ಬೆಂಗಳೂರು,ಮಾ.21- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ನನ್ನನ್ನೂ ಸೇರಿದಂತೆ ಪ್ರಮುಖರನ್ನು ಹತ್ಯೆ ಮಾಡುವ ಬೆದರಿಕೆ ಪತ್ರ ಬಂದಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‍ನಲ್ಲಿ ಮಾಜಿ ಸಚಿವ ರೇವಣ್ಣ ಅವರು ಸಾರ್ವಜನಿಕ ಜೀವನದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇ 1ರಂದು ಪ್ರಮುಖರನ್ನು ಕೊಲೆ ಮಾಡುವ ಪತ್ರ ಬಂದಿದೆ. …
Read More »ತಿಂಗಳೊಳಗೆ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಗುಡ್ ಬೈ..? : ನಳಿನ್ ಕುಮಾರ್ ಕಟೀಲ್
ಬೆಂಗಳೂರು, ಮಾ.21. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಂದು ತಿಂಗಳಲ್ಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದರು. ಬಿಜೆಪಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲ್ಲುವ ಪಕ್ಷವಾಗಿದ್ದು, ಕಾಂಗ್ರೆಸ್ ಸೋಲಿನ ಪಕ್ಷವಾಗಿದೆ. ಕಾಂಗ್ರೆಸ್ ಒಳಜಗಳದ ಮಿತಿಮೀರಿದ್ದು, ಎಲ್ಲಿಯೂ ನಿಲ್ಲದ ಸಿದ್ದರಾಮಯ್ಯ ಅವರು ಈ ಹಿಂದೆ ಗುರುವಿಗೆ ತಿರುಮಂತ್ರ ಹಾಕಿ ಜೆಡಿಎಸ್ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ …
Read More »ಪ್ರತಿಭಾನ್ವಿತ ಕ್ರೀಡಾಪಟುಗಳಾಗಿದ್ದವರಿಗೆ ಇನ್ಮುಂದೆ ಪೊಲೀಸ್ ನೇಮಕಾತಿಯಲ್ಲಿ ಕೋಟಾ.!
ಬೆಂಗಳೂರು:ಹೌದು ರಾಜ್ಯ ಸರಕಾರವು ಕರ್ನಾಟಕದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪೊಲೀಸ್ ಪಡೆ ನೇಮಕಾತಿಯಲ್ಲಿ ಶೇಕಡಾ ಎರಡು ಕೋಟಾ ನೀಡಲಾಗುವುದು ಎಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ವಿಶೇಷ ನಿಯಮಗಳನ್ನು ಕಳೆದ ವರ್ಷ ರೂಪಿಸಲಾಯಿತು ಮತ್ತು ಅಂತಿಮವಾಗಿ ಮಾರ್ಚ್ 3 ರಂದು ರಾಜ್ಯ ಗೆಜೆಟ್‌ನಲ್ಲಿ ತಿಳಿಸಲಾಯಿತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕೆಎಸ್‌ಆರ್‌ಪಿ) ಅಲೋಕ್ ಕುಮಾರ್ ಅವರು, ‘ಪೊಲೀಸ್ …
Read More »ಇನ್ನೂ 19 ಸಿ.ಡಿ ಇವೆಯಂತೆ. ಎಲ್ಲವೂ ಹಿಡಿತದಲ್ಲಿ ಇರಲಿ. :ಸಿದ್ದರಾಮಯ್ಯ
ಬೆಂಗಳೂರು,ಮಾ.21- ಇನ್ನೂ 19 ಸಿ.ಡಿ ಇವೆಯಂತೆ. ಎಲ್ಲವೂ ಹಿಡಿತದಲ್ಲಿ ಇರಲಿ. ನಾಲಿಗೆ ಕೂಡ ಎಂದು ಹೇಳುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್‍ಕಟೀಲ್ ಅವರಿಗೆ ಬಿಸಿ ಮುಟ್ಟಿಸಿದ್ದಾರೆ. ಕಾಂಗ್ರೆಸ್‍ಗೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ಅವರಿಂದ 90 ಜೊತೆ ಬಟ್ಟೆ ಖರೀದಿಯಾಗಿದೆ ಎಂದು ನಳೀನ್‍ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯನವರು, ಎಲ್ಲೆಲ್ಲೋ ಹೋಗಿ ಬಟ್ಟೆ ಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಕರ್ನಾಟಕದ ಬಿಜೆಪಿ …
Read More »ಇಂಥವರನ್ನ ನಂಬಿದ್ರೆ ಲೈಫ್ ಬರ್ಬಾದ್: ಬಂಧಿತ ಮೂವರು ಸಹೋದರರ ಕರಾಳ ಮುಖವಿದು..!
ಬೆಂಗಳೂರು: ನೂರಾರು ಅಮಾಯಕ ಜನರಿಗೆ ಚೀಟಿ ಹೆಸರಲ್ಲಿ ಯಾಮಾರಿಸಿ ಲಕ್ಷ ಲಕ್ಷ ಹಣ ದೋಚಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಶದಲ್ಲಿರುವ ವೆಂಕಟೇಶ ಬಾಬು, ಲೋಕೇಶ್ ಬಾಬು ಮತ್ತು ನಟರಾಜ ಬಾಬು ಎಂಬ ಐನಾತಿ ಸಹೋದರರು ಅಗರಬತ್ತಿ ಕಂಪನಿ, ನಟರಾಜ ಟ್ರೇಡರ್ಸ್, ಬಾಬು ಚಿಟ್ ಫಂಡ್ ಅಂತ ಬೋರ್ಡ್ ಹಾಕಿಕೊಂಡು ಸಾಕಷ್ಟು ವರ್ಷಗಳಿಂದ ಅಮಾಯಕ ಜನರನ್ನು ನಂಬಿಸಿ …
Read More »ಬಿರುಸುಗೊಂಡ ಉಪ ಚುನಾವಣೆ ಕಣ
ಬೆಂಗಳೂರು: ಬೆಳಗಾವಿ ಲೋಕ ಸಭೆ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನ ಸಭೆ ಕ್ಷೇತ್ರಗಳ ಉಪ ಚುನಾವಣೆ ಸಂಬಂಧ 3 ಪಕ್ಷಗಳಲ್ಲಿ ಚಟುವಟಿಕೆಗಳು ತೀವ್ರಗೊಂಡಿವೆ. ಶನಿವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆದು ಮೂರೂ ಕ್ಷೇತ್ರಗಳಿಗೆ ಸಂಭಾವ್ಯರ ಬಗ್ಗೆ ಚರ್ಚಿಸಿದ್ದು, ಕೇಂದ್ರ ಚುನಾವಣ ಸಮಿತಿಗೆ ಹೆಸರು ಶಿಫಾರಸು ಮಾಡುವ ಅಧಿಕಾರ ರಾಜ್ಯಾಧ್ಯಕ್ಷರಿಗೆ ಕೊಡಲಾಗಿದೆ. ಈ ಮಧ್ಯೆ, ಬಳ್ಳಾರಿ ಜಿಲ್ಲೆಯ ತೋರಣಗಲ್ಲು ವಿಮಾನ ನಿಲ್ದಾಣದಲ್ಲಿ …
Read More »ಅತಿಥಿ ಉಪನ್ಯಾಸಕರಿಗೆ ಶುಭಸುದ್ದಿ : ಖಾಲಿ ಇರುವ 1,835 ಹುದ್ದೆಗಳಿಗೆ `ಅತಿಥಿ ಉಪನ್ಯಾಸಕರ’ ನೇಮಕಕ್ಕೆ ರಾಜ್ಯ ಸರ್ಕಾರ ಅನುಮೋದನೆ
ಬೆಂಗಳೂರು : ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 1,835 ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಸರ್ಕಾರ ಅನುಮೋದನೆ ನೀಡಿದೆ. ಅತಿಥಿ ಉಪನ್ಯಾಸಕರ ನೇಮಕ ಸಂಬಂಧ ಪಿಯು ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ. 2021 ನೇ ಸಾಲಿನ ಫೆಬ್ರವರಿ ತಿಂಗಳಿಂದ ಮಾಸಿಕ 9 ಸಾವಿರ ರೂ. ಗೌರವಧನದ ಆಧಾರದಲ್ಲಿ …
Read More »ರಾಜ್ಯದ ಆಸ್ಪತ್ರೆಗಳಲ್ಲಿ ಗುತ್ತಿಗೆ ನೌಕರರ ಸೇವೆ 6 ತಿಂಗಳಿಗೆ ವಿಸ್ತರಣೆ : ರಾಜ್ಯ ಸರ್ಕಾರ ಆದೇಶ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸಿಬ್ಬಂದಿಯನ್ನು ಮುಂದಿನ 6 ತಿಂಗಳಿಗೆ ಮುಂದುವರೆಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೆ ತಾತ್ಕಾಲಿಕವಾಗಿ ವೈದ್ಯರು, ಶುಶ್ರೂಷಕರು, ಪ್ರಯೋಗಾಲಯ ತಜ್ಞರು ಸೇರಿ 45 ಮಂದಿ ನೇಮಕಕ್ಕೆ ಸೂಚಿಸಲಾಗಿತ್ತು. ಒಟ್ಟಾರೆ ರಾಜ್ಯದಲ್ಲಿ 810 ಸಿಬ್ಬಂದಿ ನೇಮಕಗೊಂಡಿದ್ದರು. ಸದ್ಯ ಅವರ ಸೇವಾವಧಿ ಮುಕ್ತವಾಗುತ್ತಿದೆ. ಕೊರೊನಾ …
Read More »ಬಸವಕಲ್ಯಾಣ ಬೈಎಲೆಕ್ಷನ್ ಅಖಾಡಲ್ಲಿ ತೊಡೆತಟ್ಟುವರೇ ‘ಬಿಜೆಪಿ ಬಾಹುಬಲಿ’..?
ಬೆಂಗಳೂರು, ಮಾ.20- ಜಿದ್ದಾಜಿದ್ದಿನ ಕಣವಾಗಲಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸಬೇಕೆಂಬ ಅಭಿಪ್ರಾಯ ಇಂದು ನಡೆದ ಕೋರ್‍ಕಮಿಟಿ ಸಭೆಯಲ್ಲಿ ವ್ಯಕ್ತವಾಗಿದೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕೋರ್‍ಕಮಿಟಿ ಸಭೆಯಲ್ಲಿ ಬಸವಕಲ್ಯಾಣದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ದಿ.ನಾರಾಯಣರಾವ್ ಅವರ ಪತ್ನಿಗೆ ಟಿಕೆಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅನುಕಂಪ ಸಿಕ್ಕರೆ ಬಿಜೆಪಿಗೆ ಹಿನ್ನಡೆಯಾಗಬಹುದೆಂಬ ಕಾರಣಕ್ಕಾಗಿ …
Read More »1 ನಿಮಿಷದ ವಿಡಿಯೋ ತಯಾರಿಸಿ ಪ್ರತಿ ತಿಂಗಳು ಗಳಿಸಿ 20 ಸಾವಿರ ರೂ.
ಸಾಮಾಜಿಕ ಜಾಲತಾಣದ ಮೂಲಕ ಹಣ ಸಂಪಾದಿಸಲು ಬಯಸಿದರೆ ನಿಮಗೆ ಖುಷಿ ಸುದ್ದಿ ಇದೆ. ಮನೆಯಲ್ಲಿ ಕುಳಿತು ಗಳಿಸಲು ಇದು ಒಳ್ಳೆ ಅವಕಾಶ. ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಗಳಿಕೆಗೆ ಅವಕಾಶ ನೀಡ್ತಿದೆ. ಇತ್ತೀಚೆಗೆ ಫೇಸ್ಬುಕ್ ಇಂಕ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಗಳಿಗೆ ಸಣ್ಣ ವೀಡಿಯೊಗಳನ್ನು ಹಾಕಿ, ಜಾಹೀರಾತುಗಳ ಮೂಲಕ ಹಣ ಗಳಿಸಲು ಅನುಮತಿ ನೀಡಿದೆ. ಇದಲ್ಲದೆ ಜನರು ಯಾವ ರೀತಿ ಫೇಸ್ಬುಕ್‌ನಲ್ಲಿ ಸಂಪಾದಿಸಬಹುದು …
Read More »