Breaking News

ಬೆಂಗಳೂರು

ಕನ್ನಡಿಗರ ಸ್ಟಾರ್ಟಪ್ ಆ್ಯಪ್ ಆಧಾರಿತ ಹೊಯ್ಸಳ ಕ್ಯಾಬ್ ಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು.

ಬೆಂಗಳೂರು: ಕನ್ನಡಿಗರ ಸ್ಟಾರ್ಟಪ್ ಆ್ಯಪ್ ಆಧಾರಿತ ಹೊಯ್ಸಳ ಕ್ಯಾಬ್ ಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ, ಹೊಯ್ಸಳ ಕ್ಯಾಬ್ ಕನ್ನಡಿಗರ ಸ್ಟಾರ್ಟಪ್ ಆಗಿದ್ದು, ಕನ್ನಡತಿ ಸುಧಾ ಉಮಾಶಂಕರ್ ಅವರು ಈ ಕ್ಯಾಬ್ ಸೇವೆ ಅರ್ಪಿಸಿದ್ದಾರೆ. ನಗರಗಳಲ್ಲಿದ್ದ ಕ್ಯಾಬ್ ಸೇವೆ ಇನ್ನು ರಾಜ್ಯದ ಎಲ್ಲೆಡೆ ಸೇವೆಗೆ ಆರಂಭಿಸಲಿದೆ. ಈ ಕ್ಯಾಬ್‍ಗಳು ಕಡಿಮೆ ದರದಲ್ಲಿ ಸುಭದ್ರ ಸೇವೆ ನೀಡಲಿವೆ. ಹೊಯ್ಸಳ …

Read More »

ದೇವರ ಮುಂದೆ ಅಪ್ಪ- ಅಮ್ಮ ಕುಳಿತಿರುವ ಫೋಟೋ ಹಾಕಿಭಾವುಕರಾದ ಜಗ್ಗೇಶ್

ಬೆಂಗಳೂರು: ಇತ್ತೀಚೆಗಷ್ಟೇ ತಮ್ಮ ಸಿನಿ ಜರ್ನಿಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ ನವರಸ ನಾಯಕ ಜಗ್ಗೇಶ್ ಅವರು ಇದೀಗ ತಮ್ಮ ಅಪ್ಪ- ಅಮ್ಮನ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡು ಭಾವುಕರಾಗಿದ್ದಾರೆ. ದೇವರ ಮುಂದೆ ಅಪ್ಪ- ಅಮ್ಮ ಕುಳಿತಿರುವ ಫೋಟೋ ಹಾಕಿ ಬರೆದುಕೊಂಡಿರುವ ಜಗ್ಗೇಶ್, ಹಿರಿ ಅಕ್ಕನಿಗೆ ಸಿಕ್ಕ ಕಳೆದು ಹೋಗಿದ್ದ ಅಮ್ಮ-ಅಪ್ಪನ ಜೊತೆಯಿದ್ದ ಅಪರೂಪದ ಚಿತ್ರ. ಇಬ್ಬರು ಹೀಗೆ ಒಟ್ಟಿಗೆ ಕೂತು ದಿನನಿತ್ಯ ಭಕ್ತಿಯಿಂದ ಶಿವಪೂಜೆ …

Read More »

ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯನಿಶ್ಚಿತಾರ್ಥನವ ಜೋಡಿಗೆ ಹಾರೈಸಿದ B.S.Y.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಪುತ್ರ ಅಮರ್ಥ್ಯ ಸುಬ್ರಮಣ್ಯ ಹೆಗ್ಡೆ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆಯುತ್ತಿದ್ದು, ಕಡಿಮೆ ಜನರನ್ನು ಆಹ್ವಾನಿಸಿದ್ದರೂ ಸಂಭ್ರಮಕ್ಕೆ ಮಾತ್ರ ಕೊರತೆ ಇಲ್ಲ ಎಂಬಂತೆ ನಡೆಸಲಾಗುತ್ತಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದೆ. ಆಯ್ದ ಗಣ್ಯರು ಹಾಗೂ ಕುಟುಂಬಸ್ಥರು, ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿದ್ದು, ಒಟ್ಟು 250 ಜನರನ್ನು ಆಹ್ವಾನಿಸಲಾಗಿದೆ. ಈಗಾಗಲೇ …

Read More »

ಕಾಲ್‍ಗರ್ಲ್ ಆಗಿ ಹೋಗಿ ಎನ್‍ಜಿಒ ಅಧಿಕಾರಿಯಾಗಿ ನಟಿಸಿ ಯುವಕನಿಗೆ ಬರೋಬ್ಬರಿ 97 ಸಾವಿರ ವಂಚನೆ

ಬೆಂಗಳೂರು: ಮಹಿಳೆಯೊಬ್ಬಳು ಕಾಲ್‍ಗರ್ಲ್ ಆಗಿ ಹೋಗಿ ಎನ್‍ಜಿಒ ಅಧಿಕಾರಿಯಾಗಿ ನಟಿಸಿ ಯುವಕನಿಗೆ ಬರೋಬ್ಬರಿ 97 ಸಾವಿರ ವಂಚನೆ ಮಾಡಿದ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಸುಂದರೇಶನ್ ಎಂಬ ಯುವಕ ಆನ್‍ಲೈನ್ ಆ್ಯಪ್ ಮೂಲಕ ಕಾಲ್ ಗರ್ಲ್ ಬೇಕೆಂದು ಬುಕ್ ಮಾಡಿದ್ದಾನೆ. ಹೀಗಾಗಿ ಮಹಿಳೆಯೊಬ್ಬಳು ಕಾಲ್ ಗರ್ಲ್ ಆಗಿ ಯುವಕನ ಮನೆಗೆ ಬಂದಿದ್ದಾಳೆ. ಅಲ್ಲದೆ ಯುವಕನಿಂದ 10 ಸಾವಿರ ಗೂಗಲ್ ಪೇ ಮಾಡಿಸಿಕೊಂಡಿದ್ದಾಳೆ. ಇತ್ತ ಸಮಯ ಕಳೆಯುತ್ತಿದ್ದಂತೆ ನಾನು ಎನ್‍ಜಿಒ …

Read More »

ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಮತ್ತು ಉದ್ಯಮಿ ಸಿದ್ಧಾರ್ಥ ಹೆಗಡೆ ಪುತ್ರ ಅಮರ್ಥ್ಯ ಹೆಗಡೆಯ ನಿಶ್ಚಿತಾರ್ಥ ನಾಳೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಮತ್ತು ಉದ್ಯಮಿ ಸಿದ್ಧಾರ್ಥ ಹೆಗಡೆ ಪುತ್ರ ಅಮರ್ಥ್ಯ ಹೆಗಡೆಯ ನಿಶ್ಚಿತಾರ್ಥ ನಾಳೆ ಖಾಸಗಿ ಹೋಟೆಲ್‍ನಲ್ಲಿ ನಡೆಯಲಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಖಾಸಗಿ ಹೋಟೆಲ್‍ವೊಂದರಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಡಿ.ಕೆ ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Read More »

ಅಜಿತ್ ಪವಾರ್ ಕ್ಯಾತೆ ತೆಗೆಯುವ ಪ್ಲಾನ್ ಮಾಡಿದ್ದಾರೆ.: B.S.Y.

ಬೆಂಗಳೂರು: ಅಜಿತ್ ಪವಾರ್ ಕ್ಯಾತೆ ತೆಗೆಯುವ ಪ್ಲಾನ್ ಮಾಡಿದ್ದಾರೆ. ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಗಡಿ ವಿಚಾರದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದಾಗ್ಯೂ ಅಜಿತ್ ಅವರ ಈ ಹೇಳಿಕೆ ಉದ್ಧಟತನದಿಂದ ಕೂಡಿದೆ ಎಂದು ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಮಾರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ಕರ್ನಾಟಕದಲ್ಲಿರುವ ಮರಾಠಿಗರ ಅಭಿವೃದ್ಧಿಗೆ ಹೊರತು ಬೇರಾವ ಉದ್ದೇಶದಿಂದಲ್ಲ. ಈ ಬಗ್ಗೆ ಗೊಂದಲಗಳು ಬೇಡ ಎಂದು ಹೇಳಿದರು. …

Read More »

ಬೆಳಗಾವಿ ಲೋಕಸಭೆ ಉಪಚುನಾವಣೆಕುಟುಂಬ ಸದಸ್ಯರಿಗೆ ಬಿಜೆಪಿ ನಾಯಕರು ಮಣೆ ಹಾಕುವುದು ವಿರಳ……..?

ಬೆಂಗಳೂರು, ನ.17- ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ, ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಮಾತ್ರ ವಿಸ್ತರಿಸುತ್ತಲೇ ಇದೆ. ಮತ್ತೊಂದೆಡೆ ಬೆಳಗಾವಿ ಉಪ ಸಮರದ ಟಿಕೆಟ್ ಅಂಗಡಿ ಕುಟುಂಬಕ್ಕೋ? ರಾಜಕೀಯ ವಂಚಿತರಿಗೋ? ಅಥವಾ ಹೊಸಬರಿಗೋ ಎಂಬುವುದೂ ಜಿಜ್ಞಾಸೆಗೆ ಕಾರಣವಾಗಿದೆ. ಬೆಳಗಾವಿ ಕ್ಷೇತ್ರದಿಂದ ನಾಲ್ಕು ಸಲ ಗೆದ್ದಿದ್ದ ಅವರು, ಪ್ರಸಕ್ತ ಮೋದಿ ಸರ್ಕಾರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿದ್ದರು. …

Read More »

ದೇ ನವೆಂಬರ್ 20 ರಂದು ಆ್ಯಕ್ 1978 ಸಿನಿಮಾ ಥಿಯೇಟರ್ ಗೆ ಲಗ್ಗೆ ಇಡುತ್ತಿದೆ.

ಬೆಂಗಳೂರು: ಕೊರೊನಾ ದೇಶಕ್ಕೆ ಬಂದಾಗಿನಿಂದಲೂ ಜನರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಲಾಕ್‍ಡೌನ್ ಆದಾಗಿನಿಂದ ಜನ ಮನೆಯಲ್ಲೇ ಲಾಕ್ ಆಗಿದ್ದರು. ಮನರಂಜನೆಯ ಬಾಗಿಲನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಲಾಗಿತ್ತು. ಅನ್‍ಲಾಕ್ ಪ್ರಕ್ರಿಯೆಲ್ಲಿ ಕಡೆಗೂ ಥಿಯೇಟರ್ ಗಳ ಬಾಗಿಲನ್ನು ತೆರೆಯಲಾಗಿದೆ. ಆದರೂ ಪ್ರೇಕ್ಷಕರು ಥಿಯೇಟರ್ ಬಾಗಿಲಿಗೆ ಬರುತ್ತಿಲ್ಲ. ಥಿಯೇಟರ್ ಒಪನ್ ಆದರೂ ಜನ ಬರೋದು ಡೌಟೇ ಎಂಬುದನ್ನು ಅರಿತಿದ್ದ ನಿರ್ಮಾಪಕರು, ನಿರ್ದೇಶಕರು ಹೊಸ ಸಿನಿಮಾಗಳನ್ನ ಥಿಯೇಟರ್ ಗೆ ಬಿಟ್ಟು ಆಳ ನೋಡುವ ರಿಸ್ಕ್ …

Read More »

ಹಾಡಹಗಲೇ ಮನೆ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಬೆಂಗಳೂರು: ಇಬ್ಬರು ಖದೀಮರು ಹಾಡಹಗಲೇ ಮನೆಯ ಗೇಟ್ ಒಡೆದು, ಕಳ್ಳತನ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದ್ದನ್ನು ಮನಗಂಡ ಖದೀಮರು, ರಾಡ್ ಹಿಡಿದು ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ 30 ಗ್ರಾಂ. ಚಿನ್ನ ಮತ್ತು 5 ಲಕ್ಷ ರೂ.ಹಣವನ್ನು ಎಗರಿಸಿದ್ದಾರೆ.ಮಧ್ಯಾಹ್ನ ಘಟನೆ ನಡೆದಿದ್ದು, ಆರಂಭದಲ್ಲಿ ಮನೆಯಲ್ಲಿ ಯಾರಾದರೂ ಇದ್ದಾರಾ ಎಂಬುದನ್ನು ಕಳ್ಳರು ಪರಿಶೀಲಿಸಿದ್ದಾರೆ. ಬಳಿಕ …

Read More »

ನನ್ನಂಥವನನ್ನು ಹುಡುಕಿ ಸೀಟ್ ಕೊಟ್ಟಿದ್ದು ಬಿಜಿಪಿ ಪಕ್ಷದ ದೊಡ್ಡ ಗುಣ: ರಾಜ್ಯಸಭಾ ಅಭ್ಯರ್ಥಿ

ಬೆಂಗಳೂರು: ನನ್ನಂಥವನನ್ನು ಹುಡುಕಿ ಸೀಟ್ ಕೊಟ್ಟಿದ್ದು ಬಿಜಿಪಿ ಪಕ್ಷದ ದೊಡ್ಡ ಗುಣ ಎಂದು ಕರ್ನಾಟಕದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಡಾ.ಕೆ.ನಾರಾಯಣ್ ಹೇಳಿದ್ದಾರೆ. ಬಿಜೆಪಿ ಹೈಕಮಾಂಡ್ ರಾಜ್ಯದ ಕಮಲ ನಾಯಕರಿಗೆ ಮತ್ತೆ ಶಾಕ್ ನೀಡಿದ್ದು, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಪಕ್ಷಕ್ಕೆ ಸಂಬಂಧಿಸಿದ ಕರಪತ್ರಗಳನ್ನು ಮುದ್ರಿಸುತ್ತಿದ್ದ ಕೆ ನಾರಾಯಣ್ ಅವರನ್ನು ಆಯ್ಕೆ ಮಾಡಿದೆ. ಈ ವಿಚಾರವಾಗಿ ಮಾತನಾಡಿರುವ ಅವರು, ದೆಹಲಿಯವರು ಯಾವುದೋ ಮೂಲೇಲಿರೋರನ್ನೂ ಗುರುತಿಸಿದ್ದು ಖುಷಿ ವಿಚಾರ …

Read More »