ಬೆಂಗಳೂರು, ಆ.13- ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಮೊನ್ನೆ ರಾತ್ರಿ ಬೆಂಕಿ ಹಚ್ಚಿ ದಾಂಧಲೆ ಮಾಡಿ ಪರಾರಿಯಾಗಿರುವ ಗಲಭೆಕೋರರ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಈಗಾಗಲೇ ಪರಾರಿಯಾಗಿರುವ ಗಲಭೆಕೋರರ ಬಂಧನಕ್ಕೆ ಬಲೆ ಬೀಸಿವೆ.ಗಲಭೆ ಸಂದರ್ಭದಲ್ಲಿ ತೆಗೆದ ವಿಡಿಯೋ ಆಧರಿಸಿ ಆರೋಪಿಗಳನ್ನು ಗುರುತಿಸಿ ಅವರ ಬಂಧನಕ್ಕೆ ಈ ತಂಡಗಳು ಮುಂದಾಗಿವೆ.ನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ. ಈವರೆಗೂ ಸಂಘಟನೆಯ ಮುಖಂಡರು …
Read More »ಡೀಪ್ ಕೋಮಾಗೆ ಜಾರಿದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ
ನವದೆಹಲಿ, ಆ.13- ಮೆದುಳು ಸೂಕ್ಷ್ಮ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಜಿ ರಾಷ್ಟ್ರಪತಿ ಭಾರತ ರತ್ನ ಪ್ರಣವ್ ಮುಖರ್ಜಿ ಅವರ ಆರೋಗ್ಯ ಮತ್ತಷ್ಟು ವಿಷಮವಾಗಿದ್ದು, ಡೀಪ್ ಕೋಮಾ (ತೀವ್ರ ಪ್ರಜ್ಞಾಶೂನ್ಯ ಸ್ಥಿತಿ) ತಲುಪಿಸಿದ್ದಾರೆ. ಮೆದುಳಿನ ಸೂಕ್ಷ್ಮ ನರದಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಮುಖರ್ಜಿ ಅವರನ್ನು ಆಗಸ್ಟ್ 10ರಂದು ದೆಹಲಿಯ ಆರ್ಮಿಸ್ ರಿಸರ್ಚ್ ಅಂಡ್ ರೆಫರೆಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಸೋಂಕು ಸಹ ತಗುಲಿರುವುದು ದೃಢಪಟ್ಟಿತ್ತು. ಬಳಿಕ ಅವರ ಮೆದುಳಿನಲ್ಲಿ …
Read More »ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ಉಕ್ಕಿ ಹರಿಯುತ್ತಿದ್ದ ನದಿಗಳು ಈಗ ಸಹಜ ಸ್ಥಿತಿಗೆ ಮರಳಿವೆ.
ಬೆಂಗಳೂರು: ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ಉಕ್ಕಿ ಹರಿಯುತ್ತಿದ್ದ ನದಿಗಳು ಈಗ ಸಹಜ ಸ್ಥಿತಿಗೆ ಮರಳಿವೆ. ಭಾರೀ ಮಳೆಯಿಂದ ಕಂಗೆಟ್ಟಿದ್ದ ಜನರು ಈಗ ಮಳೆಯಿಂದ ಮನೆಯ ಸುತ್ತಮುತ್ತ ಆಗಿರುವ ಅವಾಂತರಗಳನ್ನು ಸರಿಪಡಿಸಿಕೊಳ್ಳುವತ್ತ ಗಮನಹರಿಸಿದ್ದಾರೆ. ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಮಾಹಿತಿ……. -ಘಟಪ್ರಭಾ ಜಲಾಶಯ ಗರಿಷ್ಠ ಮಟ್ಟ- 662.94 ಮೀಟರ್ ಇಂದಿನ ಮಟ್ಟ- 662 ಮೀಟರ್ ಗರಿಷ್ಠ ಸಾಮರ್ಥ್ಯ- 51 ಟಿಎಂಸಿ ಇಂದಿನ ನೀರು ಸಂಗ್ರಹ- 48.37 ಟಿಎಂಸಿ ಇಂದಿನ …
Read More »73ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಗಳೇ ಬಂದಿತ್ತು ಎಲ್ಲರಿಗೂ ಧನ್ಯವಾದ: ಸಿದ್ದರಾಮಯ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 73ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಗಳೇ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ತನಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನನ್ನ ಹುಟ್ಟುಹಬ್ಬಕ್ಕೆ ರಾಜ್ಯದಾದ್ಯಂತ ಹಿರಿಯ-ಕಿರಿಯ ಸ್ನೇಹಿತರು, ಹಿತೈಷಿಗಳು ಶುಭಾಶಯ ಕೋರಿದ್ದಾರೆ. ಅವರೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಹಾರೈಕೆ ಜನರ ಸೇವೆ ಮಾಡುವ ನನ್ನ ಮನೋಬಲವನ್ನು ಹೆಚ್ಚಿಸಿದೆ. ನಿಮ್ಮ ಸೇವೆಯ ಮೂಲಕವೇ ನಿಮ್ಮ ಪ್ರೀತಿಯ ಋಣ ತೀರಿಸಲು …
Read More »ಬೆಂಗಳೂರು ಗಲಭೆಯ ಹಿಂದೆ ಮೂವರ ಕೈವಾಡ
ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಮೇಲೆ ದಾಳಿಗೆ ಹಿಂದೆಯೇ ಪ್ಲಾನ್ ಮಾಡಲಾಗಿತ್ತು. ಆದರೆ ಅವಕಾಶಕ್ಕಾಗಿ ಹುಡುಕುಲಾಗುತ್ತಿತ್ತು. ಈ ಅವಕಾಶ ನಿನ್ನೆ ಸಿಕ್ಕಿತ್ತು ಎಂಬ ಮಾತುಗಳು ಈಗ ಕೇಳಿ ಬಂದಿದೆ.ಈ ಮಾತಿಗೆ ಪುಷ್ಟಿಎನ್ನುವಂತೆ ಕಂದಾಯ ಸಚಿವ ಅಶೋಕ್ ಹೇಳಿಕೆ ನೀಡಿದ್ದು ಈಗ ಭಾರೀ ಸಂಚಲನ ಮೂಡಿಸಿದೆ.ವಿಧಾನಸೌಧದಲ್ಲಿ ಕಂದಾಯ ಸಚಿವರನ್ನು ಅಖಂಡ ಶ್ರೀನಿವಾಸ ಮೂರ್ತಿ ಭೇಟಿ ಮಾಡಿ ರಾತ್ರಿಯ ಘಟನೆಯನ್ನು ವಿವರಿಸಿದರು. ಈ ವೇಳೆ ಸಿಎಂಗೆ ಕರೆ ಮಾಡಿದ ಸಚಿವರು, ಗಲಭೆಯಲ್ಲಿ ಮೂವರು …
Read More »ಒಂದು ರಾತ್ರಿಯ ಬೆಂಗಳೂರು ದಂಗೆ – ಎಷ್ಟು ಕೋಟಿ ನಷ್ಟ?
ಬೆಂಗಳೂರು: ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದೇ ಮೊದಲ ಬಾರಿಗೆ ಸಾರ್ವಜನಿಕ ಆಸ್ತಿಪಾಸ್ತಿಗೆ ಮಾಡಿರುವ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲು ತೀರ್ಮಾನ ತೆಗೆದುಕೊಂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಈ ರೀತಿಯ ದಂಗೆಗಳಾದಾಗ ಆಗಿರುವ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಈ ಕೂಡಲೇ ಪ್ರಕ್ರಿಯೆ …
Read More »ಅಖಂಡ ಶ್ರೀನಿವಾಸ ಮೂರ್ತಿ ಬದುಕು ಅಕ್ಷರಶಃ ಬೀದಿಗೆ
ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಂದೂ ವಸ್ತು ಉಳಿದಿಲ್ಲ. ಬಟ್ಟೆ ಸೇರಿ ಎಲ್ಲವೂ ಸುಟ್ಟು ಕರಕಲಾಗಿದೆ. ಈ ಹಿನ್ನೆಲೆ ಶಾಸಕರು ಇಂದು ಬೆಳಗ್ಗೆ ಬಟ್ಟೆ ಖರೀದಿಸಿದ್ದಾರೆ. ಇಂದು ಬೆಳಗ್ಗೆ ಅವರ ಸ್ನೇಹಿತರು ಪ್ಯಾಂಟ್, ಶರ್ಟ್ ತಂದು ಕೊಟ್ಟಿದ್ದಾರೆ. ನಿನ್ನೆ ಮನೆಯಿಂದ ಹೊರಹೋಗುವಾಗ ಹಾಕಿದ್ದ ಪ್ಯಾಂಟ್ ಶರ್ಟ್ ಬಿಟ್ಟರೆ ಮನೆಯಲ್ಲಿದ್ದ ಬೇರೆ ಎಲ್ಲ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅವರ ಪತ್ನಿ, ಮಕ್ಕಳು ಸಹ ಇಂದು ಹೊಸದಾಗಿ …
Read More »ಬೌರಿಂಗ್ ಆಸ್ಪತ್ರೆ ಎದುರು ಮೃತರ ಸಂಬಂಧಿಕರಿಂದ ಹೈಡ್ರಾಮಾ
ಬೆಂಗಳೂರು, ಆ.12- ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ನಂತರ ಶಿವಾಜಿನಗರ ಮತ್ತು ಸುತ್ತಮುತ್ತಲ ಪ್ರದೇಶಗಳು ಸ್ತಬ್ಧಗೊಂಡಿವೆ. ಶಿವಾಜಿನಗರದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಇಡೀ ಪ್ರದೇಶ ಬಿಕೋ ಎನ್ನುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.ಗಲಭೆ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳ ಮೇಲೆ ನಿಗಾ ಇಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ …
Read More »ಡಿ.ಜೆ. ಹಳ್ಳಿ ಗಲಭೆ ಖಂಡನೀಯ, ಸರ್ಕಾರ ಕಾನೂನಿನ ಕ್ರಮ ಕೈಗೊಳ್ಳಲಿ: ಡಿ.ಕೆ. ಶಿವಕುಮಾರ್
ಬೆಂಗಳೂರು: ಡಿ.ಜೆ. ಹಳ್ಳಿ ಘಟನೆಯನ್ನು ನಾನು ಖಂಡಿಸುತ್ತೇನೆ. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ. ಬುಧವಾರ ಬೆಳಗ್ಗೆ ಸದಾಶಿವನಗರದ ನಿವಾಸದ ಬಳಿ ಬೆಂಗಳೂರಿನ ಡಿ.ಜೆ. ಹಳ್ಳಿ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಇದು ಸಮಾಜಘಾತುಕ ಕೃತ್ಯ. ಶಾಸಕರ ಆಸ್ತಿಯಾಗಲಿ, ಸಾಮಾನ್ಯ ಜನರ ಆಸ್ತಿಯೇ ಆಗಿರಲಿ, ಪೊಲೀಸ್ ಠಾಣೆಯಾಗಿರಲಿ ಯಾವುದನ್ನು ಹಾನಿ ಮಾಡುವುದು ಸರಿಯಲ್ಲ. ಇದನ್ನು ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು. …
Read More »ಸಿದ್ದರಾಮಯ್ಯನವರೇ, ನೀವು ಮಾಡಿದ್ದು ತಪ್ಪು ಅಂತ ಈಗ ಗೊತ್ತಾಯ್ತಾ..?
ಬೆಂಗಳೂರು,ಆ.12- ಎಸ್‍ಡಿಪಿಐ ಮತ್ತು ಕೆಐಎಫ್‍ಡಿ 1600 ಪುಂಡರ ವಿರುದ್ಧ ಇದ್ದ 175 ಕ್ರಿಮಿನಲ್ ಕೇಸುಗಳನ್ನು ನೀವು 2015ರಲ್ಲಿ ವಾಪಸ್ಸು ತೆಗೆದುಕೊಂಡಿದ್ದು ತಪ್ಪು ಅಂತ ನಿಮಗೆ ಈಗಲಾದರೂ ಅನ್ನಿಸುತ್ತಿದೆಯೇ ಸಿದ್ದರಾಮಯ್ಯನವರೇ? ಇಷ್ಟಾಗಿಯೂ ಪುಂಡ ಮುಸಲ್ಮಾನರನ್ನು ಖಂಡಿಸಲು ಏಕೆ ನಿಮಗೆ ಮನಸ್ಸು ಬರುತ್ತಿಲ್ಲ ಸಾರ್? ಎಂದು ಮೈಸೂರು-ಕೊಡುಗು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಮತ್ತೊಂದು ಟ್ವೀಟ್‍ನಲ್ಲಿ ಕಂದಾಯ ಸಚಿವ ಆರ್. ಅಶೋಕ್, ಶಾಂತಿಯಿಂದ ಬದುಕೋಣ ಎಂಬುದು ನಮ್ಮ ಆಶಯ. ಅಶಾಂತಿಯೇ ಕೆಲವರ ರಾಜಮಾರ್ಗ …
Read More »