Breaking News

ಬೆಂಗಳೂರು

ಪೆಟ್ರೋಲ್/ ಡಿಸೇಲ್ ಸೇವೆಯಲ್ಲಿ ವ್ಯತ್ಯಯ..!

ಬೆಂಗಳೂರು:  ಮಾರ್ಚ್31ರವರೆಗೆ ಕರ್ನಾಟಕ ಲಾಕ್‌ ಡೌನ್ ಆಗಲಿರುವ ಹಿನ್ನೆಲೆ, ನಾಳೆಯಿಂದ ಪೆಟ್ರೋಲ್/ ಡಿಸೇಲ್ ಸೇವೆಯಲ್ಲಿ ವ್ಯತ್ಯಯ ಕಂಡು ಬರಲಿದೆ. ಬೆಳಿಗ್ಗೆ 7ರಿಂದ ಸಂಜೆ 7ಗಂಟೆಯವರೆಗೆ ಮಾತ್ರ ಪೆಟ್ರೋಲ್ ಬಂಕ್ ಓಪನ್ ಇರಲಿದೆ. ಪೆಟ್ರೋಲ್ ಬಂಕ್ ಸಿಬ್ಬಂದಿಗಳ ಆರೋಗ್ಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈ ನಿಯಮ ಅನ್ವಯವಾಗಲಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಪೆಟ್ರೋಲ್ ಡೀಸಲ್ ಸೇವೆ ಲಭ್ಯವಿದ್ದು, ಕೇವಲ ಆ್ಯಂಬ್ಯುಲೆನ್ಸ್ ಹಾಗೂ …

Read More »

ಮನೆಯಲ್ಲೇ ಇರಿ ಎಂದ್ರೂ ಕೇಳಿಲ್ಲ – ರಸ್ತೆಗೆ ಬಂದವರಿಗೆ ಬಿತ್ತು ಲಾಠಿ ಏಟು

ಬೆಂಗಳೂರು: ರಸ್ತೆಗೆ ಇಳಿಯಬೇಡಿ, ಮನೆಯಲ್ಲೇ ಇರಿ ಎಂದು ಸಾಕಷ್ಟು ಬಾರಿ ಹೇಳಿದರೂ ಈ ಮನವಿಯನ್ನು ಲೆಕ್ಕಿಸದೇ ರಸ್ತೆಗೆ ಇಳಿದ ಜನತೆಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. ಕರ್ನಾಟಕ ಸಂಪೂರ್ಣ ಲಾಕ್‍ಡೌನ್ ಆಗಿದ್ದರೂ ಜನ ಇಂದು ಬೆಳಗ್ಗೆಯಿಂದಲೇ ರಸ್ತೆಗೆ ಇಳಿಯುತ್ತಿದ್ದರು. ಈ ವೇಳೆ ಪೊಲೀಸರು ಮನೆಗೆ ತೆರಳುವಂತೆ ಮನವಿ ಮಾಡುತ್ತಿದ್ದರು. ಮನವಿಗೂ ಕ್ಯಾರೇ ಎನ್ನದ ಜನರಿಗೆ ಪೊಲೀಸರಿಗೆ ಲಾಠಿ ಏಟು ನೀಡಿದ್ದಾರೆ. ಯಶವಂತಪುರದ ಗೋವರ್ಧನ್ ಥಿಯೇಟರ್ ಬಳಿ ಆಟೋಗಳು, ಸಾರ್ವಜನಿಕರ ಅನಗತ್ಯ …

Read More »

ಜಾತಕ ಭವಿಷ್ಯ ಹೇಳುವವರೆಲ್ಲ ಈಗ ಏನಾದರು ? ಕೊರೋನಾಗೆ ಅವರ ಬಳಿ ಪರಿಹಾರ ಕೇಳಿ ನೋಡೋಣ

ಜಾತಕ ಭವಿಷ್ಯ ಹೇಳುವವರೆಲ್ಲ ಈಗ ಏನಾದರು ? ಕೊರೋನಾಗೆ ಅವರ ಬಳಿ ಪರಿಹಾರ ಕೇಳಿ ನೋಡೋಣ. ಕನಸುಗಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಮಾದ್ಯಮಗಳ ಮುಂದೆ ಮಾತನಾಡುವು ಸಂದರ್ಭದಲ್ಲಿ ಕೊರೊನಾ ವೈರಸ್ ಬಗ್ಗೆ ಮಾತನಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲೆಡೆ ಕೊರೊನಾ ಭೀತಿ ಎದುರಾಗಿರುವ ಸಂದರ್ಭದಲ್ಲಿ ರವಿಚಂದ್ರನ್ ಅವರು ಜನರಿಗೆ ತಮ್ಮ ಮಾತಿನ ಮೂಲಕವೇ ಧೈರ್ಯವನ್ನು ಹೇಳಿರುವುದು ಮಾತ್ರವಲ್ಲದೇ, ಕೆಲವು ಡಂಭಾಚಾರಿಗಳ ಮಾತುಗಳನ್ನು ಕೂಡಾ ಅವರು …

Read More »

ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಲು ಸರಕಾರ ನಿರ್ಧರಿಸಿದೆ.

ರಾಜ್ಯದ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದ್ದ ರಾಜ್ಯ ಸರಕಾರ ಇದೀಗ ಸಂಪೂರ್ಣ ಕರ್ನಾಟಕವನ್ನು ಲಾಕ್ ಡೌನ್ ಮಾಡಿ ಆದಶ ಹೊರಡಿಸಿದೆ. ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಲು ಸರಕಾರ ನಿರ್ಧರಿಸಿದೆ. ಇದರಿಂದಾಗಿ ಇಡೀ ರಾಜ್ಯದಲ್ಲಿ ಸಾರಿಗೆ ಸಂಚಾರ ವ್ಯವಸ್ಥೆ ಸ್ಥಗಿತವಾಗಲಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಂಚಾರ ಬಂದ್ ಆಗಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೇನೂ ಸಿಗುವುದಿಲ್ಲ. ಮಾರ್ಚ್ 31ರ ವರೆಗೆ ಇಡೀ …

Read More »

ಬೆಂಗಳೂರಿನಲ್ಲಿ ಧಾರಾಕಾರ ಮಳೆ ಜನಜೀವನ ಅಸ್ತವ್ಯಸ್ತ

ಬೆಂಗಳೂರು ಮಾ. 32 : ಬೇಸಿಗೆ ಸಮಯದಲ್ಲಿ ಬೆಂಗಳೂರಿನಲ್ಲಿ ಇಂದು ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಕರೋನಾ ಮಹಾಮಾರಿ ರಾಜ್ಯದೆಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಇದರ ನಡುವೆಯೇ ಇಂದು ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರಿತಪಿಸುವಂತಾಗಿದೆ. ಬೆಳಗ್ಗೆಯಿಂದಲೇ ಬಿಸಿಲ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹವಾಮಾನದಲ್ಲಿ ಹಲವಾರು ಬದಲಾವಣೆಯಾಗಿ ಈ ರೀತಿ ಧಾರಾಕಾರ ಮಳೆ ಸುರಿಯುತ್ತಿದೆ ಎಂದು …

Read More »

ಕೊರೊನಾ ರೆಡ್ ಅಲರ್ಟ್, 1000 ವೆಂಟಿಲೆಟರ್ ಖರೀದಿಗೆ ಮುಂದಾದ ಸರ್ಕಾರ..!

ಬೆಂಗಳೂರು, ಮಾ.23- ಕರ್ನಾಟಕದಲ್ಲಿ ಮತ್ತೊಬ್ಬರಿಗೆ ಕೊರೊನಾ ಸೋಂಕು ಹರಡಿದ್ದು, ಇಂದು ಬೆಳಗ್ಗೆ ಒಟ್ಟು ಸೋಂಕಿತರ ಸಂಖ್ಯೆ 27ಕ್ಕೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಕೊರೊನಾ ರೋಗದ ಭೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಏಕಕಾಲಕ್ಕೆ ಒಂದು ಸಾವಿರ ವೆಂಟಿಲೆಟರ್‍ಗಳನ್ನು ಖರೀದಿಸಲು ಮುಂದಾಗಿದೆ. ಇಂದು ಬೆಳಗ್ಗೆ ವಿಕಾಸಸೌಧದಲ್ಲಿ ಅಧಿಕಾರಿಗಳು ಹಾಗೂ ಖಾಸಗಿ ಕಂಪೆನಿಗಳ ಜೊತೆ ಚರ್ಚೆ ಮಾಡಿ, ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ …

Read More »

ಅನುಮತಿ ಪಡೆಯದೆ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆ, ಕಟ್ಟಡ ಮಾಲೀಕರಿಗೆ ಕಾದಿದೆ ಗ್ರಹಚಾರ..

ಬೆಂಗಳೂರು, ಮಾ.23- ಬೆಂಗಳೂರು ಮಹಾನಗರದಲ್ಲಿ ಸಿಇ ಹಾಗೂ ಸಿಇಒ ನಿಂದ ಅನುಮತಿ ಪಡೆಯದೆ ಕಾರ್ಯ ನಿರ್ವಹಿಸುತ್ತಿರುವ ಕಾರ್ಖಾನೆಗಳು ಮತ್ತು ಕಟ್ಟಡಗಳ ಮಾಲೀಕರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವ ಆನಂದ್‍ಸಿಂಗ್ ವಿಧಾನ ಪರಿಷತ್‍ನಲ್ಲಿ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಮಹಾನಗರದಲ್ಲಿ ಕಾನ್‍ಸೆಂಟ್ ಫಾರ್ ಎಸ್ಟಾಬ್ಲಿಷ್‍ಮೆಂಟ್ ಹಾಗೂ ಕಾನ್‍ಸೆಂಟ್ ಫಾರ್ ಆಪರೇಷನ್‍ನಿಂದ ಕಟ್ಟಡಗಳು ಮತ್ತು ಕಾರ್ಖಾನೆಗಳು ಕಡ್ಡಾಯವಾಗಿ …

Read More »

ರಾಜಕೀಯ ವೈರತ್ವವನ್ನು ಮರೆತು ಸ್ವತಃ ಯಡಿಯೂರಪ್ಪನವರೆ ಇಂದಿರಾ ಕ್ಯಾಂಟೀನಲ್ಲಿ‌ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದಾರೆ

ರಾಜಕೀಯ ವೈರತ್ವವನ್ನು ಮರೆತು ಸ್ವತಃ ಯಡಿಯೂರಪ್ಪನವರೆ ಇಂದಿರಾ ಕ್ಯಾಂಟೀನಲ್ಲಿ‌ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದಾರೆ. ಈ ಸಮಯದಲ್ಲಿ ಮೋದಿ ಹೇಳಿದ್ಕೆ ನಾನ್ ಚಪ್ಪಾಳೆ ತಟ್ಟಲ್ಲ, ಆವತ್ತು ಸಿದ್ದು ಕ್ಯಾಂಟೀನ್ ಮಾಡಿದ್ಕೆ ಇವತ್ತು ಊಟ ಸಿಕ್ತಿರೋದು ಅಂತ ಕೆಳಮಟ್ಟದ ರಾಜಕೀಯ ಮಾಡೋದು ಬಿಟ್ಟು ‌ಎಲ್ಲರು ಒಂದಾಗಿ. ಇವತ್ತು ನೀವು ಸೋಲಿಸಬೇಕಿರುವುದು ಮೋದಿನೊ, ಸಿದ್ದುನೊ, ಕಾಂಗ್ರೆಸ್ಸೊ, ಬಿಜೆಪಿನೊ ಅಲ್ಲ…. ಇಡೀ ದೇಶಕ್ಕೆ ಮಾರಕವಾಗಿರೊ ಕೊರೊನವನ್ನ! ?

Read More »

ನಗರದಲ್ಲಿನ ಇಂದಿರಾ ಕ್ಯಾಂಟೀನ್ ನಲ್ಲಿ ಬಡವರಿಗೆ ಉಚಿತ  ಊಟ, ತಿಂಡಿ   ನೀಡಲಾಗುವುದು:B.S.Y.

ಬೆಂಗಳೂರು: ನಗರದಲ್ಲಿನ ಇಂದಿರಾ ಕ್ಯಾಂಟೀನ್ ನಲ್ಲಿ ಬಡವರಿಗೆ ಉಚಿತ  ಊಟ, ತಿಂಡಿ   ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ವಿಧಾನಸೌಧದಲ್ಲಿ  ಇಂದು ಸುದ್ದಿಗೋಷ್ಠಿ ನಡೆಸಿ  ಮಾತನಾಡಿದ ಅವರು, ಮಾ. 31ರೆವರೆಗೆ ಬಂದ್ ಮುಂದುವರೆಸಲಾಗುವುದು.  ಕೊರೊನಾ ವೈರಸ್ ವಿರುದ್ದ  ಹೋರಾಟ ನಡೆಸಲು ಸರ್ಕಾರ ಸನ್ನದ್ಧವಾಗಿದೆ. ವೈದ್ಯರೊಂದಿಗೆ ಸಭೆ ನಡೆಸಿದ್ದೇವೆ. ವೈದ್ಯರು ಸಲಹೆಗಳನ್ನು ನೀಡಿದ್ದು, ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವುದು  ಎಂದು ತಿಳಿಸಿದರು. 30 ಫೀಮರ್ ಕ್ಲಿನಿಕ್ ತೆರೆಯಲಾಗುವುದು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ …

Read More »

ಜನರ ಜೀವದ ಜತೆಗೆ ಚೆಲ್ಲಾಟವಾಡಿ ಪರಿಸ್ಥಿತಿ ಲಾಭ ಪಡೆದುಕೊಳ್ಳವವರಿಗೆ ತಕ್ಕ ಶಾಸ್ತಿ:ಲಕ್ಷ್ಮಣ ಸವದಿ

ಬೆಂಗಳೂರು : ಜನರ ಜೀವದ ಜತೆಗೆ ಚೆಲ್ಲಾಟವಾಡಿ ಪರಿಸ್ಥಿತಿ ಲಾಭ ಪಡೆದುಕೊಳ್ಳವವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಖಾಸಗಿ ವಾಹನಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊರೊನಾ ವೈರಸ್ ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಸಾರಿಗೆ ಸಂಸ್ಥೆಗಳ ಬಸ್ಸುಗಳ ಮತ್ತು ರೈಲು ಸಂಚಾರಗಳನ್ನು ಕಡಿಮೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಖಾಸಗಿ ವಾಹನಗಳ ಮಾಲೀಕರು ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆದು …

Read More »