ಬೆಂಗಳೂರು: ಕೊರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ಮೋಟಾರು ವಾಹನಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣಿಕ ವಾಹನ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸಿ ಆದೇಶಿಸಿರುವುದರಿಂದ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957 ರ ಕಲಂ 16(1) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯದಲ್ಲಿ ನೊಂದಾಯಿಸಿರುವ (ಹೊಸ ವಾಹನಗಳ …
Read More »ಸಿದ್ದಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್!
ಬೆಂಗಳೂರು : ಸಿಎಂ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಕಿತ್ತಾಟವಾಡಿ ಜನರ ನಡುವೆ ನಗೆಪಾಟಲಿಗೀಡಾಗುವ ನಾಯಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ್ದು, ಹಾಗೆ ವಿರೋಧ ಪಕ್ಷದ ನಾಯಕ ಸಿದ್ದಾಮಯ್ಯಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಭೇಟಿ ಮಾಡಿ ಚರ್ಚೆ ನಡೆಸಿ ಬಂದ ನಂತ್ರ ಹೈಕಮಾಂಡ್ ಸಿದ್ದರಾಮಯ್ಯ(Siddaramaiah) ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದು, …
Read More »ಬಿಗ್ಬಾಸ್ ಮನೆ ಒಳಗೆ ಬರ್ತಿದ್ದಂತೆ ಫೈಟ್ ಶುರು ಮಾಡಿದ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್!
ಬೆಂಗಳೂರು: ಕರೊನಾ ಕಾರಣದಿಂದಾಗಿ ಮಧ್ಯಂತರದಲ್ಲೇ ನಿಲ್ಲಿಸಲಾಗಿದ್ದ ಬಿಗ್ಬಾಸ್ ಇದೀಗ ಮತ್ತೊಮ್ಮೆ ಸೆಕೆಂಡ್ ಇನ್ನಿಂಗ್ಸ್ ಮೂಲಕ ವೀಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಈಗಾಗಲೇ ಎಲ್ಲ ಸ್ಪರ್ಧಾಳುಗಳು ಮನೆ ತಲುಪಿದ್ದು ಕಲರ್ಸ್ ಕನ್ನಡ ವಾಹಿನಿ ಅದರ ವಿಟಿಯನ್ನೂ ತೋರಿಸಿದೆ. ಆದರೆ ಒಂದು ವಿಟಿಯಲ್ಲಿ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಹೊಡೆದಾಡಿಕೊಳ್ಳುತ್ತಿರುವ ದೃಶ್ಯವಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಬಿಗ್ಬಾಸ್ ನೋಡಿದಾಗ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಸ್ನೇಹಿತರಂತೆಯೇ ಕಾಣಿಸಿಕೊಂಡಿದ್ದಾರೆ. …
Read More »ಮರ ಸ್ಥಳಾಂತರದ ವಿವರ ನೀಡಲು ಸೂಚನೆ
ಬೆಂಗಳೂರು: ಮೆಟ್ರೊ ರೈಲು ಮಾರ್ಗದ ಕಾಮಗಾರಿಗಾಗಿ ಮರಗಳನ್ನು ಸ್ಥಳಾಂತರಿಸಲು ಉದ್ದೇಶಿಸಿರುವ ನಿರ್ದಿಷ್ಟ ಸ್ಥಳದ ವಿವರ ಸಲ್ಲಿಸುವಂತೆ ಮರಗಳ ತಜ್ಞರ ಸಮಿತಿಗೆ (ಟಿಇಸಿ) ಹೈಕೋರ್ಟ್ ನಿರ್ದೇಶನ ನೀಡಿದೆ. ಟಿಇಸಿ ಕಾರ್ಯನಿರ್ವಹಣೆ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಸೂಚನೆ ನೀಡಿತು. ‘ಮರಗಳು ಇರುವ ಜಾಗದಿಂದ ಸಮೀಪದ ಸ್ಥಳಗಳನ್ನು ಗುರುತಿಸಿ ಅಂದೇ ಸ್ಥಳಾಂತರ ಮಾಡಬೇಕಾಗುತ್ತದೆ. ನಿರ್ದಿಷ್ಟ ಜಾಗವನ್ನು ಟಿಇಸಿ ಅಂತಿಮಗೊಳಿಸಿದ ಬಳಿಕವೇ ಸ್ಥಳಾಂತರ ಮಾಡಬೇಕು’ ಎಂದು …
Read More »25 ಲಕ್ಷ ಮನೆಗಳಿಗೆ ನಲ್ಲಿಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಬೆಂಗಳೂರು: ಈ ವರ್ಷ ‘ಜಲಜೀವನ್ ಮಿಷನ್’ ಯೋಜನೆಯಡಿ ಗ್ರಾಮೀಣ ಪ್ರದೇಶದ 25 ಲಕ್ಷ ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ‘ಜಲಜೀವನ್ ಮಿಷನ್’ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಾಜ್ಯದಲ್ಲಿ 91.91 ಲಕ್ಷ ಗ್ರಾಮೀಣ ಕುಟುಂಬಗಳಿದ್ದು, ಈಗಾಗಲೇ 28 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ. 2021-22 ನೇ ಸಾಲಿನಲ್ಲಿ …
Read More »ಶೀಲ ಶಂಕಿಸಿ ಪತ್ನಿ ಹತ್ಯೆ
ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ನಗರದ ಹುಳಿಮಾವು ಸಮೀಪದ ಅರಕೆರೆ ಬಿಟಿಎಸ್ ಲೇಔಟ್ ನಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಆಶಾ ಎಂದು ಗುರುತಿಸಲಾಗಿದ್ದು, ಆರೋಪಿ ಮಣಿ ತನ್ನ ಪತ್ನಿಯನ್ನು ಕೊಂದ ಪತಿರಾಯ. ಆಶಾ ಹಾಗೂ ಮಣಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಅದೇ ರೀತಿ ನಿನ್ನೆ ರಾತ್ರಿಯೂ ಪತಿ, ಪತ್ನಿ ನಡುವೆ ಗಲಾಟೆಯಾಗಿದೆ. ಮಣಿ ಇತ್ತೀಚೆಗೆ ವಿಪರೀತ ಮದ್ಯ ಕುಡಿಯಲು …
Read More »‘KPSC’ ಗೆ ಇಬ್ಬರು ಸದಸ್ಯರುಗಳನ್ನು ನೇಮಿಸಿ ರಾಜ್ಯಪಾಲ ವಜೂಭಾಯಿ ವಾಲಾ ಆದೇಶ
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿಯಿರುವ ಸದಸ್ಯರುಗಳ ಸ್ಥಾನಕ್ಕೆ ಇಬ್ಬರನ್ನು ನೇಮಿಸಿ ರಾಜ್ಯಪಾಲ ವಜೂಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ. ಅಧಿಕಾರಿ ಸದಸ್ಯರಾಗಿ ಡಾ. ಶಾಂತಾ ಹೊಸಮನಿ, ರಕ್ತನಿಧಿ ವೈದ್ಯಾಧಿಕಾರಿ, ಕೆ ಸಿ ಜನರಲ್ ಆಸ್ಪತ್ರೆ ಇವರನ್ನು, ಅಧಿಕಾರೇತರ ಸದಸ್ಯರಾಗಿ ಡಾ. ಹೆಚ್ ಎಸ್ ನರೇಂದ್ರ ಇವರನ್ನು ನೇಮಕಗೊಳಿಸಿ ರಾಜ್ಯಪಾಲ ವಜುಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ಡಾ, ಆನಂದ್ ಕೆ ಸುತ್ತೋಲೆ …
Read More »ಜೈಲಲ್ಲಿರುವ ರೌಡಿಯ ಪತ್ನಿಯ ಜತೆ ಅಕ್ರಮ ಸಂಬಂಧ: ರೌಡಿಶೀಟರ್‌ನ ಕುತ್ತಿಗೆ ಸೀಳಿ ಬರ್ಬರ ಕೊಲೆ!
ಬೆಂಗಳೂರು: ರಶೀದ್ ಮಲಬಾರಿ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದವನ ಕುಖ್ಯಾತ ರೌಡಿ ಶೀಟರ್ ಸೈಯದ್ ಕರೀಂ ಅಲಿ ಎಂಬಾತನನ್ನು ನಗರದಲ್ಲಿ ಕೊಲೆ ಮಾಡಲಾಗಿದೆ. ಬೇರೊಬ್ಬನ ಪತ್ನಿಯ ಜತೆ ಈತ ಅಕ್ರಮ ಸಂಬಂಧ ಹೊಂದಿದ್ದು ಅದೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ಸೈಯದ್‌ನನ್ನು ಚಾಕುವಿನಿಂದ ಚುಚ್ಚಿ, ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಗೋವಿಂದ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೈಯದ್ ಇನ್ನೋರ್ಚ ರೌಡಿ ಅನೀಸ್ ಎಂಬಾತನ …
Read More »NCB ಅಧಿಕಾರಿಗಳಿಂದ ಭರ್ಜರಿ ಬೇಟೆ: 2 ಟನ್ಗೂ ಹೆಚ್ಚು ಗಾಂಜಾ ವಶಕ್ಕೆ
ಬೆಂಗಳೂರು: ಬೆಂಗಳೂರು ವಲಯ ಎನ್ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ ₹15 ಕೋಟಿ ಬೆಲೆಬಾಳುವ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್ನ ಪೆದ್ದ ಅಂಬರ್ಪೇಟ್ ಟೋಲ್ ಪ್ಲಾಜಾ ಬಳಿ ಟ್ರಕ್ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದ್ದು 2 ಟನ್ಗಿಂತಲೂ ಹೆಚ್ಚಿನ ಗಾಂಜಾವನ್ನ ಸೀಜ್ ಮಾಡಲಾಗಿದೆ. ಒಟ್ಟು 1,080 ಪ್ಯಾಕೆಟ್ಗಳಲ್ಲಿ ಗಾಂಜಾವನ್ನ ಸಾಗಾಟ ಮಾಡಲಾಗ್ತಿತ್ತು.. ಒಂದೊಂದು ಪ್ಯಾಕೆಟ್ನಲ್ಲಿ 2 ಕೆ.ಜಿ ಗಾಂಜಾ ಶೇಖರಿಸಲಾಗಿತ್ತು ಎನ್ನಲಾಗಿದೆ. ಹೈದರಾಬಾದ್ನಿಂದ …
Read More »ಹಂತ ಹಂತವಾಗಿ ಶಾಲಾ ಕಾಲೇಜು ತೆರೆಯಲು ತಜ್ಞರ ಸಮಿತಿ ಸೂಚನೆ: ಸಿಎಂ ಬಿಎಸ್ ವೈ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಶಾಲೆ- ಕಾಲೇಜು ತೆರೆಯಲು ತಜ್ಞರ ಸಮಿತಿ ಸಲಹೆ ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ತಜ್ಞರ ಸಮಿತಿಯ ಸಭೆಯ ಬಳಿಕ ಮಾತನಾಡಿದ ಸಿಎಂ, ಕೊವಿಡ್ ನಂತರ ಆರೊಗ್ಯ ಸಮಸ್ಯೆ ಕಡೆಗೆ ಗಮನ ಹರಿಸಬೇಕು. 18 ವರ್ಷಕ್ಕಿಂತ ಹಿರಿಯ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಿ ನಂತರ ಹಂತ ಹಂತವಾಗಿ ಕಾಲೇಜು ತೆರೆಯಲು ಸೂಚನೆ ನೀಡಿದ್ದಾರೆ ಎಂದರು. ಕೋವಿಡ್ ಮೂರನೇ ಅಲೆ …
Read More »