ಬೆಂಗಳೂರು: ಬೃಹತ್ ಕಂಟೈನರ್ ಲಾರಿ ಪಲ್ಟಿಯಾಗಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಸಂಭವಿಸಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಬಳಿ ನಡೆದಿದೆ. ನೆಲಮಂಗಲ ತಾಲೂಕಿನ ಎಡೆಹಳ್ಳಿ ಸಮೀಪ ಬೃಹತ್ ಕಂಟೈನರ್ ಲಾರಿಯೊಂದು ಪಲ್ಟಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ವಾಹನ ಸವಾರರು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಸುಮಾರು 5 ಗಂಟೆ ಹೊತ್ತಿಗೆ ಕಂಟೈನರ್ ಪಲ್ಟಿಯಾಗಿದ್ದು, ಬರೋಬ್ಬರಿ 20 ನಿಮಿಷಗಳ ಕಾಲ ವಾಹನಗಳು ನಿಂತಲ್ಲೇ ನಿಂತಿದ್ದವು. ಇದರಿಂದಾಗಿ ನೂರಾರು …
Read More »ಕಾರು ಸ್ಟಾರ್ಟ್ ಮಾಡುವ ವೇಳೆ ಅಜಾಗರೂಕತೆಯಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ
ಬೆಂಗಳೂರು: ಕಾರು ಸ್ಟಾರ್ಟ್ ಮಾಡುವ ವೇಳೆ ಅಜಾಗರೂಕತೆಯಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಬಿಇಎಲ್ ರಸ್ತೆಯಲ್ಲಿ ನಡೆದಿದೆ.ನಂದಿನಿ ರಾವ್ ಮೃತಪಟ್ಟ ಮಹಿಳೆ. ಇಂದು ಸಂಜೆ ನಂದಿನಿ ರಾವ್ ಡೋರ್ ಓಪನ್ ಮಾಡಿ ಹೊರಗಡೆಯಿಂದ ಟೊಯೊಟಾ ಕೊರೊಲಾ ಕಾರನ್ನು ಸ್ಟಾರ್ಟ್ ಮಾಡಿದ್ದಾರೆ. ಕಾರು ಸ್ಟಾರ್ಟ್ ಮಾಡುತ್ತಿದ್ದಂತೆ ರಿವರ್ಸ್ ಗೇರ್‌ನಲ್ಲಿದ್ದ ಕಾರು ಹಿಂದಕ್ಕೆ ಚಲಿಸಿದೆ. ಈ ವೇಳೆ ಕಾರಿನ ಡೋರ್ ಜೊತೆ ಅವರು ಮರಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರಲ್ಲಿ …
Read More »ಬೆಂಗಳೂರಿಗೆ ಬರುವಾಗ ದಾರಿ ಮಧ್ಯೆ ವಿಮಾನದಲ್ಲಿ ಯಶಸ್ವಿ ಹೆರಿಗೆ
ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಗರ್ಭಿಣಿಯೊಬ್ಬರು ವಿಮಾನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವೇಳೆ ವಿಮಾನದಲ್ಲಿ ಪ್ರಸೂತಿ ತಜ್ಞೆ ಬೆಂಗಳೂರಿನ ಕ್ಲೌಡ್ ನೈನ್ ಆಸ್ಪತ್ರೆಯ ಡಾ. ಶೈಲಜಾ ವಲ್ಲಭನಿ ಪ್ರಯಾಣಿಸುತ್ತಿದ್ದರು. ಹೆರಿಗೆ ನೋವಾಗುತ್ತಿದ್ದಂತೆ ಇಂಡಿಗೋ ಸಿಬ್ಬಂದಿ ಸಹಕಾರದಿಂದ ಡಾ. ಶೈಲಜಾ ಅವರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಅಂಬುಲೆನ್ಸ್ ಸಿದ್ಧವಾಗಿ ನಿಂತಿತ್ತು. ಅಂಬುಲೆನ್ಸ್ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಈಗ ಪ್ರಯಾಣಿಕರು …
Read More »ಸಚಿವ ಪ್ರಹ್ಲಾದ್ ಜೋಶಿಯವರಿಗೆ ಕೊರೊನಾ ಪಾಸಿಟಿವ್
ಬೆಂಗಳೂರು: ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇತ್ತೀಚೆಗೆ ಕೊರೊನಾ ಸೋಂಕು ರಾಜಕಾರಣಿಗಳನ್ನು ಬೆನ್ನು ಬಿಡದೆ ಕಾಡುತ್ತಿದೆ. ಇತ್ತೀಚೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೂ ಕೂಡ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಕೇಂದ್ರ ಸಚಿವರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ತಮಗೆ ಕೊರೊನಾ ಸೋಂಕು ತಗಲಿರುವ ಸುದ್ದಿಯನ್ನು ಸ್ವತಃ ಸಚಿವರೇ ಟ್ವೀಟ್ ಮಾಡಿ ಖಚಿತ ಪಡಿಸಿದ್ದಾರೆ. ಸೋಂಕು ತಗುಲಿರುವ ವಿಚಾರವಾಗಿ …
Read More »ರಾಜ್ಯದಲ್ಲಿ ಮೊದಲ ಬಾರಿಗೆ 1 ಲಕ್ಷ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ 1 ಲಕ್ಷ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಒಟ್ಟು 48,658 ಮಂದಿಗೆ ಆಂಟಿಜನ್ ಟೆಸ್ಟ್ 55,690 ಮಂದಿಗೆ ಆರ್‌ಟಿಪಿಸಿಆರ್ ಮತ್ತು ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 1,04,348 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 55,24,302 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ 10,947 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 9,832 ಮಂದಿ ಬಿಡುಗಡೆಯಾಗಿದ್ದಾರೆ. 113 ಮಂದಿ ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟು ಸೋಂಕಿತರ …
Read More »ಉಪಚುನಾವಣೆ ರಂಗೇರುತ್ತಿದ್ದಂತೆ ರಾಜಕೀಯ ನಾಯಕರ ವಾಗ್ದಾಳಿ ಆರಂಭ
ಬೆಂಗಳೂರು: ಉಪಚುನಾವಣೆ ರಂಗೇರುತ್ತಿದ್ದಂತೆ ರಾಜಕೀಯ ನಾಯಕರ ವಾಗ್ದಾಳಿ ಆರಂಭವಾಗಿದೆ. ಈಗ ಮಾಜಿ ಸಿಎಂ ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಟ್ವಿಟ್ಟರ್ ಮೂಲಕ ಕಿಡಿ ಕಾರಿದ್ದಾರೆ. ಇಂದು ಸಿದ್ದರಾಮಯ್ಯನ ವಿರುದ್ಧ ಗುಡುಗಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿಯವರು, ಅಧಿಕಾರದಲ್ಲಿದ್ದಾಗಲೇ ಮತ್ತೆ ಅಧಿಕಾರ ನೀಡದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ಅರ್ಧಚಂದ್ರ ಪ್ರಯೋಗ ಮಾಡಿದರು. ಈಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎಂಬ ಸಿದ್ದರಾಮಯ್ಯ ಅವರ …
Read More »ಮಾಸ್ಕ್ ದಂಡ 250 ರೂ.ಗೆ ಇಳಿಕೆ
ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಬಿಗಿ ನಿಯಮ ರೂಪಿಸಿ ಮಾಸ್ಕ್ ವಿಚಾರದಲ್ಲಿ ಸಾವಿರ ರೂ. ದಂಡ ವಿಧಿಸಿದ್ದ ಸರ್ಕಾರ, ಹೊರಡಿಸಿ ದಂಡದ ಮೊತ್ತವನ್ನು ನಗರದ ಪ್ರದೇಶದಲ್ಲಿ 1 ಸಾವಿರ ರೂಗಳಿಂದ 250 ರೂ.ಗೆ ಇಳಿಸಿದೆ. ಗ್ರಾಮೀಣ ಭಾಗದಲ್ಲಿ ನಿಗದಿಯಾಗಿದ್ದ 500 ರೂ. ದಂಡ ಈಗ 100 ರೂ.ಗೆ ಇಳಿಕೆಯಾಗಿದೆ.ಮಾಸ್ಕ್ ಧರಿಸದ್ದಕ್ಕೆ 1 ಸಾವಿರ ರೂ. ದಂಡ ವಿಧಿಸುತ್ತಿದ್ದ ಕ್ರಮಕ್ಕೆ ಸಾರ್ವಜನಿಕಾ ವಲಯದಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಕೆಲಸ ಇಲ್ಲ ನಾವು ಸಂಕಷ್ಟದಲ್ಲಿರುವಾಗ …
Read More »ಈಗ ಸಿ.ಟಿ.ರವಿ ಏಕಕಾಲಕ್ಕೆ ಐದು ರಾಜ್ಯ, ಎರಡು ಕೇಂದ್ರಾಡಳಿತ ಪ್ರದೇಶಗಳ ಉಸ್ತುವಾರಿ
ಬೆಂಗಳೂರು,ಅ.7- ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಸಚಿವ ಸಿ.ಟಿ.ರವಿ ಅವರಿಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಉಸ್ತುವಾರಿಯನ್ನು ನೀಡಲಾಗಿದೆ. ನವದೆಹಲಿಯಲ್ಲಿ ನಿನ್ನೆ ನಡೆದ ಪಕ್ಷದ ಪ್ರಮುಖ ಪದಾಕಾರಿಗಳ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿ ಸಚಿವ ಸಿ.ಟಿ.ರವಿ ಅವರಿಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಮತ್ತು ಲಕ್ಷದ್ವೀಪಗಳ ಉಸ್ತುವಾರಿಯನ್ನು ವಹಿಸಲಾಗಿದೆ. …
Read More »ಮೊಣಕೈನಲ್ಲಿ ಅಭಿಮಾನಿ ಬಿಡಿಸಿದ ಭಾವಚಿತ್ರಕ್ಕೆ ಅಪ್ಪು ಫುಲ್ ಫಿದಾ
ಬೆಂಗಳೂರು: ಬೆಂಗಳೂರು: ತಮ್ಮ ನೆಚ್ಚಿನ ನಟ-ನಟಿಯರಿಗಾಗಿ ಅಭಿಮಾನಿಗಳು ಏನು ಮಾಡಲು ಸಿದ್ಧರಿದ್ದಾರೆ. ಹುಟ್ಟುಹಬ್ಬಗಳು ಬಂದರಂತೂ ಕೇಳೋದೇ ಬೇಡ, ನಟ ಅಥವಾ ನಟಿಯ ಬರ್ತ್ ಡೇಯನ್ನು ತಮ್ಮದೇ ಹುಟ್ಟುಹಬ್ಬ ಎಂಬಂತೆ ಆಚರಿಸುತ್ತಾರೆ. ಒಟ್ಟಿನಲ್ಲಿ ಏನೆಲ್ಲಾ ಹರಸಾಹಸ ಮಾಡಿ ತನ್ನ ನೆಚ್ಚಿನ ನಟ ತಮ್ಮತ್ತ ಒಂದು ಬಾರಿ ತಿರುಗಿ ನೋಡುವಂತೆ ಪ್ರಯತ್ನ ಪಡುತ್ತಿರುತ್ತಾರೆ. ಅಂತೆಯೇ ಅಭಿಮಾನಿಯೊಬ್ಬ ತನ್ನ ಮೊಣಕೈನಲ್ಲಿ ಭಾವಚಿತ್ರ ಬಿಡಿಸಿ ನಟ ಪುನೀತ್ ರಾಜ್ ಕುಮಾರ್ ಗಮನ ಸೆಳೆದಿದ್ದಾನೆ. ತನ್ನ ಮೊಣಕೈ …
Read More »ನಿಮ್ಮ ಮನೆಯಲ್ಲೇ ಅಕ್ಕ-ತಂಗಿ ನನ್ನ ಸ್ಥಾನದಲ್ಲಿದ್ದಿದ್ದರೆ ಹೀಗೆಯೇ ವಿಡಂಬನೆ ಮಾಡುತ್ತಿದ್ದಿರಾ?:ಡಿ.ಕೆ. ರವಿ ಹೆಂಡತಿ
ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿಗೆ ಕಾರಣವಾದ ಕಾಂಗ್ರೆಸ್ ಪಕ್ಷಕ್ಕೇ, ಅವರ ಹೆಂಡತಿ ಕುಸುಮಾ ಸೇರ್ಪಡೆ ಆಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಟ್ವೀಟ್ ಮಾಡಿದ್ದರು. ಜೊತೆಗೆ, ಕುಸುಮಾ ಕಾಂಗ್ರೆಸ್ಗೆ ಸೇರ್ಪಡೆಯಾದ ವೇಳೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಶೀರ್ವದಿಸುತ್ತಿರುವ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಕುಸುಮಾ ಅವರ ದುರದೃಷ್ಟ ಇದೀಗ ಡಿ.ಕೆ ರವಿಯಿಂದ ಡಿ.ಕೆ ಶಿವಕುಮಾರ್ಗೆ ವರ್ಗಾವಣೆಗೊಳ್ಳುತ್ತಿದೆ ಎಂದು ಹೇಳಿದ್ದರು. …
Read More »