಎನ್ನುವುದು ಉತ್ತರ ಕರ್ನಾಟಕದ ರೈತರಿಗೆ ವಿಷೇಶ ಹಬ್ಬವಾಗಿದೆ. ಈ ಹಬ್ಬದಂದು ರೈತರು ತಾವು ಸಾಕಿರುವ ಎತ್ತುಗಳನ್ನು ವಿಶೇಷ ರೀತಿಯಲ್ಲಿ ಬಣ್ಣಗಳಿಂದ ಅಲಂಕಾರ ಮಾಡಿ ಮೆರವಣಿಗೆ ಮಾಡುವುದು ವಿಶೇಷವಾಗಿದೆ. ಇಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ ಕಾರು ಹುಣ್ಣಿಮೆ ನಿಮಿತ್ಯ ಗ್ರಾಮದ ಯುವಕ ಪ್ರದೀಪ್ ಖೋತ ಇವರ ಎತ್ತುಗಳ ಮೇಲೆ ದಿವಂಗತ ಪುನೀತ್ ರಾಜಕುಮಾರ್ ಇವರ ಭಾವಚಿತ್ರ ಬಿಡಿಸುವ ಮೂಲಕ ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಪುನೀತ್ ರಾಜಕುಮಾರ …
Read More »ಲಾರಿ ಚಕ್ರಕ್ಕೆ ಸಿಲುಕಿದ ಅರ್ಧ ದೇಹ : ನರಳಾಡಿ..ನರಳಾಡಿ ಸತ್ತ ಬಾಲಕ..
ಚಿಕ್ಕೋಡಿ (ಬೆಳಗಾವಿ): ಆ ಬಾಲಕನ ದೇಹದ ಸೊಂಟದವರೆಗಿನ ಅರ್ಧ ಭಾಗ ಹೊರಗಿದ್ರೆ..ಉಳಿದ ಅರ್ಧ ಭಾಗ ಚರಂಡಿ ಹಾಗೂ ಲಾರಿ ಚಕ್ರದ ನಡುವೆ ಸಿಲುಕಿತ್ತು..ಹೀಗಾಗಿ ಆ ಬಾಲಕ ನರಳಾಡುತ್ತಿದ್ದ..ಕೊನೆಗೆ ಲಾರಿ ಚಕ್ರಕ್ಕೆ ಸಿಲುಕಿದ್ದ ಆ ಬಾಲಕನನ್ನು ಅದ್ಯಾಗೋ ರಕ್ಷಿಸಲಾಯಿತು.ಆದ್ರೂ ತೀವ್ರವಾಗಿ ಗಾಯಗೊಂಡಿದ್ದ ಆ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ. ಅಂದ ಹಾಗೇ ಇಂತಹ ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗೀರಗಾಂವ ಗ್ರಾಮದಲ್ಲಿ ನಡೆದಿದೆ. ಸದ್ಯ ಚಿಕ್ಕೋಡಿ …
Read More »ಲಾರಿ ಚಕ್ರಕ್ಕೆ ಸಿಲುಕಿ ಮಹಿಳೆ ದೇಹ ಛಿದ್ರ ಛಿದ್ರ
ಚಿಕ್ಕೋಡಿ (ಬೆಳಗಾವಿ ) :ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವು ಕಂಡ ಘಟನೆ ಚಿಕ್ಕೋಡಿ ಬೆಳಗಾವಿ ರಸ್ತೆಯ ಜೈನಾಪುರ ಬಳಿ ನಡೆದಿದೆ. ಸದ್ಯ ಮೃತ ಮಹಿಳೆಯ ಹೆಸರು ತಿಳಿದು ಬಂದಿಲ್ಲ.ಅಲ್ಲದೆ,ಇದೇ ಅಪಘಾತದಲ್ಲಿ ದ್ವಿಚಕ್ರ ವಾಹನದ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂದ ಹಾಗೇ ಚಿಕ್ಕೋಡಿ ಬೆಳಗಾವಿ ರಸ್ತೆಯ ಜೈನಾಪುರ ಬಳಿ ದ್ವಿಚಕ್ರ ವಾಹನದ …
Read More »ವಿಷಕಾರಿ ಹಾವು ಕಚ್ಚಿ ನಾಲ್ಕು ವರ್ಷದ ಮಗು ಸಾವು
ಚಿಕ್ಕೋಡಿ(ಬೆಳಗಾವಿ): ವಿಷಕಾರಿ ಹಾವು ಕಚ್ಚಿ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆದಿದೆ. ಇಶಾಂತ್ ರಾಘವೇಂದ್ರ ಕಾಂಬಳೆ (04) ಮೃತ ಮಗು. ಯರನಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ಮಗು ಮನೆಯಲ್ಲಿ ಮಲಗಿದ್ದಾಗ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಮಗು ಸಾವನ್ನಪ್ಪಿದೆ. ಹಾವು ಕಚ್ಚಿದ ಪರಿಣಾಮ ಮಗು ಅಳಲು ಆರಂಭಿಸಿದಾಗ ಮಗುವನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ …
Read More »ನನ್ನ ಅಣ್ಣಂದಿರಿಗೆ ಇನ್ನೂ ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ. ನನಗೂ ಹೆಣ್ಣು ಸಿಗುವುದಿಲ್ಲ ಎಂದು ರೈತ ಆತ್ಮಹತ್ಯೆ
ಚಿಕ್ಕೋಡಿ: ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗಲಿಲ್ಲ ಎಂಬ ಕಾರಣಕ್ಕೆ ಯುವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕರಗುಪ್ಪಿ ಯಲ್ಲಾಪುರ ಗ್ರಾಮದಲ್ಲಿ ನಡೆದಿದೆ. ತನ್ನ ಜಮೀನಿನ ಮಾವಿನ ಮರಕ್ಕೆ ನೇಣು ಹಾಕಿಕೊಂಡು ರಮೇಶ್ ಬಾಳಪ್ಪ ಪಾಟೀಲ್ (25) ಸಾವನ್ನಪ್ಪಿದ್ದಾನೆ. ಮನೆಯಲ್ಲಿ ತನ್ನ ಹಿರಿಯ ಇಬ್ಬರು ಸಹೋದರರು ಬಹುದಿನಗಳಿಂದ ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕುತ್ತಿದ್ದರು ಅವರಿಗೆ ಇನ್ನೂ ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ. ನನ್ನ ಅಣ್ಣಂದಿರಿಗೆ ಇನ್ನೂ ಮದುವೆ …
Read More »ಕೌಟುಂಬಿಕ ಕಲಹಕ್ಕೆ ಬೇಸತ್ತು ಮಗಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಚಿಕ್ಕೋಡಿ: ತಾಯಿಯೊಬ್ಬರು ಎಂಟು ವರ್ಷಗಳ ಮಗಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದಲ್ಲಿ ನಡೆದಿದೆ. ಸವೀತಾ ಮದಗೋಂಡ ಬೆಳಗಲಿ (24) ಪವಿತ್ರಾ ಮದಗೋಂಡ ಬೆಳಗಲಿ (8) ಮೃತ ದುರ್ದೈವಿಗಳು. ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಲ್ಲಿದ್ದ ಶವಗಳನ್ನು ಸ್ಥಳೀಯರು ಹೊರತೆಗೆದಿದ್ದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ …
Read More »ಹಿಂದೂ ದೇವಸ್ಥಾನಗಳನ್ನು ಕೆಡವಿ ಅದರ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ: ಈಶ್ವರಪ್ಪ
ಚಿಕ್ಕೋಡಿ: ಹಿಂದೂ ದೇವಸ್ಥಾನಗಳನ್ನು ಕೆಡವಿ ಅದರ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಳಲಿ ಮಸೀದಿ ಒಂದೇ ಅಲ್ಲ. ದೇಶದಲ್ಲಿ 36 ಸಾವಿರ ದೇವಸ್ಥಾನಗಳನ್ನ ಪುಡಿ ಮಾಡಿ ಮಸೀದಿಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನಗಳ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ. ಅಂತಹ ಮಸೀದಿಗಳನ್ನು ಒಡೆದು 36 ಸಾವಿರ ದೇವಸ್ಥಾನವನ್ನು ಮತ್ತೆ …
Read More »ಕಲ್ಲಿನ ದೇವರ ವಿಗ್ರಹವನ್ನೂ ಬಿಡದ ಖದೀಮರು
ಚಿಕ್ಕೋಡಿ: ದೇವಸ್ಥಾನದ ಕಲ್ಲಿನ ದೇವರ ಮೂರ್ತಿಯನ್ನೇ ಕಳ್ಳರು ಕದ್ದೋಯ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಕೊಕಟನೂರ ಗ್ರಾಮದ ಐತಿಹಾಸಿಕ ದೇವಸ್ಥಾನವಾಗಿದ್ದ ಬಿರೇಶ್ವರ ದೇವಸ್ಥಾನದ ಕಲ್ಲಿನ ವಿಗ್ರಹವನ್ನು ಎತ್ತಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ದೇವರ ಮೂರ್ತಿಯನ್ನು ನಿಧಿಗಳ್ಳರು ಅಥವಾ ವಾಮಾಚಾರ ಮಾಡುವ ಖದೀಮರು ಕದ್ದಿರಬಹದು ಎನ್ನುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ ಪೂಜೆಗಾಗಿ ಅರ್ಚಕರು ಬಂದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು …
Read More »ಫಲ-ಪುಷ್ಪ ಕೃಷಿಯಿಂದ ಲಾಭ: ಪೇರಲ, ಮಾವು, ಕರಿಬೇವು ಬೆಳೆಯುವ ಜ್ಯೋತಿ
ಚಿಕ್ಕೋಡಿ: ತಾಲ್ಲೂಕಿನ ಕೇರೂರ ಗ್ರಾಮದ ಜ್ಯೋತಿ ಮಲ್ಲಪ್ಪ ಮಾಳಿ ಎನ್ನುವ ಪ್ರಯೋಗಶೀಲ ರೈತರೊಬ್ಬರು ಮಸಾರಿ ಭೂಮಿಯಲ್ಲಿ ಪೇರಲ ಮತ್ತು ಮಾವು ಜೊತೆ ಮಿಶ್ರ ಬೆಳೆಯಾಗಿ ಹೂವು ಹಾಗೂ ತರಕಾರಿ ಬೆಳೆದು ಆದಾಯ ಕಾಣುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಕಬ್ಬು ಬೆಳೆಯುತ್ತಿದ್ದ ಅವರು, ಅದರಿಂದ ಹೆಚ್ಚಿನ ಆದಾಯ ಸಿಗದಿದ್ದರಿಂದ ಪರ್ಯಾಯವಾಗಿ ಪೇರಲ ಮತ್ತು ಮಾವು ಬೆಳೆದಿದ್ದಾರೆ. 2 ವರ್ಷಗಳ ಹಿಂದೆ 300 ಪೇರಲ ಮತ್ತು 400 ಮಾವಿನ ಸಸಿಗಳನ್ನು ನೆಟ್ಟಿದ್ದಾರೆ. ನಾಟಿ ಮಾಡಿದ 9ನೇ ತಿಂಗಳಿನಲ್ಲಿಯೇ …
Read More »