Breaking News

ಬೆಂಗಳೂರು

ಮುಷ್ಕರ ನಿರತ ಸಾರಿಗೆ ನೌಕರರಿಗೆ ಬಿಎಂಟಿಸಿಯಿಂದ ಬಿಗ್ ಶಾಕ್..!

ಬೆಂಗಳೂರು, ಡಿ.13- ಮುಷ್ಕರ ನಿರತ ಸಾರಿಗೆ ನೌಕರರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಶಾಕ್ ನೀಡಿದ್ದು, ಕೆಲಸಕ್ಕೆ ಗೈರಾಗಿರುವ ನೌಕರರಿಗೆ ವೇತನ ಕಡಿತಗೊಳಿಸಿದೆ. ಜೊತೆಗೆ ಅಗತ್ಯ ಸೇವೆ ಮತ್ತು ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ ಆದೇಶದ ಅನ್ವಯ ಶಿಸ್ತು ಕ್ರಮಕ್ಕೆ ಆದೇಶ ಹೊರಡಿಸಿದೆ. ಬಿಎಂಟಿಸಿ ಸುತ್ತೋಲೆಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದ್ದು, ಗೈರಾಗುವ ನೌಕರರಿಗೆ ವೇತನ ಕಡಿತ ಹಾಗೂ ಹೊಸದಾಗಿ ಯಾವುದೇ ರಜೆ ಮಂಜೂರು ಮಾಡಬಾರದು.ಮುಷ್ಕರಕ್ಕೆ ಮುನ್ನ ರಜೆ ತೆಗೆದುಕೊಂಡವರಿಗೆ …

Read More »

ಸಾರಿಗೆ ನೌಕರರ ಧಿಡೀರ್ ಪ್ರತಿಭಟನೆಯಿಂದ ಜನರಿಗೆ ತೊಂದರೆ:ಲಕ್ಷ್ಮಣ ಸವದಿ

ಬೆಂಗಳೂರು : ಸಾರಿಗೆ ನೌಕರರ ದಿಢೀರ್​ ಪ್ರತಿಭಟನೆ ಹಿನ್ನಲೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಮಾತುಕತೆಗೆ ಆಹ್ವಾನಿಸಿದರೂ ಚರ್ಚೆ ಮಾಡಲು ನೌಕರರು ಸಿದ್ಧರಿಲ್ಲ. ಈ ಹಿನ್ನಲೆ ನಾಳೆಯಿಂದ ಸರ್ಕಾರಿ ದರದಲ್ಲಿಯೇ ಖಾಸಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಈ ಕುರಿತು ಮುಖ್ಯಮಂತ್ರಿಗಳು ಕೂಡ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅಲ್ಲದೇ ಅಧಿಕಾರಿಗಳ ಜೊತೆ ಕೂಡ ಮಾತುಕತೆ ನಡೆಸಿದ್ದೇವೆ. ನಾಳೆಯಿಂದ ಖಾಸಗಿ ವಾಹನ ಓಡಿಸುವುದಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ …

Read More »

ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ

  ಬೆಂಗಳೂರು (ಡಿ. 13): ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ನೌಕರರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂದು ಸಹ ರಸ್ತೆಗೆ ಇಳಿಯದ ಬಿಎಂಟಿಸಿ, ಕೆಎಸ್ಆರ್​ಟಿಸಿ ಬಸ್​ಗಳಿಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪರದಾಡುವಂತಾಗಿದೆ. ಇಂದು ಸಾರಿಗೆ ನೌಕರರ ಜೊತೆಗೆ ಮಾತುಕತೆಗೆ ಮುಂದಾಗುತ್ತಾರಾ ಡಿಸಿಎಂ ಹಾಗೂ …

Read More »

ಮುಷ್ಕರ ಹಿಂಪಡೆಯದಿದ್ದರೆ ಸರಕಾರಿ ದರದಲ್ಲಿಖಾಸಗಿ ಬಸ್ಸು ಪ್ರಾರಂಭ : ಲಕ್ಷ್ಮಣ ಸವದಿ

ಬೆಂಗಳೂರು : ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಮಿತ್ರರು ಮಾತುಕತೆಗೆ ಮುಕ್ತ ಆಹ್ವಾನ ನೀಡಿದ್ದರು ಸಹ ಮಾತುಕತೆಗೆ ಬಾರದೇ ಇದ್ದರೆ ರಾಜ್ಯದಲ್ಲಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ಖಾಸಗಿ ಬಸ್ಸುಗಳನ್ನು ಸರ್ಕಾರಿ ಬಸ್ ದರದಲ್ಲಿ ಓಡಿಸುವ ವ್ಯವಸ್ಥೆ ಆರಂಭಿಸಲಾಗುತ್ತದೆ. ಎಂದು ಚರ್ಚೆ ನಡೆಸಿ ಆರಂಭಿಸಲಾಗುತ್ತದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಸಾರಿಗೆ ಸಂಸ್ಥೆಗಳ ಸುಮಾರು 1.30 ಲಕ್ಷ ನೌಕರರ ಹಿತಾಸಕ್ತಿ ರಕ್ಷಿಸಲು ನಮ್ಮ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಸಾರಿಗೆ …

Read More »

ಸವದಿ ವಿರುದ್ಧ ಸಿಎಂ ಗರಂ

ಬೆಂಗಳೂರು,ಡಿ.12- ಸಾರಿಗೆ ನೌಕರರ ಬಿಕ್ಕಟ್ಟನ್ನು ಪರಿಹರಿಸಲು ವಿಫಲರಾಗಿರುವ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಕಾರ್ಯ ವೈಖರಿ ವಿರುದ್ದ ಮುಖ್ಯಮಂತ್ರಿ ಯಡಿಯೂರಪ್ಪ ಕೆಂಡ ಕಾರಿದ್ದಾರೆ. ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಬಸ್‍ಗಳ ಸಂಚಾರಕ್ಕೆ ಅವಕಾಶವನ್ನೂ ನೀಡದೇ ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಾರಂಭದಲ್ಲೇ ಈ ಬಿಕ್ಕಟ್ಟನ್ನು ಪರಿಹರಿಸಿದ್ದರೆ ಇಂದು ಸಮಸ್ಯೆ ಉದ್ಭವವಾಗುತ್ತಿತ್ತೇ ಎಂದು ಸವದಿ ಅವರನ್ನು ಪ್ರಶ್ನಿಸಿದ್ದಾರೆ. ನೌಕರರು ಬೀದಿಗೆ ಬರುವ ಮೊದಲು ಅವರ …

Read More »

ಯೋಗೀಶ್ ಗೌಡ ಹತ್ಯೆ ಮಾಡಲು ಭೀಮಾತೀರದ ಹಂತಕ ಧರ್ಮರಾಜ್ ಚಡಚಣಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸುಫಾರಿ ಕೊಟ್ಟಿದ್ದರು?

ಬೆಂಗಳೂರು : ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಮಾಡಲು ಭೀಮಾತೀರದ ಹಂತಕ ಧರ್ಮರಾಜ್ ಚಡಚಣಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸುಫಾರಿ ಕೊಟ್ಟಿದ್ದರು ಎಂಬ ವಿಷಯ ಸಿಬಿಐ ತನಿಖೆಯಿಂದ ತಿಳಿದು ಬಂದಿದೆ. ಈಗಾಗಲೇ ಯೋಗೀಶ್ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕಲಕರ್ಣಿ ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದಾರೆ. ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಇಡೀ ರಾಜ್ಯವೇ ಬೆಚ್ಚಿ ಬೀಳುವಂತ ಮಾಹಿತಿಯನ್ನು  ಹೊರ ಹಾಕಿದ್ದಾರೆ.  ಯೋಗೀಶ್ ಹತ್ಯೆಗೆ …

Read More »

ಪ್ರತಿಭಟನೆ ಕೈ ಬಿಡದಿದ್ದರೆ ಎಸ್ಮಾ ಜಾರಿ, ಸಾರಿಗೆ ನೌಕರರಿಗೆ ಸರ್ಕಾರ ಎಚ್ಚರಿಕೆ

ಬೆಂಗಳೂರು,ಡಿ.12-ಸಾರಿಗೆ ನೌಕರರು ತಮ್ಮ ಪ್ರತಿಭಟನೆಯನ್ನು ನಾಳೆ ಸಂಜೆಯೊಳಗೆ ಹಿಂಪಡೆಯದಿದ್ದರೆ ಅಗತ್ಯ ಸೇವಾ ನಿರ್ವಹಣಾ ಕಾಯೆ (ಎಸ್ಮಾ) ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರತಿಭಟನೆಯನ್ನು ಕೈಬಿಟ್ಟು ಎಲ್ಲಾ ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಮಾತುಕತೆಗೆ ಬಂದು ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಮುಂದಾಗದಿದ್ದರೆ ಎಸ್ಮಾ ಜಾರಿಯಾಗುವುದು ಖಚಿತ. ನಾಳೆ ಸಂಜೆಯವರೆಗೂ ಕಾದು ನೋಡಿ. ನೌಕರ ಸಂಘಟನೆಯ ಮುಖಂಡರು ಮಾತುಕತೆಗೆ ಬಾರದೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರೆ ಅವರ ವಿರುದ್ಧ ಎಸ್ಮಾ ಜಾರಿ ಮಾಡಲು …

Read More »

ಲಕ್ಷ್ಮಣ್ ಸವದಿ ಬೊಮ್ಮಾಯಿಜತೆ ಸಿಎಂ ಬಿಎಸ್‍ವೈ ಸಭೆ..

ಬೆಂಗಳೂರು,ಡಿ.12- ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಕಾನೂನು ಸುವ್ಯವಸ್ಥೆ ಕುರಿತಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಇಂದು ಮಾತುಕತೆ ನಡೆಸಿದರು. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಬೊಮ್ಮಾಯಿ ಅವರು, ಸುಮಾರು 30ಕ್ಕೂ ಹೆಚ್ಚು ನಿಮಿಷಗಳ ಕಾಲ ಮಾತುಕತೆ ನಡೆಸಿ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದರು. ಪ್ರತಿಭಟನೆ ನೆಪದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಅಹಿತಕರ ಘಟನೆ ನಡೆಸುವ ಸಾಧ್ಯತೆಯಿದೆ ಎಂಬ ಗುಪ್ತಚರ …

Read More »

ಸರ್ಕಾರ – ನೌಕರರ ಹಗ್ಗಜಗ್ಗಾಟ, ಸಾರಿಗೆ ಮುಷ್ಕರ ನಿಲ್ಲುವ ಲಕ್ಷಣಗಳೇ ಇಲ್ಲ..!

ಬೆಂಗಳೂರು,ಡಿ.12- ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯಂತೆ ಸಾರಿಗೆ ನೌಕರರು ಹಾಗೂ ಸರ್ಕಾರದ ಪ್ರತಿಷ್ಠೆಯಿಂದಾಗಿ ಸಾರ್ವಜನಿಕರು ಇಂದು ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಭಾಗದಲ್ಲೂ ಬಸ್‍ಗಳು ಸಂಚಾರ ಆರಂಭಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಖಾಸಗಿ ಬಸ್‍ಗಳ ಮೊರೆ ಹೋಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಇದರ ನಡುವೆ ಪ್ರತಿಭಟನೆ ಕೈ ಬಿಡದಿದ್ದರೆ ನೌಕರರ ಮೇಲೆ ಎಸ್ಮಾ ಜಾರಿ ಮಾಡುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಯಾವುದೇ …

Read More »

ಇಂದು ಕೂಡ KSRTC, BMTC ನೌಕರರ ಮುಷ್ಕರ;

ಬೆಂಗಳೂರು (ಡಿ. 12): ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಗುರುವಾರ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರು ನಿನ್ನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರದ 2ನೇ ದಿನವಾದ ಇಂದು ಕೂಡ ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ಬಸ್​ಗಳು ಸಂಚಾರ ನಡೆಸದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಸಂಚಾರ ಸ್ಥಗಿತಗೊಂಡಿರುವುದರಿಂದ ಆಟೋ, ಕ್ಯಾಬ್​ಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಇದೇ ಸಮಯವನ್ನು ಬಳಸಿಕೊಂಡು ಆಟೋಗಳು ಪ್ರಯಾಣಿಕರಿಂದ ಹಗಲು …

Read More »