ಬೆಂಗಳೂರು. ಆಟೋ ಚಾಲಕನ ಮಗಳಾಗಿ ಹುಟ್ಟಿ ಆರ್ಕಿಟೆಕ್ಚರ್ ಎಂಜಿನಿಯರ್ ಆಗಿ ತನ್ನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದ ಯುವತಿ ಮಸಣ ಸೇರಿದ್ದಾಳೆ. ಹಳಿ ತಪ್ಪಿದ ಯುವತಿಯ ನಡೆ ದುರಂತ ಅಂತ್ಯ ಕಂಡಿದ್ದು ದುರದೃಷ್ಟಕರ ಸಂಗತಿ. 5 ವರ್ಷದ ಪ್ರೀತಿಗೆ ಕೈಕೊಟ್ಟು ಎಂದು ಮಾಜಿ ಪ್ರಿಯಕರನ ಸ್ನೇಹಿತನ ಜೊತೆ ಹೋದ ಯುವತಿ ಶವವಾಗಿದ್ದಾಳೆ. ಈ ಪ್ರೀತಿ ಅನ್ನೋದೆ ಹೀಗೆ… ಪ್ರೀತಿ ಪಡೆಯೋಕೆ ಏನು ಬೇಕಾದರೂ ಮಾಡಿಸುತ್ತದೆ. ಅದೇ ರೀತಿ ಪ್ರೀತಿ ಕಳೆದುಕೊಂಡಾಗ …
Read More »ಪರೀಕ್ಷೆ ನಡೆಸಿದಾಗ ಕಳ್ಳಾಟವಾಡುತ್ತಾ ಕೊರೊನಾ?
ಬೆಂಗಳೂರು: ಸಂಪರ್ಕಿತರನ್ನು ಕೂಡಲೇ ಪರೀಕ್ಷಿಸಿದರೆ ಪಕ್ಕಾ ರಿಸಲ್ಟ್ ಗೊತ್ತೇ ಆಗಲ್ಲವಂತೆ. ಸಂಪರ್ಕಿತರನ್ನು ಪರೀಕ್ಷೆ ನಡೆಸಿದರೆ ನೆಗೆಟಿವ್ ಬರುವ ಸಾಧ್ಯತೆಯೇ ಹೆಚ್ಚು ಎಂದು ಕೊರೊನಾ ಸೋಂಕು ಪರೀಕ್ಷೆ ಸಂಬಂಧ ಹೊಸ ಅಧ್ಯಯನ ವರದಿಯಲ್ಲಿ ಬೆಚ್ಚಿಬೀಳಿಸುವ ಅಂಶ ಬಯಲಾಗಿದೆ. ತಕ್ಷಣ ಪರೀಕ್ಷೆ ಮಾಡಿದರೆ ನೆಗೆಟಿವ್ ಬರುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಇನ್ನಷ್ಟು ಅನಾಹುತ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸನ್ ಜನರಲ್‍ನಲ್ಲಿ ಸಂಶೋಧನಾ ವರದಿಯಲ್ಲಿ …
Read More »ಇಂದು 204 ಮಂದಿಗೆ ಕೊರೊನಾ- ಡೆಡ್ಲಿ ವೈರಸ್‍ಗೆ ಮೂವರು ಬಲಿ….
ಬೆಂಗಳೂರು: ಇಂದು 204 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದ್ದು, ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ. ಕೊರೊನಾ ಮೂವರನ್ನು ಬಲಿ ಪಡೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 72ಕ್ಕೆ ಏರಿಕೆ ಆಗಿದೆ. 204ರಲ್ಲಿ ಅಂತರಾಜ್ಯ ಪ್ರಯಾಣ ಹಿನ್ನೆಲೆ ಹೊಂದಿದ 157 ಪ್ರಕರಣಗಳಿವೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಯಾದಗಿರಿ 66, ಉಡುಪಿ 22, ಬೆಂಗಳೂರು 17, ಕಲಬುರಗಿ 16, ರಾಯಚೂರು 15, ಬೀದರ್ 14, ಶಿವಮೊಗ್ಗ 10, ದಾವಣಗೆರೆ 9, ಕೋಲಾರ 6, …
Read More »ರಾಜಾಜಿನಗರದ ಪ್ರಿಂಟಿಂಗ್ ಪ್ರೆಸ್‍ನ ಮಹಿಳಾ ಉದ್ಯೋಗಿಗೆ ಕೊರೊನಾ…..
ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇತ್ತ ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಹರಡಿ ಆತಂಕವನ್ನು ಹೆಚ್ಚಿಸಿದೆ. ರಾಜಾಜಿನಗರದ ಪ್ರಿಂಟಿಂಗ್ ಪ್ರೆಸ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಗೆ ಇಂದು ಕೊರೊನಾ ತಗುಲಿರುವುದು ದೃಢಪಟ್ಟಿದೆ. ಅದರಲ್ಲೂ ಮಹಿಳೆ ಪ್ರಯಾಣದ ಹಿನ್ನೆಲೆ ಬೆಂಗಳೂರಿನ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಸೋಂಕಿತ ಮಹಿಳೆಯು ಶಿವಾಜಿನಗರದ ನಿವಾಸಿಯಾಗಿದ್ದು ಕೊರೊನಾ ಗುಣಲಕ್ಷಣಗಳು ಕಂಡುಬಂದ ಹಿನ್ನೆಲೆ ತಪಾಸಣೆ ಮಾಡಿಸಿಕೊಂಡಿದ್ದರು. ಸದ್ಯ ರಿಪೋರ್ಟ್ ಬಂದಿದ್ದು, ಸೋಂಕು ತಗುಲಿರುವುದು …
Read More »ಮಾಧುಸ್ವಾಮಿ ಮತ್ತೆ ಎಡವಟ್ಟು – 6, 7 ತರಗತಿಗೆ ಆನ್‌ಲೈನ್ ಶಿಕ್ಷಣ ಇದೆ
ಬೆಂಗಳೂರು: ಸುದ್ದಿಗೋಷ್ಠಿ ವೇಳೆ ಮಾಧುಸ್ವಾಮಿ ಮತ್ತೆ ಎಡವಟ್ಟು ಮಾಡಿಕೊಂಡಿದ್ದು, ಈಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿ 6 ಮತ್ತು 7ನೇ ತರಗತಿಗೆ ಆನ್‌ಲೈನ್ ಶಿಕ್ಷಣ ರದ್ದು ಸಂಬಧ ಸರ್ಕಾರ ನಿರ್ಧಾರ ಪ್ರಕಟಿಸಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸುರೇಶ್ ಕುಮಾರ್, ಕರ್ನಾಟಕ ಸರ್ಕಾರ ಎಲ್‌ಕೆಜಿ, ಯುಕೆಜಿ, 1 ರಿಂದ 5ನೇ ತರಗತಿಯವರೆಗಿನ ಆನ್‌ಲೈನ್ ಶಿಕ್ಷಣವನ್ನು ರದ್ಧು ಮಾಡಿದೆ. 6 ಮತ್ತು 7ನೇ ತರಗತಿಯವರೆಗಿನ ಆನ್‌ಲೈನ್ …
Read More »1 ರಿಂದ 7ನೇ ತರಗತಿಯವರೆಗೂ ಆನ್ಲೈನ್ ಶಿಕ್ಷಣ ಇರುವುದಿಲ್ಲ:ಜೆ.ಸಿ ಮಾಧುಸ್ವಾಮಿ……..
ಬೆಂಗಳೂರು: ರಾಜ್ಯದಲ್ಲಿ 1 ರಿಂದ 7ನೇ ತರಗತಿಯವರೆಗೂ ಆನ್ಲೈನ್ ಶಿಕ್ಷಣ ಇರುವುದಿಲ್ಲ. 8 ಹಾಗೂ 9ನೇ ತರಗತಿಗಳಿ ಆನ್ ಲೈನ್ ಶಿಕ್ಷಣದ ಬಗ್ಗೆ ಇನ್ನೂ ನಿರ್ಧರಿಸಬೇಕಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತಾಡಿದ ಸಚಿವ ಮಾಧುಸ್ವಾಮಿ ಮಕ್ಕಳಿಗೆ ಆನ್ಲೈನ್ ಶಿಕ್ಷಣ ನೀಡುವ ಸಂಬಂಧ ಪ್ರತಿಕ್ರಿಯಿಸಿದರು. 1-7ನೇ ತರಗತಿಯವರೆಗೂ ಮಕ್ಕಳಿಗೆ ಆನ್ಲೈನ್ ಎಜುಕೇಷನ್ ನೀಡದಿರಲು ಸಂಪಟುದಲ್ಲಿ ತೀರ್ಮಾನ ಮಾಡಲಾಗಿದೆ. ಹೀಗಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್ಲೈನ್ ಶಿಕ್ಷಣ …
Read More »ಪರೀಕ್ಷೆ ನಡೆಸದೆ ಎಲ್ಲರನ್ನೂ ಪಾಸ್ ಮಾಡುವಂತೆ ವಾಟಾಳ್ ಪ್ರತಿಭಟನೆ …………
ಬೆಂಗಳೂರು, ಜೂ.11- ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಆನ್‍ಲೈನ್ ತರಗತಿಗಳು ಬೇಡ ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ನಾಗರಾಜ್ ವಿಧಾನಸೌಧದ ಎದುರು ಇಂದು ವಿನೂತನ ಚಳವಳಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಂಧ್ರ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದು ಮಾಡಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದು ಮಾಡಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಫಾರ್ಮಸಿ, ಎಂಜಿನಿಯರಿಂಗ್, …
Read More »ಅಧಿಕ ಶುಲ್ಕ ವಸೂಲಿ ಮಾಡುವ ಶಾಲೆಗಳಿಗೆ ಸುರೇಶ ಕುಮಾರ್ ವಾರ್ನಿಂಗ್………..
ಬೆಂಗಳೂರು, ಜೂ.11- ಯಾವುದೇ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪೋಷಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವ ದೂರುಗಳು ಬಂದರೆ ಕಠಿಣ ಕ್ರಮ ಜರುಗಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಶುಲ್ಕ ಸಂಗ್ರಹ ಮಾಡಬಾರದು ಎಂದು ಶಿಕ್ಷಣ ಇಲಾಖೆ ಒಂದೂವರೆ ತಿಂಗಳ ಹಿಂದೆಯೇ ಆದೇಶ ಹೊರಡಿಸಿದೆ. ಈವರೆಗೂ ಯಾವ ಶಾಲೆಯ ವಿರುದ್ಧವೂ ಪೋಷಕರು ದೂರು ನೀಡಿಲ್ಲ. ಒಂದು ವೇಳೆ ದೂರು ಕೇಳಿ ಬಂದಿದ್ದೇಯಾದರೆ ಸರ್ಕಾರ …
Read More »ಬಿಎಂಟಿಸಿ ಉದ್ಯೋಗಿಗೆ ಕೊರೊನಾಸೋಂಕುದೃಢ……
ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಬಿಎಂಟಿಸಿ ಉದ್ಯೋಗಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋವಿಡ್-19 ಪರೀಕ್ಷೆಯ ರಿಪೋರ್ಟ್ ಪಾಸಿಟಿವ್ ಬರುತ್ತಿದ್ದಂತೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಲು ಆರಂಭಿಸಿದ್ದಾರೆ. ಸೋಂಕಿತ ಬಿಎಂಟಿಸಿ ಉದ್ಯೋಗಿ ಮೂರು ದಿನಗಳ ರಜೆಯಲ್ಲಿದ್ದು, ಸ್ವಯಂ ಪ್ರೇರಿತವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದರು. ಜೂನ್ 10ರಂದು ಬಂದ ರಿಪೋರ್ಟ್ …
Read More »ಚಿತ್ರೀಕರಣದಲ್ಲಿ ಭಾಗಿಯಾಗಲು ಅವಕಾಶ ಕೊಡಿ – ಹಿರಿಯ ಕಲಾವಿದರಿಂದ ಡಿಸಿಎಂಗೆ ಮನವಿ
ಬೆಂಗಳೂರು: ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಹಿರಿಯ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ಕೊಡಿಸಿ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ಕಿರುತೆರೆಯ ಒಳಾಂಗಣ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಆದರೆ 60 ವರ್ಷ ಮೇಲ್ಪಟ್ಟ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಳ್ಳದಂತೆ ಷರತ್ತು ವಿಧಿಸಿದೆ. ಹೀಗಾಗಿ ಸೀರಿಯಲ್ ತಂಡ ಹಿರಿಯ ಕಲಾವಿದರನ್ನು ಬಿಟ್ಟು ಶೂಟಿಂಗ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಹಿರಿಯ ಕಲಾವಿದರು ಶೂಟಿಂಗ್ ಇಲ್ಲದೇ, ಸಂಪಾದನೆಗೆ ಬೇರೆ ದಾರಿಯಿಲ್ಲದೇ …
Read More »