Breaking News

ಬೆಂಗಳೂರು

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಪಾಲಿಕೆಗೆ ವಂಚನೆ ಸಂಬಂಧ ದೂರು ದಾಖಲಿಸಲಾಗಿದೆ. ಹಿಂದೆ ಪಾಲಿಕೆಯ ಅಧಿಕಾರಿಗಳ ಬಳಕೆಗೆಂದು ಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಒದಗಿಸುತ್ತಿದ್ದ ಟ್ರಾವೆಲ್ಸ್ ಗಳ ಪೈಕಿ ಒಂದಾಗಿರುವ ಎಂ.ಎಂ.ಲಾಜಿಸ್ಟಿಕ್ಸ್ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆ ತನ್ನ ಸಿಬ್ಬಂದಿಗೆ ಪಾವತಿಸುತ್ತಿದ್ದ PF, ESI ದಾಖಲೆ ನಕಲು ಮಾಡಿದೆ. ಆ ಸಂಸ್ಥೆಯು ಪಾಲಿಕೆಗೆ ನಿಡುತ್ತಿದ್ದ ಕಡತಗಳಿಂದ ತೆಗೆದು, ಅವುಗಳನ್ನೇ ನಕಲು ಮಾಡಿಕೊಂಡು ಪಂಚಮುಖಿ ಟೂರ್ಸ್ & ಟ್ರಾವೆಲ್ಸ್ ಎಂಬ ಹೆಸರಿನಲ್ಲಿ …

Read More »

ಸಂಪುಟ ವಿಸ್ತರಣೆ, ಬೆಳಗಾವಿ ರಹಸ್ಯ ಸಭೆ; ಸಿಎಂ ನೀಡಿದ ಪ್ರತಿಕ್ರಿಯೆಯೇನು?

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಚಾರ ರಾಜ್ಯ ರಾಜಕೀಯ ಚಟುವಟಿಕೆ ಮತ್ತೆ ಗರಿಗೆದರಲು ಕಾರಣವಾಗಿದ್ದು, ಮಾರ್ಚ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸಚಿವಾಕಾಂಕ್ಷಿಗಳು ಮಾರ್ಚ್ ನಲ್ಲಿ ಬೇಡ ಸಂಪುಟ ವಿಸ್ತರಣೆ ಈಗಲೇ ಮಾಡಬೇಕು ಎಂದು ಆಗ್ರಹಿಸಿದ್ದಾರೆ.   ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸದ್ಯಕ್ಕೆ ನಾಲ್ಕು ಸ್ಥಾನಗಳು ಖಾಲಿ ಇದೆ. ಅದನ್ನು ಯಾವಾಗ ಭರ್ತಿ …

Read More »

ಎನ್.ಸಿ.ಸಿ ಯಲ್ಲಿ 7500 ಹೊಸ ಕೆಡೆಟ್‍ಗಳಿಗೆ ಅವಕಾಶ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು:ಸ್ವಾತಂತ್ರೋತ್ಸವದ 75 ನೇ ವರ್ಷಾಚರಣೆಯ ಸಂದರ್ಭದಲ್ಲಿ 75 ಯುನಿಟ್‍ಗಳನ್ನು ಶಾಲಾ ಕಾಲೇಜುಗಳಲ್ಲಿ ಪ್ರಾರಂಭಿಸಿ, 7500 ಹೊಸ ಕೆಡೆಟ್‍ಗಳಿಗೆ ಈ ಬಾರಿ ಎನ್.ಸಿ.ಸಿ ಯಲ್ಲಿ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನಾಚರಣೆ ಅಂಗವಾಗಿ ಹೊಸ 75 ನೇತಾಜಿ ಅಮೃತ ಎನ್.ಸಿ.ಸಿ ಶಾಲೆಗಳ ಘೋಷಣೆ, ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಚಾಲನೆ, 75 ಪೈಲಟ್‍ಗಳ ತರಬೇತಿಗೆ …

Read More »

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಾಗಾಭರಣ

ಬೆಂಗಳೂರು : ಟಿ.ಎಸ್.ನಾಗಾಭರಣ ಇಂದು 69ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸರ್ಕಾರಿ ನೌಕರಿಯಲ್ಲಿ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ನಿವೃತ್ತಿಯಾಗಬೇಕಿತ್ತು. ಆದರೆ ಸದಾ ಪಾದರಸದಂತಿರುವ ಇವರಿಗೆ ನಿವೃತ್ತಿಯೆಂಬುದೇ ಇಲ್ಲ. ಸಿನಿಮಾ, ನಾಟಕ, ಧಾರಾವಾಹಿಗಳ ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹೊಣೆಯನ್ನೂ ಹೊತ್ತಿರುವ ಇವರದ್ದು ಬಿಡುವಿಲ್ಲದ ದುಡಿಮೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಇವರಿಗೆ ಇಂದು ಕನ್ನಡ ಸಿನಿಮಾದ ಗಣ್ಯಾತಿಗಣ್ಯರು ಶುಭ ಕೋರಿದ್ದಾರೆ. ರಾಜಕೀಯ ರಂಗದ ದಿಗ್ಗಜರು ಹಾರೈಸಿದ್ದಾರೆ. ಜೊತೆಗೆ ಬಾಲಿವುಡ್ ಸೇರಿದಂತೆ ವಿವಿಧ ಭಾಷೆಯ …

Read More »

ಪುಷ್ಪ’ ಸಿನಿಮಾ ಪ್ರೇರಣೆ : ಭೀಕರ ಹತ್ಯೆ ಮಾಡಿದ ಬಾಲಕರು

ಅಲ್ಲು ಅರ್ಜುನ್ ನಟಿಸಿರುವ ‘ಪುಷ್ಪ’ ಸಿನಿಮಾ ದೊಡ್ಡ ಹಿಟ್ ಆಗಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಮುನ್ನೂರು ಕೋಟಿಗೂ ಹೆಚ್ಚು ಹಣ ಗಳಿಸಿದೆ. ಲಕ್ಷಾಂತರ ಮಂದಿ ಸಿನಿಮಾವನ್ನು ನೋಡಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮ್ಯಾನರಿಸಂ, ಸಿನಿಮಾದಲ್ಲಿನ ಹಾಡುಗಳು, ಡ್ಯಾನ್ಸ್ ಸ್ಟೆಪ್‌ಗಳನ್ನು ಜನರು ಅನುಕರಿಸುತ್ತಿದ್ದಾರೆ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ದೆಹಲಿಯ ಮೂವರು ಬಾಲಕರು ‘ಪುಷ್ಪ’ ಸಿನಿಮಾದಿಂದ ಪ್ರೇರಿತರಾಗಿ ಕೊಲೆಯೇ ಮಾಡಿಬಿಟ್ಟಿದ್ದಾರೆ! ದೆಹಲಿಯ ಮೂವರು ಬಾಲಕರು ‘ಪುಷ್ಪ’ …

Read More »

ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅಂತಿಮ‌ ದರ್ಶನ ಪಡೆದ ಸಿಎಂ ಬೊಮ್ಮಾಯಿ

ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರ ಪಾರ್ಥೀವ ಶರೀರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಿಮ‌ ನಮನ ಸಲ್ಲಿಸಿದರು.ಜ. ಮಂಜುನಾಥ ಅವರ ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಕ್ಕೆ ಭೇಟಿ ನೀಡಿದ್ದ ಸಿಎಂ ನ್ಯಾಯಮೂರ್ತಿಗಳ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.ನ್ಯಾಯಮೂರ್ತಿ ಮಂಜುನಾಥ್ ಅವರು ಅತ್ಯುತ್ತಮ ವಕೀಲರಾಗಿ, ವಕೀಲರ ಸಂಘದ ಅಧ್ಯಕ್ಷರಾಗಿ, ಹೈ ಕೋರ್ಟ್ ನ್ಯಾಯಾಧೀಶರಾಗಿ, ಕರ್ನಾಟಕ ನದಿ ನೀರು ಮತ್ತು ಗಡಿ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಸಲ್ಲಿಸಿದ …

Read More »

ಸಿದ್ದರಾಮಯ್ಯ ಮೇಲೆ ಮುಗಿಬಿದ್ದ JDS, BJP.. ಅಂಥದ್ದೇನಾಯ್ತು?

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಿನ್ನೆ ದಳಪತಿಗಳು ಅಕ್ಷರಶಃ ಸಮರ ಸಾರಿದ್ರು. ಇತ್ತ ಕೇಸರಿ ಪಾಳಯ ವಿಪಕ್ಷ ನಾಯಕರ ಮೇಲೆ ಕೆಂಡಾಮಂಡಲವಾಗಿತ್ತು. ಮಾಜಿ ಸಿಎಂ ಆಡಿದ್ದ ಮಾತುಗಳು ಕಮಲ ಮತ್ತು ದಳವನ್ನ ಬಡಿದೆಬ್ಬಿಸಿತ್ತು. ಹೀಗಾಗಿ ಸಿದ್ದು ವಿರುದ್ಧ ಇವತ್ತು ಟ್ವೀಟಾಸ್ತ್ರ ಪ್ರಯೋಗವಾಗಿತ್ತು. ಅಷ್ಟಕ್ಕೂ ಸಿದ್ದು ಆಡಿದ್ದ ಮಾತುಗಳೇನು? ಅದಕ್ಕೆ ಕಮಲ-ದಳದ ತಿರುಗೇಟೇನು? ಇಲ್ಲಿದೆ ಡಿಟೇಲ್ಸ್‌.. ಸಿದ್ದರಾಮಯ್ಯ ಬಾಯಲ್ಲಿ ಬಂದಿದ್ದ ಬಾಲಂಗೋಚಿ ಮಾತು ದಳಪತಿಯನ್ನ ಕೆರಳಿ ಕೆಂಡವಾಗುವಂತೆ ಮಾಡಿದೆ. ಅಲ್ಲದೇ ಮಾಜಿ …

Read More »

ಅಂತರರಾಜ್ಯ ಜಲವಿವಾದ ಸಂಬಂಧ ಫೆಬ್ರವರಿಯಲ್ಲಿ ವಿಪಕ್ಷ ನಾಯಕರ ಜೊತೆಗೆ ಸಭೆ: ಸಿಎಂ ಬೊಮ್ಮಾಯಿ

ಕೆಲ ನೀರಾವರಿ ಯೋಜನೆಗಳು ಪ್ರಮುಖ ಘಟ್ಟಗಳಲ್ಲಿ ಇರುವುದರಿಂದ ಮತ್ತೊಮ್ಮೆ ವಿರೋಧ ಪಕ್ಷಗಳ ನಾಯಕರ ಜೊತೆಗೆ ಸಮಾಲೋಚನೆ ಮಾಡಿ, ಕಾನೂನಿನ ಪರಿಣಿತರನ್ನು ಇಟ್ಟುಕೊಂಡು ಸಮಾಲೋಚನೆ ಮಾಡಿ, ಯಾವ ರೀತಿ ಮುಂದುವರಿಯಬೇಕು, ನಮ್ಮ ನಿಲುವುಗಳು ಏನಿರಬೇಕು ಎನ್ನುವ ಬಗ್ಗೆ ಸರ್ವಪಕ್ಷಗಳ ಸಭೆಯನ್ನು ಫೆಬ್ರವರಿ ಮೊದಲ ವಾರದಲ್ಲಿ ಕರೆಯುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.ಅಂತಾರಾಜ್ಯ ಜಲ ವಿವಾದಗಳ ಕುರಿತಂತೆ ಸಚಿವರು, ಕಾನೂನು ತಜ್ಞರು, ನೀರಾವರಿ ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ …

Read More »

ಹೆಚ್​​​ಡಿಡಿಗೆ ಕೊರೊನಾ ಪಾಸಿಟಿವ್​​ -ಮಣಿಪಾಲ್ ಆಸ್ಪತ್ರೆಯಿಂದ ಹೆಲ್ತ್​​ ಬುಲೆಟಿನ್ ಬಿಡುಗಡೆ

ಬೆಂಗಳೂರು: ಜೆಡಿಎಸ್​​ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಚಿಕಿತ್ಸೆಗಾಗಿ ಹೆಚ್​ಡಿಡಿ ಅವರನ್ನು ಮಣಿಪಾಲ್​​ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮಾಜಿ ಪ್ರಧಾನಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಹೆಲ್ತ್​​ ಬುಲೆಟಿನ್​​​ನಲ್ಲಿ ಮಾಹಿತಿ ನೀಡಿದೆ. ಮಣಿಪಾಲ್ ಆಸ್ಪತ್ರೆ ನೀಡಿರುವ ಅಧಿಕೃತ ಮಾಹಿತಿಯ ಅನ್ವಯ, ನಿನ್ನೆ ಅಂದರೆ ಜನವರಿ 21ರಂದು ಮಾಜಿ ಪ್ರಧಾನಿ ದೇವೇಗೌಡರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ದೇವೇಗೌಡರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ದೇವೇಗೌಡರು ಆಸ್ಪತ್ರೆ …

Read More »

‘JDSನ ಓಡಿಸಿ’ ಎಂದ ಸಿದ್ದರಾಮಯ್ಯ.. ‘ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ’ ಅಂತ HDK ಗರಂ

ಬೆಂಗಳೂರು: ಬಿಜೆಪಿಯ ಭ್ರಷ್ಟಾಚಾರಕ್ಕೆ ಜೆಡಿಎಸ್​ ಪಕ್ಷ ಬಾಲಂಗೋಚಿಯಾಗಿದೆ. ಆದ್ದರಿಂದ ತುಮಕೂರಿನಿಂದ ಜೆಡಿಎಸ್​​ ಪಕ್ಷವನ್ನು ಓಡಿಸಿ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಅಲ್ಲದೇ ತುಮಕೂರಿನಿಂದ ಜೆಡಿಎಸ್​​​ ಅನ್ನು ಓಡಿಸಿ ಅನ್ನೋದಕ್ಕೆ ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ? ಎಂದು ಪ್ರಶ್ನಿಸಿದ್ದಾರೆ.   ಸಿದ್ದರಾಮಯ್ಯ ಅವರ ಹೇಳಿಕೆ ಕುರಿತಂತೆ ಸರಣಿ ಟ್ವೀಟ್​ ಮಾಡಿರುವ ಕುಮಾರಸ್ವಾಮಿ ಅವರು, …

Read More »