Breaking News

ಬೆಂಗಳೂರು

ಕೆಎಸ್​ಆರ್​ಟಿಸಿ 4 ನಿಗಮಗಳಿಗೆ ಹೆಚ್ಚುವರಿ ಹಣ ನೀಡುವಂತೆ ಬಸವರಾಜ ಬೊಮ್ಮಾಯಿಗೆ ಮನವಿ

ಬೆಂಗಳೂರು: ಕೆಎಸ್​ಆರ್​ಟಿಸಿ ಸಂಸ್ಥೆ ಕುರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ಮುಕ್ತಾಯಗೊಂಡಿದೆ. ವಿಧಾನಸೌಧದಲ್ಲಿ ಗುರುವಾರ ನಡೆದಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಸಭೆ ಅಂತ್ಯಗೊಂಡಿದೆ. ಸಭೆಯಲ್ಲಿ 4 ನಿಗಮಗಳಿಗೆ ಹೆಚ್ಚುವರಿಯಾಗಿ ಹಣ ನೀಡುವಂತೆ ಮನವಿ ಮಾಡಲಾಗಿದೆ. ಕೆಎಸ್ಆರ್‌ಟಿಸಿ ನಿಗಮದಿಂದ ಸಿಎಂ ಬೊಮ್ಮಾಯಿಗೆ ಹೀಗೆ ಮನವಿ ಮಾಡಲಾಗಿರುವ ಬಗ್ಗೆ ತಿಳಿದುಬಂದಿದೆ. ವಾರ್ಷಿಕ 2,500 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿತ್ತು. 3 ಸಾವಿರ ಕೋಟಿ ರೂಪಾಯಿ ಅನುದಾನಕ್ಕೆ ಕೆಎಸ್​ಆರ್​ಟಿಸಿ ನಿಗಮ ಬೇಡಿಕೆ ಇಟ್ಟಿದೆ. ಆರ್ಥಿಕ ಪರಿಸ್ಥಿತಿ …

Read More »

ಓಂ ಬಿರ್ಲಾರಿಂದ ಜಂಟಿ ಅಧಿವೇಶನ: ಬಿಜೆಪಿಯಿಂದ ಕೆಟ್ಟ ಸಂಪ್ರದಾಯ; ಕಾರ್ಯಕ್ರಮ ಬಹಿಷ್ಕಾರಕ್ಕೆ ಕಾಂಗ್ರೆಸ್ ನಿರ್ಧಾರ

ಬೆಂಗಳೂರು: ಓಂ ಬಿರ್ಲಾ ಕಾರ್ಯಕ್ರಮಕ್ಕೆ ಕಾಂಗ್ರೆಸ್​ನಿಂದ ಬಹಿಷ್ಕಾರ ಹಾಕಲಾಗಿದೆ. ವಿಧಾನಸಭೆಯಲ್ಲಿ ಜಂಟಿ ಅಧಿವೇಶನಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಲೋಕಸಭೆ ಸ್ಪೀಕರ್​ ಓಂ ಬಿರ್ಲಾರಿಂದ ಜಂಟಿ ಅಧಿವೇಶನ ನಡೆಸುವ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದೆ. ಆಡಳಿತಾರೂಢ ಬಿಜೆಪಿಯಿಂದ ಕೆಟ್ಟ ಸಂಪ್ರದಾಯ ಆರೋಪ ಆರಂಭವಾಗಲಿದೆ. ಸರ್ಕಾರ ವಿಧಾನಸೌಧದಲ್ಲಿ ಇತಿಹಾಸ ಸೃಷ್ಟಿಸಲು ಹೊರಟಿದೆ ಎಂದು ಈ ಕ್ರಮದ ಬಗ್ಗೆ ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕಾರ್ಯಕ್ರಮ …

Read More »

ಅತ್ಯಾಚಾರ ಪ್ರಕರಣ: ವಿಧಾನಸಭೆಯಲ್ಲಿ ಸ್ಪೀಕರ್ ಕಾಗೇರಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಮಾತಿನ ಸಮರ

ಬೆಂಗಳೂರು: ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ ವಿಧಾನಸಭೆ ಕಲಾಪ ಚರ್ಚೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಮಾತಿನ ಸಮರ ನಡೆಯಿತು. ಸ್ಪೀಕರ್ ಕಾಗೇರಿ, ನೀವು ಪ್ರತಿಯೊಂದಕ್ಕೂ ಹೀಗೆ ಗದ್ದಲ ಮಾಡಿಕೊಂಡು ಇರಿ. ನಾನು ನಿಮ್ಮ ಗದ್ದಲ ಕೇಳಿಕೊಂಡು ಇರ್ತೀನಿ. ಉಳಿದ ಸದಸ್ಯರು ಮಾಡುವಂತಿಲ್ಲ. ಬಿಲ್ ಬರುವಂಗಿಲ್ಲ. ಬರಿ ನಿಮ್ಮ ಮಾತು ಕೇಳಿಕೊಂಡು ಇರ್ಬೇಕಾ ಅಂತ ಸದಸ್ಯರು ಬಂದು ನನಗೆ ಕೇಳುತ್ತಿದ್ದಾರೆ. ನೀವು ಈ ರೀತಿ …

Read More »

ಮೈಶುಗರ್ ಕಾರ್ಖಾನೆ ಖಾಸಗೀಕರಣ ಮಾಡಿದರೆ ರಕ್ತಪಾತ: ಜೆಡಿಎಸ್ ಶಾಸಕ

ಬೆಂಗಳೂರು, ಸೆಪ್ಟೆಂಬರ್ 22: ಮಂಡ್ಯ ಮೈಶುಗರ್ ಕಾರ್ಖಾನೆ ಖಾಸಗೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಸುರೇಶ್‌ ಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, “ಕಾರ್ಖಾನೆ ಖಾಸಗೀಕರಣ ಮಾಡಿದರೆ ರಕ್ತಪಾತವಾಗುತ್ತದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಮೈಶುಗರ್ ಕಾರ್ಖಾನೆ ಖಾಸಗೀಕರಣದ ಬಗ್ಗೆ ಮಾತನಾಡಿದ ಅವರು, “ಮಂಡ್ಯ ಮೈಶುಗರ್ ಕಾರ್ಖಾನೆ ವಿಚಾರದಲ್ಲಿ ಸರ್ಕಾರ ತಮಾಷೆ ಮಾಡಬಾರದು. ಸರ್ಕಾರಕ್ಕೆ ನಿರ್ವಹಣೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ನಿಮಗೆ ಮಾಡಲು ಸಾಧ್ಯವಾಗದಿದ್ದರೆ ನಮಗೆ ಬಿಟ್ಟುಕೊಡಿ. …

Read More »

ಚಾಣಕ್ಯ ವಿವಿಗೆ ಜಮೀನು: ದೊಡ್ಡ ಹಗರಣ

ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರದ ವತಿಯಿಂದ ಅರ್ಹತೆ ಹಾಗೂ ಆನುಭವ ಇಲ್ಲದ ಸೆಸ್‌ ಎಂಬ ಸಂಸ್ಥೆಗೆ ಕಡಿಮೆ ದರದಲ್ಲಿ 116.16 ಎಕರೆ ಜಮೀನು ನೀಡಿದ್ದು ಸರ್ಕಾರ ಆ ತೀರ್ಮಾನ ಕೈ ಬಿಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್‌ ಒತ್ತಾ ಯಿಸಿದ್ದಾರೆ. ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಏರೋಸ್ಪೇಸ್‌ ಹಾಗೂ ಡಿಫೆನ್ಸ್‌ ಪಾರ್ಕ್‌ಗಾಗಿ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನು ಆರ್‌ …

Read More »

ದೇಶದಲ್ಲೇ ಮೂರು ಕೈಗಾರಿಕಾ ಕಾರಿಡಾರ್ ಗಳನ್ನು ಹೊಂದಿದ ಏಕೈಕ ರಾಜ್ಯ ಕರ್ನಾಟಕ: ಸಚಿವ ನಿರಾಣಿ

ಬೆಂಗಳೂರು: ಕರ್ನಾಟಕವು ಜಾಗತಿಕ ಹೂಡಿಕೆದಾರರಿಗೆ ಅತ್ಯುತ್ತಮ ತಾಣವಾಗಿದ್ದು, ದೇಶದಲ್ಲೇ ಮೂರು ಕೈಗಾರಿಕಾ ‌ಕಾರಿಡಾರ್ ಗಳನ್ನು ‌ಹೊಂದಿದ ಏಕೈಕ ರಾಜ್ಯವಾಗಿದೆ ಎಂದು ‌ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಗುರುವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಕೆಐಎಡಿಬಿ ಆಯೋಜಿಸಿದ್ದ ಭಾರತದ 75 ನೇ ಸ್ವಾತಂತ್ರ್ಯವದ ಸವಿನೆನಪಿಗಾಗಿ ಸಪ್ತಾಹದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಹೂಡಿಕೆ ಮಾಡುವ ಜಾಗತಿಕ ಉದ್ಯಮಿಗಳಿಗೆ ಕರ್ನಾಟಕ ಯಾವಾಗಲೂ ಅತ್ಯುತ್ತಮ …

Read More »

ಭೋಜನ ಕೂಟದಲ್ಲೂ ಆಪರೇಷನ್ ಹಸ್ತದ ಬಗ್ಗೆ ಎಚ್ಚರಿಕೆ ನೀಡಿದ ಬಿಎಸ್‍ವೈ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ರೇಸ್ ವೀವ್ ಕಾಟೇಜ್ ನಿವಾಸದಲ್ಲಿ ನಿನ್ನೆ ರಾತ್ರಿ ಭೋಜನ ಕೂಟ ಏರ್ಪಡಿಸಲಾಗಿತ್ತು. ಈ ವೇಳೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯಲು ಗಾಳ ಹಾಕಿದೆ ಎಚ್ಚರದಿಂದಿರಿ. ಯಾರೂ ಕಾಂಗ್ರೆಸ್ ಪ್ರಲೋಭನೆಗೆ ಒಳಗಾಗುವುದು ಬೇಡ ಎಂದು ಕಿವಿಮಾತು ನೀಡಿದ್ದಾರೆ. ಶಾಸಕರೊಂದಿಗೆ ಚರ್ಚಿಸಿದ ಬಿಎಸ್‍ವೈ, ಯಾರಾದರೂ ಕಾಂಗ್ರೆಸ್ ನಾಯಕರು ನಮ್ಮ ಶಾಸಕರ ಸಂಪರ್ಕಿಸಿದರೆ ನಾಯಕರ ಗಮನಕ್ಕೆ ತನ್ನಿ. ಶಾಸಕರ ಬೇಕು ಬೇಡಗಳನ್ನು ಈಡೇರಿಸಲು …

Read More »

ಕಣ್ಣೀರಿಡುತ್ತಾ ಸದನದಿಂದ ಹೊರ ಬಂದ ಅಂಜಲಿ ನಿಂಬಾಳ್ಕರ್

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರ ಪ್ರತಿಧ್ವನಿಸಿತು. ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಭಾವುಕರಾದ ಸನ್ನಿವೇಶಕ್ಕೆ ಸದನದ ಸದಸ್ಯರು ಸಾಕ್ಷಿಯಾದರು. ರೇಪ್ ಪ್ರಕರಣದ ಚರ್ಚೆ ವೇಳೆ ಕಣ್ಣೀರಿಡುತ್ತಾ ಸದನದಿಂದ ಹೊರ ಬಂದ ಅಂಜಲಿ ನಿಂಬಾಳ್ಕರ್ ಗ್ಯಾಂಗ್ ರೇಪ್ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಶಾಸಕಿ ರೂಪ ಶಶಿಧರ್ ಮಾತನಾಡುವಾಗ.. ಕಣ್ಣೀರಿಡುತ್ತಾ ಸದನದಿಂದ ಮೊಗಸಾಲೆಗೆ ಹೋದ ಅಂಜಲಿ ನಿಂಬಾಳ್ಕರ್ ನಂತರ ಕಣ್ಣೀರು ಒರೆಸಿಕೊಂಡು, …

Read More »

ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಸಿಗಲ್ಲ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಭಾನುವಾರ ರಜೆ ದಿನ

ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ಇಡೀ ದೇಶವನ್ನು ಕೊರೊನಾ ಮುಕ್ತ ಮಾಡಲು ಮಕ್ಕಳು ಹೊರೆತು ಪಡಿಸಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ಹಾಕಲಾಗುತ್ತಿತ್ತು. ವಾರದ 7 ದಿನವೂ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿತ್ತು. ಆದ್ರೆ ಈಗ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಇಲಾಖೆ ಮುಂದಾಗಿದೆ. ಯಾವುದೇ ರಜೆ ಇಲ್ಲದೇ, ನಿರಂತರವಾಗಿ ಆರೋಗ್ಯ ಸಿಬ್ಬಂದಿ ಕೆಲಸ ಮಾಡ್ತಾ ಇದ್ದರು. …

Read More »

ಬೆಂಕಿ ಅವಘಡ: ಪ್ರಾಣ ಉಳಿಸುವಂತೆ ಅಳಿಯನ ಬಳಿ ಅಂಗಲಾಚಿದ್ದ ಮೃತ ಮಹಿಳೆ

ಬೆಂಗಳೂರು: ‘ಕೊಠಡಿಯಲ್ಲಿ ಬೆಂಕಿ ಬಿದ್ದಿದೆ. ಬೇಗ ಬಂದು ಕಾಪಾಡಪ್ಪ. ಬೇಗ ಬಾ…’ ದೇವರಚಿಕ್ಕನಹಳ್ಳಿಯ ವಸತಿ ಸಮುಚ್ಚಯದಲ್ಲಿ ಮಂಗಳವಾರ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಸಜೀವ ದಹನವಾದ ಭಾಗ್ಯರೇಖಾ ಅವರು ತಮ್ಮ ಅಳಿಯ ಸಂದೀಪ್‌ ಬಳಿ ರಕ್ಷಣೆಗಾಗಿ ಅಂಗಲಾಚಿದ್ದ ಪರಿ ಇದು. ಸಂದೀಪ್‌-ಪ್ರೀತಿ ದಂಪತಿ ಪ್ರೀತಿಯ ಅವರ ತಾಯಿ ಭಾಗ್ಯರೇಖಾ ವಾಸವಿದ್ದ ಫ್ಲ್ಯಾಟ್‌ನ ಪಕ್ಕದಲ್ಲೇ (ಫ್ಲ್ಯಾಟ್‌ ನಂಬರ್‌ 211) ನೆಲೆಸಿದ್ದರು. ಅತ್ತೆ ಕರೆ ಮಾಡಿ ಹೇಳಿದ ಬಳಿಕವಷ್ಟೇ ಸಂದೀಪ್‌ಗೆ ಅಗ್ನಿ ಅವಘಡದ ವಿಷಯ …

Read More »