Breaking News

ಬೆಂಗಳೂರು

ರಾಜ್ಯಾದ್ಯಂತ ರೈತರು ಬೃಹತ್​ ಪ್ರತಿಭಟನೆ : ಗೊರಗುಂಟೆ ಪಾಳ್ಯ ರಾಷ್ಟ್ರೀಯ ಹೆದ್ದಾರಿ ಬಂದ್

ಬೆಂಗಳೂರು: ಕೃಷಿ ಮಸೂದೆಗಳನ್ನ ವಿರೋಧಿಸಿ ಇಂದು ಭಾರತ್​ ಬಂದ್​​ಗೆ ಕರೆ ನೀಡಿರೋ ಹಿನ್ನೆಲೆ ಇಂದು ರಾಜ್ಯಾದ್ಯಂತ ರೈತರು ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆ ರೈತ ಸಂಘದ ಅಧ್ಯಕ್ಷ ಗಿರೀಶ್​ಗೌಡ ನೇತೃತ್ವದಲ್ಲಿ ಗೊರಗುಂಟೆ ಪಾಳ್ಯ ರಾಷ್ಟ್ರೀಯ ಹೆದ್ದಾರಿ ಬಂದ್​ ಮಾಡಿ ಪ್ರತಿಭಟಿಸಲಾಯ್ತು. 20 ನಿಮಿಷಗಳ ಕಾಲ ರಸ್ತೆ ತಡೆ ಮಾಡಲು ಪೊಲೀಸರು ಅನುಮತಿ ನೀಡಿದ್ದರು. ತುಮಕೂರು- ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನ ಗೊರಗುಂಟೆ ಪಾಳ್ಯದ ಸಿಗ್ನಲ್ ಬಳಿ …

Read More »

ಬೆಂಗಳೂರಲ್ಲಿ ಸೋಂಕು ಪತ್ತೆ ಶೇ.5ಕ್ಕಿಂತ ಕಡಿಮೆ ಮಾಡಿ: ಪ್ರಧಾನಿ ಮೋದಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೊರೋನಾ ಸೋಂಕು ಪರೀಕ್ಷೆ ಪ್ರಮಾಣ ದ್ವಿಗುಣಗೊಳಿಸಿ ಹಾಗೂ ಸೋಂಕು ಪತ್ತೆ ಪ್ರಮಾಣವನ್ನು ಶೇ.5ಕ್ಕಿಂತ ಕಡಿಮೆಗೊಳಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರಕ್ಕೆ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಕಳೆದ ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ರಾಜ್ಯದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್‌ ಮೂಲಕ ಸಭೆ ನಡೆಸಿದರು. ಈ ವೇಳೆ ವಿಶೇಷವಾಗಿ ಬೆಂಗಳೂರಿನಲ್ಲಿ ಕೊರೋನಾ …

Read More »

BSY ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಮಂಡನೆ..!

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರವು ಸದನದ ವಿಶ್ವಾಸ ಕಳೆದುಕೊಂಡಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಅವಿಶ್ವಾಸ ಪ್ರಸ್ತಾಪಕ್ಕೆ ಅನುಮತಿ ಸಿಕ್ಕಿದೆ. ಕೋವಿಡ್‌ನಿಂದಾಗಿ ಆಡಳಿತಾರೂಢ ಬಿಜೆಪಿಯ ಹಲವು ಸಚಿವರು ಹಾಗೂ ಶಾಸಕರು ಸದನಕ್ಕೆ ಆಗಮಿಸುವುದು ಕಷ್ಟವಿರುವುದರಿಂದ ಈ ನಿರ್ಣಯ ಎದುರಿಸಿ ಗೆಲ್ಲುವುದು ಸಹಜವಾಗಿಯೇ ಸರ್ಕಾರಕ್ಕೆ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ. ಗುರುವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರ ವಿಶ್ವಾಸ ಕಳೆದುಕೊಂಡಿರುವ ಬಗ್ಗೆ ನೋಟಿಸ್‌ ನೀಡಲಾಗಿದ್ದು, …

Read More »

ಈ ವರ್ಷ ವ್ಯಾಕ್ಸಿನ್‌ ಅನುಮಾನ : ಜನರೇ ಎಚ್ಚರ

ಬೆಂಗಳೂರು : ಕೊರೋನಾ ಸೋಂಕಿಗೆ ಪ್ರಸಕ್ತ ವರ್ಷದಲ್ಲಿ ವ್ಯಾಕ್ಸಿನ್‌ ಬರುವುದು ಬಹುತೇಕ ಅನುಮಾನ. ಜತೆಗೆ, ಈ ಹಂತದಲ್ಲಿ ಲಾಕ್ಡೌನ್‌ ಮಾಡುವುದು ಸಹ ಪ್ರಯೋಜನಕಾರಿಯಲ್ಲ. ಹೀಗಾಗಿ ಸಾರ್ವಜನಿಕರೇ ಹೆಚ್ಚು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ರಾಜ್ಯ ಕೊರೋನಾ ಟಾಸ್ಕ್‌ಫೋರ್ಸ್‌ ಸದಸ್ಯರಾದ ಡಾ.ಸಿ.ಎನ್‌. ಮಂಜುನಾಥ್‌ ಹೇಳಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರೂ ಆದ ಮಂಜುನಾಥ್‌ ಅವರ ಪ್ರಕಾರ, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಈಗಾಗಲೇ ಸೋಂಕು ಹರಡಿರುವುದರಿಂದ ಈ ಹಂತದಲ್ಲಿ …

Read More »

ಗೂಡ್ಸ್ ರೈಲು ಅಡಿಗೆ ಬಿದ್ದ ಎರಡು ವರ್ಷದ ಬಾಲಕ ಬಚಾವ್​ ಆಗಿದ್ದು ಹೇಗೆ ನೋಡಿ..

ಫರೀದಾಬಾದ್​: ಹರಿಯಾಣದ ಫರೀದಾಬಾದ್ ಜಿಲ್ಲೆಯ ವಲ್ಲಭಗಢ ರೈಲ್ವೆ ನಿಲ್ದಾಣದಲ್ಲಿ ಎರಡು ವರ್ಷದ ಬಾಲಕನೊಬ್ಬ ಗೂಡ್ಸ್ ರೈಲಿನ ಅಡಿಗೆ ಬಿದ್ದು ಅದೃಷ್ಟವಶಾತ್ ಒಂದಿನಿತೂ ಗಾಯವಿಲ್ಲದೆ ಬಚಾವ್ ಆಗಿದ್ದಾನೆ. ಈ ಕುರಿತ ವಿಡಿಯೋ ವೈರಲ್​ ಆಗಿದೆ. ಗೂಡ್ಸ್ ರೈಲ್​ ವೇಗವಾಗಿ ಸಂಚರಿಸುತ್ತಿದ್ದ ವೇಳೆ, ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಹಳಿಯ ಮೇಲೆ ಈ ಬಾಲಕ ಆಡವಾಡುತ್ತಿದ್ದ. ದೂರದಿಂದ ಇದನ್ನು ಗಮನಿಸಿದ ಗೂಡ್ಸ್ ರೈಲಿನ ಲೋಕೊ ಪೈಲಟ್ ಕೂಡಲೇ ತುರ್ತು ಬ್ರೇಕ್ ಹಾಕಿದ್ದ. ಆದರೆ, ಅಷ್ಟರಲ್ಲಾಗಲೇ ಸಮಯ …

Read More »

ಉದ್ಯಮಿ ಪುತ್ರನ ಅಪಹರಣ: ಪೊಲೀಸರ ಮೇಲೆ ಹಲ್ಲೆ, ಆರೋಪಿಗೆ ಶೂಟ್‌

ಬೆಂಗಳೂರು : ಉದ್ಯಮಿಯೊಬ್ಬರ ಪುತ್ರನನ್ನು ಅಪಹರಿಸಿ ಐದು ಲಕ್ಷ ರು.ಗಳಿಗೆ ಬೇಡಿಕೆ ಇಟ್ಟಿದ್ದ ಕಿಡಿಗೇಡಿಗೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಗುಂಡು ಹೊಡೆದು ಬಂಧಿಸಿರುವ ಘಟನೆ ನಡೆದಿದೆ. ಕೋಣನಕುಂಟೆ ನಿವಾಸಿ ಕೃಷ್ಣ ಅಲಿಯಾಸ್‌ ಆಟೋ ಕೃಷ್ಣ ಎಂಬಾತನಿಗೆ ಗುಂಡೇಟು ಬಿದ್ದಿದ್ದು, ಹುಳಿಮಾವು ಸಮೀಪದ ಬೇಗೂರು-ಕೊಪ್ಪ ರಸ್ತೆಯಲ್ಲಿ ಬುಧವಾರ ರಾತ್ರಿ ಈ ದಾಳಿ ನಡೆದಿದೆ. ಉದ್ಯಮಿ ಜೋಸೆಫ್‌ ಪುತ್ರ ಜೋಕಿಮ್‌ನನ್ನು ರಕ್ಷಿಸಲಾಗಿದೆ. ಬೇಗೂರು ಸುತ್ತಮುತ್ತ ಜೆಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಸಂತ್ರಸ್ತ ಜೊಕಿಮ್‌ ತಂದೆ ಜೋಸೆಫ್‌ …

Read More »

ಕಂಪ್ಲೀಟ್ ಲಾಕ್‍ಡೌನ್ ಮಾಡಿ:ಮಾಜಿಸ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಕೇಂದ್ರ ಹಾಗೂ ರಾಜ್ಯಗಳು ಕೊರೊನಾದೊಂದಿಗೆ ಬದುಕಿ ಎಂದು ಹೇಳುವ ಮೂಲಕ ನಮ್ಮ ಕೈಯಲ್ಲಿ ಸೋಂಕಿನ ನಿಯಂತ್ರಣ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿವೆ. ಶನಿವಾರ, ಭಾನುವಾರದ ಲಾಕ್‍ಡೌನ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಮಾಡಿದರೇ ಕಂಪ್ಲೀಟ್ ಲಾಕ್‍ಡೌನ್ ಮಾಡಬೇಕಿದೆ ಎಂದು ಮಾಜಿಸ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಈ ಹಿಂದೆ ಲಾಕ್‍ಡೌನ್ ತೆಗೆದು ಹಾಕಿದಾಗ ಕೋವಿಡ್ ಹೆಚ್ಚಳ ಆಗಿತ್ತು. ಆದರೆ ಆಗ ಲಾಕ್‍ಡೌನ್ ಮುಂದುವರಿಸಬೇಕಿತ್ತು. …

Read More »

ನಿನ್ನಗಲಿಕೆ ನೋವು ಹೇಳತೀರದು – ಪ್ರೀತಿಯ ಸುಬ್ಬಿ ಸಾವಿಗೆ ಡಾಲಿ ಸಂತಾಪ

ಬೆಂಗಳೂರು: ಚಿತ್ರೀಕರಣ ನಡೆಯುತ್ತಿದ್ದ ವೇಳೆ ಹೃದಯಾಘಾತವಾಗಿ ಖ್ಯಾತ ಹಿರಿಯ ನಟ ರಾಕ್‍ಲೈನ್ ಸುಧಾಕರ್ ವಿಧಿವಶರಾಗಿದ್ದಾರೆ. ಇವರ ಅಗಲಿಗೆ ನಟ ಧನಂಜಯ್ ಸಂತಾಪ ಸೂಚಿಸಿದ್ದಾರೆ. ನಟ ಧನಂಜಯ್ ಇನ್‍ಸ್ಟಾಗ್ರಾಂನಲ್ಲಿ ಅವರ ಜೊತೆಗಿರುವ ಫೋಟೋವೊಂದನ್ನು ಪೋಸ್ಟ್ ಮಾಡಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. “ಪ್ರೀತಿಯ ಸುಬ್ಬಿ, ಸಿಕ್ಕಾಗಲೆಲ್ಲ ನಗಿಸುತ್ತ, ಬದುಕಿನ ಫಿಲಾಸಫಿಗಳ ನಿನ್ನದೇ ರೀತಿಯಲ್ಲಿ ಅದ್ಭುತವಾಗಿ ಹೇಳುತ್ತ, ಪ್ರೀತಿಯಿಂದ ತಬ್ಬಿ ಒಳ್ಳೆಯದೆ ಆಗುತ್ತದೆ ಎಂದು ಹರಸುತ್ತಿದ್ದೆ. ನಿನ್ನಗಲಿಕೆಯ ನೋವು ಹೇಳತೀರದು. ಶಾಂತಿಯಿಂದ ನಿದ್ರಿಸು …

Read More »

ಕೊರೊನಾ ಊಹೆಗೆ ನಿಲುಕದ ವೈರಸ್- ಮತ್ತೆ ಲಾಕ್‍ಡೌನ್ ಸುಳಿವು ನೀಡಿದ ಸಿಟಿ ರವಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಲ್ ಲಾಕ್‍ಡೌನ್ ಮಾತು ಕೇಳಿ ಬಂದಿದೆ. ಇದರ ಬೆನ್ನಲ್ಲೇ ಸಚಿವ ಸಿಟಿ ರವಿ ಅವರು ಮತ್ತೆ ಲಾಕ್‍ಡೌನ್ ಮಾಡುವ ಕುರಿತ ಸುಳಿವನ್ನು ನೀಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿಟಿ ರವಿ, ಕೊರೊನಾ ನಮ್ಮ ಊಹೆಗೂ ನಿಲುಕದ ವೈರಸ್ ಆಗಿದ್ದು, ಈ ಬಗ್ಗೆ ಯೋಚನೆ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ತಿಳಿಸಿದರು ಸದ್ಯ ಆರೋಗ್ಯವಾಗಿದ್ದ ಕೇಂದ್ರ ಸಚಿವರು ವಿಧಿವಶರಾಗಿದ್ದು, ರಾಜ್ಯ, ದೇಶಕ್ಕೆ ದೊಡ್ಡ …

Read More »

ಸಿನಿ ಕಲಾವಿದರಾದ ರಾಕ್‍ಲೈನ್ ಸುಧಾಕರ್ ಅವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ.

ಬೆಂಗಳೂರು: ಹೃದಯಾಘಾತವಾಗಿ ಸ್ಯಾಂಡಲ್‍ವುಡ್‍ನ ಹಿರಿಯ ನಟ ರಾಕ್‍ಲೈನ್ ಸುಧಾಕರ್ ವಿಧಿವಶರಾಗಿದ್ದಾರೆ ಇತ್ತೀಚೆಗಷ್ಟೆ ನಟ ರಾಕ್‍ಲೈನ್ ಸುಧಾಕರ್ ಕೊರೊನಾ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ಬಂದಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ನಂತರ ಸಿನಿಮಾ ಕೆಲಸಗಳಲ್ಲಿ ಸುಧಾಕರ್ ಸಕ್ರಿಯರಾಗಿದ್ದರು. ಇಂದು ಸಹ ಸುಧಾಕರ್ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಆದರೆ ಸುಧಾಕರ್ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಸಿನಿಮಾ ಶೂಟಿಂಗ್ ವೇಳೆ ಹೃದಯಾಘಾತವಾಗಿ …

Read More »