Breaking News

ಬೆಂಗಳೂರು

ಸಿ.ಡಿ ಪ್ರಕರಣ ಎಲ್ಲ ಆಯಾಮಗಳಲ್ಲೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.: ಬಸವರಾಜ್ ಬೊಮ್ಮಾಯಿ

ಬೆಂಗಳೂರು,ಮಾ.9- ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕೇಳಿಬಂದಿರುವ ಸಿ.ಡಿ ಪ್ರಕರಣದ ಕುರಿತಾಗಿ  ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿ.ಡಿ ವಿವಾದ ಬೆಳಕಿಗೆ ಬಂದ ನಂತರ ಎಲ್ಲ ಆಯಾಮಗಳಲ್ಲೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವುದು ನಮ್ಮ ಉದ್ದೇಶ ಎಂದರು. ಇದರಲ್ಲಿ 2+3+4 ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ. ಜಾರಕಿಹೊಳಿ ಕುಟುಂಬದವರು ಅವರದೇ ಆದ …

Read More »

ಹೆಚ್‌ಡಿ ಕುಮಾರಸ್ವಾಮಿಗೆ ರಮೇಶ್ ಜಾರಕಿಹೊಳಿ ಧನ್ಯವಾದ ಹೇಳಿದ್ದೇಕೆ?

ಮೈಸೂರು: ಸಿಡಿ ಕೇಸ್ ಸಂಬಂಧ ಸ್ಪಷ್ಟನೆ ನೀಡಲು ಮಾರ್ಚ್ 09ರಂದು ತಮ್ಮ ಸದಾಶಿವನಗರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಅವರು ಹೆಚ್.ಡಿ ಕುಮಾರಸ್ವಾಮಿ ಮತ್ತು ಹೆಚ್.ಡಿ ರೇವಣ್ಣನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದ್ರೆ ಈ ರೀತಿ ಹೆಚ್​ಡಿಕೆಗೆ ಧನ್ಯವಾದ ಯಾಕೆ ಹೇಳಿದರು? ಸಿಡಿ ನಕಲಿ‌ ಎಂದ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ಯಾಕೆ ಕೊಟ್ರಿ? ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ರಮೇಶ್ ಜಾರಕಿಹೊಳಿಗೆ ಪ್ರಶ್ನಿಸಿದ್ದಾರೆ. ಸಿಡಿ …

Read More »

‘ನಾನು ನಿರಪರಾಧಿ, ಅಪರಾಧಿಯಲ್ಲ’ ಸುದ್ದಿಗೋಷ್ಠಿಯಲ್ಲಿ ಮಹತ್ವದ ಮಾಹಿತಿ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ

ಬೆಂಗಳೂರು: ಸಿಡಿ ಹೊರಬಂದ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬಳಿಕ ನಾಪತ್ತೆಯಾಗಿದ್ದ ರಮೇಶ್ ಜಾರಕಿಹೊಳಿ ಇಂದು ಬೆಂಗಳೂರಿನ ತಮ್ಮ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಮೇಶ್ ಜಾರಕಿಹೊಳಿ ನಡೆಸುತ್ತಿರುವ ಮೊದಲ ಸುದ್ದಿಗೋಷ್ಠಿ ಇದಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ‘ನನ್ನ ಪರವಾಗಿ ನಿಂತ ಎಲ್ಲರಿಗೂ ಹೃದಯಪೂರ್ವಕ ವಂದನೆ. ನನಗೆ ಮಾನಸಿಕವಾಗಿ ಧೈರ್ಯ ತುಂಬಿದ ಸಿಎಂ ಬಿಎಸ್‌ ಯಡಿಯೂರಪ್ಪ, ಮಾಜಿ …

Read More »

ಯುದ್ಧ ನೌಕೆಗೆ ಮಹಿಳೆಯರ ನೇಮಕ

ಹೊಸದಿಲ್ಲಿ: ಭಾರತೀಯ ನೌಕಾ ಪಡೆ ವಿಶ್ವ ಮಹಿಳಾ ದಿನಾಚರಣೆಗೆ ವಿಶಿಷ್ಟ ಕೊಡುಗೆ ನೀಡಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ 23 ವರ್ಷಗಳ ಬಳಿಕ ಯುದ್ಧ ನೌಕೆಗೆ ನಾಲ್ವರು ಮಹಿಳೆಯರನ್ನು ನೇಮಕ ಮಾಡಲಾಗಿದೆ. ಐಎನ್‌ಎಸ್‌ ವಿಕ್ರಮಾದಿತ್ಯ ವಿಮಾನ ವಾಹಕ ನೌಕೆಗೆ ಇಬ್ಬರು, ಐಎನ್‌ಎಸ್‌ ಶಕ್ತಿ ಟ್ಯಾಂಕರ್‌ಗೆ ಇಬ್ಬರು ಸೇರಿದಂತೆ ನಾಲ್ವರು ಮಹಿಳೆಯರನ್ನು ನೌಕಾಪಡೆಯ ಮುಂಚೂಣಿ ಜಾಗಕ್ಕೆ ನೇಮಕ ಮಾಡಲಾಗಿದೆ. 1998ರಲ್ಲಿ ಮೊಟ್ಟ ಮೊದಲ ಬಾರಿಗೆ ಯುದ್ಧನೌಕೆಗೆ ಮಹಿಳೆಯರನ್ನು ನೇಮಕ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಅನುಷ್ಠಾನ …

Read More »

ಕರ್ನಾಟಕ ಬಜೆಟ್ 2021: ಸಾರಿಗೆ ವಲಯಕ್ಕೆ ನೀಡಿದ ಕೊಡುಗೆಗಳೇನು?

ಬೆಂಗಳೂರು, ಮಾರ್ಚ್ 05: ಕೊರೊನಾ ಸೋಂಕಿನಿಂದಾಗಿ ನಷ್ಟ ಅನುಭವಿಸಿರುವ ಸಾರಿಗೆ ವಲಯಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. 2021-22ರ ಸಾಲಿನಲ್ಲಿ 7,515 ಕೋಟಿ ರೂ. ಆದಯಾ ಸಂಗ್ರಹಣೆಯ ಗುರಿಯನ್ನು ಹಾಕಲಾಗಿದೆ. ಈ ವರ್ಷ ರಾಜ್ಯದಲ್ಲಿ 52 ಬಸ್‌ ನಿಲ್ದಾಣ, 16 ಬಸ್‌ ಘಟಕಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ.   2020-21ರ ಹಣಕಾಸು ವರ್ಷದಲ್ಲಿ ಸಾರಿಗೆ ಇಲಾಖೆ 7,115 ಕೋಟಿ ರೂ.ಗಳ ಆದಾಯವನ್ನು …

Read More »

ಕೊರೊನಾ ನಿರ್ವಹಣೆಗೆ 5372 ಕೋಟಿ ಖರ್ಚು

ಬೆಂಗಳೂರು,ಮಾ.8- ರಾಜ್ಯದಲ್ಲಿ ಕೊರೊನಾ ನಿರ್ವಹಣೆಗೆ ಇದುವರೆಗೂ 5372 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಿಂದ 63.59 ಲಕ್ಷ ಫಲಾನುಭವಿಗಳಿಗೆ ನೆರವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಯವ್ಯಯದಲ್ಲಿ ಅಂಕಿ ಅಂಶ ನೀಡಿದ್ದಾರೆ.ಇದುವರೆಗೂ 1.91ಕೋಟಿ ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. 9.53 ಲಕ್ಷ ಸೋಂಕಿತರಿಗೆ ಉಚಿತ ಚಿಕಿತ್ಸೆ ಒದಗಿಸಲಾಗಿದೆ. ಕಟ್ಟಡ ಕಾರ್ಮಿಕರಿಗೆ 90 ಲಕ್ಷ ಆಹಾರ ಪೊಟ್ಟಣ ವಿತರಿಸಲಾಗಿದೆ. 11,770 ಕುಶಲಕರ್ಮಿಗಳಿಗೆ ಹಾಗೂ 51 ಲಕ್ಷ ರೈತರಿಗೆ ನೆರವು ನೀಡಲಾಗಿದೆ. ಕೊರೊನಾ ನಿಯಂತ್ರಣದಲ್ಲಿ …

Read More »

ಬಜೆಟ್ ಮಂಡಿಸಲು ಯಡಿಯೂರಪ್ಪಗೆ ನೈತಿಕತೆಯಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ನಡೆಸಲು ಮತ್ತು ಬಜೆಟ್ ಮಂಡಿಸಲು ಬಿ ಎಸ್ ಯಡಿಯೂರಪ್ಪಗೆ ನೈತಿಕತೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ ಬಜೆಟ್ ಅಧಿವೇಶನಕ್ಕೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.   26 ಎಕರೆ ಬಡಾವಣೆ ಯೋಜನೆಯಲ್ಲಿ ಡಿನೋಟಿಫೈ ಗೆ ಸಂಬಂಧಿಸಿದ ಅವ್ಯವಹಾರ ಕೇಳಿಬಂದಿತ್ತು. ಈ ವಿಚಾರದಲ್ಲಿ ಬಿಎಸ್ ವೈ ಮತ್ತು ಮುರುಗೇಶ್ ನಿರಾಣಿ ವಿರುದ್ಧ ತನಿಖೆ ನಡೆಸುವಂತೆ …

Read More »

ನಿರ್ದಿಷ್ಟ ಗುರಿ- ಕಾರಣ ಇಲ್ಲದ, ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್: ಪರಮೇಶ್ವರ್ ಟೀಕೆ

ಬೆಂಗಳೂರು: ಯಾವುದೇ ನಿರ್ದಿಷ್ಟ ಗುರಿ, ಕಾರಣ ಇಲ್ಲದಿರುವ ಬಜೆಟ್ ನ್ನು ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಿದ್ದಾರೆ. ಇದು ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್ ಎಂದು ಮಾಜಿ ಸಚಿವ ಪರಮೇಶ್ವರ್ ಟೀಕಿಸಿದ್ದಾರೆ. ಸಿಎಂ ಬಿಎಸ್ ವೈ, 71 ಸಾವಿರ ಕೋಟಿ ಸಾಲ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ. ಫಿಸಿಕಲ್ ಆಕ್ಟ್ ತಂದಿದ್ದರು. ಅವರ ಪ್ರಕಾರ ಸಾಲ 25 ರಷ್ಟು ಮೇಲೆ ಹೋಗದಂತೆ ಸೂಚಿಸಲಾಗಿತ್ತು. ಅದನ್ನು ಮೀರಿ 26% ಸಾಲ ಪಡೆದಿದ್ದಾರೆ. ಮುಂದಿನ ದಿನದಲ್ಲಿ …

Read More »

ಹೊಸ ತೆರಿಗೆ ಇಲ್ಲ, ಪೆಟ್ರೋಲ್ ತೆರಿಗೆ ಕಡಿತವೂ ಇಲ್ಲ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಿಂದ ಸಂಕಷ್ಟಕ್ಕೀಡಾಗಿರುವ ಜನತೆಗೆ ಸಿಹಿ ಸುದ್ದಿ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ವರ್ಷ ಯಾವುದೇ ಹೊಸ ತೆರಿಗೆ ವಿಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಬಜೆಟ್‌ ಮಂಡನೆ ವೇಳೆ ಈ ವಿಚಾರ ಬಹಿರಂಗಪಡಿಸಿರುವ ಅವರು, ‘ಕೋವಿಡ್‌ನಿಂದಾಗಿ ಜನ ಈಗಾಗಲೇ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಮತ್ತಷ್ಟು ತೆರಿಗೆ ಹೊರೆ ವಿಧಿಸುವುದಿಲ್ಲ ಎಂದು ತಿಳಿಸಿದರು. ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ಮಾರಾಟ ತೆರಿಗೆಯು ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲೇ …

Read More »

ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು

ಬೆಂಗಳೂರು: ರಮೇಶ್‌ ಜಾರಕಿಹೊಳಿಯ ಅಶ್ಲೀಲ ವೀಡಿಯೋದಲ್ಲಿದ್ದ ಯುವತಿಯ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಆಕೆಯನ್ನು ಹುಡುಕಿ ಕರೆತಂದು, ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಯುವತಿಯು ಮಾ.1ರವರೆಗೂ ಬೆಂಗಳೂರಿನಲ್ಲಿದ್ದು, ಬಳಿಕ ನಾಪತ್ತೆಯಾಗಿಯಾಗಿದ್ದಾಳೆ. ಬಳಿಕ, ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಅಶ್ಲೀಲ ವಿಡಿಯೋ(ಸಿ.ಡಿ) ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವತಿ, ನಗರದಲ್ಲಿ ವಾಸವಿದ್ದಳು ಎಂಬ ಮಾಹಿತಿ ಮೇರೆಗೆ ಪೊಲೀಸರು, ಹಲವು ಪಿ.ಜಿ (ಪೇಯಿಂಗ್‌ ಗೆಸ್ಟ್‌)ಗಳನ್ನು ಪರಿಶೀಲಿಸಿದ್ದು, ಆಗ ಆಕೆಯ ವಿಳಾಸದ ಬಗ್ಗೆ ಖಚಿತ …

Read More »