ಬೆಂಗಳೂರು: ಬಿಜೆಪಿಯ ಇಬ್ಬರು ಶಾಸಕರು ಸೇರಿದಂತೆ ಹಲವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದ ಪ್ರಸಂಗ ವಿಧಾನಸಭೆ ಮೊಗಸಾಲೆಯಲ್ಲಿ ಮಂಗಳವಾರ ನಡೆಯಿತು. ಕಲಾಪ ನಡೆಯುತ್ತಿದ್ದಾಗಲೇ ಚಹಾ ಕುಡಿಯುವ ಸಲುವಾಗಿ ವಿಧಾನಪರಿಷತ್ತಿನ ಸದಸ್ಯ ಸಿ.ಎಂ. ಇಬ್ರಾಹಿಂ ಜತೆಯಲ್ಲಿ ಸಿದ್ದರಾಮಯ್ಯ ಮೊಗಸಾಲೆಗೆ ಬಂದರು. ಆ ಹೊತ್ತಿನಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಜತೆ ಬಿಜೆಪಿ, ಕಾಂಗ್ರೆಸ್ ಸದಸ್ಯರು ಹರಟೆ ಹೊಡೆಯುತ್ತಿದ್ದರು. ಸಿದ್ದರಾಮಯ್ಯ ಅವರನ್ನು ನೋಡುತ್ತಿದ್ದಂತೆ ಎಲ್ಲರೂ ಅವರ ಮುಂದೆ ನಿಂತರು. ಆಗ, …
Read More »ಸೆ.25 ರಂದು ‘ಕರ್ನಾಟಕ ಬಂದ್’ ಇಲ್ಲ : ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ
ಬೆಂಗಳೂರು : ಸೆಪ್ಟೆಂಬರ್ 25 ರಂದು ಕರ್ನಾಟಕ ಬಂದ್ ಇಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾದ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಸೆ.25 ರಂದು ಕರ್ನಾಟಕ ಬಂದ್ ಇಲ್ಲ , ಬಂದ್ ಬದಲು ಹೆದ್ದಾರಿ ಮಾತ್ರ ಬಂದ್ ಮಾಡಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಮಸೂಧೆಗಳನ್ನು ವಿರುದ್ಧ ರೈತರ ಸಂಘಗಳು ಸಿಡಿದೆದ್ದಿವೆ. ಸರ್ಕಾರದ ರೈತವಿರೋಧಿ ಮಸೂಧೆ ವಿರೋಧಿಸಿ, …
Read More »ಮದುವೆಯಾದ ಎರಡೇ ವಾರಕ್ಕೆ ಪತಿಯನ್ನ ಅರೆಸ್ಟ್ ಮಾಡಿಸಿದ ಪೂನಂ ಪಾಂಡೆ
ಪಡ್ಡೆ ಹುಡುಗರ ಕನಸಸಿನ ರಾಣಿ ಬಾಲಿವುಡ್ ನಟಿ ಪೂನಂ ಪಾಂಡೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಹುಕಾಲದ ಗೆಳೆಯ ಸ್ಯಾಮ್ನನ್ನು ವರಿಸಿದ್ದರು. ಆದರೆ ಈಗ ಗಂಡನ ವಿರುದ್ಧವೇ ದೂರು ನೀಡಿದ್ದಾರೆ. ಹೌದು ಪೂನಂ ಪಾಂಡೆ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ನನಗೆ ಕಿರುಕುಳ ನೀಡಿ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ಪೂನಂ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಪೂನಂ ಪಾಂಡೆ ಗಂಡ ಸ್ಯಾಮ್ ಬಾಂಬೆಯನ್ನು ಪೊಲೀಸರು ಗೋವಾದಲ್ಲಿ …
Read More »ಶಾಸಕ ಜಮೀರ್ ವಿರುದ್ಧ ಮತ್ತೇ ಆರೋಪ ಮಾಡಿದ ಸಂಬರಗಿ
ಡ್ರಗ್ಸ್ ಹಗರಣ ಶುರುವಾದ ನಂತರ ದಿನಕ್ಕೊಂದು ಪತ್ರಿಕಾ ಗೋಷ್ಟಿ ನಡೆಸಿದ ನಂತರ ಕೆಲ ಸಮಯದವರೆಗೆ ಸುಮ್ಮನಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇಂದು ವಿಧಾನ ಸೌಧಕ್ಕೆ ಆಗಮಿಸಿ ಪುನಃ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಿರುದ್ಧ ಹೊಸ ಆರೋಪಗಳನ್ನು ಮಾಡಿದರು . ” ಜಮೀರ್ ಅಹ್ಮದ್ ವಿದೇಶ ಪ್ರವಾಸಕ್ಕೆ ಹೋದ ಮಾಹಿತಿ ಸರ್ಕಾರಕ್ಕೆ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ , ಈ ಕುರಿತು ಸಿಎಂ ಬಿ . ಎಸ್ . …
Read More »ಚೆನ್ನಮ್ಮ ಮೂರ್ತಿ ವಿವಾದ: ತಡೆಯಾಜ್ಞೆ ತೆರವುಗೊಳಿಸಿದ ಧಾರವಾಡ ಪೀಠ- ಬಸವರಾಜ್ ಬೊಮ್ಮಾಯಿ
ಬೆಂಗಳೂರು: ಶಿಗ್ಗಾಂವಿ ನಗರದಲ್ಲಿ ವೀರ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿಯನ್ನು ಸ್ಥಾಪಿಸಲು ಇದ್ದ ತಡೆಯಾಜ್ಞೆಯನ್ನು ಧಾರವಾಡದ ಉಚ್ಚ ನ್ಯಾಯಾಲಯ ಇಂದು ತೆರವುಗೊಳಿಸಿ ಮೂರ್ತಿ ಸ್ಥಾಪನೆಗೆ ದಾರಿ ಸುಗಮವಾಗಿಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಈ ಬಗ್ಗೆ ಹಾವೇರಿಯ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಧಾರವಾಡ ಉಚ್ಚನ್ಯಾಯಾಲಯದಿಂದ ಆದೇಶ ತಲುಪಿದ ತಕ್ಷಣ ಶಿಗ್ಗಾಂವಿ ನಗರದಲ್ಲಿ ಮೂರ್ತಿ ಸ್ಥಾಪಿಸಲು ಅನುಮತಿಗೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದ್ದೇನೆ ಎಂದಿದ್ದಾರೆ. Basavaraj …
Read More »ಸ್ಯಾಂಡಲ್ ವುಡ್ ಡ್ರಗ್ ಹಗರಣದ ಜಾಲ ಬೆಳ್ಳಿತೆರೆಗೆ ಆವರಿಸಿದೆ
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಹಗರಣದ ಜಾಲ ಬೆಳ್ಳಿತೆರೆ ಮಾತ್ರವಲ್ಲದೆ ಕಿರುತೆರೆಯನ್ನೂ ಆವರಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಆಂತರಿಕ ಭದ್ರತಾ ದಳ ಹಲವು ಕಿರುತೆರೆ ನಟ ನಟಿಯರಿಗೆ ನೋಟಿಸ್ ನೀಡಿದ್ದು, ಇಂದು ನಟ ಅಭಿಷೇಕ್ ಮತ್ತು ನಟಿ ಗೀತಾ ಭಟ್ ವಿಚಾರಣೆಗೆ ಹಾಜರಾಗಿದ್ದಾರೆ. ಐಎಸ್ ಡಿ ಪೊಲೀಸರು ಇತ್ತೀಚೆಗಷ್ಟೇ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದರು. ಅವರುಗಳು ಹಲವು ಸಿನಿಮಾ ಮತ್ತು ಕಿರುತೆರೆ ನಟರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು …
Read More »ಹಲ್ಲು ಮುರಿದು ಹಾವಿನಂತೆ ISD ಗೆ ಜೀವ ಬಂದಿದ್ದು ಹೇಗೆ
ಬೆಂಗಳೂರು : ಬೆಂಗಳೂರು ಕಮಿಷನರ್ ಆಗಿದ್ದ ಭಾಸ್ಕರ್ ರಾವ್ ಅವರೇ ಯಾವುದೇ ಪ್ರಕರಣ ದಾಖಲಾಗದೇ ಖಾಲಿಯಾಗಿ ಉಳಿದಿದ್ದ ಐಎಸ್‌ಡಿ(Internal security division) ಗೆ ಜೀವ ಕೊಟ್ಟರು. ರಾಜ್ಯ ಸರ್ಕಾರ 2008ರಲ್ಲಿ ಐಎಸ್‌ಡಿ ಸ್ಥಾಪಿಸಿದ್ದು, ಇದರಲ್ಲಿ 6 ವಿಂಗ್‌ಗಳಂತೆ ರಚನೆ ಮಾಡಲಾಗಿತ್ತು. ಆದರೆ ಇದರಲ್ಲಿ ಒಂದೇ ಒಂದು ದೂರು ಸಹ ದಾಖಲಾಗಿರಲಿಲ್ಲ. ಸಿಸಿಬಿ ನಗರಕ್ಕಷ್ಟೇ ಸೀಮಿತವಾಗಿತ್ತು.ಸಿಸಿಬಿಯ ನಾರ್ಕೋಟಿಕ್ ವಿಂಗ್ ನಗರಕ್ಕೆ ಸೀಮಿತವಾಗಿ ಕೆಲಸ ನಿರ್ವಹಿಸುತಿತ್ತು. ಆದರೆ ರಾಜ್ಯದಲ್ಲಿ ಡ್ರಗ್ ಪ್ರಕರಣಗಳ ಬಗ್ಗೆ ಎಲ್ಲಿ …
Read More »ಸ್ಯಾಂಡಲ್‌ವುಡ್ Drugs ಜಾಲ: ನಟ ಯೋಗಿ, ಕ್ರಿಕೆಟಿಗ NC ಅಯ್ಯಪ್ಪ ವಿಚಾರಣೆ
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ನಟ ಲೂಸ್ ಮಾದ ಯೋಗೀಶ್ ಹಾಗೂ ಮಾಜಿ ಕ್ರಿಕೆಟಿಗ NC ಅಯ್ಯಪ್ಪರ ವಿಚಾರಣೆ ಸಹ ನಡೆಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಆಂತರಿಕ ಭದ್ರತಾ ವಿಭಾಗದ ಪೊಲೀಸರಿಂದ ವಿಚಾರಣೆ ನಡೆದಿದ್ದು ಡ್ರಗ್ ಪೆಡ್ಲರ್ ಒಬ್ಬನ ಹೇಳಿಕೆ ಆಧಾರದ ಮೇಲೆ ವಿಚಾರಣೆ ನಡೆಸಲಾಯಿತು ಎಂದು ಹೇಳಲಾಗಿದೆ. ಇಬ್ಬರನ್ನು ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ವಿಚಾರಣೆ ಮಾಡಿದ್ದೇವೆ ಎಂದು ಆಂತರಿಕ ಭದ್ರತಾ ವಿಭಾಗದ ADGP ಭಾಸ್ಕರ್ …
Read More »12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಣಿ ಬಾಂಬ್ ಸ್ಫೋಟ ಆರೋಪಿ CCB ಬಲೆಗೆ
ಬೆಂಗಳೂರು: ಕಳೆದ 12 ವರ್ಷಗಳ ಹಿಂದೆ ಮಡಿವಾಳ ಸೇರಿದಂತೆ 9 ಕಡೆಗಳಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆಯ ನೆರವಿನೊಂದಿಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶೊಯೇಬ್ ಬಂಧಿತ ಆರೋಪಿ. ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಸಿಸಿಬಿ ಪೊಲೀಸರು ಕೇರಳಕ್ಕೆ ಕರೆ ತರುತ್ತಿದ್ದಾರೆ. ಮಡಿವಾಳ ಸೇರಿದಂತೆ 9 ಕಡೆಗಳಲ್ಲಿ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದ. ಕೃತ್ಯದಲ್ಲಿ ಓರ್ವ ಬಲಿಯಾದರೆ 20 ಮಂದಿ ಗಾಯಗೊಂಡಿದ್ದರು. ಬಳಿಕ ಅದೇ …
Read More »ಗುಡ್ ನ್ಯೂಸ್ : ರಾಜ್ಯದಲ್ಲಿ ಇಳಿಯುತ್ತಿದೆ ಕೊರೋನಾ
ಬೆಂಗಳೂರು : ರಾಜ್ಯದಲ್ಲಿ ಸೋಮವಾರ 7,339 ಮಂದಿಗೆ ಸೋಂಕು ದೃಢಪಟ್ಟಿದ್ದು 122 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5.26 ಲಕ್ಷಕ್ಕೆ ಹಾಗೂ ಕೊರೋನಾ ಸಾವಿನ ಸಂಖ್ಯೆ 8,145ಕ್ಕೆ ಏರಿಕೆಯಾಗಿದೆ. ಆದರೆ ಸಕ್ರಿಯ ಸೋಂಕಿತರ ಸಂಖ್ಯೆ 98 ಸಾವಿರದಿಂದ 95,335ಕ್ಕೆ ಇಳಿದಿದೆ. ಇದೇ ವೇಳೆ 9,925 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 4.23 ಲಕ್ಷಕ್ಕೆ ಏರಿಕೆಯಾಗಿದೆ. ಸೋಮವಾರ ಒಟ್ಟು 42,691 ಪರೀಕ್ಷೆ ನಡೆಸಿದ್ದು, …
Read More »
Laxmi News 24×7