ಬೆಂಗಳೂರು: ಕೊರೊನಾ ನಡುವೆ ಚಿಕಿತ್ಸೆ ಸಿಗದೇ ತಿಂಗಳ ಹಸುಗೂಸೊಂದು ಜೀವ ಬಿಟ್ಟಿದೆ. ಜುಲೈ 11ರಂದು ಹೃದಯದ ಸಮಸ್ಯೆಗೆ ತುತ್ತಾದ ಒಂದು ತಿಂಗಳ ಮಗುವನ್ನು ಉಳಿಸಿಕೊಳ್ಳಲು ಬೆಂಗಳೂರಿನ ಮಂಜುನಾಥನಗರದ ಪೋಷಕರು ಪಟ್ಟ ಪಾಡು ಅಷ್ಟಿಷ್ಟಲ್ಲ. ಬರೋಬ್ಬರಿ 36 ಗಂಟೆಗಳ ಕಾಲ 200 ಕಿಲೋಮೀಟರ್ ಸುತ್ತಿದ್ರೂ, ಹತ್ತಾರು ಆಸ್ಪತ್ರೆಗಳ ಮೆಟ್ಟಿಲನ್ನು ಹತ್ತಿಳಿದ್ರೂ, ನಿರ್ದಯಿ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಪರೀಕ್ಷಿಸಿ ಅಡ್ಮಿಟ್ ಮಾಡಿಕೊಂಡಿಲ್ಲ.ಬೆಡ್ ಮತ್ತು ಕೊರೊನಾ ನೆಪ ಹೇಳಿದ ಆಸ್ಪತ್ರೆಗಳು ಮಗುವನ್ನು ಅಡ್ಮಿಟ್ ಮಾಡಿಕೊಳ್ಳಲು …
Read More »ಚಂದನವನದ ಪದ್ಮಾವತಿಯ ಹೊಸ ಲುಕ್……….
ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ಅಜ್ಞಾತದಲ್ಲಿರುವ ಚಂದನವನದ ಪದ್ಮಾವತಿ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ರಮ್ಯಾ ಅಜ್ಞಾತದಲ್ಲಿದ್ದರೂ ಅಭಿಮಾನಿಗಳು ಮಾತ್ರ ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದ್ರೆ ಸ್ಯಾಂಡಲ್‍ವುಡ್ ಕ್ವೀನ್ ದರ್ಶನಕ್ಕಾಗಿ ಎಷ್ಟೋ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಇನ್‍ಸ್ಟಾಗ್ರಾಂ ಸ್ಟೇಟಸ್ ಡಿಫೆರೆಂಟ್ ಆಗಿ ಪೌಟ್ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ರಮ್ಯಾ ಪೋಸ್ಟ್ ಮಾಡಿಕೊಂಡಿದ್ದಾರೆ ಒಟ್ಟು 10 ವಿಭಿನ್ನವಾಗಿ ಪೋಸ್ ನೀಡಿರುವ ರಮ್ಯಾ ಫೋಟೋಗಳು ಸೋಶಿಯಲ್ …
Read More »ಬೆಡ್ ಸಿಗದೆ ಕೊರೊನಾಗೆ ಪೌರ ಕಾರ್ಮಿಕ ಮಹಿಳೆ ಸಾವು
ಬೆಂಗಳೂರು: ಕೊರೊನಾ ವೈರಸ್ ಭಯ, ಲಾಕ್‍ಡೌನ್ ನಡುವೆಯೂ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದ ಪೌರ ಕಾರ್ಮಿಕ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ 5-6 ಆಸ್ಪತ್ರೆಗಳಿಗೆ ಅಲೆದಾಡಿದರೂ, ಬೆಡ್ ಸಿಕ್ಕಿಲ್ಲ. ಹೀಗಾಗಿ ಕೊರೊನಾ ವಾರಿಯರ್ ಕೊನೆಯುಸಿರೆಳೆದಿದ್ದಾರೆ. ಹೆಬ್ಬಾಳದ ವಿಶ್ವನಾಥ ನಾಗನಹಳ್ಳಿಯ 30 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಕಲಿದ್ದು, ಚಿಕಿತ್ಸೆಗಾಗಿ ಮಹಿಳೆ ಐದಾರು ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದರೂ ಎಲ್ಲಿಯೂ ಬೆಡ್ ಸಿಕ್ಕಿಲ್ಲ. ಐದು ಆಸ್ಪತ್ರೆಗಳಲ್ಲಿ ಬೆಡ್‍ಗಳಿಲ್ಲ ಎಂದು ಹೇಳಿ ಕಳುಹಿಸಲಾಗಿದೆ. …
Read More »ಬೆಂಗಳೂರಿನಲ್ಲಿ ಮತ್ತೆರಡು ಕೋವಿಡ್ ಕೇರ್ ಸೆಂಟರ್ ತೆರೆಯಲು ಮುಂದಾದ ಸರ್ಕಾರ
ಬೆಂಗಳೂರು,ಜು.16- ಕೊರೋನಾ ಮಟ್ಟಹಾಕಲು ಕಠಿಣ ಕ್ರಮಗಳನ್ನು ತೆಗೆದುಕೊಂಡು ದಿಟ್ಟ ಹೋರಾಟ ಮಾಡುತ್ತಿರುವ ರಾಜ್ಯ ಸರ್ಕಾರ ಇದೀಗ ನಗರದಲ್ಲಿ ಮತ್ತೆರಡು ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಕೋವಿಡ್-19 ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ನಿನ್ನೆಯಷ್ಟೇ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ್ದು, ಸಭೆಯಲ್ಲಿ ಬೆಂಗಳೂರು ನಗರದಲ್ಲಿ 2 ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. ಈಗಾಗಲೇ ನಗರದಲ್ಲಿ 8 ಕೋವಿಡ್ ಕೇರ್ ಕೇಂದ್ರಗಳು ಅಸ್ತಿತ್ವದಲ್ಲಿದ್ದು, …
Read More »ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಕ್ಕೆ ಬೆಳಗಾವಿಯಲ್ಲಿ 124, ಕಲಬುರಗಿಯಲ್ಲಿ 106 ಮಂದಿ ವಿರುದ್ಧ ಎಫ್‌ಐಆರ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಕ್ವಾರಂಟೈನ್‌ಗಳು ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ. ಇಲ್ಲಿಯವರೆಗೆ ಬರೋಬ್ಬರಿ 1.51 ಲಕ್ಷ ಮಂದಿ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹೌದು. ಕೋವಿಡ್ 19 ಸೋಂಕಿತರ ಪ್ರಥಮ ಸಂಪರ್ಕ ಮತ್ತು ದ್ವಿತೀಯ ಸಂಪರ್ಕಿತರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಆದರೆ ಕರ್ನಾಟಕದಲ್ಲಿ 2.25 ಲಕ್ಷ ಮಂದಿ ಈ ನಿಯಮವನ್ನು ಉಲ್ಲಂಘಿಸಿ ಸುತ್ತಾಟ ಮಾಡಿದ್ದಾರೆ. ಈ ಪೈಕಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು …
Read More »ಪ್ಲಾಸ್ಮಾ ದಾನ ಮಾಡಿದವರಿಗೆ 5 ಸಾವಿರ ರೂ. ಭತ್ಯೆ: ಸಚಿವ ಸುಧಾಕರ್
ಬೆಂಗಳೂರು: ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿದರೇ ಅವರಿಗೆ 5 ಸಾವಿರ ರೂ. ಭತ್ಯೆ ನೀಡುವುದಾಗಿ ಸರ್ಕಾರ ಘೋಷಿಸಿದೆ. ಗುಣಮುಖರಾದವರು 14-28 ದಿನಗಳ ಒಳಗೆ ಒಬ್ಬ ವ್ಯಕ್ತಿ ಒಂದು ಬಾರಿಯಷ್ಟೇ ದಾನ ಮಾಡಲು ಅವಕಾಶವಿದೆ. ಈಗಾಗಲೇ ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಆರಂಭಿಸಲಾಗಿದ್ದು, ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನವಾಗಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಮಹಾಮಾರಿ ಇನ್ನಷ್ಟು ವ್ಯಾಪಿಸೋ ಬಗ್ಗೆ ಎಚ್ಚರಿಕೆ ಬೆನ್ನಲ್ಲೇ ಸರ್ಕಾರ ಹೊಸ ಹೊಸ ಕ್ರಮಕ್ಕೆ ಮುಂದಾಗಿದೆ. ವಾರದ ಲಾಕ್‍ಡೌನ್ …
Read More »ಧಾರವಾಡ, ಬಳ್ಳಾರಿಯಲ್ಲಿ ಕೊರೊನಾ ಸೆಂಚೂರಿ- ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
ಬೆಂಗಳೂರು: ಇಂದು ಸಹ ರಾಜ್ಯಕ್ಕೆ ಕೊರೊನಾ ಸುನಾಮಿ ಅಪ್ಪಳಿಸಿದ್ದು, ಒಂದೇ ದಿನ 3,176 ಹೊಸ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು 2 ಸಾವಿರದ ಗಡಿಗೆ ಬಂದ್ರೆ, ಧಾರವಾಡ ಮತ್ತು ಬಳ್ಳಾರಿಯಲ್ಲಿ ಕೊರೊನಾ ಮಹಾಮಾರಿ ಸೆಂಚೂರಿ ಬಾರಿಸಿದೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 1,975, ಧಾರವಾಡ 139, ಬಳ್ಳಾರಿ 136, ಮೈಸೂರು 99, ವಿಜಯಪುರ 80, ದಕ್ಷಿಣ ಕನ್ನಡ 76, ಕಲಬುರಗಿ 67, ಉಡುಪಿ 52, ಯಾದಗಿರಇ 49, ಉತ್ತರ …
Read More »ಬೆಂಗಳೂರಲ್ಲಿ ಎರಡೂವರೆ ಲಕ್ಷ ಸೋಂಕಿತರು…………….?
ಬೆಂಗಳೂರು: ರಾಜಧಾನಿ ಬೆಂಗಳೂರು ದಿನೇ ದಿನೇ ಭಯಾನಕವಾಗಿ ಮಾರ್ಪಡುತ್ತಿದೆ. ರಾಜ್ಯ ಸರ್ಕಾರದ ಪ್ರಕಾರ ಬೆಂಗಳೂರಲ್ಲಿ ಇರೋದು 23 ಸಾವಿರ ಸೋಂಕಿತರು. ಆದರೆ ರಾಜಧಾನಿಯಲ್ಲಿ ಸೋಂಕಿತರ ಪ್ರಮಾಣ ಬರೋಬ್ಬರಿ 2.23 ಲಕ್ಷ ಮಂದಿ ಇರಬಹುದು ಎಂದು ರಾಜ್ಯ ಕೊರೊನಾ ಕಾರ್ಯಪಡೆಯ ಸದಸ್ಯ ಡಾ.ಗಿರಿಧರ್ ಬಾಬು ಹೇಳುತ್ತಾರೆ. ರಾಜ್ಯ ಸರ್ಕಾರ ಸೋಂಕು ಹರಡುವಿಕೆ ನಿಯಂತ್ರಿಸಲು ವಿಫಲವಾಗಿರುವ ಕಾರಣ ಹೆಮ್ಮಾರಿ ಮಹಾ ಸ್ಫೋಟ ಆಗಿದ್ದು, ಎಷ್ಟೋ ಮಂದಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿರಬಹುದು. ಹಾಗೆಯೇ ಸೋಂಕು …
Read More »ಸಚಿವ ಸುರೇಶ್ ಕುಮಾರ್ ಹೆಸರಿನ ನಕಲಿ ಟ್ವಿಟರ್ ಖಾತೆ, ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು
ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ತಪ್ಪು ಸಂದೇಶವನ್ನು ಹರಿಬಿಟ್ಟಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಲಾಗಿದೆ. ಮಂಗಳವಾರ ಮಾನ್ಯ ಸಚಿವರು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಫಲಿತಾಂಶ ಘೋಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸಚಿವರ ಹೆಸರಿನ ನಕಲಿ ಟ್ವಿಟರ್ ಖಾತೆಯಲ್ಲಿ “ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿಗಳಿಗೆ 26 ಗ್ರೇಸ್ ಅಂಕಗಳನ್ನು ನೀಡುವ ಕುರಿತು ಮೌಲ್ಯಮಾಪಕರಿಗೆ …
Read More »ಪೊಲೀಸ್ ಫೋರ್ಸ್ ಬಳಸುವ ಅನಿವಾರ್ಯತೆ ತಂದುಕೊಡಬೇಡಿ: ಬೊಮ್ಮಾಯಿ
ಬೆಂಗಳೂರು: ನಗರದಲ್ಲಿ ದಿನಸಿ ಸಾಮಾನು ಖರೀದಿಗೆ 12 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಮಯವನ್ನು ಯಾರು ಯಾರು ಬಳಕೆ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ. ಆದರೆ 12 ಗಂಟೆ ಬಳಿಕ ಅವಕಾಶವಿಲ್ಲ. ನಿಮ್ಮ ವ್ಯವಹಾರಗಳನ್ನು ನಿಗದಿತ ಸಮಯದ ಒಳಗೆ ಮುಗಿಸಿಕೊಳ್ಳಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ನಿಗದಿತ ಅವಧಿ ಒಳಗೆ ಅಗತ್ಯ ವಸ್ತುಗಳನ್ನು ಖರೀದಿಸಿ ನಿಮ್ಮ ಕಾರ್ಯ ಪೂರ್ಣಗೊಳಿಸಿ. ಪೊಲೀಸ್ ಫೋರ್ಸ್ ಬಳಸುವ ಅನಿವಾರ್ಯತೆ …
Read More »