Breaking News

ಬೆಂಗಳೂರು

ಬೆಂಗಳೂರಲ್ಲಿ ಎರಡೂವರೆ ಲಕ್ಷ ಸೋಂಕಿತರು…………….?

ಬೆಂಗಳೂರು: ರಾಜಧಾನಿ ಬೆಂಗಳೂರು ದಿನೇ ದಿನೇ ಭಯಾನಕವಾಗಿ ಮಾರ್ಪಡುತ್ತಿದೆ. ರಾಜ್ಯ ಸರ್ಕಾರದ ಪ್ರಕಾರ ಬೆಂಗಳೂರಲ್ಲಿ ಇರೋದು 23 ಸಾವಿರ ಸೋಂಕಿತರು. ಆದರೆ ರಾಜಧಾನಿಯಲ್ಲಿ ಸೋಂಕಿತರ ಪ್ರಮಾಣ ಬರೋಬ್ಬರಿ 2.23 ಲಕ್ಷ ಮಂದಿ ಇರಬಹುದು ಎಂದು ರಾಜ್ಯ ಕೊರೊನಾ ಕಾರ್ಯಪಡೆಯ ಸದಸ್ಯ ಡಾ.ಗಿರಿಧರ್ ಬಾಬು ಹೇಳುತ್ತಾರೆ. ರಾಜ್ಯ ಸರ್ಕಾರ ಸೋಂಕು ಹರಡುವಿಕೆ ನಿಯಂತ್ರಿಸಲು ವಿಫಲವಾಗಿರುವ ಕಾರಣ ಹೆಮ್ಮಾರಿ ಮಹಾ ಸ್ಫೋಟ ಆಗಿದ್ದು, ಎಷ್ಟೋ ಮಂದಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿರಬಹುದು. ಹಾಗೆಯೇ ಸೋಂಕು …

Read More »

ಸಚಿವ ಸುರೇಶ್ ಕುಮಾರ್ ಹೆಸರಿನ ನಕಲಿ ಟ್ವಿಟರ್ ಖಾತೆ, ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ತಪ್ಪು ಸಂದೇಶವನ್ನು ಹರಿಬಿಟ್ಟಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಲಾಗಿದೆ. ಮಂಗಳವಾರ ಮಾನ್ಯ ಸಚಿವರು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಫಲಿತಾಂಶ ಘೋಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸಚಿವರ ಹೆಸರಿನ ನಕಲಿ ಟ್ವಿಟರ್ ಖಾತೆಯಲ್ಲಿ “ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿಗಳಿಗೆ 26 ಗ್ರೇಸ್ ಅಂಕಗಳನ್ನು ನೀಡುವ ಕುರಿತು ಮೌಲ್ಯಮಾಪಕರಿಗೆ …

Read More »

ಪೊಲೀಸ್ ಫೋರ್ಸ್ ಬಳಸುವ ಅನಿವಾರ್ಯತೆ ತಂದುಕೊಡಬೇಡಿ: ಬೊಮ್ಮಾಯಿ

ಬೆಂಗಳೂರು: ನಗರದಲ್ಲಿ ದಿನಸಿ ಸಾಮಾನು ಖರೀದಿಗೆ 12 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಮಯವನ್ನು ಯಾರು ಯಾರು ಬಳಕೆ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ. ಆದರೆ 12 ಗಂಟೆ ಬಳಿಕ ಅವಕಾಶವಿಲ್ಲ. ನಿಮ್ಮ ವ್ಯವಹಾರಗಳನ್ನು ನಿಗದಿತ ಸಮಯದ ಒಳಗೆ ಮುಗಿಸಿಕೊಳ್ಳಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ನಿಗದಿತ ಅವಧಿ ಒಳಗೆ ಅಗತ್ಯ ವಸ್ತುಗಳನ್ನು ಖರೀದಿಸಿ ನಿಮ್ಮ ಕಾರ್ಯ ಪೂರ್ಣಗೊಳಿಸಿ. ಪೊಲೀಸ್ ಫೋರ್ಸ್ ಬಳಸುವ ಅನಿವಾರ್ಯತೆ …

Read More »

ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು

ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಧ್ರುವ, ನನಗೆ ಹಾಗೂ ನನ್ನ ಪತ್ನಿಗೆ ಕೊರೊನಾ ಸೋಂಕು ದೃಢವಾಗಿದೆ. ಸದ್ಯ ಕೊರೊನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಶೀಘ್ರವೇ ಗುಣಮುಖರಾಗಿ ಹೊರಬರುತ್ತೇವೆ ಎಂದಿದ್ದಾರೆ. ಅಲ್ಲದೆ ನಮ್ಮ ಜೊತೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ …

Read More »

ಯಾರಿಗೂ ಯಾವುದೇ ಪಾಸ್ ನೀಡಿಲ್ಲ’ – ಠಾಣೆಗಳಿಗೆ ಕಮೀಷನರ್ ಭಾಸ್ಕರ್ ರಾವ್ ಸೂಚನೆ

ಬೆಂಗಳೂರು: ಏಳು ದಿನ ಬೆಂಗಳೂರು ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಮೀಷನರ್ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ. ಕಮೀಷನರ್ ಭಾಸ್ಕರ್ ರಾವ್ ಕಂಟ್ರೋಲ್ ರೂಂ ಮೂಲಕ ಪೊಲೀಸ್ ಠಾಣೆಗಳಿಗೆ ಸೂಚನೆ ಕೊಟ್ಟಿದ್ದಾರೆ. ಇಂದಿನಿಂದ ಜುಲೈ 22ರ ಬೆಳಗಿನ ಜಾವ 5 ಗಂಟೆಯವರೆಗೆ ಲಾಕ್‍ಡೌನ್ ಇರುತ್ತೆ. ಈ ವೇಳೆ ಕೆಲವು ವ್ಯಾಪಾರ ವಹಿವಾಟುಗಳು ನಡೆಯುತ್ತೆ ಅವರಿಗೆ ಅವಕಾಶ ಮಾಡಿ ಕೊಡಬೇಕು. ಅಲ್ಲದೇ ಲಾಕ್‍ಡೌನ್ ವೇಳೆ ಸಾರ್ವಜನಿಕರ ಜೊತೆ ಮೃದುವಾಗಿ …

Read More »

ಪರೀಕ್ಷೆ ನಡೆಸಲು ಮುಂದಾಗಿದ್ದ ಕ್ರೈಸ್ಟ್‌ ಸೇರಿ ಡೀಮ್ಡ್‌ ವಿವಿಗಳಿಗೆ ಸರ್ಕಾರದಿಂದ ಚಾಟಿ

ಬೆಂಗಳೂರು: ಕೋವಿಡ್‌ 19 ಸಮಯದಲ್ಲೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಲು ಮುಂದಾಗುತ್ತಿದ್ದ ಬೆಂಗಳೂರಿನ ಕ್ರೈಸ್ಟ್‌ ಸೇರಿ, ಡೀಮ್ಡ್‌ ವಿಶ್ವವಿದ್ಯಾಲಯಗಳಿಗೆ ರಾಜ್ಯ ಸರ್ಕಾರ ಚಾಟಿ ಬೀಸಿದೆ. ಅಂತಿಮ ವರ್ಷದ ಪರೀಕ್ಷೆ ಬಿಟ್ಟು ಇನ್ಯಾವುದೇ ತರಗತಿಗಳಿಗೆ ಪರೀಕ್ಷೆ ನಡೆಸದಂತೆ ಕ್ರೈಸ್ಟ್ ವಿಶ್ವವಿದ್ಯಾಲಯ ಸೇರಿ ಎಲ್ಲಾ ಡೀಮ್ಡ್ ವಿವಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಇಂಟರ್ನಲ್ ಅಸಸ್ಮೆಟ್ ಶೇ.50 ಹಾಗೂ ಹಿಂದಿನ ಪರೀಕ್ಷೆಗಳಿಂದ ಶೇ.50 ಅಂಕದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪಾಸ್‌ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆ …

Read More »

ಲಾಕ್‍ಡೌನ್‍ನ ಮೊದಲ ದಿನ ನವಯುಗ ಟೋಲ್, ಮಲ್ಲೇಶ್ವರಂ, ಮೆಜೆಸ್ಟಿಕ್ ಸೇರಿದಂತೆ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಬಂದ್

ಬೆಂಗಳೂರು: ಲಾಕ್‍ಡೌನ್‍ನ ಮೊದಲ ದಿನ ನವಯುಗ ಟೋಲ್, ಮಲ್ಲೇಶ್ವರಂ, ಮೆಜೆಸ್ಟಿಕ್ ಸೇರಿದಂತೆ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‍ನಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಎಂಟ್ರಿ ಮತ್ತು ಎಕ್ಸಿಟ್‍ಗಳನ್ನ ಬ್ಯಾರಿಕೇಡ್‍ಗಳನ್ನ ಹಾಕಿ ಮುಚ್ಚಲಾಗಿದೆ. ಯಾವುದೇ ಬಸ್‍ಗಳ ಓಡಾಟವಿಲ್ಲ. ಇಡೀ ಮೆಜೆಸ್ಟಿಕ್ ಸುತ್ತಮುತ್ತ ಪೊಲೀಸರು ರಸ್ತೆಯನ್ನು ಬಂದ್ ಮಾಡಿದ್ದಾರೆ. ಅಲ್ಲದೇ ಮೆಜೆಸ್ಟಿಕ್ ನಿಲ್ದಾಣದ ಅಂಗಡಿ ಮುಂಗಟ್ಟು ಸಹ ಸಂಪೂರ್ಣ ಬಂದ್ ಆಗಿವೆ. ಹೋಟೆಲ್, ಟೀ ಅಂಗಡಿಗಳು ಓಪನ್ ಇಲ್ಲ. …

Read More »

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನೂರಾರು ಜನ

ಬೆಂಗಳೂರು: ಇಂದಿನಿಂದ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್‍ಡೌನ್ ಆಗಿದೆ. ಹೀಗಾಗಿ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ. ಆದರೆ ರೈಲು ಸಂಚಾರ ಬಂದ್ ಮಾಡಿಲ್ಲ. ಹೀಗಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನೂರಾರು ಜನರಿದ್ದಾರೆ. ಈ ಬಾರಿಯ ಲಾಕ್‍ಡೌನ್‍ನಲ್ಲಿ ರೈಲು ಮತ್ತು ಏರ್‌ಪೋರ್ಟ್ ಬಂದ್ ಮಾಡಿಲ್ಲ. ಹೀಗಾಗಿ ಅನೇಕರು ರೈಲು ಮತ್ತು ವಿಮಾನಗಳ ಮೂಲಕ ಪ್ರಯಾಣ ಮಾಡುತ್ತಿದ್ದಾರೆ. ಸಂಗೊಳ್ಳಿ ರೈಲ್ವೆ ನಿಲ್ದಾಣದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ಇದ್ದಾರೆ. …

Read More »

ಲಾಕ್‍ಡೌನ್ ಎಫೆಕ್ಟ್ – 2 ದಿನದಲ್ಲಿ 410 ಕೋಟಿ ಮೌಲ್ಯದ ಎಣ್ಣೆ ಸೇಲ್………….

ಬೆಂಗಳೂರು: ನಾಳೆಯಿಂದ ಬೆಂಗಳೂರು ಸೇರಿದಂತೆ ಏಳು ಜಿಲ್ಲೆಗಳು ಲಾಕ್‍ಡೌನ್ ಆಗಲಿವೆ. ಲಾಕ್‍ಡೌನ್ ಅವಧಿ ಡ್ರೈ ಡೇ ಅಗೋದ ಬೇಡ ಅಂತ ಮದ್ಯಪ್ರಿಯರು ಎಣ್ಣೆ ಖರೀದಿಗೆ ಮುಗಿಬಿದ್ದಿದ್ದರು. ಎರಡು ದಿನಗಳಲ್ಲಿ ಅಬಕಾರಿ ಇಲಾಖೆ 410 ಕೋಟಿ ರೂ. ಮೌಲ್ಯದ ಮದ್ಯವನ್ನು ಮಾರಾಟ ಮಾಡಿ ಬೊಕ್ಕಸ ತುಂಬಿಕೊಂಡಿದೆ. ಸೋಮವಾರ ಒಂದೇ ದಿನ ಬರೋಬ್ಬರಿ 230 ಕೋಟಿ ಮೌಲ್ಯದ ಮದ್ಯವನ್ನು ಕೆಎಸ್‍ಬಿಎಲ್ (ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ) ಮಾರಿದೆ. ಸೋಮವಾರ 215 ಕೋಟಿ …

Read More »

ಇಂದು ಸಂಜೆಯಿಂದ ಸ್ಥಬ್ದವಾಗಲಿದೆ ಬೆಂಗಳೂರು………

ಬೆಂಗಳೂರು,ಜು.14- ಬೆಂಗಳೂರು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಇಂದು ರಾತ್ರಿಯಿಂದ ಒಂದು ವಾರ ಕಾಲ ಜÁರಿಗೆ ಬರಲಿರುವ ಲಾಕ್‍ಡೌನ್ ಸಂದರ್ಭದಲ್ಲಿ ಬಹುತೇಕ ಎಲ್ಲ ಸೇವೆಗಳು ಬಂದ್ ಆಗಲಿವೆ. ಕೊರೊನಾ ಸೋಂಕು ತಡೆಯುವ ಸಲುವಾಗಿ ಸರ್ಕಾರ ಇಂದು ರಾತ್ರಿ 8ರಿಂದ ಜುಲೈ 22ರ ಬೆಳಗಿನ ಜಾವ 5 ಗಂಟೆವರೆಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್‍ಡೌನ್ ಮಾಡಲು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಹೀಗಾಗಿ ಇಂದು ಮಧ್ಯಾಹ್ನ 12ರಿಂದಲೇ ದಿನಸಿ …

Read More »